POLICE BHAVAN KALABURAGI

POLICE BHAVAN KALABURAGI

01 May 2013

GULBARGA DISTRICT REPORTED CRIME


ಚುನಾವಣೆ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ:
ಬ್ರಹ್ಮಪೂರ ಪೊಲೀಸ್ ಠಾಣೆ:ದಿನಾಂಕ:01/05/2013 ರಂದು ಬೆಳ್ಳಿಗೆ 10:15 ರಿಂದ 10:45 ರ ವರೆಗೆ ಗಾಜಿಪುರದಲ್ಲಿ ಪರೀವಿಕ್ಷಣೆ ಮಾಡುತ್ತಿರುವಾಗ ಕರ್ನಾಟಕ ಜನತಾ ಪಕ್ಷದ ಪದಾಧಿಕಾರಿಯಾದ ಶ್ರೀ ಬಾಬುರಾವ ಮುಡಬಿ ಮತ್ತು ಪಕ್ಷದ ಇತರೆ ಕಾರ್ಯಕರ್ತರು  ಮತ್ತು ಗಾಜಿಪೂರ ನಗರದ ಜನರನ್ನು ನಾಟಿಕಾರಗಲ್ಲಿಯ ಮರಗಮ್ಮ ದೇವಸ್ಥಾನ ಮತ್ತು ಬಾಬು ಜಗಜೀವನರಾಮ ಸಮುದಾಯ ಭವನದ ಆವರಣದ ಒಳಗಡೆ ಕರ್ನಾಟಕ ಜನತಾ ಪಕ್ಷಕ್ಕೆ ಮತ ಕೋರಿ ಪ್ರಚಾರ ಭಾಷಣ ಮಾಡಿರುತ್ತಾರೆ,  ಸದರಿ ಪ್ರಚಾರವು ರಿರ್ಕಾಡಿಂಗ್ ಮಾಡಿಕೊಳ್ಳಲಾಗಿದೆ. ಮತ್ತು 10:50ಕ್ಕೆ ಡಾ|| ಅಂಬೇಡ್ಕರ ಸಮುದಾಯ ಭವನ ಗಾಜಿಪೂರದಲ್ಲಿಯು ಸಹ ಪ್ರಚಾರಕ್ಕೆ ಸಿದ್ದತೆ ಮಾಡಿಕೊಳ್ಳುತ್ತಿದ್ದರು. ಇದು ಚುನಾವಣೆ ಮಾದರಿ ನೀತಿ ಸಂಹಿತೆಯ ಉಲಂಘನೆ ಆಗಿರುವದು ಸ್ಪಷ್ಟವಾಗಿರುತ್ತದೆಅಂತಾ ಶ್ರೀ.ವಿ.ಆರ್ ಗಂಗಾ ಕಾರ್ಯನಿರ್ವಾಹಕ ಇಂಜನಿಯರ ಮತ್ತು ಎಮ್.ಸಿ.ಸಿ ಪ್ಲಾಯಿಂಗ್ ಸ್ಕ್ವಾಡ್ ಗುಲಬರ್ಗಾ ದಕ್ಷೀಣ ಮತಕ್ಷೇತ್ರ ಗುಲಬರ್ಗಾರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:81/2013 ಕಲಂ: 123133 ಆರ್.ಪಿ. ಆ್ಯಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡಿರುತ್ತಾರೆ

No comments: