POLICE BHAVAN KALABURAGI

POLICE BHAVAN KALABURAGI

03 February 2013

GULBARGA DISTRICT REPPORTED CRIMES

ಅಪಘಾತ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ಶ್ರೀಮತಿ ಕವಿತಾ ಗಂಡ ದರ್ಮು ಪವಾರ ಸಾ:ಭೋಗನಿಂಗದಳ್ಳಿ  ತಾಂಡಾ, ತಾ:ಚಿಂಚೋಳಿ ರವರು ದಿನಾಂಕ: 02-02-2013 ರಂದು ಸಾಯಾಂಕಾಲ 6.00 ಗಂಟೆ ಸುಮಾರಿಗೆ ನಾನು ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ನನ್ನ ಮೂರು ಜನ ಮಕ್ಕಳು ನಮ್ಮ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದರು. ಆ ಸಮಯದಲ್ಲಿ  ಟ್ರಾಕ್ಟರ ಇಂಜಿನ ನಂ 008008799 ಚೆಸ್ಸಿ ನಂ ಟಿ06008602411 ನೇದ್ದರ ಚಾಲಕನಾದ ರಾಜು ಎಂಬುವವನು ಅತಿವೇಗದಿಂದ  ಮತ್ತು ನಿಷ್ಕಾಳಿಜಿತನದಿಂದ ಚಲಾಯಿಕೊಂಡು ಬಂದು ಅಂಗಳದಲ್ಲಿ  ಆಟವಾಡುತ್ತಿದ್ದ ನನ್ನ ಮೂರನೆಯ ಮಗ ಶಾಮರಾವ್  ವಯಾ|| 2 ವರ್ಷ ಇತನಿಗೆ ಡಿಕ್ಕಿ ಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ತಲೆಗೆ ಕಿವಿಯಿಂದ ಮತ್ತು ಮೂಗಿನಿಂದ ರಕ್ತ ಸ್ರಾವವಾಗಿ ಮಗು  ಸ್ಥಳದಲ್ಲಿ ಮೃತಪಟ್ಟಿದ್ದು, ಟ್ರ್ಯಾಕ್ಟರ ಚಾಲಕನು ಟ್ರ್ಯಾಕ್ಟರ ಅಲ್ಲಿಯೇ ಬಿಟ್ಟು ಓಡಿ ಹೋಗಿರುತ್ತಾನೆ . ನನ್ನ ಮಗನ ಸಾವಿಗೆ ಕಾರಣನಾದ ಟ್ರ್ಯಾಕ್ಟರ ಚಾಲಕನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀಮತಿ ಕವಿತಾ ಗಂಡ ದರ್ಮು ಪವಾರ ರವರು ದೂರು ಸಲ್ಲಿಸಿದ  ಸಾರಂಶದ ಮೇಲಿಂದ ಠಾಣೆ ಗುನ್ನೆ:17/2013 ಕಲಂ.279, 304(ಎ), ಐ.ಪಿ.ಸಿ ಸಂ.187 ಐ.ಎಮ್.ವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ಗ್ರಾಮೀಣ ಪೊಲೀಸ ಠಾಣೆ: ಶ್ರೀ ಪರಮೇಶ್ವರ ತಂದೆ ಬಂಡೆಪ್ಪ ಜೀವಣಗಿ ಸಾ:ಕುಮಸಿ ರವರು ದಿನಾಂಕ:19/01/2013 ರಂದು ನಾನು ನಮ್ಮ ತೋಟಕ್ಕೆ ರಾತ್ರಿ 8:00 ಗಂಟೆಗೆ ಹೋಗಿ ತೊಟದ ಮನೆಯ ಮುಂದೆ ನನ್ನ ಟಿವಿಎಸ್ ಗಾಡಿ ನಂ-ಕೆಎ32 ವೈ-8476 ನೇದ್ದು ನಿಲ್ಲಿಸಿದ್ದೆ, ಬೆಳಿಗ್ಗೆ 6:00 ಗಂಟೆಯ ಸಮಯಕ್ಕೆ ನೋಡಲಾಗಿ ಟಿವಿಎಸ್‌‌ ಎಕ್ಸ್‌‌‌‌‌‌‌‌‌ಲ್‌ ಹೆಚ್‌‌ಡಿ, ಹಸಿರು ಬಣ್ಣದಮೋಟಾರ ಸೈಕಲ, ಇಂಜಿನ ನಂಬರ:OD1GB1395590,ಚೆಸ್ಸಿ ನಂಬರ:MD621BO1582G81733 ನೇದ್ದು ನಿಲ್ಲಿಸಿದ ಸ್ಥಳದಲ್ಲಿರಲಿಲ್ಲ . ಯಾರೋ ಕಳ್ಳರು ಅಂದಾಜು ಕಿಮ್ಮತ್ತು 20,000/-ರೂ ಬೆಲೆಬಾಳುವ ವಾಹನವನ್ನು ಕಳ್ಳತನ  ಮಾಡಿಕೊಂಡು ಹೋಗಿರುತ್ತಾರೆ . ಕಳ್ಳತನವಾಗಿದ್ದ ಮೋಟಾರ ಸೈಕಲ ಪತ್ತೆ ಮಾಡಿಕೋಡಬೇಕು ಅಂತಾ ಪರಮೇಶ್ವರ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:73/2013 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: