POLICE BHAVAN KALABURAGI

POLICE BHAVAN KALABURAGI

03 February 2013

GULBARGA DIST REPORTED CRIME


ಕೊಲೆಗೆ  ಪ್ರಯತ್ನ:
ಗ್ರಾಮೀಣ ಠಾಣೆ ಗುಲಬರ್ಗಾ :ಶ್ರೀ ಹಣಮಂತ @ ದೀಲಿಪ ತಂದೆ ನಾಗಪ್ಪಾ ಗುತ್ತೆದಾರ ವಯಾ:35 ವರ್ಷ ಜಾ:ಇಳಿಗೇರ ಸಾ:ಅಶೋಕ ನಗರ ಶಹಾಬಾದ ಹಾ:ವ:ಎಸ್.ಎಂ ಕೃಷ್ಣಾ ಕಾಲೋನಿ ಗುಲಬರ್ಗಾ  ರವರು ನನ್ನ  ಹೆಂಡತಿ ಬಸಮ್ಮಾ @ ರೇಖಾ ಇವಳಿಗೆ ಬಾಜು ಮನೆಯ ರಾಹುಲ ಇತನು ಅವಾಚ್ಯವಾಗಿ ನಿಂದನೆ ಮಾಡಿದ ವಿಷಯದಲ್ಲಿ  ದಿನಾಂಕ:-02/02/2013 ರಂದು ಬೆಳ್ಳಿಗೆ 7:00 ಗಂಟೆಯ ಸುಮಾರಿಗೆ ಫಿರ್ಯಾದಿಯು ರಾಹುಲ ಇತನ ಮನೆಗೆ ಹೋಗಿ ತನ್ನ ಹೆಂಡತಿಗೆ ಬೈಯ್ದ ವಿಷಯದಲ್ಲಿ ಕೇಳಲು ಹೋದಾಗ ಸದರಿ ಆಪಾದತ ರಾಹುಲ ಇತನು ಬಂದು ನನ್ನೊಂದಿಗೆ ಜಗಳ ಮಾಡಿ ಅಂಗಿಯನ್ನು ಹಿಡಿದು ಕಾಲಿನಿಂದ ಒದ್ದನ್ನು ಇದನ್ನು ನೋಡಿ ನನ್ನ  ಹೆಂಡತಿ ಬೀಡಿಸಲು ಬಂದರೆ ಅವಳಿಗು ಕೂಡಾ ಪ್ರಲ್ಹಾದ ಮತ್ತು ಅವನ ತಂಗಿ ಜಗದೇವಿ @ ತ್ರೀವೇಣಿ ಇಬ್ಬರು ಕೂಡಿ ಬಂದು ಬಸಮ್ಮಾಳಿಗೆ ಮಾನ ಭಂಗವನ್ನು ಮಾಡುವ ಉದ್ದೇಶದಿಂದ ಕೈಹಿಡಿದು ಜಗ್ಗಾಡಿ ಕೈಯಿಂದ ಹೊಡೇ ಬಡೇ ಮಾಡಿರುತ್ತಾರೆ.ರಾಹುಲು ಇತನು ಜಂಬೆಯನ್ನು ತೆಗೆದುಕೊಂಡು ಬಂದು  ಕೊಲೆ ಮಾಡುವ ಉದ್ದೇಶದಿಂದ ಕುತ್ತಿಗಿಗೆ ಹೊಡೆಯಲು ಬಂದಾಗ ರಕ್ಷಣೆಗಾಗಿ ಕೈ ಅಡ್ಡ ತಂದಿದ್ದರಿಂದ ಜಂಬೆಯ ಹಿಡಿಕೆ ಏಟು ಬಲಗೈ ಮಣಿಕಟ್ಟಿಗೆ ಹತ್ತಿ ಗುಪ್ತಗಾಯವಾಗಿರುತ್ತದೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಅಪರಾಧ ಸಂಖ್ಯೆ 70/2013 ಕಲಂ 323 324 354 504 307 504 506 (2) ಸಂಗಡ 34 ಐ.ಪಿ.ಸಿ  ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: