POLICE BHAVAN KALABURAGI

POLICE BHAVAN KALABURAGI

14 January 2013

GULBARGA DISTRICT REPORTED CRIME


ಸಾಗವಾನಿ ಮರದ ತುಂಡುಗಳು ಕಳ್ಳತನ ಮಾಡಿ ತೆಗೆದುಕೊಂಡು ಹೋಗುತ್ತಿರುವ ಬಗ್ಗೆ:
ಮಾದನ ಹಿಪ್ಪರಗಾ ಪೊಲೀಸ್ ಠಾಣೆ:ದಿ:12/01/2013 ರಂದು ರಾತ್ರಿ 10:40 ಗಂಟೆ ಸುಮಾರಿಗೆ ಮಾದನ ಹಿಪ್ಪರಗಾ ಪೊಲೀಸ್ ಠಾಣೆಯ ವ್ಯಾಪ್ತಿಯ ಸ್ವಾಮಿ ವಿವೇಕಾನಂದ ಸರ್ಕಲ್ ಹತ್ತಿರ ಒಂದು ಲಾರಿ ಬರುತ್ತಿದ್ದನು ನೋಡಿ,ಶ್ಯಾಮರಾವ ಎ.ಎಸ್.ಐ ಹಾಗೂ ಸಿಬ್ಬಂದಿಯವರಾದ ಕನ್ನಿ ರಾಮ, ಸುಧಾಕರ ರೆಡ್ಡಿ ಹೆಚ.ಸಿ, ಪ್ರಶಾಂತ ಪಿಸಿ ರವರು ಚೆಕ್ಕ ಮಾಡಲು ಲಾರಿ ನಂಬರ ಎಮ್.ಇ.ಜಿ.7053 ನೇದ್ದು, ಅದರಲ್ಲಿ ಸಾಗವಾನಿ ಮತ್ತು ಇತರೆ ತರಹದ ಕಟ್ಟಿಗೆಗಳನ್ನು ಯಾವದೇ ಅಧಿಕೃತ ದಾಖಲೆಗಳಿಲ್ಲದೇ ತೆಗೆದುಕೊಂಡು ಹೋಗುತ್ತಿದ್ದನ್ನು ನಿಲ್ಲಿಸಿ ವಿಚಾರಿಸಲು, ಲಾರಿ ಚಾಲಕನ ಹೆಸರು ಶೇಖ ಮುಸಾ ತಂದೆ ಮೈಹಿಬೂಬಸಾಬ ಬಿದರಿಬಾಮಿಯಾ ವಯಸ್ಸು-55 ವರ್ಷ ಉ:ಲಾರಿ ಚಾಲಕ ಸಾ:ಮಹಡಿ ಮೊಹಲಾ ಗಂಜ್ ಏರಿಯಾ ಗುಲಬರ್ಗಾ, ಇತನ ಜೋತೆ ಲಾರಿಯಲ್ಲಿದ್ದ ಇನ್ನೂಬ ಕುಳಿತ ವ್ಯಕ್ತಿ ಓಡಿ ಹೋಗಿರುತ್ತಾನೆ. ಓಡಿ ಹೋದವನ ಹೆಸರು ಶಿವಪ್ಪಾ @ ಶಿವಣ್ಣಾ ಕಂಬಾರ ಸಾ:ಮಾದನ ಹಿಪ್ಪರಗಾ ಅಂತಾ ಚಾಲಕನಿಂದ ಗೊತ್ತಾಗಿರುತ್ತದೆ. ಯಾವುದೇ ಅಧಿಕೃತ ದಾಖಲಾತಿಗಳು ಇಲ್ಲದೇ ಸಾಗವಾನಿ ಮತ್ತು ಇತರೆ ತರಹದ ಕಟ್ಟಿಗೆಗಳು ಅ||ಕಿ|||28,000/ ರೂಪಾಯಿಗಳದ್ದು  ಸಾಗಣೆ ಮಾಡುತ್ತಿದ್ದವರನ್ನು ವಶಕ್ಕೆ ತೆಗೆದುಕೊಂಡು ಲಾರಿಯಲ್ಲಿ ಸಾಗಿಸುತ್ತಿರುವ ಮರದ ತುಂಡುಗಳು ಸಾಗವಾನಿ ಮತ್ತು ಇತರೆ ತರಹದ ತುಂಡುಗಳು ಇರುತ್ತವೆ ಅಂತಾ ಆರಣ್ಯಧಿಕಾರಿ ಆಳಂದ ರವರು ವರದಿ ನೀಡಿದ್ದರಿಂದ,ಲಾರಿ ಚಾಲಕ ಮತ್ತು ಅವನ ಮಾಲಿಕನ ಮೇಲೆ ಸರ್ಕಾರಿ ತರ್ಪೆಯಾಗಿ ಠಾಣೆ ಗುನ್ನೆ ನಂ:5/2013 ಕಲಂ,98 ಅರಣ್ಯ ಕಾಯ್ದೆ ಅಧಿನಿಯಮ 1963 ಮತ್ತು 379 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: