POLICE BHAVAN KALABURAGI

POLICE BHAVAN KALABURAGI

28 December 2012

GULBARGA DISTRICT


:: ಪತ್ರಿಕಾ ಪ್ರಕಟಣೆ::

        ಜಿಲ್ಲಾ ಪೊಲೀಸ್ ಅಧಿಕಾರಿಗಳು, ಸೈಬರ್ ಕೆಫೆ ಮಾಲೀಕರು ಸೈಬರ್ ಕೆಫೆ ಸುರಕ್ಷತೆಯ ಬಗ್ಗೆ ಪರಸ್ಪರ ಚರ್ಚೆಯ ಅವಧಿಯನ್ನು ನಡೆಸುತ್ತಾರೆ. ಏಪ್ರಿಲ್ 11, 2011 ರಂದು, ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ಸಚಿವಾಲಯವು ಸೈಬರ್ ಕೆಫೆಗಳಿಗೆ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಗಳು ಮುಖ್ಯವಾಗಿ ಸೈಬರ್ ಕೆಫೆಯು ತನ್ನ ವ್ಯವಹಾರವನ್ನು ನಡೆಸುವುದು ಹೇಗೆ ಎಂಬ ಬಗ್ಗೆ ಒತ್ತಿ ಹೇಳುತ್ತವೆ. ಸೈಬರ್ ಕೆಫೆಗಳು ಈ ಮಾರ್ಗ ಸೂಚಿಗಳನ್ನು 100% ರಷ್ಟು ಪಾಲನೆ ಮಾಡುವುದು ಕಡ್ಡಾಯವಾಗಿದೆ.

1.             ಪ್ರತಿ ಸೈಬರ್ ಕೆಫೆ ಗ್ರಾಹಕರ ವಿವರಗಳನ್ನು ಹೊಂದಿರುವ ಕೆಫೆ ಲಾಗ್ ರಿಜಿಸ್ಟ ರ್ ನ ಡಿಜಿಟಲ್ ಮತ್ತು ಸುರಕ್ಷಿತ ದಾಸ್ತಾನಿಗಾಗಿ ಐಟಿ ಕಾಯ್ದೆಯ ಮಾರ್ಗಸೂಚಿಗಳು ಶಿಫಾರಸು  ಮಾಡುತ್ತವೆ.
2.             ಈ ಎಲ್ಲ ಮಾಹಿತಿಯನ್ನೂ ಸೈಬರ್ ಕೆಫೆಯು ಒಂದು ವರ್ಷದ ಕನಿಷ್ಟ ಅವಧಿಗೆ ಶೇಖರಣೆ ಮಾಡುವುದು ಅಗತ್ಯವಾಗುತ್ತದೆ.
3.             ಅಂತೆಯೇ ಪ್ರತಿ ಸೈಬರ್ ಕೆಫೆ ಈ ಮಾಸಿಕ ಕೆಫೆ ಲಾಗ್ ರಿಜಿಸ್ಟರ್ ವರದಿಯನ್ನು ನಗರ ಕಾನೂನುಜಾರಿ ಪ್ರಾಧಿಕಾರಕ್ಕೆ ಮುಂದಿನ ತಿಂಗಳಿನ 5ನೇ ದಿನದ ವೇಳೆಗೆ ಸಲ್ಲಿಸುವುದು  ಅಗತ್ಯ

ಮೇಲೆ ಹೇಳಲಾಗಿರುವ ಡಿಜಿಟಲ್ ಡೇಟಾ ಸ್ಟೋರೇಜ್ ಮತ್ತು ಸೈಬರ್ ಕ್ರೈಮ್ ವಿಷಯಗಳ ಮೇಲೆ ಗುಲಬರ್ಗಾ ಜಿಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸೈಬರ್ ಕೆಫೆ ಮಾಲೀಕರು ಪರಸ್ಪರ ಚರ್ಚಾ ಅವಧಿಯಲ್ಲಿ ಪಾಲ್ಗೊಂಡರು.
ಭಾರತದ ಅತಿದೊಡ್ಡ ಸೈಬರ್ ಕೆಫೆ ಸಲ್ಯೂಷನ್ ಮತ್ತು ಸೆಕ್ಯೂರಿಟಿ ಕಂಪನಿಯಾಗಿರುವ ಐಡಿಯಾಕ್ಟ ಇನೊವೇಷನ್ಸ ಪ್ರೈ ಲಿ. ತನ್ನ ಉಚಿತ ಸೈಬರ್ ಕೆಫೆ ಮ್ಯಾನೆಜೆಮೆಂಟ್ ಮತ್ತು ಸೆಕ್ಯೂರಿಟಿ ಸಲ್ಯೂಷನ್ ಐಕೆಪೇ ಮ್ಯಾನೆಜರ್ ಸಾಪ್ಟವೇರ ಅನ್ನು ಗುಲಬರ್ಗಾ ಸೈಬರ್ ಕೆಫೆಗಳಲ್ಲಿ ಪ್ರಾರಂಬಿಸಿದೆ.
ಉದ್ದೇಶವೆಂದರೆ ಗುಲಬರ್ಗಾ ಜಿಲ್ಲೆಯಲ್ಲಿ ಸೈಬರ್ ಭದ್ರತೆ ಮತ್ತು ನಿರ್ವಹಣೆಯನ್ನು ಖಾತ್ರಿಪಡಿಸಿಕೊಳ್ಳುವುದು. ಇದು ಸೈಬರ್ ಕ್ರೈಮ್ ತೊಡೆದುಹಾಕುವ ಪ್ರಯತ್ನವಾಗಿದ್ದು ಸೈಬರ್ ಕೆಫೆಗಳು ದುರ್ಬಳಕೆಯ ಸಾಮಾನ್ಯ ಗುರಿಗಳಾಗಿರುತ್ತವೆ ಮತ್ತು ಇವುಗಳನ್ನು ಚೆನ್ನಾಗಿ ನಿಯಂತ್ರಣ ಮಾಡುವುದು ಅಗತ್ಯವಾಗುತ್ತದೆ.
ಗುಲಬರ್ಗಾ 27ನೇ ಡಿಸೆಂಬರ್, 2012. ಗುಲಬರ್ಗಾ ಜಿಲ್ಲಾ ಪೊಲೀಸರು ಮತ್ತು ಐಡಿಯಾಕ್ಟ್ಸ್ ಇನ್ನೊವೇಷನ್ಸ ಪ್ರೈ ಲಿ. ಜಂಟಿಯಾಗಿ ಗುಲಬರ್ಗಾ ಜಿಲ್ಲೆಯ 125 ಸಂಖ್ಯೆಯ ಸೈಬರ್ ಕೆಫೆ ಮಾಲೀಕರನ್ನು ಉದ್ದೇಶಿಸಿ ಜಂಟಿಯಾಗಿ ಮಾತನಾಡಿದರು ಹಾಗೂ ಈ ಚರ್ಚಾಕೂಟದಲ್ಲಿ ಪಾಲ್ಗೊಂಡರು.
ಕಾರ್ಯಕ್ರಮಕ್ಕೆ ಗುಲಬರ್ಗಾ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಎನ್.ಸತೀಷಕುಮಾರ ಐ.ಪಿ.ಎಸ್.,  ಪೊಲೀಸ್ ಅಧೀಕ್ಷಕರು ಗುಲಬರ್ಗಾ ರವರು ಮತ್ತು ಪೊಲೀಸ್ ಅಧಿಕಾರಿಗಳು, ಐಡಿಯಾಕ್ಟ್ಸ್ ಇನೊವೇಷನ್ಸ ಪ್ರತಿನಿಧಿಗಳು ಮತ್ತು ಗುಲಬರ್ಗಾ ಜಿಲ್ಲೆಯ 125 ಸಂಖ್ಯೆಯ ಸೈಬರ್ ಕೆಫೆ ಮಾಲೀಕರು ಹಾಜರಿದ್ದರು.
ಗುಲಬರ್ಗಾ ಜಿಲ್ಲೆಯ ಸೂಪರಿಂಟೆಂಡೆಂಟ್ ಆಫ್ ಪೊಲೀಸ್ ಶ್ರೀ ಎನ್. ಸತೀಷಕುಮಾರ ಐ.ಪಿ.ಎಸ್., ಇವರ ಪ್ರಕಾರ ಇಂದಿನವರೆಗೂ ಹೆಚ್ಚಿನ ಸೈಬರ್ ಕೆಫೆಗಳು ಭೌತಿಕ ರಿಜಿಸ್ಟರ್ ಗಳಲ್ಲಿ ಕೆಫೆ ಸಂದರ್ಶಕರ ವಿವರಗಳನ್ನು ಸಂಗ್ರಹಿಸಿಸುತ್ತವಾದರೂ ಇದು ಸೂಕ್ತವಲ್ಲದ ಮಾಹಿತಿ ನಿರ್ವಹಣೆಯಾಗಿದೆ, ಅಷ್ಟೆ ಅಲ್ಲ. ಅಗತ್ಯವಿರುವಾಗ ಇಂಥ ಮಾಹಿತಿಯನ್ನು ಮರಳಿ ಪಡೆಯವುದೂ ಕಷ್ಟಕರವಾಗಿದ್ದು, ಕೆಫೆಗಳಿಗೆ ತುಂಬ ಸಂಕಷ್ಟದ ವಿಷಯವಾಗಿ ಪರಿಣಮಿಸುತ್ತದೆ. ಸೈಬರ್ ಕೆಫೆಗಳನ್ನು ಸಮಾಜ ವಿರೋಧಿ ಶಕ್ತಿಗಳು ಬಳಕೆ ಮಾಡಿದ ಉದಾಹರಣೆಗಳಿದ್ದು ಅವುಗಳಿಗೆ ಸುರಕ್ಷತೆ ನೀಡುವುದು ಮಹತ್ವದ್ದಾಗಿದೆ. ಐಕೆಫೆ ಮ್ಯಾನೇಜರ್ ಸಾಪ್ಟವೇರ್  ಎಂಬುದು ಐಡಿಯಾಕ್ಟ್ಸ್ ಇನೊವೇಷನ್ಸ ಮಹತ್ವದ ಉಪಕ್ರಮವಾಗಿದ್ದು, ಸೈಬರ್ ಕೆಫೆಗಳು ಸ್ಮೂತ್ ಆಗಿ, ಸುಭದ್ರವಾಗಿ ಮತ್ತು ಸುರಕ್ಷಿತವಾಗಿ ವ್ಯವಹಾರವನ್ನು ನಡೆಸಲು ಹಾಗೂ ರಾಷ್ಟ್ರೀಯ ಭದ್ರತೆಗೆ ನೆರವಾಗಲು ಸಹಾಯ ಮಾಡುತ್ತದೆ. ಐಕೆಫೆ ಮ್ಯಾನೆಜರ್ ಸಾಫ್ಟ್ವೇರ್, ಕೇಂದ್ರ ಸರ್ಕಾರವು 11ನೇ ಏಪ್ರಿಲ್ 2011 ರಂದು ಕೇಂದ್ರ ಸರ್ಕಾರವರು ಹೊರಡಿಸಿದ ಅಧಿಸೂಚನೆಯ ಐಟಿ ಕಾಯ್ದೆಯ ಅನ್ವಯ ಹೊಸ ಮಾಹಿತಿ ತಂತ್ರಜ್ಞಾನ ಕಾಯ್ದೆ 2011ರ (ಸೈಬರ್ ಕೆಫೆಗೆ ಮಾರ್ಗಸೂಚಿಗಳು) ನಿಯಮಗಳಿಗೆ ಹೊಂದಿಕೊಂಡಿದೆ. ಐಡಿಯಾಕ್ಟ್ಸ್ ಇನೊವೇಷನ್ಸ ಒಬ್ಬ ಜವಾಬ್ದಾರಿಯುತ ಕಾರ್ಪೊರೇಟ ಸದಸ್ಯರಾಗಿ ದೇಶಾದ್ಯಂತ ಸೈಬರ್ ಅಪರಾಧವನ್ನು ನಿಯಂತ್ರಿಸುವ ರಚನಾತ್ಮಕ ಕ್ರವುವನ್ನು ಕೈಗೊಂಡಿರುತ್ತಾರೆ. ಐಕೆಫೆ ಮ್ಯಾನೆಜರ್ ಸಾಪ್ಟವೇರ್ ಅನ್ನು ಪ್ರಾರಂಭಿಸಿದ್ದರಿಂದಾಗಿ ಈಗ ಎಲ್ಲ ಸಂಬಂಧಿಸಿದ ಕೆಫೆ ಸಂದರ್ಶಕ ವಿವರಗಳನ್ನು ಐಟಿ ಕಾಯ್ದೆಯ ಅಡಿಯಲ್ಲಿ ಅಗತ್ಯವಾದಂತೆ ಯಾವುದೇ ಬಂಡವಾಳವೂ ಇಲ್ಲದೇ ಉಚಿತವಾಗಿ ದಾಖಲಿಸುವುದು ಸಾಧ್ಯವಾಗುತ್ತದೆ. ನಾವು ಐಡಿಯಾಕ್ಟ್ಸ್ ಇನೊವೇಷನ್ಸ ಜೊತೆ ಸಹಯೋಗ ಹೊಂದಲು ಹರ್ಷಿಸುತ್ತೆವೆ. ಮತ್ತು ಗುಲಬರ್ಗಾ ಜಿಲ್ಲೆಯ ಎಲ್ಲ ಸೈಬರ್ ಕೆಫೆಗಳಲ್ಲಿ ಇದರ ಬಳಕೆಯನ್ನು ಪ್ರೋತ್ಸಾಹಿಸುತ್ತೇವೆ.
ಐಡಿಯಾಕ್ಟ್ಸ್ ಇನೊವೇಷನ್ಸ ಕಾರ್ಯನಿರ್ವಹಣಾ ವ್ಯವಸ್ಥಾಪಕ ಡಾ|| ಮತೀನುಲ್ಲ ಖಾನ್ ಹೇಳಿದರು. ಸೈಬರ್ ಕೆಫೆಗಳು ದೇಶದ ಇಂಟರನೇಟ್ ಬಳಕೆಯಲ್ಲಿ ಸುಮಾರು 47% ರಷ್ಟು ಪಾಲು ಪಡೆದಿವೆ. ಅವು ಇಂಟರನೇಟ್ ಬಳಕೆಯ ಅತಿದೊಡ್ಡ ಮೂಲಗಳಾಗಿರುವದರಿಂದ ಅವುಗಳ ಡಿಜಿಟಲ್ ನಿರ್ವಹಣೆ ಹಾಗೂ ಸುರಕ್ಷತೆ ಮಹತ್ವದ್ದಾಗಿದೆ. ಕೆಫೆ ಮಾಲೀಕರು ಇಂದು ಕೆಫೆ ನಿರ್ವಹಣೆಗಾಗಿ ಮತ್ತು ಸಂದರ್ಶಕ ಮಾಹಿತಿ ಸಂಗ್ರಹಣೆಗಾಗಿ ಕಾರ್ಯಗತಗೊಳ್ಳುವ ಪರಿಹಾರಗಳನ್ನು ಹೊಂದಿಲ್ಲ. ನಮ್ಮ ಉತ್ಪನ್ನ ಐಡಿಯಾಕ್ಟ ಇನೊವೇಷನ್ಸ ಸಾಪ್ಟವೇರ್ ಸೈಬರ್ ಕೆಫೆಗಳಿಗೆ ಕೆಳಗಿನ ಗುಣಲಕ್ಷಣಗಳನ್ನು ಒದಗಿಸುತ್ತದೆ:
v  ಬಳಕೆ ಮಾಡಲು ಸುಲಭ, ಇದು ಅಕೌಂಟಿಂಗ್, ಟರ್ಮಿನಲ್  ಮ್ಯಾನೇಜ್ ಮೆಂಟ್ ಮತ್ತು ಬಳಕೆದಾರರ   ಡೇಟಾ ಸಂಗ್ರಹಣೆಯಂಥ ಎಲ್ಲ  ಆಯಾಮಗಳಿಗೆ ಸಹಾಯ ಮಾಡುತ್ತದೆ, ಈ  ಮೂಲಕ   ಬಳಕೆದಾರರಿಗೆ ಅನುಕೂಲಕರವಾದ ಪರಿಸರವನ್ನು ಒದಗಿಸುತ್ತದೆ.
v  ಸಾಪ್ಟವೇರಿನ ಭದ್ರತಾ ಗುಣಲಕ್ಷಣಗಳು ಐಟಿ ಕಾಯ್ದೆಯ ಅಗತ್ಯಗಳ ಅನುಸಾರ ಇರುತ್ತವೆ ಮತ್ತು ಇದು ಕೆಫೆ ಮಾಲೀಕರಿಗೆ ಕಾನೂನುಜಾರಿ ಏಜೆನ್ಸಿಗಳಿಗೆ ಗರಿಷ್ಟ ಮಾಹಿತಿಯನ್ನು ನೀಡುವುದಕ್ಕೆ ಸಹಾಯ ಮಾಡುತ್ತವೆ, ಇದರಲ್ಲಿ ಡಿಜಿಟಲ್ ಫೋಟೊ ಕ್ಯಾಪ್ಚರ್, ಹೆಸರು, ವಿಳಾಸ ಮತ್ತು ಫೋಟೊ ಐಡಿಯಂಥ ಮಾಹಿತಿ ಸೇರಿದೆ.
v  ಇದು ದೀರ್ಘಕಾಲಿಕ ಅವಧಿಗೆ ವಿವರಗಳನ್ನು ಆಕ್ಟೀವ್ ಮಾಡಲು ಸಹಾಯ ಮಾಡುತ್ತದೆ. ನೋಂದಾಯಿತ ಬಳಕೆದಾರರು ತಮ್ಮ ಬಳಕೆದಾರ ಹೆಸರನ್ನು ಭಾರತದಲ್ಲಿನ ಎಲ್ಲ ಪಾಲುದಾರ ಕೆಫೆಗಳಲ್ಲಿ ಸತತವಾಗಿ ಮಾಹಿತಿಯನ್ನು ಒದಗಿಸದೇ ಬಳಕೆ ಮಾಡಬಹುದು.

ಐಡಿಯಾಕ್ಟ್ಸ್ ಇನೊವೇಷನ್ಸ ಐಕೆಫೆ ಮ್ಯಾನೆಜರ್ ಸಾಪ್ಟವೇರ್ ಅನ್ನು ಪ್ರಾರಂಭಿಸುವ ಮೂಲಕ ಗುಲಬರ್ಗಾ ಜಿಲ್ಲೆಯ ಸೈಬರ್ ಕೆಫೆಗಳು ಈ ಸಾಪ್ಟವೇರ್ ಅನ್ನು ಶುಲ್ಕರಹಿತವಾಗಿ ಪಡೆಯಬಹುದು ಮತ್ತು ಬಳಕೆದಾರರ ಅನುಭವವನ್ನು ಸುಧಾರಿಸಬಹುದು ಮತ್ತು ಅವರ ಕೆಫೆಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳುವ ಮೂಲಕ ರಾಷ್ಟ್ರೀಯ ಸುರಕ್ಷತೆಗೆ ಸಹಾಯ ಮಾಡಬಹುದು
ಹೇಳಿಕೆಗಳಿಗಾಗಿ ಸಂಪರ್ಕಿಸಿ:
-------------------------------------------------------------
ಡಾ||ಮತೀನುಲ್ಲ ಖಾನ್, ಮ್ಯಾನೇಜರ್ ಅಪರೇಷನ್ಸ, ಐಡಿಯಾಕ್ಟ್ಸ್ ಇನೊವೇಷನ್ಸ:9886889660:matheenulla@ideacts.com

No comments: