POLICE BHAVAN KALABURAGI

POLICE BHAVAN KALABURAGI

28 December 2012

GULBARGA DISTRICT REPORTED CRIMES


ಕೊಲೆಗೆ ಪ್ರಯತ್ನ:
ಬ್ರಹ್ಮಪೂರ ಪೊಲೀಸ್ ಠಾಣೆ: ಪ್ರದೀಪ ತಂದೆ ರತನಸಿಂಗ ರಿಡ್ಲಾನ ವಯ|| 21 ವರ್ಷ ಜಾ||ವಾಲ್ಮಿಕಿ ಸಾ|| ಗಾಜಿಪೂರ ಗುಲಬರ್ಗಾ ರವರು ನಾನು ದಿನಾಂಕ:27/12/2012 ರಂದು ಮದ್ಯಾಹ್ನ 12-30 ಗಂಟೆಗೆ ನಮ್ಮ ಬಡಾವಣೆಯ ಸಚೀನ ತಂದೆ  ಭಗವಾನದಾಸ ಸೌದಾಗರ, ರೋಹಿತ ತಂದೆ ಸತೀಶ ಕೂಡಿಕೊಂಡು ಸಿಟಿ ಬಸ್ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯದಲ್ಲಿರುವಾಗ ಬಾಂಬೆ ಸಂಜು, ಸತೀಶ, ಮೂಗ ಮಲ್ಯಾ, ಚನ್ನು, ದಾದು, ಬಟರ ನವಾಬ, ದಂಡೋತಿ ಸುರೇಶ, ಹಾಗೂ ಇತರರು ಸೇರಿಕೊಂಡು ಬಂದು ನನ್ನೊಂದಿಗೆ ಜಗಳಕ್ಕೆ ಬಿದ್ದು ಅವಾಚ್ಯವಾಗಿ ಬೈದು ನನ್ನನ್ನು ಬಸವ ನಗರದ ನೀರಿನ ಟ್ಯಾಂಕಿನ ಹತ್ತಿರ ಕರೆದುಕೊಂಡು ಹೋಗಿ ಅಲ್ಲಿ ಬಾಂಬೆ ಸಂಜು, ಇತನು ತನ್ನ ಮನೆಯಿಂದ ಹಾಕಿ ಸ್ಟಿಕ ತಗೆದುಕೊಂಡು ಬಂದು ನಿನಗೆ ಕೋಲೆ ಮಾಡಿಯೆ ಬಿಡುತ್ತೇನೆ ಅಂತಾ ಅನ್ನುತ್ತಾ ತಲೆಯ ಮೇಲೆ ಹೋಡೆದು ಮಾರಣಾಂತಿಕ ಹಲ್ಲೆ ಮಾಡಿರುತ್ತಾನೆ. ಸತೀಶ ಇವನು ಕೂಡಾ ಅಲ್ಲೆ ಬಿದ್ದ ಬಡಿಗೆ ತಗೆದುಕೊಂಡು ನನ್ನ ಹೊಟ್ಟೆಯ ಬಲ ಮಗ್ಗಲಲ್ಲಿ ಮತ್ತು ಬಲಗಾಲಿನ ಮೊಳಕಾಲ ಕೆಳಗೆ ಹೊಡೆದಿರುತ್ತಾನೆ ಮೂಗ ಮಲ್ಯಾ ಮತ್ತು ಚನ್ನು ಕೈಮುಷ್ಠಿ ಮಾಡಿ ಬಾಯಿ ಮೇಲೆ ಮತ್ತು ಎರಡು ಗಲ್ಲದ ಮೇಲೆ ಹೊಡೆದಿದ್ದು ಅಲ್ಲದೆ ಉಳಿದ ಜನರು ಸಹ ಖಲಾಸ ಮಾಡಬಿಡು ಅಂತಾ ಪ್ರಚೋದನೆ ಮಾಡುತ್ತಿದ್ದರು ಸದರಿ ಜಗಳವನ್ನು ಸಚೀನ ಮತ್ತು ರೋಹಿತ ನೋಡಿ ಬಿಡಿಸಿರುತ್ತಾರೆ. ಇಲ್ಲದಿದ್ದರೆ ಅವರು ನನಗೆ ಕೊಲೆ ಮಾಡಿಯೆ ಬಿಡುತ್ತಿದ್ದರು,ನಾನು ಉಪಚಾರ ಕುರಿತು ಸರಕಾರಿ ಆಸ್ಪತ್ರೆಗೆ ಬಂದು ಸೇರಿಕೆ ಆಗಿದ್ದು ಇರುತ್ತದೆ.ನನಗೆ ಹೊಡೆ ಬಡೆ ಮಾಡಿ ಕೊಲೆ ಮಾಡಲು ಪ್ರಯತ್ನಿಸಿದವರ ಮೇಲೆ ಕಾನೂನು ಕ್ರಮ ಕೈಕೊಳ್ಳಲು ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:142/2012 ಕಲಂ: 143,147,148,323,324,307,114,504,506 ಸಂಗಡ 149 ಐ.ಪಿ.ಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಒಂದೆ ಕುಟುಂಬದ ಮೂವರ ದುರ್ಮರಣ:
ನರೋಣಾ ಪೊಲೀಸ್ ಠಾಣೆ: ಶ್ರೀ, ವೆಂಕಟರತ್ನಂ ತಂದೆ ವೆಂಕಟ ಶಾಸ್ತ್ರಿ ವಯ:74 ವರ್ಷ ಸಾ: ಹಬಿಸಿಗುಡ್ಡ ಕಾಕಟ ನಗರ ಜಿ:ರಂಗಾರಡ್ಡಿ ರಾ|| ಆಂದ್ರಪ್ರದೇಶ ರವರು ನಾನು ಮತ್ತು ನನ್ನ ಹೆಂಡತಿ ಮಹಾಲಕ್ಷ್ಮಿ, ಮಗ ಸುರೇಶ, ಸೊಸೆಯಾದ ರಮಾ ಹಾಗೂ ಮಮ್ಮೊಕ್ಕಳಾದ ಸುಷ್ಮಾ ಮತ್ತು ಸ್ವೇತಾ ಹೀಗೆ ಎಲ್ಲರು ಕೂಡಿಕೊಂಡು ದಿನಾಂಕ:24/12/2012 ರಂದು ಬೆಳ್ಳಿಗ್ಗೆ ನಮ್ಮೂರಿನಿಂದ ಶಿರಡಿಗೆ ಹೋಗಿ ಅಲ್ಲಿಂದ ದಿನಾಂಕ:27/12/2012 ರಂದು ತುಳಜಾಪುರ ದೇವಿ ದರ್ಶನ ಮಾಡಿಕೊಂಡು ಗಾಣಗಾಪೂರ ದತ್ತ ದರ್ಶನಕ್ಕೆ ಹೋಗಲು ಆಳಂದ ಗುಲಬರ್ಗಾ ಮಾರ್ಗವಾಗಿ ಹೋಗುತ್ತಿದ್ದು, ನನ್ನ ಮಗ ಸುರೇಶ  ಕಾರ ಚಲಾಯಿಸತ್ತಿದ್ದನು. ಕಡಗಂಚಿ ಸಮೀಪ ಎದುರುಗಡೆಯಿಂದ ಎಮ್.ಎಚ.-20 / ಸಿಟಿ-256 ನೇದ್ದರ ಲಾರಿ ಚಾಲಕನು ಅತೀ ವೇಗ ಮತ್ತು ನಿಷ್ಕಾಲಜಿತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಕಾರಿಗೆ ಬಂದು ಡಿಕ್ಕಿಪಡಿಸಿದನು. ಡಿಕ್ಕಿ ಪಡಿಸಿದ ರಭಸಕ್ಕೆ ಸುರೇಶ ಇತನು ಸ್ಥಳದಲ್ಲಿಯೇ ಮೃತಪಟಟಿದ್ದು, ಸೊಸೆ ಉಪಚಾರ ಕುರಿತು ಬರುತ್ತಿರುವಾಗ ದಾರಿಯಲ್ಲಿ ಮೃತ ಪಟ್ಟಿದ್ದು, ಅಲ್ಲದೇ ನನ್ನ ಹೆಂಡತಿ ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿರುತ್ತಾಳೆ. ಉಳಿದವರಿಗೆ ಗಾಯಗಳಾಗಿರುತ್ತವೆ ಸದರಿ ಲಾರಿ ಚಾಲಕನ ವಿರುದ್ದ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:139/2012 ಕಲಂ 279 337 304[ಎ] ಐಪಿಸಿ ಮತ್ತು 187 ಐಎಂವಿ ಆಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.    

No comments: