POLICE BHAVAN KALABURAGI

POLICE BHAVAN KALABURAGI

30 November 2012

GULBARGA DISTRICT REPORTED CRIMES


ನಗರದ ವಿವಿಧ ಕಡೆಗಳಲ್ಲಿ ಕಳ್ಳತನ ಮಾಡಿದ 7 ದ್ವಿ-ಚಕ್ರ ವಾಹನಗಳು ಜಪ್ತಿ, ಎರಡು ಜನ ಆರೋಪಿತರ ಬಂಧನ.
ನಗರದಲ್ಲಿ ನಡೆಯುತ್ತಿರುವ ದ್ವಿ-ಚಕ್ರ ವಾಹನಗಳ ಕಳ್ಳತನದ ಪತ್ತೆ ಕುರಿತು ಮಾನ್ಯ ಶ್ರೀ.ಕಾಶಿನಾಥ ಹೆಚ್ಚುವರಿ ಎಸ್.ಪಿ ಗುಲಬರ್ಗಾ, ಶ್ರೀ.ಭೂಷಣ ಜಿ ಬೋರಸೆ ಐ.ಪಿ.ಎಸ್., ಸಹಾಯಕ ಪೊಲೀಸ ಅಧೀಕ್ಷಕರು (ಎ) ಉಪ-ವಿಭಾಗ ಗುಲಬರ್ಗಾ, ಶ್ರೀ.ಹೆಚ್. ತಿಮ್ಮಪ್ಪ ಡಿ.ವೈಎಸ್.ಪಿ ಗ್ರಾಮಾಂತರ ಉಪ-ವಿಭಾಗ ಗುಲಬರ್ಗಾರವರ ಮಾರ್ಗದರ್ಶನದಲ್ಲಿ ಬ್ರಹ್ಮಪೂರ ಪೊಲೀಸ ಠಾಣೆಯ ಶ್ರೀ.ಶರಣಬಸವೇಶ್ವರ ಭಜಂತ್ರಿ ಪೊಲೀಸ್ ಇನ್ಸಪೇಕ್ಟರ, ಶ್ರೀ.ಸತ್ಯನಾರಾಯಣ ಪಿ.ಎಸ್.ಐ,,ಮಾರುತಿ ಎ.ಎಸ್.ಐ., ಪ್ರಕಾಶ, ಮಹಾಂತೇಶ, ಅಶೋಕ ಹಾಗೂ (ಎ) ಉಪ-ವಿಬಾಗದ ಅಪರಾಧ ಪತ್ತೆ ದಳದ ಸಿಬ್ಬಂದಿಯವರಾದ ಮಹ್ಮದ ರಫೀಕ, ರಾಮು ಪವಾರಶಿವಪ್ರಕಾಶ, ದೇವಿಂದ್ರ ರವರು ರಾಜಕುಮಾರ@ಚನ್ನಪ್ಪ ತಂದೆ ವಕೀಲರಾಯ ಮಾಲಿ ಬಿರಾದಾರ@ಆಲೂರೆ, ವಯ|| 26 ವರ್ಷ, || ಖಾಸಗಿ ಕೆಲಸ, ಸಾ|| ತೋರಿವಾಡಿ@ವಳವಂಡವಾಡಿ ತಾ||ಆಳಂದ, ಹಾ||||ಲಾಲ ಹನುಮಾನ ಗುಡಿಯ ಹತ್ತಿರ ಶಹಾಬಜಾರ. ಸಂತೋಷಕುಮಾರ ತಂದೆ ಸುಬಾಶ್ಚಂದ್ರ ರಂಗೋಜಿ, ವಯ|| 32 ವರ್ಷ, || ಟ್ರ್ಯಾಕ್ಟರ ಡ್ರೈವ್ಹರ, ಸಾ|| ದೇಗಾಂವ ತಾ|| ಆಳಂದ, ಹಾ|||| ಮಲಂಗ ಹೊಟೇಲ ಶಿವಾಜಿ ಖಾನಾವಳಿ ಮನೆಯ ಹತ್ತಿರ ಶಹಾಬಜಾರ ಗುಲಬರ್ಗಾ,ರವರನ್ನು ಬಂಧಿಸಿ ಅವರಿಂದ ನಗರದ ಸಂಗಮ ಥೇಟರದಿಂದ, ಕೋಠಾರಿ ಭವನದಿಂದ, ಸರಾಫ ಬಜಾರದಿಂದ, ಸುಪರ ಮಾರ್ಕೆಟದಿಂದ ಕಳ್ಳತನ ಮಾಡಿದ ವಿವಿಧ ಏಳು (7) ಮೋಟರ ಸೈಕಲಗಳು ಅ||ಕಿ||2,35,000/- ರೂಪಾಯಿಗಳ ಬೆಲೆಬಾಳುವದ್ದು ಜಪ್ತ ಮಾಡಿಕೊಂಡಿರುತ್ತಾರೆ.
ವರದಕ್ಷಿಣೆ ಕಿರುಕುಳ ಪ್ರಕರಣ:
ಮಹಿಳಾ ಪೋಲಿಸ ಠಾಣೆ:ಶ್ರೀಮತಿ ಶಾಹೀನ ಅಂಜುಮ್  ಗಂಡ ತೌಸೀಫ್ ಅಹ್ಮದ ಸಾ: ಬಾಂಬೆ ಹೋಟೆಲ್ ಬಿಲಾಲಾಬಾದ ಬ್ಯಾಂಕ ಕಾಲೋನಿ ಗುಲಬರ್ಗಾರವರು ಮಾನ್ಯ 2 ನೇ ಅಪರ ಜೆ.ಎಮ್.ಎಫ್.ಸಿ ನ್ಯಾಯಾಲಯದ ಆದೇಶದಂತೆ ಕಲಂ 156(3) ಸಿ.ಆರ್.ಪಿ.ಸಿ ಪ್ರಕಾರ ತನಿಖೆ ಕೈಕೊಳ್ಳುವಂತೆ ಆದೇಶಿದ ಪ್ರಕಾರ ಮತ್ತು ಅದರ ಸಾರಂಶವೇನೆಂದರೆ, ಶಾಹೀನ ಅಂಜುಮ್ ಲಗ್ನವು ದಿನಾಂಕ:06.10.2008 ರಂದು ತೌಸೀಫ್ ಅಹ್ಮದ ದಿ|| ಹಾಜಿ ಅಬ್ದಲ್ ರಸೂಲ್ ಬಾಂಬೆ ಇತನೊಂದಿಗೆ ಆಗಿದ್ದು. ಮದುವೆ ಕಾಲಕ್ಕೆ  2 ½  ತೊಲೆ ಬಂಗಾರ ಕೊಟ್ಟಿದ್ದು.ಮದುವೆಯಾದ ನಂತರ ನನ್ನ ಗಂಡನ ಮನೆಯಾದ ಬಾಂಬೆಗೆ ಹೋಗಿದ್ದು ತನ್ನ ಗಂಡ, ತೌಸೀಫ್ ಅತ್ತೆ ಅಬೇದಾ, ಮೈದುನ  ರೀಜ್ವಾನ, ನಾದಿನಿ ಶಾಹಜೀಯಾ  ಇವರು 3 ಲಕ್ಷ ರೂಪಾಯಿ ವರದಕ್ಷಿಣೆ ತೆಗೆದುಕೊಂಡು ಬಾ ಇಲ್ಲವಾದರೇ ನಿನಗೆ ತಲಾಖ್ ಕೊಡುತ್ತೇವೆ ಅಂತಾ ಮಾನಸಿಕ ಮತ್ತು ದೈಹಿಕ ಹಿಂಸೆ ಕೊಟ್ಟಿದ್ದು ನನ್ನ ತಂದೆ ತಾಯಿಯವರು ಬಡವರಿದ್ದಾರೆ ಅಂತಾ ತನ್ನ ಗಂಡ , ಅತ್ತೆ, ಮೈದುನ, ಮತ್ತು ನಾದಿನಿ ಇವರಿಗೆ ಹಣ ಕೊಡುವುದು ಆಗುವುದಿಲ್ಲಾ ಅಂತಾ ಹೇಳಿದರು ಕೂಡ ಎಲ್ಲರು ಕೂಡಿ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಟ್ಟು ಹೊಡೆ ಬಡೆ ಮಾಡಿ 3 ತಿಂಗಳ ನಂತರ ನನ್ನ ತವರು ಮನೆಯಾದ ಗುಲಬರ್ಗಾಕ್ಕೆ ತಂದು ಬಿಟ್ಟಿರುತ್ತಾರೆ.2010 ರಲ್ಲಿ  ನನ್ನ ಗಂಡ ,ಅತ್ತೆ, ಮೈದುನ, ನಾದಿನಿ ಇವರೆಲ್ಲರು ಕೂಡಿ ಗುಲಬರ್ಗಾದ ಮೋಮಿನಪೂರಕ್ಕೆ ಬಂದಾಗ ನಾನು ಮತ್ತು ನನ್ನ ತಂದೆ ಕೂಡಿ ಆ ನಾಲ್ಕು ಜನರಿಗೆ  ನಮ್ಮಗೆ 3 ಲಕ್ಷ ರೂಪಾಯಿ ಕೊಡುವುದು ಆಗುವುದಿಲ್ಲಾ. ಅಂತಾ ವಿನಂತಿಸಿಕೊಂಡರು ಕೂಡ ನನಗೆ ಕರೆದುಕೊಂಡು ಹೋಗದೇ ಇಲ್ಲೇ ಬಿಟ್ಟು ಹೋಗಿರುತ್ತಾರೆ. ಮತ್ತೆ ಸ್ವಲ್ಪ ದಿವಸದ ನಂತರ ನನ್ನ ತಂದೆ ನನಗೆ ಗಂಡನ ಮನೆಯಾದ ಬಾಂಬೆಯಲ್ಲಿ ಬಿಟ್ಟು ಬಂದರು ಮತ್ತೇ ನಾಲ್ಕು ತಿಂಗಳ ನಂತರ 3 ಲಕ್ಷ  ರೂಪಾಯಿ ತಂದ್ದರೇ ಮಾತ್ರ ನಮ್ಮ ಮನೆಯಲ್ಲಿ ಇರು ಅಂತಾ  ಹೊಡೆ ಬಡೆ ಮಾಡಿ  ಮನೆಯಿಂದ ಹೊರ ಹಾಕಿದ್ದು. ಬಾಂಬೆಯಲ್ಲಿ ಪಂಚಾಯಿತ ಮಾಡಿದರು ಕೂಡ ಯಾರ ಮಾತು ಕೇಳದೇ ಹೊಡೆ ಬಡೆ ಮಾಡುತ್ತಿದ್ದರಿಂದ. ನನ್ನ ತವರು ಮನೆಗೆ ಬಂದು ಉಳಿದುಕೊಂಡಿರುತ್ತೇನೆ.ದಿನಾಂಕ: 18.03.2012 ರಂದು ನನ್ನ ಗಂಡ ಗುಲಬರ್ಗಾದ  ಬಡಿ ಮಜೀದ  ಹತ್ತಿರವಿರುವ ಮನೆಗೆ ಬಂದಾಗ ನಾನು ಮತ್ತು ನನ್ನ ತಂದೆ ಹೋಗಿ ಸರಿಯಾಗಿ ಇಟ್ಟುಕೊಳ್ಳು ಬಾಂಬೆಗೆ ಕರೆದುಕೊಂಡು ಹೋಗು ಅಂತಾ ವಿನಂತಿಸಿಕೊಂಡರು ಕೂಡ ತವರು ಮನೆಯಲ್ಲಿಯೇ ಬೀಟ್ಟು  ಹೋಗಿರುತ್ತೇನೆ ಅಂತಾ ದೂರು ಸಲ್ಲಿಸಿದ ಸಾರಾಂಶ ಮೇಲಿಂದ ಠಾಣೆ ಗುನ್ನೆ ನಂ:83/2012 ಕಲಂ 498(ಎ) ಐ.ಪಿ.ಸಿ 3&4 ಡಿ.ಪಿ.ಆಕ್ಟ್ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: