POLICE BHAVAN KALABURAGI

POLICE BHAVAN KALABURAGI

30 November 2012

GULBARGA DISTRICT REPORTED CRIMES


ಹಲ್ಲೆ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ, ದೇವಿಂದ್ರ ತಂದೆ ಶಿವಪ್ಪ ಸಿನ್ನೂರ ರವರು ನಾನು ದಿನಾಂಕ 29/11/2012 ರಂದು ಸಾಯಂಕಾಲ 4-00  ಗಂಟೆ ಸುಮಾರಿಗೆ ನನ್ನ ಅಣ್ಣನ ಹೆಂಡತಿಯಾದ ಕೊಮಲ ಗಂಡ ರಾಜೇಂದ್ರ ಸಿನ್ನೂರ ಇವರು ಸಂಜಯಕುಮಾರ ತಂದೆ ಅಂಬಾಜಿ ಅಟ್ಟೂರ ಇವರ ಮನೆಯ ಹತ್ತಿರ ಹೋಗಿ ನನ್ನ ಮಗಳಾದ ಪೂಜಾ ಇವಳ ಮೋಬೈಲ ನೇದ್ದಕ್ಕೆ ನಿನ್ನ ಮೋ.ನಂಬರಿನಿಂದ ಯಾಕೆ ಕಾಲ್ ಮಾಡುತ್ತಿದ್ದಿ ಅಂತಾ ಕೇಳಿದಕ್ಕೆ ಸಂಜುಕುಮಾರನ ಅಕ್ಕ ಜಯಶ್ರೀ ಇವಳು ಪೋನ ಬಂದಿರಬೇಕು, ಮಾತಾಡಿರಬೇಕು ಈಗ ಏನ್ ಮಾಡುತ್ತಿ ಅಂತಾ ಅವಾಚ್ಯ ಶಬ್ದಗಳಿಂದ  ಬೈಯುತ್ತಿದ್ದು ಆ ವೇಳೆಗೆ ರಮಾಬಾಯಿ, ರತ್ನಾಬಾಯಿ, ಸಂಜುಕುಮಾರ ಮತ್ತು ವಿಜಯಕುಮಾರ ಮನೆಯಿಂದ ಬಂದು ನನಗೆ ಹೊಡೆಯ ಹತ್ತಿದರು. ನನ್ನ ಅತ್ತಿಗೆ ಚಿರಾಡುತ್ತಿದ್ದಾಗ ನಾನು ಮತ್ತು ನನ್ನ ಅಣ್ಣನ ಮಕ್ಕಳಾದ ಶಿವರಾಜ, ಆಕಾಶ, ಮೂರು ಜನ ಕೂಡಿ ಯಾಕೆ ಹೊಡೆಯುತಿದ್ದರಿ ಅಂತಾ ಕೇಳುತ್ತಿದ್ದಾಗ ನೀವು ಬಂದ್ರಿ ಸೂಳಿ ಮಕ್ಕಳೆ ಅಂತಾ ಕೈಯಿಂದ ಹೊಡೆಬಡೆ ಮಾಡಿರುತ್ತಾರೆ . ಕಾರಣ ಸಂಜುಕುಮಾರ ತಂದೆ ಅಂಬಾಜಿ ಅಟ್ಟೂರ,ವಿಜಯಕುಮಾರ ತಂದೆ ಅಂಬಾಜಿ ಅಟ್ಟೂರ,ಜಯಶ್ರೀ ಗಂಡ ಶಾಮರಾವ, ರಮಾಬಾಯಿ ಗಂಡ ಮನೋಹರ ಕಂಠಿ,ರತ್ನಾಬಾಯಿ ಗಂಡ ಅಂಬಾಜಿ ಇವರೆಲ್ಲರೂ ಕೂಡಿ ಕೈಯಿಂದ ಹೊಡೆದು ಗುಪ್ತಗಾಯ ಮಾಡಿ ಹೆಣ್ಣು ಮಕ್ಕಳಿಗೆ ಕೈಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.111/2012 ಕಲಂ. 147, 323, 354, 504 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಮುಂಜಾಗ್ರತೆ ಕ್ರಮ:
ಗುಲಬರ್ಗಾ ಗ್ರಾಮೀಣ ಠಾಣೆ:ದಿನಾಂಕ: 29-11-2012 ಮಧ್ಯಾಹ್ನ 12-30 ಗಂಟೆ ಸುಮಾರಿಗೆ ಪಿ.ಎಸ.ಐ ಆನಂದರಾವ ರವರು ಬೇಲೂರ (ಜೆ) ಗ್ರಾಮದ ಸರ್ಕಾರಿ ಶಾಲೆಯ ಹತ್ತಿರ ಹೋಗುತ್ತಿದ್ದಾಗ ಕತ್ತಲಿನಲ್ಲಿ  ಮೇಲಾರಿ ತಂದೆ ಚಿಂತಾಮಣಿ ಬುಳ್ಳಾ ಸಾ|| ಆದರ್ಶ ನಗರ ಗುಲಬರ್ಗಾ, ಅಬ್ದುಲ ನಸೀರ ತಂದೆ ಹಬೀಬಸಾಬ ಅಂಡೆನವರ ಸಾ|| ಎಸ.ಎಮ್. ಕೃಷ್ಣಾ ಕಾಲೋನಿ ಗುಲಬರ್ಗಾ, ಮಾಣಿಕ ತಂದೆ ಜೆಟೆಪ್ಪಾ ಮಾವಿನಕರ ಸಾ|| ಪೀಲ್ಟರಬೇಡ ಆಶ್ರಯ ಕಾಲೋನಿ ಗುಲಬರ್ಗಾ ಇವರು ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುತ್ತಿದ್ದು ಅವರ ಇವರುವಿಕೆ ಬಗ್ಗೆ ವಿಚಾರಿಸಲಾಗಿ ಸರಿಯಾದ ಉತ್ತರ ಕೊಡಲಿಲ್ಲ . ಸದರಿಯವರನ್ನು ಹಾಗೇ ಬಿಟ್ಟಲ್ಲಿ ಯಾವುದಾದರೂ ಸ್ವತ್ತಿನ ಅಪರಾದ ಮಾಡಬಹುದೆಂಬ ಬಲವಾದ ಸಂಶಯದಿಂದ ಠಾಣೆ ಗುನ್ನೆ ನಂ: 395/2012 ಕಲಂ 109 ಸಿ.ಆರ್.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ.
ಮೋಟಾರ ಸೈಕಲ ಕಳ್ಳತನ ಪ್ರಕರಣ:
ಚೌಕ ಪೊಲೀಸ್ ಠಾಣೆ: ಶ್ರೀ ಗೋಪಾಲರಾವ ತಂದೆ ಚಂದಪ್ಪಾ ಬಿಳಂಕರ ಸಾ:ಮನೆ ನಂ:8-1545:81 ಡಿ, ಶಿವಾಜಿ ನಗರ, ಗುಲಬರ್ಗಾ ನಾನು ದಿನಾಂಕಃ16.11.2012 ರಂದು  ಕೆಲಸದ ನಿಮಿತ್ಯ ಹಿರೋಹೊಂಡಾ ಕೆಎ 32 ಎಲ್ 3496 ನೇದ್ದನ್ನು ಮಧ್ಯಾಹ್ನ 3-30 ಗಂಟೆಗೆ ಸುಮಾರಿಗೆ ನಿಲ್ಲಿಸಿ ಕಿರಾಣಬಜಾರದಲ್ಲಿ ಹೋಗಿರುತ್ತೆನೆ. ಕೆಲಸ ಮುಗಿಸಿಕೊಂಡು ಪುನಃ 4.30 ಗಂಟೆಗೆ ಬಂದು ನನ್ನ ವಾಹನ ನಿಲ್ಲಿಸಿದ ಸ್ಥಳದಲ್ಲಿ ಬಂದು ನೋಡಲಾಗಿ ಅಲ್ಲಿ ನಾನು ನಿಲ್ಲಿಸಿದ ವಾಹನ ಇರಲಿಲ್ಲ ಹಾಗೂ ಅಲ್ಲಿ ಅಕ್ಕಪಕ್ಕದವರಿಗೆ ವಿಚಾರಿಸಲಾಗಿ ದ್ವಿ-ಚಕ್ರ ವಾಹನದ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಕಾರಣ ಯಾರೋ ಕಳ್ಳರು ನಮ್ಮ ಮೋಟಾರ ಸೈಕಲ್ ನಂ:ಕೆಎ 32 ಎಲ್ 3496 ಹಿರೋಹೊಂಡಾ ಸ್ಪೆಲೆಂಡರ್ ಕಳವು ಮಾಡಿಕೊಂಡು ಹೋಗಿರುತ್ತಾರೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:199/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡಿರುತ್ತಾರೆ. 

No comments: