POLICE BHAVAN KALABURAGI

POLICE BHAVAN KALABURAGI

12 December 2011

GULBARGA DIST REPORTED CRIMES

ಕಳ್ಳತನ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಜಯಕುಮಾರ ತಂದೆ ರಾಮಚಂದ್ರ ಅಂಬೇಕರ್ ಸಾ ಮನೆ ನಂ 13517/1 ಪಿ.ಡಬ್ಲು.ಡಿ ಕ್ವಾರ್ಟರ್ಸ ಮುನೀರ ಅಪಾರ್ಟಟ ಮೆಂಟ ಪಿ.ಡಬ್ಲೂಡಿ ಕ್ವಾರ್ಟರ್ಸ ಪಿ.ಡಿ.ಎ ಕಾಲೇಜ ರೊಡ ಗುಲಬರ್ಗಾ ರವರು ನಾನು ದಿನಾಂಕ: 19.11.2011 ರಂದು ರಾತ್ರಿ 10.30 ಗಂಟೆಗೆ ಹೀರೊ ಹೊಂಡಾ ಗ್ಲಾಮರ್ ಕೆಎ 32 ಎಸ್ 6001 ಅಕಿ 25000/- ರೂ ನೇದ್ದು ನಿಲ್ಲಿಸಿ ಬೆಳಗ್ಗೆ ದಿ:20.12.2011 ರಂದು ನೋಡಲಾಗಿ ಮನೆಯ ಮುಂದೆ ನಿಲ್ಲಿಸಿದ ಮೊಟಾರ ಸೈಕಲ್ ಇರಲ್ಲಿಲ್ಲ ಯಾರೋ ಕಳ್ಳರೂ ಕಳವು ಮಾಡಿಕೋಂಡು ಹೋಗಿರುತ್ತಾರೆ, ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 210/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಮೋಟಾರ ಸೈಕಲ್ ಕಳ್ಳತನ ಮಾಡಿ ಸುಟ್ಟು ಹಾಕಿದ ಬಗ್ಗೆ :
ಸ್ಟೇಷನ ಬಜಾರ ಪೊಲೀಸ ಠಾಣೆ:
ಶ್ರೀ ಶಂಕರ ಪವಾರ ತಂದೆ ಪರುಶುರಾಮ ಪವಾರ ಉ ನ್ಯಾಶನೆಲ್ ಇನ್ಸೂರೆನ್ಸ ಕಂಪನಿ ಲಿಮಿಟೆಡ್ ಸ್ಟೇಷನ ರೊಡ ಗುಲಬರ್ಗಾದಲ್ಲಿ ಆಡಳಿತಾಧಿಕಾರಿ ಗುಲಬರ್ಗಾ ಸಾ ಮನೆ ನಂ 86 ನಾಗ ಮಂದಿರ ಹತ್ತಿರ ಶಕ್ತಿನಗರ ಗುಲಬರ್ಗಾ ರವರು ನಾನು ದಿ: 07.12.2011 ರಂದು ಬೆಳಗ್ಗೆ 1000 ಗಂಟೆಗೆ ಕಛೇರಿ ಕೇಲಸಕ್ಕೆ ಬಂದಾಗ ತಮ್ಮ ದ್ವಿಚಕ್ರ ವಾಹನ ನಂ ಕೆ.ಎ 32 ವಿ 9249 ಟಿವಿಎಸ್ ಎಕ್ಸೆಲ್ ಹೆಚ್.ಡಿ ವಾಹನವನ್ನು ಕಛೇರಿ ಕಟ್ಟಡದ ಮುಂದಿನ ಸ್ಥಳದಲ್ಲಿ ನಿಲ್ಲಿಸಿ ಆಪೀಸಗೆ ಹೋಗಿ ಕರ್ತವ್ಯ ನಿರ್ವಹಿಸಿ ಸಾಯಂಕಾಲ 7.00 ಗಂಟೆಗೆ ಹೊರಗಡೆ ಬಂದು ತಮ್ಮ ದ್ವಿಚಕ್ರ ವಾಹನವನ್ನು ನೊಡಲಾಗಿ ಸ್ಥಳದಲ್ಲಿ ಇದ್ದಿರಲಿಲ್ಲಾ ಎಲ್ಲ ಕಡೆ ಹುಡಕಡಿದರು ಸಿಕ್ಕಿರುವುದಿಲ್ಲಾ ದಿ: 11.12.2011 ರಂದು ನಾನು ಬಂಜಾರ ಕಮುನಿಟಿ ಹಾಲ ಪಕ್ಕದ ರಸ್ತೆಯಲ್ಲಿ ಬರುತ್ತಿರುವಾಗ ರಸ್ತೆಯ ಪಕ್ಕದಲ್ಲಿ ಒಂದು ದ್ವಿ ಚಕ್ರ ವಾಹನ ಸುಟ್ಟಿದ್ದು ಕಂಡು ಬಂತು ಅಲ್ಲಿ ಹೋಗಿ ನೋಡಲು ಅದು ದ್ವಿ ಚಕ್ರ ವಾಹನ ತಮ್ಮದೆ ಅಂತಾ ಕಂಡು ಬಂದಿರುವದರಿಂದ ನನ್ನ ದ್ವಿಚಕ್ರ ವಾಹನ ಸಂಪೂರ್ಣವಾಗಿ ಸುಟ್ಟಿದ್ದು ನಂಬರ ಕಾಣಿಸುತ್ತಿಲ್ಲಾ ಕಾರಣ ದಿ: 07.12.2011 ರ ಬೆಳಗಿನ 1000 ಗಂಟೆಯಿಂದ ಯಾರೋ ದುಷ್ಕರ್ಮಿಗಳು ದ್ವಿಚಕ್ರ ವಾಹನ ತೆಗೆದುಕೊಂಡು ಹೋಗಿ 11.12.2011 ರ ಬೆಳಗಿನ ಅವಧಿ ಒಳಗಾಗಿ ಯಾವೂದೊ ದುರುದ್ದೇಶದಿಂದ ಸುಟ್ಟು ಹಾಕಿರುತ್ತಾರೆ. ಅವರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣಾ ಗುನ್ನೆ ನಂ 208/11 ಕಲಂ 435 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: