POLICE BHAVAN KALABURAGI

POLICE BHAVAN KALABURAGI

12 December 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ
: ಶ್ರೀ ಸಂತೋಷ ತಂದೆ ಅಂಬಣ್ಣ ಅಸಂಗನಾಳ ಸಾ; ವಿಜಯ ನಗರ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ 10-12-2011 ರಂದು ಸಾಯಂಕಾಲ 7-30 ಗಂಟೆಗೆ ನಗರದ ಶಹಾಬಜಾರ ನಾಕಾ ದಿಂದ ಆಳಂದ ಚೆಕ್ಕಪೊಸ್ಟ ಮುಖ್ಯ ರಸ್ತೆಯಲ್ಲಿ ಬರುವ ವಿಜಯ ನಗರ ಕಾಲೋನಿ ಕ್ರಾಸ್ ರೋಡಿನ ಮೇಲೆ ಹೊರಟಾಗ ಕಾರ ನಂ:ಕೆಎ 32 ಎಮ್ 6652 ನೇದ್ದವನು ಆಳಂದ ಜೆಕ್ಕಪೊಸ್ಟ ಕಡೆಯಿಂದ ಅತೀ ವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಸೈಕಲ್ ಗೆ ಎದುರಿನಿಂದ ಡಿಕ್ಕಿ ಪಡಿಸಿ ಅಪಘಾತ ಮಾಡಿ ಕಾರ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 158/11 ಕಲಂ: 279 .337 ಐ.ಪಿ.ಸಿ ಸಂ: 187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಶಹಾಬಾದ ನಗರ ಠಾಣೆ
: ದಿನಾಂಕ:11/12/2011 ರಂದು ಸಾಯಂಕಾಲ 5.30 ಪಿಎಂಕ್ಕೆ ಆರೋಪಿತರು ಖುರ್ಷಿದ ಮೊಹಲ್ಲಾ ಶಹಾಬಾದದಲ್ಲಿ ಇಬ್ರಾಹಿಂಸಾಬ ಚೌದರಿ ಇವರ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಖುಲ್ಲಾ ಜಾಗೆಯಲ್ಲಿ ಕೆಲವು ಜನರು ಕುಳಿತು ಕ್ಯಾರಂ ಬೋರ್ಡ ಆಟ ಆಡುತ್ತಿದ್ದಾರೆ ಅಂತಾ ಖಚಿತ ಪಡಿಸಿಕೊಂಡು ಪಂಚರ ಸಮಕ್ಷಮ ಶ್ರೀ ಶರಣಪ್ಪಾ ಹಿಪ್ಪರಗಿ ಪಿಐ ಶಹಾಬಾದ ನಗರ ಠಾಣೆ ರವರು ಮತ್ತು ಸಿಬ್ಬಂದಿಯೊಂದಿಗೆ ದಾಳಿ ಮಾಡಿದ್ದು ಅವರಿಂದ ಒಟ್ಟು 2225/-ರೂ ನಗದು ಹಣ ಮತ್ತು 3 ಕ್ಯಾರಂ ಬೋರ್ಡ ಕ್ವಾಯೀನ್ಸಗಳ ಸಮೇತ ಅ.ಕಿ.6060/ರೂ ನೇದ್ದವುಗಳನ್ನು ಪಂಚರ ಸಮಕ್ಷಮ ಸರ್ಕಾರಿ ತರ್ಫೆ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 192/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಅಪಘಾತ ಪ್ರಕರಣ:
ಗ್ರಾಮೀಣ ಠಾಣೆ
:
ಆನಂದ ತಂದೆ ಬಸವರಾಜ ಬಿರಾದಾರ ಸಾ: ಪೂಜಾರಿ ಮಠದ ಹತ್ತಿರ ಭವಾನಿ ನಗರ ಗುಲಬರ್ಗಾ ರವರು ದಿನಾಂಕ 11-12-11 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ತಾಜ ಸುಲ್ತಾನಪೂರದಲ್ಲಿರುವ ತನ್ನ ಕಾಕಾ ಕಲ್ಯಾಣರಾವ ಇವರಿಗೆ ಭೇಟ್ಟಿಯಾಗಿ ಸೈಕಲ ಮೇಲೆ ಮನೆಯ ಕಡೆ ಮಧ್ಯಾಹ್ನ ಕಾಕಡೆ ಚೌಕ ರಿಂಗ ರೋಡದಿಂದ ಹೊರಟಾಗ ಹಿಂದಿನಿಂದ ಅಂದರೆ ಅಳಂದ ಚೆಕ್ಕ ಪೋಸ್ಟ ಕಡೆಯಿಂದ ಕಾರ ಕೆಎ 29 ಎಂ 316 ಚಾಲಕ ತನ್ನ ಕಾರನ್ನು ಅತಿವೇಗ ಮತ್ತು ಅಲಕ್ಷತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ತನ್ನ ಸೈಡಿಗೆ ಹೋಗದೇ ಕಚ್ಚಾ ರೋಡ ಬದಿ ಹೊರಟ ನನ್ನ ಫಿರ್ಯಾದಿ ಸೈಕಲಿಗೆ ವೇಗದಲ್ಲಿ ಡಿಕ್ಕಿ ಹೊಡೆದು ಹಾಗೇ ಹುಮನಾಬಾದ ರಿಂಗ ರೋಡ ಕಡೆ ಓಡಿಸಿಕೊಂಡು ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:366/2011 ಕಲಂ 279, 337 ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಜೂಜಾಟ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ:
ದಿನಾಂಕ 11-12-11 ರಂದು 4-30 ಪಿ.ಎಂ. ಸುಮಾರಿಗೆ ಹೀರಾಪೂರ ಗ್ರಾಮದ ಬಸವರಾಜ ಇವರ ಹೊಲದ ಬಂದಾರಿಯ ಬೆವಿನ ಗಿಡದ ಕೆಳಗೆ ಬಾಹರ ಇಸ್ಪೇಟ ಜೂಜಾಟ ಆಡುತ್ತಿರುವ ಬಗ್ಗೆ ಭಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ದಾಳಿ ಮಾಡಿ ಮುನೀರ ತಂದೆ ನಾಸಿರ ಉಲ್ಲಾ , ಮಾಮನ ರಶೀದ ತಂದೆ ಹಾರೂಣ ರಶೀದ ,ಮುಜಾಹಿದೊದ್ದಿನ ತಂದೆ ಮೈನೊದ್ದಿನ, ಅಜರ ತಂದೆ ಇಕ್ಬಾಲ , ಮಹಮ್ಮದ ಹುಸೇನ ತಂದೆ ಸಾಬರ ಹುಸೇನ ಸಾ;ಎಲ್ಲರೂ ಮಿಜಬಾ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು ಜೂಜಾಟದಲ್ಲಿ ತೊಡಗಿಸಿದ ಹಣ. 1940/- ರೂ ಮತ್ತು 52 ಇಸ್ಪೇಟ ಎಲೆಗಳನ್ನು ಜಪ್ತ ಮಾಡಿಕೊಂಡಿದ್ದರಿಂದ ಠಾಣೆ ಗುನ್ನೆ ನಂ: 367/2011 ಕಲಂ 87 ಕೆ.ಪಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.

No comments: