POLICE BHAVAN KALABURAGI

POLICE BHAVAN KALABURAGI

14 November 2011

Gulbarga District Reported Crimes

ಹಲ್ಲೆ ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ :ದಿನಾಂಕ: 12/11/2011 ರಂದು ರಾತ್ರಿ 9 ಗಂಟೆಯ ಸುಮಾರಿಗೆ ಶ್ರೀ ದಸ್ತಗಿರಿ ತಂದೆ ಇಮಾಮಸಾಬ ಅತ್ತಾರ ಸಾ: ಪಟ್ಟಣ್ಣ ತಾ: ಜಿ:ಗುಲಬರ್ಗಾ ರವರ ಮನೆಯ ಮೇಲೆ ಕಲ್ಲು ಬಿದ್ದಾಗಿ ಹೋಗಿ ನೋಡಿದ್ದು ಅಲ್ಲಿ ಯಾರು ಇಲ್ಲದ್ದರಿಂದ ಮನೆಯ ಮುಂದೆ ಬಂದು ಯಾರೋ ನಮ್ಮ ಮನೆಯ ಮೇಲೆ ಕಲ್ಲು ಹೊಡೆದಿದ್ದಾರೆ ಅಂತ ಬೈಯುತ್ತಿದ್ದಾಗ. ಪಕ್ಕದ ಮನೆಯ ಅಣ್ಣತಮ್ಮಕಿಯ ಉಸ್ಮಾನಸಾಬ ತಂದೆ ಕಾಶೀಮಸಾಬ ಅತ್ತಾರ ಇನ್ನೂ 3 ಜನರು ಸಾ: ಪಟ್ಟಣ್ಣ ಗ್ರಾಮ ಇವರು ನಾವೇ ಕಲ್ಲು ಹೊಡೆದಿದ್ದೇವೆ ಅಂತಾ ಅಂದು ಅವ್ಯಾಚ್ಛವಾಗಿ ಬೈದ್ದು ಬಿಡಿಗೆಯಿಂದ ಹೊಡೆ ಬಡೆ ಮಾಡಿ ಗಾಯಗೊಳಿಸಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯ ಗುನ್ನೆ ನಂ 334/11 ಕಲಂ 504 323 324 ಸಂ/ 34 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ

ದ್ವಿಚಕ್ರ ವಾಹನ ಕಳವು ಪ್ರಕರಣ :

ಗುಲಬರ್ಗಾ ಗ್ರಾಮೀಣ ಠಾಣೆ :ಶ್ರೀ ಗಣಪತಿ ತಂದೆ ಮೋಗಲಪ್ಪ ದೊಡ್ಡಮನಿ ಸಾ: ಮನೆ ನಂ 447 ವೀರೆಂದ್ರ ಪಾಟೀಲ ಬಡಾವಣೆ ಗುಲಬರ್ಗಾ ರವರು ದಿನಾಂಕ 13/11/2011 ರಂದು ಮುಂಜಾನೆ 8 ಗಂಟೆಯ ಸುಮಾರಿಗೆ ತನ್ನ ಮೋಟಾರ ಸೈಕಲ ನಂ ಕೆಎ 32 ವ್ಹಿ 8849 ನೇದ್ದು ಹುಮನಾಬಾದ ರಿಂಗ ರೋಡದಲ್ಲಿಯ ಆಪೇ ಶೋ ರೂಮಿನ ಎದರು ನಿಲ್ಲಿಸಿ ಗೆಳೆಯನೊಂದಿಗೆ ಪಕ್ಕದ ಹೊಟೇಲಿಗೆ ಹೋಗಿ ಟಿಪ್ಪನ ಮಾಡಿಕೊಂಡು ಮರಳಿ ಬಂದು ನೋಡಲಾಗಿ ಯಾರೋ ಕಳ್ಳರು ತನ್ನ ಮೋಟಾರ ಸೈಕಲ ನಂ ಕೆಎ 32 ವ್ಹಿ 8849 ನೇದ್ದರ ಅಕಿ 43000/- ರೂಗಳ ಕಿಮ್ಮತ್ತಿನದ್ದು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆ ಗುನ್ನೆ ನಂ 335/11 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

No comments: