POLICE BHAVAN KALABURAGI

POLICE BHAVAN KALABURAGI

08 November 2011

GULBARGA DIST REPORTED CRIMES

ಅಪಘಾತ ಪ್ರಕರಣ:
ಸಂಚಾರಿ ಪೊಲೀಸ್ ಠಾಣೆ
: ಅಶೋಕ ತಂದೆ ಶಿವರಾಯ ಬಾಗೋಡಿ ಸಾಃ ಪ್ರಗತಿ ಕಾಲೋನಿ ಗುಲಬರ್ಗಾ ರವರು ನಾನು ಮತ್ತು ನನ್ನ ಮಗಳು ಪಾವನ ಇಬ್ಬರು ಕೂಡಿ ನಮ್ಮ ಮೋಟಾರ ಸೈಕಲ ನಂ. ಕೆ.ಎ 32 ಜೆ7252 ನೇದ್ದರ ಮೇಲೆ ಗುಬ್ಬಿ ಕಾಲೋನಿ ಹತ್ತಿರವಿರುವ ಭವಾನಿ ಹೊಲ್ ಸೆಲ್ ಅಂಗಡಿಯ ಮುಂದಿನಿಂದ ಹೋಗುತ್ತಿದ್ದಾಗ ಎದರುಗಡೆಯಿಂದ ಟಿ.ವಿ.ಎಸ್ ಎಕ್ಸ.ಎಲ್ ನಂ. ಕೆ.ಎ 32 ಎಕ್ಸ 8649 ನೇದ್ದರ ಚಾಲಕ ಚಂದ್ರಕಾಂತ ಕುಂಬಾರ ಇತನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಮೋಟಾರ ಸೈಕಲಕ್ಕೆ ಡಿಕ್ಕಿ ಹೊಡೆದು ತಾವು ಕೂಡಾ ಕೆಳಗೆ ಬಿದ್ದಿದ್ದು ಅಪಘಾತದಿಂದ ನನ್ನ ಮಗಳಾದ ಪಾವನಾ ಇವಳಿಗೆ ಮತ್ತು ಚಂದ್ರಕಾಂತ ಮತ್ತು ಹಿಂದೆ ಕುಳಿತ ಸಿದ್ದು ಕುಂಬಾರ ಇವರಿಗೆ ಗಾಯಗಳಾಗಿರುತ್ತವೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 68/2011 ಕಲಂ 279, 337 ಐಪಿಸಿ ಪ್ರಕಾರ ಪ್ರಕರಣ ದಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಯು.ಡಿ.ಅರ್. ಪ್ರಕರಣ:
ಕಮಲಾಪೂರ ಠಾಣೆ :
ಶ್ರೀ, ಮೋನು ತಂದೆ ನಾನು ಚವ್ಹಾಣ ಸಾ:ಮಳಸಾಪೂರ ತಾಂಡಾ ತಾ:ಜಿ;ಗುಲಬರ್ಗಾ ರವರು ನಾನು ದಿನಾಂಕ;06/11/2011 ರಂದು ಬೆಳೆಗ್ಗೆ 10-00 ಗಂಟೆ ಸುಮಾರಿಗೆ ತಿಪ್ಪಿಬಾಯಿ ತೊಗರಿ ಬೆಳೆಗೆ ಕ್ರೀಮಿನಾಶಕ ಜೌಷಧಿ ಹೊಡೆದು ಮಧ್ಯಾಹ್ನ ತನ್ನ ಕೈ ತೊಳೆದು ಕೊಳ್ಳದೇ ಹಾಗೇಯೇ ಊಟ ಮಾಡಿದ್ದು, ನಂತರ ಮತ್ತೆ ತೊಗರಿಗೆ ಜೌಷಧಿ ಹೊಡೆಯುತ್ತಿದ್ದಾಗ ಮತ್ತೆ ಗಾಳಿಯ ಮುಖಾಂತರ ಕ್ರೀಮಿನಾಶಕ ಜೌಷಧಿ ತಿಪ್ಪಿಬಾಯಿ ಇವಳ ಬಾಯಿಯಲ್ಲಿ ಮತ್ತು ಮೂಗಿನಲ್ಲಿ ಸೇರಿದ್ದು, ಸಾಯಂಕಾಲ 5-00 ಗಂಟೆ ಸುಮಾರಿಗೆ ತಿಪ್ಪಿಬಾಯಿ ಇವಳು ಹೊಲದಲ್ಲಿ ಒಮ್ಮಿಲೇ ಚಕ್ಕರ ಬಂದು ಕುಸಿದು ಬಿದ್ದಾಗ ಉಪಚಾರಕ್ಕಾಗಿ ಸರ್ಕಾರಿ ಆಸ್ಪತ್ರೆ ಚಿಟಗುಪ್ಪಾಕ್ಕೆ ಹೋಗಿ ಸೇರಿಕೆ ಮಾಡಿದ್ದು, ಉಪಚಾರ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ರಾತ್ರಿ 8-30 ಗಂಟೆ ಸುಮಾರಿಗೆ ಮೃತಪಟ್ಟಿರುತ್ತಾಳೆ, ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಯುಡಿಅರ್ ನಂ: 11/2011 ಕಲಂ 174 ಸಿಅರಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ :
ಯಡ್ರಾಮಿ ಪೊಲೀಸ್ ಠಾಣೆ
: ಶ್ರೀ ಬಸಣ್ಣ ತಂದೆ ಚನ್ನಪ್ಪ ಮುದ್ದೇಬಿಹಾಳ ಸಾ: ಕೊಂಡಗೂಳಿ ಹಾ:ವ ಬಿಜಾಪೂರ ರವರು ನಾನು ನಾನು ಮತ್ತು ಹಾಗೂ ತನ್ನ ತಂಗಿಯ ಗಂಡ ಮಡಿವಾಳಪ್ಪಗೌಡ ಇಬ್ಬರು ದಿನಾಂಕ 06-11-2011 ರಂದು ಹತ್ತಿ ಬೆಳೆಗೆ ಕೆಲಾಲ್ ನೀರು ಬಿಡುತ್ತಿದ್ದಾಗ ಗುರುಸಿದ್ದಪ್ಪಗೌಡ ತಂದೆ ಅಮರಪ್ಪಗೌಡ ಪೊಲೀಸ್ ಪಾಟೀಲ ಹಾಗೂ ಇನ್ನು ಇಬ್ಬರು ಸಾ: ಎಲ್ಲರೂ ಕೊಂಡಗಳು ಗ್ರಾಮದವರು ತಕರಾರು ಮಾಡಿ ಕಾಲುವೆ ಒಡೆದು ನೀರನ್ನು ತಗೆದುಕೊಂಡಿದನ್ನು ವಿಚಾರಿಸಿ ಮನೆಗೆ ಬರುತ್ತಿದ್ದಾಗ ಸಾಯಂಕಾಲ ಅವರೆಲ್ಲರೂ ಎದುರಿನಿಂದ ಬಂದು ಅವಾಚ್ಯ ಶಬ್ದಗಳಿಂದ ಬೈದು ಜೀವದ ಬೆದರಿಕೆ ಹಾಕಿ ಕೈಯಿಂದ ಮತ್ತು ಗಳ್ಯಾದ ಕಬ್ಬಿಣದ ಪಲಗಾದಿಂದ ಹೊಡೆದು ಭಾರಿ ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 83/2011 ಕಲಂ 341,323,324,504,506,307 ಸಂಗಡ 34 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂತು ತನಿಖೆ ಕೈಕೊಳ್ಳಲಾಗಿದೆ.

No comments: