POLICE BHAVAN KALABURAGI

POLICE BHAVAN KALABURAGI

07 November 2011

Gulbarga Dist Reported Crimes

ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:
ಶ್ರೀಮತಿ ಸುಸಲಾಭಾಯಿ ಗಂಡ ಬಾಗಪ್ಪ ದೊಡ್ಡಮನಿ 42 ವರ್ಷ ಸಾ|| ಇಂಗಳಗಿ (ಕೆ) ತಾ|| ಅಫಜಲಪೂರ ರವರು ಠಾಣೆಗೆ ನನ್ನ ಮಗ ಸಂತೋಷ ಈತನು ರತನು & ವಿಳಾಸ      ದವರೆಗ ವಿ ಹೆಂಡತಿ ರೇಣುಕಾ ಇವಳೊಂದಿಗೆ ಮಾತನಾಡುವದು ಮತ್ತು ನಗುವದು ಮಾಡುತ್ತಿದ್ದರಿಂದ ರವಿ ಸಂತೋಷನ ಮೇಲೆ ಸಂಶಯ ಮಾಡಿಕೊಂಡಿದದ್ದನು ದಿನಾಂಕ: 05.11.2011 ರಂದು ರಾತ್ರಿ 10 ಗಂಟೆಗೆ ಹೊಲಕ್ಕೆ ಹೋಗಿದ್ದು ದಿನಾಂಕ 06.11.11 ರಂದು ಬೆಳಿಗ್ಗೆ 8 ಗಂಟೆಯಾದರು ಮರಳಿ ಮನೆಗೆ ಬರದೆ ಇದ್ದಾಗ ಹೊಲಕ್ಕೆ ಹೋಗಿ ನೋಡಲಾಗಿ ಅವನ ಮೈಮೇಲೆ ಆದ ಗಾಯಗಳನ್ನು ಕಂಡು ಮಗ ಸಂತೋಷ ಈತನಿಗೆ ಗಾಯಗೊಳಿಸಿ ಕೊಲೆ ಮಾಡಿರುತ್ತಾರೆ. ತನ್ನ ಮಗ ಮತ್ತು ರವಿಯ ಈ ಹಿಂದೆ ಜಗಳವಾಡಿದ್ದರು ಸಂತೋಷನ ಕೊಲೆಯಲ್ಲಿ ರವಿಯ ಮೇಲೆ ಸಂಶಯವಿರುತ್ತದೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆ ಗುನ್ನೆ ನಂ. 183/11 ಕಲಂ 302 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ..

ಹಲ್ಲೆ ಪ್ರಕರಣ:

ಚೌಕ ಪೊಲೀಸ್ ಠಾಣೆ :ಶ್ರೀ ವಿಜಯಕುಮಾರ ತಂ ಶಿವಯ್ಯ ಪುರಮಕರ ಮೇಕಾನಿಕ ಜಾಃ ಭೋವಿ ಸಾಃ ಲಂಗೋಟಿ ಪೀರ ದರ್ಗಾದ ಹಿಂದುಗಡೆ ಕಾವೇರಿ ನಗರ ಗುಲಬರ್ಗಾ ರವರು ನಾನು ದಿನಾಂಕ 06.11.2011 ರಂದು ಸಾಯಂಕಾಲ ಸುಮಾರಿಗೆ ನಮ್ಮ ತಾಯಿಯ ಹತ್ತಿರ ಸುಪರ ಮಾರ್ಕೆಟ ಕಡೆಗೆ ಹೋಗಬೇಕೆಂದು ಮನೆಯಿಂದ ಹೊರಟು ಹುಮನಾಬಾದ ಬೇಸ ಹತ್ತಿರ ಇರುವ ಸುಂದರ ಹೊಟೇಲ ಮುಂದೆ ಹೊರಟಾಗ ಅಲ್ಲಿ ಅನಿಲ ಖಾಬಾ ಮತ್ತು ಮಂಜು ಅವರ ಸಂಗಡ 8-10 ಮೊಟಾರ ಸೈಕಲಗಳು ಬಂದಿದ್ದು ಅನಿಲ ಖಾಬಾ ಇತನು ನನಗೆ ಬೊಸಡಿ ಮಗನೆ ನಿನ್ನದು ಬಹಳ ಆಗಿದೆ ನಿನ್ನೆಯು ಕೂಡ ನಮ್ಮ ಸಂಗಡ ತಕರಾರು ಮಾಡಿದ್ದಿ ನಿನಗೆ ನೋಡಿಯೆ ಬಿಡುತ್ತೇವೆ ಅಂತ ಅಂದು ಕೈಯಿಂದ ಕಪಾಳ ಮೇಲೆ ಹೊಡೆದಿದ್ದು ಮಂಜು ಇತನು ಈ ಮಗನಿಗೆ ಹಾಕಿಕೊಂಡು ನಡೆಯಿರಿ ಅಂತ ಚಿರಾಡುತ್ತ ಅವರ ಸಂಗಡ ಇದ್ದವರು ನನ್ನನ್ನು ಹಿಡಿದು ಮಂಜು ಇತನ ಮೊಟಾರ ಸೈಕಲ ಮೇಲೆ ಕೂಡಿಸಿ ಕೊಲೆ ಮಾಡುವ ಉದ್ದೇಶದಿಂದ ಅಲ್ಲಿಂದ ಅಪಹರಣ ಮಾಡಿಕೊಂಡು ಆಳಂದ ರಸ್ತೆಯ ಕಡೆಗೆ ಕರೆದುಕೊಂಡು ಹೋಗಿ ರಾಣಾಜ್ಪೀರ ದರ್ಗಾಕಡೆಗೆ ಹೋಗುವ ರಸ್ತೆಯ ಪಕ್ಕದಲ್ಲಿ ಒಂದು ಕಂಪೌಂಡ ಹತ್ತಿರ ಇಳಿಸಿ ಮಂಜು ಇತನು ತನ್ನಲ್ಲಿದ್ದ ಚಾಕುವನ್ನು ತೆಗೆದು ನನ್ನ ಹೊಟ್ಟೆಗೆ, ಬೆನ್ನಿಗೆ ಹೊಡೆದು ರಕ್ತಗಾಯ ಪಡಿಸಿ ಸಂಗಡ ಇದ್ದವರಲ್ಲಿ 2-3 ಜನರು ಕಾಲಿನಿಂದ ಒದ್ದು ಕೈಯಿಂದ ಹೊಡೆಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯ ಗುನ್ನೆ ನಂ 229/2011 ಕಲಂ 143,147,148,365,341,323,504,307 ಸಂಗಡ 149 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ..

ಆಸ್ತಿ ವಿವಾದ ಹಲ್ಲೆ ಪ್ರಕರಣ:
ಕಮಲಾಪೂರ ಹಲ್ಲೆ ಪ್ರಕರಣ
: ಶ್ರೀಮತಿ. ತುಕ್ಕಮ್ಮಾ ತಂದೆ ಗುಂಡಪ್ಪಾ ಉಡಬಾಳ ಸಾಃ ಕಮಲಾಪೂರ ತಾಃಜಿಃ ಗುಲಬರ್ಗಾ ರವರು ನಮ್ಮ ತಂದೆ ತಾಯಿಗೆ ಎರಡು ಹೆಣ್ಣು ಮತ್ತು 7 ಗಂಡು ಜನ ಮಕ್ಕಳಿದ್ದು. ಎಲ್ಲರ ಮದುವೆಯಾಗಿದ್ದು. ನನಗೆ ಮದುವೆ ಮಾಡಿಕೊಟ್ಟಿದು ಎರಡು ತಿಂಗಳಲ್ಲಿಯೇ ಗಂಡನಿಗೆ ಬಿಟ್ಟು ಮರಳಿ ಗ್ರಾಮಕ್ಕೆ ಬಂದು ಖಾರ ಕುಟ್ಟುವ ಅಂಗಡಿ ಹಾಕಿಕೊಂಡು ಜೀವನ ಸಾಗಿಸುತ್ತಿದ್ದೇನೆ. ಈ ನನ್ನ ವ್ಯಾಪಾರ ದಿಂದ ಬಂದಿರುವ ಹಣದಿಂದ 15 ವರ್ಷಗಳ ಹಿಂದೆ ಕಮಲಾಪೂರದಲ್ಲಿ ಹತ್ತು ಕೊಣೆಗಳಿರುವ ಮನೆ ಖರಿದಿ ಮಾಡಿರುತ್ತೇನೆ. ನನಗೆ ಆರಾಮವಿಲ್ಲದ ಕಾರಣ ಒಂದು ವರ್ಷದ ಹಿಂದೆ ಮನೆ ನನ್ನ ಕೊನೆಯ ತಮ್ಮ ರಘು ವಯ: 40 ವರ್ಷ ಈತನಿಗೆ ಮಾರಾಟ ಮಾಡಿರುತ್ತೇನೆ. ನನ್ನ ಉಳಿದ ತಮ್ಮಂದಿರಾದ. ಮಾಣಿಕಪ್ಪಾ 2. ಪುಂಡಲೀಕ ಮತ್ತು ಸುಭಾಶ ಈತನ ಮಗನಾದ ಮಂಜುನಾಥ ಇವರೆಲ್ಲರೂ ಕೂಡಿಕೊಂಡು ನನಗೆ ಮನೆ ಮಾರಾಟ ಮಾಡಿದ ವಿಷಯದಲ್ಲಿ ತಕರಾರು ಮಾಡಿಕೊಂಡು ಬರುತ್ತಿರುತ್ತಾರೆ. ದಿನಾಂಕ: 05/11/2011 ರಂದು ರಾತ್ರಿ ನಾನು ಖಾರ ಕುಟ್ಟುತ್ತಿದ್ದಾಗ ನಮ್ಮೂರಿನ ಶ್ರೀಕಾಂತ ತಂದೆ ಪುಂಡಲೀಕ ಈತನು ನಮ್ಮ ಗಿರಣಿಗೆ ಖಾರ ಕುಟ್ಟಿಸಲು ಮೆಣಸಿನ ಕಾಯಿ ತಂದಿದ್ದು. ನಮ್ಮ ಮನೆಯಲ್ಲಿ ಬಾಡಿಗೆಯಿಂದ ಇರುವ ಸಂತೋಷ ತಂದೆ ಹರಿರಾಮ ಈತನು ಬಂದು ನಮಗೆ ತಿಳಿಸಿದ್ದೇನೆಂದರೆ, ನಿನ್ನ ಅಳಿಯನಾದ ಮಂಜುನಾಥ ಈತನು ನಿಮ್ಮ ಮನೆಯಲ್ಲಿರುವ ವಿದ್ಯುತ್ತ ಮೀಟರ ಫೀಜ್ ಕಿತ್ತಿ ಅದಕ್ಕೆ ಮೀಟರ ತಿರುಗದ ಹಾಗೆ ಮಾಡಿ, ನೇರವಾಗಿ ವಿದ್ಯುತ್ ಉಪಯೋಗವಾಗುವಂತೆ ಮಾಡಿ, ಕೆಇಬಿಯವರಿಗೆ ಫೋನ ಮಾಡಿ, ಕರೆಯಿಸಿ ಅದನ್ನು ತೋರಿಸುತ್ತಿದ್ದಾನೆ ಅಂತಾ ಹೇಳಿದ್ದರಿಂದ ನಾನು, ಮತ್ತು ಖಾರ ಕುಟ್ಟಿಸಲು ಬಂದ ಶ್ರೀಕಾಂತ, ಹಾಗು ಸಂತೋಷ ಎಲ್ಲರೂ ಕೂಡಿಕೊಂಡು ಹೋಗಿ ಮಂಜುನಾಥ ಈತನಿಗೆ ಮನೆಯಿಂದ ಹೊರಗೆ ಕರೆದು ಸಾರ್ವಜನಿಕ ರಸ್ತೆ ಮೇಲೆ ನಿಂತುಕೊಂಡು ನೀನು ಹೀಗೆಕೆ ಮಾಡಿದ್ದಿ ಮೀಟರ ಕೂಡಾ ಒಡೆದು ಹಾಕಿದ್ದಿ ಅಂತಾ ಕೇಳಿದ್ದಕ್ಕೆ ಏ ರಂಡಿ ಇಷ್ಟು ದಿವಸ ನನಗೆ ನಿಮ್ಮ ಮನೆಯಲ್ಲಿಟ್ಟುಕೊಂಡು ಈಗ ನಿನ್ನ ಮನೆಯನ್ನು ನಮ್ಮ ಚಿಕ್ಕಪ್ಪನಿಗೆ ಮಾರಿದ್ದಿ, ಅಂತಾ ಅವಾಚ್ಯವಾಗಿ ಬೈಯುತ್ತಿದ್ದಾಗ ಶ್ರೀಕಾಂತ ಇತನು ಹೀಗೆ ಹಿರಿಯರಿಗೆ ಬೈಯುವುದು ಸರಿ ಅಲ್ಲಾ ಈ ಮನೆ ಅವಳು ಗಳಿಸಿದ ಮನೆ ಇದೆ. ಅವಳು ಯಾರಿಗೆ ಬೇಕಾದವರಿಗೆ ಮಾರುತ್ತಾಳೆ ಅಂತಾ ಅನ್ನುತ್ತಿದ್ದಾಗ ಮಂಜುನಾಥ ಈತನು ನಮ್ಮ ಜಗಳದಲ್ಲಿ ನೀನು ಏಕೆ ಅಡ್ಡ ಬರುತ್ತಿ ಅಂತಾ ಅಂದವನೇ ಶ್ರೀಕಾಂತ ಈತನಿಗೆ ನೆಲಕ್ಕೆ ನೂಕಿಸಿಕೊಟ್ಟು ಕಾಲು ಹಿಡಿದು ಎಳೆದಾಡುತ್ತಿದ್ದಾಗ ಈತನಿಗೆ ಬೆನ್ನಿಗೆ, ಹೊಟ್ಟೆಗೆ ಹೊಡೆದು ನೆಲಕ್ಕೆ ಹಾಕಿ ಎಳೆದಾಡಿದ್ದರಿಂದ ಆತನಿಗೆ ಬಲಗೈ ಮುಂಗೈಗೆ, ಬಲಭುಜಕ್ಕೆ ಮತ್ತು ತಲೆಯ ಹಿಂಭಾಗಕ್ಕೆ ತರಚಿದ ರಕ್ತಗಾಯಗಳಾಗಿರುತ್ತವೆ. ಶ್ರೀಕಾಂತ ಈತನು ನಾನು ಜಗಳ ಬಿಡಿಸಲು ಹೋದಾಗ ಮಾಣಿಕಪ್ಪಾ ಮತ್ತು ಪುಂಡಲೀಕ ಇವರು ಈ ಜಗಳ ನಿನ್ನಿಂದಲೇ ಬಂದಿದೆ ರಂಡಿ ಅಂತಾ ಅವಾಚ್ಯವಾಗಿ ಬೈಯುತ್ತಾ ಮಾಣಿಕಪ್ಪಾ ಈತನು ನನಗೆ ಜೋರಾಗಿ ನೆಲಕ್ಕೆ ನೂಕಿಸಿಕೊಟ್ಟಿರುತ್ತಾನೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ. 137/2011 ಕಲಂ. 341.323, 324, 504.506 ಸಂ. 34 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ.

ಅಪಘಾತ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀ ಕಲ್ಯಾಣಿ ತಂದೆ ಮೈಲಾರಿ ಪೂಜಾರಿ ವ: 45 ಜಾ: ಕುರುಬರ ಉ: ಒಕ್ಕಲುತನ ಸಾ: ಅವರಾದ(ಬಿ) ರವರು ನಾನು
ದಿನಾಂಕ 6/11/2011 ರಂದು ಸಾಯಂಕಾಲ ಸುಮಾರಿಗೆ ನಾನು ಹಾಗೂ ಅವನ ಸಂಗಡ ಇಬ್ಬರು ಆಟೋ ರೀಕ್ಷಾ ನಂಬರ ಕೆಎ 32 ಎ-4484 ನೇದ್ದರಲ್ಲಿ ಆಳಂದ ಚೆಕ್ಕ ಪೋಸ್ಟ್‌ ದಿಂದ ಹುಮನಾ ಬಾದ ರಿಂಗ ರೋಡ ಕಡೆ ಬರುವಾಗ ಕಾಕಡೇ ಚೌಕ ಹತ್ತಿರ ಆಟೋ ರೀಕ್ಷಾ ಚಾಲಕ ತನ್ನ ಆಟೋವನ್ನು ಅತೀವೇಗ ಹಾಗೂ ಅಲಕ್ಷತನದಿಂದ ನಡೆಯಿಸಿ ಕೊಂಡು ಪಲ್ಟಿ ಮಾಡಿದ್ದರಿಂದ ಅದರಲ್ಲಿ ಕುಳಿತ ನನಗೆ ಹಾಗೂ ಇತರ 2 ಜನರಿಗೆ ಗಾಯಗಳಾಗಿರುತ್ತವೆ . ಅಟೋ ಚಾಲಕನು ತನ್ನ ಆಟೋವನ್ನು ತೆಗೆದುಕೊಂಡು ಹಾಗೇ ಹೋಗಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ ಸಾರಂಆಶದ ಮೇಲಿಂದ ಠಾಣೆ ಗುನ್ನೆ ನಂ: 328/2011 ಕಲಂ 279, 337, ಐಪಿಸಿ ಸಂಗಡ 187 ಐಎಮವಿ ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ದೇವಲ ಗಾಣಗಾಪೂರ ಠಾಣೆ :
ಮಡಿವಾಳಪ್ಪ ನಡಗಟ್ಟಿ ಜಾ|| ಹರಿಜನ ಸಾ|| ಬಿದನೂರ ತಾ|| ಅಫಜಲಪೂರ ರವರು ನಾನು ಮತ್ತು ಗೆಳೆಯ ಲಕ್ಷ್ಮೀಕಾಂತ ಕೂಡಿಕೊಂಡು ಸೈಕಲ್‌ಕ್ಕೆ ಹವಾ ಹಾಕಿಕೊಂಡು ಬರಲು ಸಿದ್ದು ನಡಗಟ್ಟಿ ಅವರ ಮನಗೆ ಹೊರಟಾಗ ಸಮುದಾಯ ಭವನದ ಮುಂದೆ ಹೌಜಿನ ಹತ್ತಿರ ಚೈನ ಕಟ್ಟಾಗಿದ್ದರಿಂದ ರಿಪೇರಿ ಮಾಡುತ್ತ ಕುಳಿತುಕೊಂಡಾಗ ಕೃಷ್ಣಪ್ಪ ತಂದೆ ಕರಣಪ್ಪ ಹಳ್ಳಿ ಇತನು ಸ್ಟೀಲ ಚರಿಗೆಯನ್ನು ದೇವಪ್ಪ ಮನೆಗೆ ಕೊಟ್ಟು ಬರಲು ಬಾ ಅಂತಾ ಕರೆದಾಗ ಅದಕ್ಕೆ ನಾನು ಒಲ್ಲೆ ಅಂದಾಗ ಚರಿಗೆಯಿಂದ ಬಲಗಡೆ ತೆಲೆಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ನೆಲಕ್ಕೆ ಹಾಕಿ ಬಲಗಾಲು ತನ್ನ ಕೈಗಳಿಂದ ತಿರುವಿದ್ದರಿಂದ ಮೊಳಕಾಲ ಕೆಳಗೆ ಪಾದದ ಮೇಲಿನ ಮಧ್ಯದ ಭಾಗದಲ್ಲಿ ಭಾರಿ ಗುಪ್ತ ಪೆಟ್ಟು ಪಡಿಸಿ ಜೀವದ ಭಯ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ .


 


 

No comments: