POLICE BHAVAN KALABURAGI

POLICE BHAVAN KALABURAGI

03 October 2011

Gulbarga District Reported Crimes

ಮಾಂಗಲ್ಯ ಸರ ಕಸಿದುಕೊಂಡು ಹೋದ ಪ್ರಕರಣ :
ಮಾಹಾತ್ಮ ಬಸವೇಶ್ವರ ಠಾಣೆ :
ಶ್ರೀಮತಿ ಅರುಣಾಕ್ಷಿ ಗಂಡ ಎನ್. ವೆಂಕಟೇಶ ಸಾಃ ಮನೆ ನಂ.2-99/78/68 ಗುಬ್ಬಿ ಕಾಲೋನಿ ಗುಲಬರ್ಗಾ ರವರು ದಿನಾಂಕ 02-10-2011 ರಂದು ತಮ್ಮ ಮನೆಯ ಹತ್ತಿರ ಇರುವ ಕಿರಾಣಿ ಅಂಗಡಿಗೆ ಹೋಗಿ ವಾಪಸ ಬರುತ್ತಿರುವ ಕಾಲಕ್ಕೆ 02 ಜನ ಅಪಚಿತರು ಒಂದು ಮೋಟಾರ ಸೈಕಲ ಮೇಲೆ ಹಿಂಬಾಲಿಸಿ ಎದುರಿಗೆ ಬಂದು ಮೋಟಾರ ಸೈಕಲ ಟರ್ನ ಮಾಡಿ ಪಿರ್ಯಾದಿದಾರಳ ಕೊರಳಲ್ಲಿದ್ದ 38 ಗ್ರಾಂ ಬಂಗಾರದ ಮಂಗಳ ಸೂತ್ರ ಅ.ಕಿಃ- 60,000/- ರೂ ನೇದ್ದನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋದರು. ಸದರಿ ಮೋಟಾರ ಸೈಕಲ ನೋಡಿರುವುದಿಲ್ಲ. ಅವರ ಅಂದಾಜು ವಯಸ್ಸು 22-25 ಇರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಾಹಾತ್ಮಾ ಬಸವೇಶ್ವರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :
ಮಿರಿಯಾಣ ಠಾಣೆ :
ಶ್ರೀ ಶಿವಶರಣಪ್ಪಾ ತಂದೆ ರಾಮರಾವ ಪಾಟೀಲ ಸಾ|| ಚಿತ್ರಶಾಲ ತಾ|| ಚಿಂಚೊಳ್ಳಿ ವಿಳಾಸದ ನಿವಾಸಿತನಿದ್ದು ನಮ್ಮೂರ ಸೇಡಂ ಚಿಂಚೊಳ್ಳಿ ತಾಂಡೂರ ರೋಡಿನ ಸರ್ಕಲದಲ್ಲಿ ನಾಗೇಶ್ವರ ಜನರಲ್ ಸ್ಟೋರ ಮತ್ತು ಏರಟೇಲ್ ಸಬ್ಬ್ ಡಿಸ್ಟೂಬಿಟರ ಅಂತಾ ಒಂದು ಡಬ್ಬಾ ಇಟ್ಟು ವ್ಯಾಪಾರ ಮಾಡಿಕೊಂಡು ವಾಸ ವಾಗಿರುತ್ತೆನೆ. ದಿನಾಂಕ 01-10-2011 ರಂದು ರಾತ್ರಿ 10.00 ಗಂಟೆಗೆ ನಾನು ನನ್ನ ಅಂಗಡಿಯನ್ನು ಮುಚ್ಚಿ ಮನೆಗೆ ಹೊಗಿರುತ್ತೆನೆ. ದಿನಾಂಕ 02-10-2011 ರಂದು ಬೆಳಿಗ್ಗೆ 6.00 ಗಂಟೆಗೆ ಬಂದು ಅಂಗಡಿ ತೆರೆಯಲು ಹೊದಾಗ ಅಂಗಡಿ ಶಟರ ಯಾರೋ ಕಳ್ಳರು ಮುರಿದಿದ್ದರು ಅಂಗಡಿಯ ಓಳಗೆ ಹೊಗಿ ನೊಡಲಾಗಿ ಅಂಗಡಿಯಲ್ಲಿನ ಸಾಮಾನುಗಳು ಚಲ್ಲಾಪಿಲ್ಲಿಯಾಗಿ ಬಿದ್ದಿದ್ದು ಅಂಗಡಿಯಲ್ಲಿಟ್ಟ 4 ಮೋಬೈಲ್ ಫೋನಗಳು, ನಗದು ಹಣ, ಸಿಗರೇಟ ಪ್ಯಾಕೇಟಗಳು, ಗುಟಕಾ ಪ್ಯಾಕೆಟಗಳು ಬಿಸ್ಕೆಟ ಪ್ಯಾಕೆಟಗಳು ಮತ್ತು ಚಾಕಲೇಟಗಳು ಹೀಗೆ ಒಟ್ಟು 23,552/- ರೂ ಕಿಮ್ಮತ್ತಿನವುಗಳನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಿರಿಯಾಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: