POLICE BHAVAN KALABURAGI

POLICE BHAVAN KALABURAGI

04 October 2011

Gulbarga District Reported Crimes

ಮಟಕಾ ಜೂಜಾಟ ನಿರತ ವ್ಯಕ್ತಿಯ ಬಂಧನ :
ಸುಲೆಪೇಟ ಠಾಣೆ :ದಿನಾಂಕ 03-10-2011 ರಂದು ರಾತ್ರಿ 21:52 ಗಂಟೆಗೆ ಮಲ್ಲಿಕಾರ್ಜುನ ತಂದೆ ಬೀಮಸೇನರಾವ ಪಂಚಾಳ ಸಾ
|| ಸುಲೇಪೇಟ ಇವನು ಸರಕಾರಿ ಪದವಿ ಪೂರ್ವ ಕಾಲೇಜ ಸುಲೇಪೇಟ ಎದುರಗಡೆಯ ಬಸವಣ್ಣ ಕಟ್ಟೆಯ ಮೇಲೆ ಮಟಕಾ ಜೂಜಾಟದ ಅಂಕಿ ಸಂಖ್ಯೆ ಬರೆದುಕೊಳ್ಳುತ್ತಿರುವಾಗ ಪಂಚರ ಸಮಕ್ಷಮ ದಾಳಿ ಮಾಡಿ ಆರೋಪಿತನನ್ನು ವಶಕ್ಕೆ ತೆಗೆದುಕೊಂಡು ಸದರಿವನ ವಿರುದ್ಧ ಸುಲೆಪೇಟ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಸತೀಶ ಕುಮಾರ ತಂದೆ ಚಂದಪ್ಪ ರೇವೂರ ಸಾ: ಮ ನಂ 9/544 /7/5 ಎ- ದತ್ತ ನಗರ ಶಹಾಬಜಾರ ಗುಲಬರ್ಗಾ ರವರು ದಿನಾಂಕ 03-10-2011 ರಂದು ಮುಂಜಾನೆ ಅವರ ಚಿಕ್ಕಮ್ಮನ ಮಗಳಾದ ಸುವಾಸಿನಿ ಇವಳನ್ನು ಹೊಂಟಾ ಎಕ್ಟೀವ ಮೋಟಾರ ಸೈಕಲ ನಂ ಕೆಎ 32 ಇಎ 344 ನೇದ್ದರ ಮೇಲೆ ರಾಮತೀರ್ಥ ದೇವರಿಗೆ ನಮಸ್ಕಾರ ಮಾಡಿ ಮರಳಿ ಮನೆಗೆ ಮೋ ಸೈಕಲ ಮೇಲೆ ಹೊರಟಾಗ ಆಳಂದ ಚೆಕ್ಕ ಪೋಸ್ಟ್‌ ಹತ್ತಿರದ ಸರ್ಕಲದಲ್ಲಿ ಒಂದು ಟ್ಯ್ತಾಕ್ಟ್‌‌ರ ನಂ ಕೆಎ 32 ಟಿ-1704 1705 ನೇದ್ದರ ಚಾಲಕನು ತನ್ನ ಟ್ರ್ಯಾಕ್ಟ್‌ರನ್ನು ಅತೀವೇಗದಿಂದ ನಡೆಯಿಸಿಕೊಂಡು ಬಂದು ಹಾರ್ನ ಮಾಡದೆ ಹಾಗೂ ಇಂಡಿಕೇಟರ್‌ ಕೂಡ ಹಾಕದೆ ಸರ್ಕಲದಲ್ಲಿ ಒಮ್ಮೇಲೆ ಕಟ್‌ ಮಾಡಿ ಟ್ರ್ಯಾಕ್ಟ್‌ರ ತಿರುಗಿಸಿ ಸೈಕಲ ಮೋಟಾರಕ್ಕೆ ಟಕ್ಕರ ಕೊಟ್ಟಿದ್ದು ಅದರಿಂದ ನನಗೆ ಭಾರಿ ಗಾಯಗಳಾಗಿರುತ್ತವೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳವು ಪ್ರಕರಣ :

ಫರತಾಬಾದ ಠಾಣೆ :ಶ್ರೀ ಗುರಣ್ಣಾ ತಂದೆ ಹಣಮಂತ ಜಮಾದಾರ ಸಾ: ಮೇಳಕುಂದಾ(ಬಿ) ಇವರು ಹೊಲ ಸರ್ವೆ ನಂ: 176 ನೇದ್ದು ಇದ್ದು ಸದರಿ ಹೊಲದಲ್ಲಿನ ಬಾವಿಗೆ ಒಂದು 3 ಹೆಚ್.ಪಿ ವಿದ್ಯುತ್ ಮೊಟಾರ ಅಳವಡಿಸಿದ್ದು ಇರುತ್ತದೆ. ಈ 2-3 ತಿಂಗಳ ಹಿಂದೆ ನಮ್ಮ ಬಾವಿಯಲ್ಲಿ ನೀರು ಕಡಿಮೆ ಆಗಿದ್ದರಿಂದ ಬಾವಿಗೆ ಅಳವಡಿಸಿದ 3 ಹೆಚ್.ಪಿ ವಿದ್ಯುತ್ ಮೊಟಾರನ್ನು ಮನೆ ತಂದು ಮನೆಯ ಅಂಗಳದಲ್ಲಿ ಇಟ್ಟಿರುತ್ತೇನೆ. ದಿನಾಂಕ: 28-9-2011 ರಂದು ಬೆಳಗ್ಗೆ 6-00 ಗಂಟೆ ಸುಮಾರಿಗೆ ಎದ್ದು ನೋಡಲಾಗಿ ಸದರಿ ನನ್ನ ಮನೆಯ ಅಂಗಳದಲ್ಲಿ ಇಟ್ಟಿದ್ದ 3 ಹೆಚ್.ಪಿ ಮೊಟಾರ ಕಾಣಲಿಲ್ಲ. ಆಗ ನಾನು ಗಾಬರಿಯಾಗಿ ಎಲ್ಲಾ ಕಡೆಗೆ ಹುಡುಕಾಡಿದರೂ ಸದರಿ ಎಲ್ಲಿಯು ಕಾಣಲಿಲ್ಲ. ನಂತರ ಮನೆಯಲ್ಲಿ ವಿಚಾರ ಮಾಡಿ ದಿನಾಂಕ: 27-9-2011 ರಂದು ರಾತ್ರಿ 8-00 ಸುಮಾರಿಗೆ ನಮ್ಮೂರಿಗೆ ಆಗಾಗ ಗೊಬ್ಬುರ (ಬಿ) ಗ್ರಾಮದ ಅಸ್ಕರ ಅಲಿ ಎಂಬುವವನು ಐಸ್‌ಕ್ರಿಮ ಮಾರಲು ಬರುತ್ತಿದ್ದು, ನನ್ನ ಮನೆಯ ಹತ್ತಿರ ನಿಂತ್ತಿದ್ದನ್ನು ನೋಡಿ ನನಗೆ ಅವನ ಮೇಲೆ ಭಲವಾದ ಸಂಶಯ ಬಂದಿದ್ದು ಇರುತ್ತದೆ. ಸದರಿಯವನು ದಿನಾಂಕ 27-9-2011 ರಂದು ರಾತ್ರಿ ವೇಳೆಯಲ್ಲಿ ಮನೆಯಲ್ಲಿ ಇಟ್ಟಿದ್ದ ಸದರಿ 3 ಹೆಚ್,ಸಿ ವಿದ್ಯುತ್ ಮೊಟಾರ ಅ.ಕಿ. 8000=00 ರೂಪಾಯಿವನ್ನು ಕಳ್ಳತನ ಮಾಡಿರಬಹುದು ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಫರತಾಬಾದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: