POLICE BHAVAN KALABURAGI

POLICE BHAVAN KALABURAGI

02 October 2011

Gulbarga District Reported Crimes

ಮಟಕಾ ಜುಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಗ್ರಾಮೀಣ ಠಾಣೆ :
ದಿನಾಂಕ 1-10-11 ರಂದು ಮದ್ಯಾಹ್ನ ಮಿಲ್ಲತ್ತನಗರ ಬಂದೂಕವಾಲಾ ಕಾಟಾದ ಹತ್ತಿರ ಒಬ್ಬ ವ್ಯಕ್ತಿ ಕುಳಿತು ಸಾರ್ವಜನಿಕರಿಂದ ಹಣ ಪಡೆದುಕೊಂಡು ಅಂಕಿ ಸಂಖ್ಯೆಗಳ ಆಧಾರದ ಮೇಲಿಂದ ಮಟಕಾ ಚೀಟಿ ಬರದುಕೊಳ್ಳುತ್ತಿ ಬಗ್ಗೆ ಖಚಿತ ಬಾತ್ಮಿ ಮೇರೆಗೆ ಪಂಚರು ಹಾಗೂ ಸಿಬ್ಬಂದಿಯವರ ಸಹಾಯದಿಂದ ದಾಳಿ ಮಾಡಿ ಅವನನ್ನು ಹಿಡಿದು ಅವನಿಗೆ ವಿಚಾರಿಸಲು ಅಬ್ದುಲ ನಬಿ ತಂದೆ ದಸ್ತಗಿರಿಸಾಬ ಕಣ್ಣಿ ಸಾ: ಮುಸ್ಲಿಂ ಸಂಘ ಗುಲಬರ್ಗಾ ಅಂತಾ ತಿಳಿಸಿದ್ದು ಸದರಿಯವನಿಂದ ಮಟಕಾ ಚೀಟಿ, ಬಾಲ ಪೆನ್ನ ಮತ್ತು ನಗದು ಹಣ 2835/- ರೂ ಹೀಗೆ ಒಟ್ಟು 3337/- ರೂ ಜಪ್ತ ಮಾಡಿಕೊಂಡು ಈ ಬಗ್ಗೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಅಪಘಾತ ಪ್ರಕರಣ :
ವಾಡಿ ಠಾಣೆ :
ಶ್ರೀ ಸಾಯಬಣ್ಣ ತಂದೆ ಸಿದ್ದಪ್ಪಾ ವಡ್ಡರ ಸಾ :ಲಾಡ್ಮಾಪೂರ ಇವರು ಮತ್ತು ಗ್ರಾಮದ ಹಣಮಂತ ಗುತ್ತೇದಾರ ಇತರರು ಕುಕೊಂಡು ದಿನಾಕ 30-09-2011 ರಂದು ಅಣ್ಣಿಕೇರಿಯಿಂದ ಲಾಡಲಾಪೂರಕ್ಕೆ ಅಯ್ಯಣ್ಣನ ಟಂಟಂದಲ್ಲಿ ಬರುತ್ತಿರುವಾಗ ವಾಚು ನಾಯಕ ತಾಂಡದ ಹತ್ತಿರ ಎದುರುಗಡೆ ಒಂದು ಟಂಟಂ ಚಾಲಕನು ತನ್ನ ವಾಹನವನ್ನು ಅತೀ ವೇಗದಿಂದ ಅಲಕ್ಷತನದಿಂದ ನಡೆಸಿಕೊಂಡು ಬರುತ್ತಿದ್ದು ನಾವು ಕುಳಿತ ಟಂಟಂ ಚಾಲಕನು ಸಹ ತನ್ನ ವಾಹನವನ್ನು ಅತೀ ವೇಗದಿಂದ ಅಲಕ್ಷತನದಿಂದ ನಡೆಯಿಸಿದ್ದಕ್ಕೆ ಎರಡು ಟಂಟಂ ವಾಹನಗಳು ಪರಸ್ಪರ ಅಪಘಾತವಾಗಿದ್ದು ಇದರಲ್ಲಿ ಸಾಯಬಣ್ಣ ಈತನಿಗೆ ಭಾರಿ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.

No comments: