POLICE BHAVAN KALABURAGI

POLICE BHAVAN KALABURAGI

11 October 2011

GULBARGA DIST REPORTED CRIMES

ಕೊಲೆ ಪ್ರಯತ್ನ ಪ್ರಕರಣ:

ಫರಹತಾಬಾದ ಠಾಣೆ :ಶ್ರೀಮತಿ ಜ್ಯೋತಿ ಗಂಡ ರಮೇಶ ನಾಗಣ್ಣನವರ ರವರು ನಾನು ಮತ್ತು ನನ್ನ ಗಂಡ ದಿನಾಂಕ: 10-10-2011 ರಂದು ಬೆಳಿಗ್ಗೆ ಮನೆಯಲ್ಲಿ ಇದ್ದಾಗ ರವಿ ನಾಗಣ್ಣವರ, ರಾಜು ನಾಗಣ್ಣನವರ, ಬಸವರಾಜ ನಾಗಣ್ಣನವರ, ನಾಗಮ್ಮ ಗಂಡ ರಾಜು ನಾಗಣ್ಣನವರ, ಕಮಲಾಬಾಯಿ ಗಂಡ ಬಸವರಾಜ ನಾಗಣ್ಣನವರ ಇವರೆಲ್ಲರೂ ಗುಂಪು ಕಟ್ಟಿಕೊಂಡು ಕೈಯಲ್ಲಿ ಕೊಡಲಿ ಹಿಡಿದುಕೊಂಡು ನಮ್ಮ ಮನೆಯ ಒಳಗಡೆ ಬಂದು ನಿನಗೆ ಹೊಲ ಬೇಕು ಅಂತಾ ಅವಾಚ್ಯ ಶಬ್ದಗಳಿಂದ ಬೈದು, ಅವರಲ್ಲಿ ರವಿ ಈತನು ತನ್ನ ಕೈಯಲ್ಲಿದ್ದ ಕೊಡಲಿಯಿಂದ ನನ್ನ ಎಡಗೈ ರಟ್ಟೆಯ ಮೇಲೆ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿ ಮುರಿದಂತೆ ಕಂಡುಬರುತ್ತದೆ. ನನಗೆ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾನೆ ಉಳಿದವರು ಖಲಾಸ ಮಾಡಿರಿ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ. ರಾಜು, ಬಸವರಾಜ ಇವರು ಸೀರೆ ಹಿಡಿದು ಜಗ್ಗಾಡಿ ಅವಮಾನ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಗುನ್ನೆ ನಂ: 194/2011 ಕಲಂ, 143, 147, 148, 323, 324, 504, 506, 448, 354, 307 ಸಂ: 149 ಐಪಿಸಿ ಪ್ರಕಾರ ಪ್ರಕರಣ ದಾಖಲಾಗಿದೆ.

ಖೊಟ್ಟಿ ನೊಂದಣಿ ವಂಚನೆ ಪ್ರಕರಣ :
ಅಶೋಕ ನಗರ ಪೊಲೀಸ್ ಠಾಣೆ :ಶ್ರೀ. ಗೀರಿಶ ತಂದೆ ಬಸವರಾಜ ಹಂಗರಗಿ ಸಾ|| ಶಾಂತಿನಗರ ಗುಲಬರ್ಗಾ ರವರು ನಾನು 2011 ನೇ ಸಾಲಿನ ಮಾರ್ಚ ತಿಂಗಳಲ್ಲಿ ಐಸ ಕ್ರೀಮ ಸಾಗಾಟ ಮಾಡುವ ಕುರಿತು ಟಾಟಾ ಎಲ್.ಪಿ.ಟಿ 909 ವಾಹನ ಖರೀದಿಸಿದ್ದು ಸದರ ವಾಹನದ ನೊಂದಣಿ ಮಾಡಿಸಿದ್ದು ಅದರ ನಂ ಕೆಎ-32 ಬಿ 4016 ನೇದ್ದ ಇದ್ದು ಗುಲಬರ್ಗಾದಿಂದ ತಾಲ್ಲೂಕಾ ಕೇಂದ್ರಗಳಿಗೆ ಹೋಗಿ ಐಸ ಕ್ರೀಮ ಸಪ್ಲಾಯಿ ಮಾಡಿಕೊಂಡು ಇರುತ್ತೆನೆ. ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆಯಲ್ಲಿ ನನ್ನ ವಾಹನವು ಅಪಘಾತ ಪ್ರಕರಣದಲ್ಲಿ ಆಟೋರಿಕ್ಷಾ ಬಾಗಿ ಆಗಿದ್ದು ಕೆಎ-32 ಬಿ 4016 ನೇದ್ದು ಆಟೋರಿಕ್ಷಾ ವಾಹನಕ್ಕೆ ಬರೆದು ಓಡಾಡಿಸಿಕೊಂಡು ಅಪಘಾತ ಮಾಡಿದ್ದು ನನ್ನ ವಾಹನ ನಂಬರ ಆಟೋರಿಕ್ಷಾ ವಾಹನಕ್ಕೆ ಬರೆಯಿಸಿದ್ದು ನೋಡಿ ಆಟೋರಿಕ್ಷಾ ಚೆಸ್ಸಿ ನಂ MD2AAAMZZTWM26299 ಅಂತಾ ಇರುವ ವಾಹನಕ್ಕೆ ನನ್ನ ವಾಹನ ಸಂಖ್ಯೆ ಬರೆಯಿಸಿಕೊಂಡು ತನ್ನ ವಾಹನದ ನೊಂದಣಿ ಮಾಡಿಸದೆ ನನ್ನ ವಾಹನದ ಸಂಖ್ಯೆ ತನ್ನ ಆಟೋರಿಕ್ಷಾ ವಾಹನಕ್ಕೆ ಬರೆದುಕೊಂಡು ವಂಚನೆ ಮಾಡಿರುತ್ತಾನೆ ನನ್ನ ಟಾಟಾ ಎಲ್‌ಪಿಟಿ 909 ವಾಹನ ಸಂಖ್ಯೆ ಕೆಎ-32 ಬಿ 4016 ನೇದ್ದರ ನೊಂದಣಿ ಸಂಖ್ಯೆಯನ್ನು ಯುವರಾಜ ತಂದೆ ಪ್ರತಾಪಸಿಂಗ ಇತನು ತನ್ನ ಹೊಸ ಅಟೊ ರಿಕ್ಷಾದ ಮೇಲೆ ಸುಳ್ಳು ನೊಂದಣಿ ಸಂಖ್ಯೆಯನ್ನು ಉಪಯೊಗಿಸಿ ಅಪಘಾತ ಮಾಡಿ ವಂಚಿಸಿರುತ್ತಾನೆ. ಆತನ ಮೇಲೆ ಹೆಚ್ಚುವರಿ ಸಂಚಾರಿ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಸದರಿಯವನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಿ ಅಂತಾ ದೂರು ಸಾರಾಂಶದ ಮೇಲಿಂದ ಅಶೋಕ ನಗರ ಪೊಲೀಸ ಠಾಣೆ ಗುನ್ನೆ ನಂ. 109/2011 ಕಲಂ. 482, 483 ಐಪಿಸಿ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :
ಮುಧೋಳ ಠಾಣೆ:ಶ್ರೀ ಕೃಷ್ಣಾರೆಡ್ಡಿ ತಂದೆ ನಾಗರೆಡ್ಡಿ ವ|| 52 ವರ್ಷ ಜಾ|| ರೆಡ್ಡಿ ಉ|| ಒಕ್ಕಲುತನ ಸಾ|| ಆಡಿಕಿ ಗ್ರಾಮ ತಾ|| ಸೇಡಂ ರವರು ಶ್ರೀ ಲಾಲಪ್ಪಾ ಸಿ.ಹೆಚ್.ಸಿ-402 ಮುಧೋಳ ಪೊಲೀಸ್ ಠಾಣೆ ರವರು ದಿನಾಂಕ: 11-10-2011 ರಂದು 6-30 ಎ.ಎಮ್ ಸುಮಾರಿಗೆ ಕೊಂತನಪಲ್ಲಿ ಗೇಟ ರಾಜೇಂದ್ರ ಬಂಡಾರಿ ಪಾಲೀಸ್ ಮಶಿನ್ ಹತ್ತಿರ ಸೇಡಂ ರಸ್ತೆಯಲ್ಲಿ ಹೀರೋ ಹೊಂಡಾ ಮೋಟಾರ ಸೈಕಲ ನಂ. ಕೆಎ-32 ಕ್ಯೂ -3988 ನೇದ್ದರ ಮೇಲೆ ಕುಳಿತು ಸೇಡಂ ಕಡೆಗೆ ಹೊರಟಿದ್ದಾಗ ಯಾವುದೋ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಅತೀವೇಗದಿಂದ ನಡೆಸಿಕೊಂಡು ಬಂದು ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿ ವಾಹನ ಸಮೇತ ಓಡಿ ಹೋಗಿದ್ದು. ಅಪಘಾತದಲ್ಲಿ ಲಾಲಪ್ಪಾ ಹೆಚ್.ಸಿ ರವರಿಗೆ ಎಡಗಾಲು, ಬಲಗಾಲು ಹಾಗೂ ತಲೆಗೆ ಭಾರೀ ರಕ್ತಗಾಯಗಳಾಗಿದ್ದರಿಂದ ಉಪಚಾರ ಕುರಿತು ಗುಲಬರ್ಗಾದ ಬಸವೇಶ್ವರ ಆಸ್ಪತ್ರೆಯಲ್ಲಿ ಸೇರಿಕೆ ಮಾಡಿದ್ದು ಉಪಚಾರ ಪಡೆಯುತ್ತಾ ಆಸ್ಪತ್ರೆಯಲ್ಲಿ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಗುನ್ನೆ ನಂ. 96/2011 ಕಲಂ: 279,.304(ಎ) ಸಂ. 187 ಐ.ಎಮ್ ವಿ ಎಕ್ಟ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಅಪಘಾತ ಪ್ರಕರಣ :

ಕಮಲಾಪೂರ ಪೊಲೀಸ್ ಠಾಣೆ: ಶ್ರೀ ಗಣೇಶ ತಂದೆ ವೆಂಕಟಶೆಟ್ಟಿ ಮಡಿವಾಳಶೆಟ್ಟಿ ಉಃ ಕ್ಲೀನರ ಕೆಲಸ ಸಾಃ ದೊಡ್ಡಗಾವನಹಳ್ಳಿ ತಾಃಅರಕಲಗೂಡ ಜಿಃ ಹಾಸನ ರವರು ನಾನು ಮತ್ತು ಗಣೇಶ ಮದೂಸೂದನ್ ರವರು ಕೂಡಿಕೊಂಡು ದಿನಾಂಕ: 16/9/2011 ರಂದು ಮಧ್ಯಾಹ್ನ 12-00 ಗಂಟೆ ಸುಮಾರಿಗೆ ಗುಲಬರ್ಗಾ ಬೀದರ ರಸ್ತೆಯ ಮರಗುತ್ತಿ ಕ್ರಾಸ ಹತ್ತಿರ ಕ್ಯಾಂಟರ ನಂ. ಕೆಎ:32, ಎ:2223 ನೇದ್ದನ್ನು ಗುಲಬರ್ಗಾ ಕಡೆಯಿಂದ ಬೀದರ ಕಡೆಗೆ ಮದಸುದನ್ ಇತನು ಚಲಾಯಿಸಿಕೊಂಡು ಬರುತ್ತಿದ್ದಾಗ ದನಗಳು ವಾಹನಕ್ಕೆ ಅಡ್ಡಬಂದಾಗ ಮದುಸೂದನ್ ಇತನು ತನ್ನ ವಾಹನವನ್ನು ಒಮ್ಮೇಲೆ ಬ್ರೇಕ್ ಹಾಕಿದ್ದರಿಂದ ಕ್ಯಾಂಟರ ಬಲಕ್ಕೆ ಉರುಳಿ ಬಿದ್ದಿದ್ದು, ಕ್ಯಾಂಟರದಲ್ಲಿದ್ದ ನಾನು, ಕ್ಲೀನರ ಮತ್ತು ಇನ್ನೊಬ್ಬ ಚಾಲಕ ಮಂಜುನಾಥ ಹೊಳೆ ನರಸಿಪೂರ ಹಾಗು ಮದುಸೂದನ್ ಇತನಿಗೆ ಒಳಪೆಟ್ಟಾಗಿದ್ದು. ಆಸ್ಪತ್ರೆಗೆ ತೋರಿಸಿಕೊಳ್ಳದೇ ಸದರಿ ವಾಹನವನ್ನು ರಿಪೇರಿ ಮಾಡಿಕೊಂಡು ಬೆಂಗಳೂರಿಗೆ ಹೋಗಿ ತೋರಿಸಿಕೊಂಡರೆ ಆಯ್ತು ಅಂತಾ ದಿನಾಂಕ: 18/9/2011 ರಂದು ಬೆಳಿಗ್ಗೆ 8-30 ಗಂಟೆ ಸುಮಾರಿಗೆ ಮರಳಿ ಬೆಂಗಳೂರಿಗೆ ಹೋಗುವಾಗ ಸಿಂಧನೂರ ಗಂಗಾವತಿ ರಸ್ತೆಯಲ್ಲಿ ಸಿಂಧನೂರ ಹಿರೋ ಹೊಂಡಾ ಶೋರೂಮ್ ಹತ್ತಿರ ಮಂಜುನಾಥನು ಎದೆ ನೋವು, ಪಕ್ಕೆ ನೋವು ಅಂತಾ ನನಗೆ ಮತ್ತು ಮದೂಸೂದನಿಗೆ ತಿಳಿಸಿದಾಗ ಸಿಂಧನೂರ ಸರಕಾರಿ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಬೆಳಿಗ್ಗೆ 9-00 ಗಂಟೆಗೆ ಮಂಜುನಾಥನು ಅಪಘಾತದಲ್ಲಿ ತನಗಾದ ಒಳಪೆಟ್ಟಿನಿಂದ ಮೃತಪಟ್ಟಿದ್ದು ಇರುತ್ತದೆ ಅಂತಾ ದೂರು ಸಲ್ಲಿಸಿದ್ದು ಸಿಂಧನೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಠಾಣಾ ಸರಹದ್ದಿಯ ಆಧಾರದ ಮೇಲೆ ಕಡತವನ್ನು ಸಿಂದನೂರ ಪೊಲೀಸ್ ಠಾಣೆ ರಾಯಚೂರ ಜಿಲ್ಲೆಯಿಂದ ಗುಲಬರ್ಗಾ ಜಿಲ್ಲೆ ಕಮಲಾಪೂರ ಠಾಣೆಗೆ ವರ್ಗಾವಣೆಯಾಗಿದ್ದರಿಂದ ಠಾಣೆ ಗುನ್ನೆ ನಂ.125/2011 ಕಲಂ. 279, 337, 304(ಎ) ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

No comments: