POLICE BHAVAN KALABURAGI

POLICE BHAVAN KALABURAGI

11 October 2011

GULBARGA DIST REPORTED CRIMES

ಬ್ರಹ್ಮಪೂರ ಪೊಲೀಸ ಠಾಣೆ :

ಜಾತಿ ನಿಂದನೆ ಪ್ರಕರಣ: ಶ್ರೀ.ಅರವಿಂದ ತಂದೆ ರುಕ್ಕಪ್ಪ ನಾಟೀಕಾರ, ವಯ|| 27, ಜಾತಿ|| ಮಾದಿಗ (ಎಸ್.ಸಿ) ಸಾ|| ಗಾಜೀಪೂರ ಗುಲಬರ್ಗಾರವರು ನಾನು ದಿನಾಂಕ: 10/10/2011 1900 ಗಂಟೆಗೆ ಬಹುಮನಿ ಸರ್ಕಲ ಹತ್ತಿರ ನನ್ನ ಗೆಳೆಯನಾದ ಪಿಂಟು ಇವರ ರೆಡಿಯಂ ಅಂಗಡಿ ಎದುರುಗಡೆ ಸಂತೋಷ ಹಿಪ್ಪರಗಿ, ಸಿದ್ದು ಪಾಟೀಲ ಮೂರು ಜನರು ಕೂಡಿಕೊಂಡು ಮಾತಾಡುತ್ತಾ ನಿಂತಾಗ ಸಂತ್ರಾಸವಾಡಿಯ ಅಜಯ ತಂದೆ ಅಶಫಾಕ ಖಾನ ಇವರು ತನ್ನ ಹಸಿರು ಬಣ್ಣದ ಮೊಡಿಪೈ ಜೀಪ ಚಲಾಯಿಸಿಕೊಂಡು ಬಂದು ನನ್ನ ಮೇಲೆ ಕೆಸರು ಸಿಡಿಸಿದ್ದು, ನಾನು ಅವನಿಗೆ ಯಾಕೆ ನನ್ನ ಮೇಲೆ ಕೆಸರು ಸಿಡಿಸಿದ್ದಿ ಮೆಲ್ಲಗೆ ಗಾಡಿ ನಡೆಸಲು ಬರುವದಿಲ್ಲವೆಂದು ಕೇಳಿದಾಗ ಸದರಿಯವನು ಅವಾಚ್ಯ ಶಬ್ದಗಳಿಂದ ಬೈದು, ಜಾತಿ ನಿಂದನೆ ಮಾಡಿ ಕೈ ಮುಷ್ಠಿ ಮಾಡಿ ಬಲಗಣ್ಣಿನ ಹತ್ತಿರ ಹೊಡೆದು ಒಳ ಗುಪ್ತ ಗಾಯ ಪಡಿಸಿದ್ದು ಇನ್ನೂ 4 ಜನರು ಬಂದು ಅವಾಚ್ಯ ಶಬ್ದಗಳಿಂದ ಬೈದು, ಬಡಿಗೆಯಿಂದ ಕೈಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಬ್ರಹ್ಮಪೂರ ಪೊಲೀಸ ಠಾಣೆ ಗುನ್ನೆ ನಂ:191/11 ಕಲಂ: 143, 147, 148, 323, 324, 504, 506, ಸಂ 149 ಐ.ಪಿ.ಸಿ & 3 (I) (x) ಎಸ್.ಸಿ/ಎಸ್.ಟಿ ಪಿ.ಎ ಆಕ್ಟ 1989 ರ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಾಗಿದೆ

ಚಿಂಚೋಳಿ ಪೊಲೀಸ ಠಾಣೆ:

ಕಳ್ಳಪ್ರಕರಣ: ಶ್ರೀ.ರೇವಣಸಿದ್ದಪ್ಪಾ ತಂದೆ ಸಿದ್ರಾಮಪ್ಪಾ ಇನಾಮದಾರ ಸಾಃ ದೇಗಲಮಡಿ ತಾಃ ಚಿಂಚೋಳಿ ವರು ದಿನಾಂಕ 09.10.2011 ರಂದು ಮದ್ಯಾಹ್ನ 2.00 ಪಿ.ಎಮ ಸುಮಾರಿಗೆ ನಾನು ಚಿಂಚೋಳಿ ವೀರಭದ್ರೇಶ್ವರ ಬ್ಯಾಂಡ ಎದುರುಗಡೆ ನನ್ನ ಹಿರೋ ಹೊಂಡಾ ಸ್ಪ್ಲೆಂಡರ್ ಪ್ಲಸ್ ನಂ ಕೆ.ಎ 32 ಕ್ಯೂ 3678 ಇಟ್ಟು ಗುಲಬರ್ಗಾಕ್ಕೆ ಹೋಗಿದ್ದೇನು. ನಾನು ಸಂಜೆ ಗುಲಬರ್ಗಾದಿಂದ ರಾತ್ರಿ 9.30 ಪಿ.ಎಮ ಕ್ಕೆ ಚಿಂಚೋಳಿಗೆ ಬಂದು ನೋಡಲಾಗಿ ಯಾರೋ ಕಳುವು ಮಾಡಿಕೊಂಡು ಹೋಗಿದ್ದಾರೆ ಅಂತಾ ಅರ್ಜಿಯ ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆ ಗುನ್ನೆ ನಂ 125/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮಾದನ ಹಿಪ್ಪರಗಾ ಪೊಲೀಸ್ ಠಾಣೆ:

ಹಲ್ಲೆ ಪ್ರಕರಣ :ಶ್ರೀ ಶರಣಬಸಪ್ಪ ತಂದೆ ರೇವಣಸಿದ್ದಪ್ಪ ಸರಸಂಬಿ ಸಾ:ಮಾದನ ಹಿಪ್ಪರಗಾ ರವರು ದಿನಾಂಕ; 10/10/2011 ರಂದು ಪಿರ್ಯಾದಿಯು ಸೇಂಗಾದ ಕಾಳು ತರಲು ಮಾದನ ಹಿಪ್ಪರಗಾ ಬಸ್ಸ ನಿಲ್ದಾಣಕ್ಕೆ ಬಂದು ಆಳಂದಕ್ಕೆ ಹೊಗುವ ಬಸ್ಸಿನಲ್ಲಿ ಕುಳಿತು ಅಂದಾಜು ಬೆಳಿಗ್ಗೆ ಸುಮಾರಿಗೆ ಮೋಘಾ (ಬಿ) ಗ್ರಾಮದಿಂದ ಹೊಗುತ್ತಿದ್ದಾಗ ಬಸ್ಸಿನಲ್ಲಿ ನಮ್ಮೂರ ಶರಣಪ್ಪ, ಅಮೃತ ತಂದೆ ಕಾಶೇಪ್ಪ ಉಡಗಿ ಮತ್ತು ಲಿಂಗರಾಜ ತಂದೆ ಜಗದೇವಪ್ಪ ಉಡಗಿ, ಮಲ್ಲಪ್ಪಾ ತಂದೆ ಕಾಶಪ್ಪಾ ಮಲ್ಕಪ್ಪ ತಂದೆ ಕಾಶೆಪ್ಪ ಉಡಗಿ ಈ ನಾಲ್ಕುಜನ ಆರೋಪಿತರು ಬಸ್ಸಿನಲ್ಲಿ ಬಂದು ಬಸ್ಸಿನಲ್ಲಿದ್ದ ನನಗೆ ಅಮೃತ ಉಡಗಿ ಇತನು ಅಕ್ಕಲಕೋಟ ಬಜಾರದಲ್ಲಿ ನನ್ನೊಂದಿಗೆ ಜಗಳ ತಗೆದು ಹೊಡೆ ಬಡಡಿ ಮತ್ತೆ ಸೊಕ್ಕಿನಿಂದ ಊರಲ್ಲಿ ಒದರಾಡುತ್ತಿ ಅಂತಾ ಬೈದು ನನ್ನೊಂದಿಗೆ ಜಗಳ ತಗೆದು ತಕರಾರು ಮಾಡ ಹತ್ತಿದರು ಬಸ್ಸಿನಲ್ಲಿದ್ದ ಕಂಡ್ಯಂಕ್ಟರ ಬಸ್ಸನಿಂದ ಕೇಳೆಗೆ ಇಳಿರಿಅಂತಾ ಅಂದಾಗ ಅವರೆಲ್ಲರೂ ತಲೆಗೆ ಹೊಡೆದು ರಕ್ತಗಾಯ ಮಾಡಿರುತ್ತಾನೆ ಶರಣಪ್ಪ ಈತನು ಕಾಲಿನಿಂದ ಟೊಂಕದ ಮೇಲೆ ಒದ್ದಿರುತ್ತಾನೆ ಲಿಂಗರಾಜ ಮತ್ತು ಮಲ್ಕಪ್ಪ ಇವನು ಜೀವದ ಭಯ ಹಾಕಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 62/2011 ಕಲಂ 323,324,341,504,506 ಸಂಗಡ 34 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ವಿಶ್ವವಿದ್ಯಾಲಯ ಪೊಲೀಸ ಠಾಣೆ:

ಕೊಲೆ ಪ್ರಯತ್ನ : ಶ್ರೀ ಮಹ್ಮದ ಗಾಲಿಬ ಪಾಶಾ ತಂದೆ ಅಬ್ದುಲ್ ಕರೀಂಸಾಬ ವ: 60 ವರ್ಷ ಉ: ವ್ಯಾಪಾರ ಸಾ: ಹಳೇ ಜೇವರ್ಗಿ ರಸ್ತೆ ಪ್ಲಾಟನಂ-98 ಗಣೇಶ ನರ್ಸಿಂಗ ಹೋಮ ಗುಲಬರ್ಗಾರವರು ಶಹಬಾದ ರೋಡಿಗೆ ಇರುವ ಕುಸನೂರ ಸೀಮೆಯ ಸರ್ವೇ ನಂ 136/2/ಸಿ 1 ಎಕರೆ ಹೊಲದಲ್ಲಿ ಸೈಯ್ಯದ ಶಾಹ ಬುಜರುಗ ಹುಸೇನ ಹಾಗೂ ಇತರರು ನನ್ನ ಹೊಲದಿಂದ ಮಣ್ಣನ್ನು ಒಯ್ಯುವದು ಮತ್ತು ಕಟ್ಟಡಗಳ ನಿರ್ಮಾಣವನ್ನು ಮಾಡುತ್ತಿದ್ದು ದಿನಾಂಕ 22-09-2011 ರಂದು ನನಗೆ ಇಲ್ಲೆ ಖಲಾಸ ಮಾಡ್ತಿನಿ, ಹಾಗೂ ನಿನ್ನ ಮಗಾ ಬಂದ್ರೆ ಅವನಿಗೆಗೂ ಖಲಾಸ ಮಾಡ್ತಿವಿ ಅಂತಾ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ಮಾಡಿರುತ್ತಾರೆ ಅಂತಾ ಇಂದು ದಿನಾಂಕ 10-10-2011 ರಂದು 11-00 ಎ.ಎಮಕ್ಕೆ ಮಾನ್ಯ ಮೂರನೆ ಹೆಚ್ಚುವರಿ ಜೇ.ಎಂ.ಎಫ.ಸಿ ಕೋರ್ಟ ನ್ಯಾಯಾದೀಶರು ಗುಲಬರ್ಗಾ ಆದೇಶ ಪತ್ರ ನಂ 4905/11 ದಿನಾಂಕ 04-10-11 ನೇದ್ದರ ಪ್ರಕಾರ ಪಿ.ಸಿ ನಂ442/11 ರ ಪ್ರಕಾರ ಠಾಣೆ ನಮ್ಮ ಠಾಣೆ ಗುನ್ನೆ ನಂ 233/11 ಕಲಂ 447, 426, 427, 363, 307, 504, 506 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಶಹಾಬಾದ ನಗರ ಪೊಲೀಸ ಠಾಣೆ:

ಅಪಘಾತ ಪ್ರಕರಣ : ಶ್ರೀ ಸುರಮದೇವಿ ಗಂಡ ನಾಗರಾಜ ಪೂಜಾರಿ ರವರು ನಾವು ದಿನಾಂಕ:10/10/11 ರಂದು 01-00 ಪಿಎಮ್ ಸುಮಾರಿಗೆ ನಾನು ಮತ್ತು ನಮ್ಮ ಮಾವ ಬೀಮರಾವ, ಬಾವ ಪೀರಪ್ಪಾ, ನೆಗಣಿ ಭಾರತಿ ಮತ್ತು ಮಕ್ಕಳು ಕೂಡಿ ಶಹಾಬಾದಿಂದ ಬೀದರಕ್ಕೆ ಬಸ್ಸ ನಂ ಕೆ.ಎ. 32 ಎಫ್ 1096 ನೇದ್ದರಲ್ಲಿ ಹೊಗುತ್ತಿರುವಾಗ ಮುತ್ತಟ್ಟಿ ಪೆಟ್ರೋಲ್ ಬಂಕ್ ಹತ್ತಿರ ಬಸ್ಸ ಚಾಲಕ ತನ್ನ ಬಸ್ಸನು ಒಮ್ಮೇಲೆ ಬ್ರೇಕ ಹಾಕಿದ್ದರಿಂದ ಸದರಿ ಬಸ್ಸನಲಿದ್ದ ನಾನು ಕೆಳಗೆ ಬಿದ್ದು ಬಲತಲೆಗೆ ರಕ್ತಗಾಯ, ಬಲಬೂಜಕ್ಕೆ , ಬೆನ್ನಿಗೆ ಭಾರಿ ಒಳಪೆಟ್ಟಾಗಿದ್ದು ಇರುತ್ತದೆ. ಅಷ್ಟರಲ್ಲಿ ನಮ್ಮ ಬಾವ, ನೆಗೆಣಿ, ಮಾವ ಕೂಡಿ ಆಸ್ಪತ್ರೆಗೆ ಸೇರಿಕೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಗುನ್ನೆ ನಂ: 156/2011 ಕಲಂ:279, 338 ಐಪಿಸಿ ನೇದ್ದರ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಸ್ಟೇಷನ ಬಜಾರ ಪೊಲೀಸ ಠಾಣೆ:
ಕಳ್ಳತನ ಪ್ರಕರಣ : ಶ್ರೀ ಬಸವರಾಜ ಎಸ್. ಯಂಕಂಚಿ ಶ್ರೀನಗರ ಗುಲಬರ್ಗಾರವರು ದಿನಾಂಕ 10-10-2011 ರಂದು ಬೆಳಿಗ್ಗೆ 08-30 ಗಂಟೆಗೆ ನನ್ನ ತಮ್ಮನ ಗನು ವಿದ್ಯಾಭ್ಯಾಸ ಮಾಡುತ್ತಿರುವ ಗುರುಕುಲ ಪಿ.ಯು ಕಾಲೇಜಿಗೆ ಹೋಗಿ ಮೋಟಾರ್ ಸೈಕಲ್ ನಂ ಎ.ಪಿ 23 ಬಿ. 8331 ನೇದ್ದನ್ನು ಕಾಲೇಗಿನ ಆವರಣದಲ್ಲಿ ನಿಲ್ಲಿಸಿ ಕಚೇರಿಗೆ ಆಟೋದಲ್ಲಿ ಹೋಗಿ ಮರಳಿ 01-30 ಗಂಟೆ ಸುಮಾರಿಗೆ ಮಗನನ್ನು ಕರೆದುಕೊಂಡು ಹೋಗಲು ಕಾಲೇಜಿಗೆ ಬಂದಾಗ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಗುನ್ನೆ ನಂ 181/2011 ಕಲಂ 379 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಸೇಡಂ ಪೊಲೀಸ್ ಠಾಣೆ
:
ಮಟಕಾ ಪ್ರಕರಣ : ದಿ:10-101-2011 ರಂದು ಸೇಡಂ ಬಸ್ ನಿಲ್ದಾಣದಲ್ಲಿ ಮಟಕಾ ಜೂಜಾಟ ನಡೆದ ಬಗ್ಗೆ ಬಾತ್ಮಿ ಬಂದ ಮೇರೆಗೆ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಪಂಚರ ಸಮಕ್ಷಮ ಮಟಕಾ ಚೀಟಿಗಳನ್ನು ಬರೆದುಕೊಟ್ಟು ಹಣ ಪಡೆಯುತ್ತಿದ್ದ ನಾಗೇಂದ್ರಪ್ಪ ತಂದೆ ಭೀಮಶ್ಯಾ ಮಲಶೆಟ್ಟಿ ಸಾ|| ಕೆ.ಇ.ಬಿ. ಕಾಲೋನಿ ಸೇಡಂ ಇತನನ್ನು ವಶಕ್ಕೆ ತೆಗೆದುಕೊಂಡು ಅವನ ಹತ್ತಿರ ಇರುವ ನಗದು ಹಣ 200/- ರೂಪಾಯಿ, ಒಂದು ನೊಕಿಯಾ ಮೊಬೈಲ್ ಅಂ.ಕಿ 1000/- ರೂಪಾಯಿ ಹಾಗೂ ಒಂದು ಮಟಕಾ ಬರೆದ ಚೀಟಿ ಅಂ.ಕಿ 00 ರೂಪಾಯಿ ಇನ್ನೊಬ್ಬ ವ್ಯಕ್ತಿಗೆ ವಿಚಾರಿಸಲು ತನ್ನ ಹೆಸರು ವಿಜಯಕುಮಾರ ತಂದೆ ವೀರಣ್ಣ ಜಾಬಾ ಸಾ|| ಕೆ.ಇ.ಬಿ. ಕಾಲೋನಿ ಸೇಡಂ. ಇವರನ್ನು ನಗದು ಹಣ 200/- ರೂಪಾಯಿ ಒಂದು ಮಟಕಾ ಬರೆದ ಚೀಟಿ ಒಂದು ಬಾಲಪೆನ್ ಪಂಚರ ಸಮಕ್ಷಮ ಜಫ್ತಿ ಮಾಡಿದ್ದರಿಂದ ಠಾಣೆ ಗುನ್ನೆ ನಂ.175/2011 ಕಲಂ. 78(3) ಕೆ.ಪಿ.ಆಕ್ಟ್ ನೇದ್ದರಲ್ಲಿ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ .

ಎಂ.ಬಿ.ನಗರ ಪೊಲೀಸ್ ಠಾಣೆ:

ಕಳ್ಲತನ ಪ್ರಕರಣ: ಶ್ರೀ ವಿರೇಂದ್ರ ತಂದೆ ಶಿವಶಂಕರ ಬಳಗಾರ ಉಃ ಲೆಕ್ಚರರ್ ಸಾಃ ಪ್ಲಾಟ ನಂ. 15 ಎಂ.ಬಿ ನಗರ ಗುಲಬರ್ಗಾ ರವರು ದಿನಾಂಕ : 08/10/2011 ರಂದು 09:00 ಎ.ಎಂ. ಕ್ಕೆ ಕುಟುಂಬ ಸಮೇತ ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಕ್ಕೆ ಆರೋಗ್ಯ ತಪಾಸಣೆಗಾಗಿ ಮನೆಗೆ ಕೀಲಿ ಹಾಕಿಕೊಂಡು ಹೋಗಿದ್ದು ಇಂದು ದಿನಾಂಕಃ 10/10/2011 ರಂದು 10:0 ಎ.ಎಂ. ಕ್ಕೆ ನನ್ನ ತಮ್ಮ ಫೋನ್ ಮಾಡಿ ಮನೆ ಕಳುವಾದ ಬಗ್ಗೆ ತಿಳಿಸಿದ್ದು ಮರಳಿ ಮನೆಗೆ ಬಂದು ನೋಡಲಾಗಿ ಮನೆಯಲ್ಲಿದ್ದ ಸಾಮಾನುಗಳು ಚೆಲ್ಲಾಪಿಲ್ಲಿಯಾಗಿದ್ದು ಅಲೆಮಾರಿಯಲ್ಲಿದ್ದ ಬಂಗಾರದ ಆಭರಣಗಳು ಬೆಳ್ಳಿಯ ಸಾಮುನುಗಳು ನಗದು ಹಣ ಹೀಗೆ ಒಟ್ಟು 1,10,000/- ರೂ. ಬೆಲೆ ಬಾಳುವ ಬೆಳ್ಳೆ ಮತ್ತು ಬಂಗಾರದ ಸಾಮಾನುಗಳು ಯಾರೋ ಕಳ್ಳರು ಕಳುವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣಾ ಗುನ್ನೆ ನಂ. 142/2011 ಕಲಂ. 454, 457, 380 ಐಪಿಸಿ ಪ್ರಕಾರ ಗುನ್ನೆ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.
ಗುಲಬರ್ಗಾ ಗ್ರಾಮೀಣ ಠಾಣೆ:

ಮೋಸ ಪ್ರಕರಣ : ಶ್ರೀ ಶಿವಪುತ್ರ ತಂದೆ ರೇವಣಸಿದ್ಧಪ್ಪ ಗುಂಡೆ ಸಾ: ಸರಕಾರಿ ಶಾಲೆ ಹತ್ತಿರ ಆಳಂದ ಕಾಲನಿ ಗುಲಬರ್ಗಾ ರವರು ದಿನಾಂಕ 21/3/11 ರಿಂದ 17/4/11 ರ ಅವಧಿಯಲ್ಲಿ ರಾಣೇಶ ಪೀರ ದರ್ಗಾ ಸೀಮೆಯ ಸರ್ವೇ ನಂ 90/1 ನೇದ್ದರಲ್ಲಿಯ ಪ್ಲಾಟ ನಂ 32 , 33, 160, 56, 161 162, 30 31 ನೇದ್ದವುಗಳು ನನ್ನ ಹೆಸರಲ್ಲಿ ಇದ್ದು ಅವುಗಳನ್ನು ಶ್ರೀಧರ ತಂದೆ ಅಣ್ಣಾರಾಯ ಪೂಜಾರಿ, ವೀರಯ್ಯ ಸ್ವಾಮಿ ತಂದೆ ಶರಣಯ್ಯ ಹಿರೇಮಠ. ರಾಜಶೇಖರ ತಂದೆ ಚಂದಪ್ಪ ಪ್ರಕಾಶ ತಂದೆ ದಸ್ತಯ್ಯ , ಗಂಗಾಧರ ತಂದೆ ಅಣ್ಣಾರಾಯ ಸಾ: ಗುಲಬರ್ಗಾ ಇವರು ಖೊಟ್ಟಿ ಸಹಿ ಮಾಡಿ ಮೋಸದಿಂದ ತಮ್ಮ ಹೆಸರಿಗೆ ಪ್ಲಾಟಗಳನ್ನು ಮಾಡಿಕೊಂಡಿದ್ದು ಅಲ್ಲದೆ ಜೀವದ ಭಯ ಹಾಕಿರುತ್ತಾರೆ ಅಂತಾ ದೂರಿನ್ವಯ ಠಾಣೆ ಗುನ್ನೆ ನಂ:294/11 ಕಲಂ 471, 473, 464, 474, 323, 504, 506(2), 420 ಸಂ. 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಲಲಾಗಿದೆ.

No comments: