POLICE BHAVAN KALABURAGI

POLICE BHAVAN KALABURAGI

19 September 2011

Gulbarga District Reported Crimes

ಅಪಘಾತ ಪ್ರಕರಣಗಳು :
ಜೇವರ್ಗಿ ಠಾಣೆ :
ದಿನಾಂಕ: 18-09-2011 ರಂದು ಚಂದ್ರಶೇಖರ ಇತನು ತನ್ನ ಹೀರೋ ಹುಂಡಾ ಸ್ಲ್ಪೇಂ ಡರ ಪ್ಲಸ್ ಮೋಟಾರ ಸೈಕಲ ನಂಬರ ಕೆ.ಎ. 32 ವಾಯಿ 9575 ನೇದ್ದನ್ನು ನಮ್ಮ ಹೊಟೇಲ ಮುಂದೆ ರೋಡಿನ ಎಡಬದಿಯಲ್ಲಿ ನಿಲ್ಲಿಸಿ ಇಳಿಯುತ್ತಿದ್ದಾಗ ಅದೆ ವೇಳೆಗೆ ಜೇವರ್ಗಿ ಬಸ ಸ್ಟಾಂಡ ಕಡೆಯಿಂದ ಟ್ರಾಕ್ಟರ ನಂ ಕೆ.ಎ. 32 ಟಿಎ 2620 ನೇದ್ದರ ಚಾಲಕನಾದ ಮಹಾಂತಗೌಡ ತಂದೆ ಗುರಲಿಂಗಪ್ಪಗೌಡ ಸಾ: ವರ್ಚನಳ್ಳಿ ಇತನು ತನ್ನ ಟ್ರಾಕ್ಟರನ್ನು ಅತಿ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿಕೊಂಡು ಬಂದವನೆ ನನ್ನ ಗಂಡನಿಗೆ ಮತ್ತು ಮೋಟಾರ ಸೈಕಲಕ್ಕೆ ಜೋರಾಗಿ ಡಿಕ್ಕಿ ಪಡಿಸಿ ಭಾರಿ ಗಾಯ ಗೊಳಿಸಿ ಟ್ರಾಕ್ಟರ ಸ್ಥಳದಲ್ಲಿಯೇ ಬಿಟ್ಟು ಓಡಿ ಹೋಗಿದ್ದು ನಂತರ ನನ್ನ ಗಂಡನಿಗೆ ಹೆಚ್ಚಿನ ಉಪಚಾರ ಕುರಿತು 108 ಅಂಬುಲ್ಸನ ವಾಹನದಲ್ಲಿ ಗುಲಬರ್ಗಾಕ್ಕೆ ಹೋಗುತ್ತಿದ್ದಾಗ ದಾರಿಯಲ್ಲಿ ಮೃತಪಟ್ಟಿರುತ್ತಾನೆ ಅಂತಾ ಶ್ರೀಮತಿ ಮಲ್ಲಮ್ಮ ಗಂಡ ಚಂದ್ರಶೇಖರ ಸಜ್ಜನ ಸಾ: ಬಸವೇಶ್ವರ ಕಾಲೋನಿ ಜೇವರ್ಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ದಿನಾಂಕ 18-9-11 ರಂದು ಮುಂಜಾನೆ ಶ್ರೀ ಮತಿ ಸಾಬಮ್ಮ ಗಂಡ ಧೂಳಪ್ಪ @ ರಮೇಶ ಮಾವನೂರಕರ್‌ ಸಾ: ಶರಣಸಿರಸಗಿ ಮಡ್ಡಿ ತಾ: ಜಿ: ಗುಲಬರ್ಗಾ ರವರ ಗಂಡ ಮತ್ತು ಅವರ ಗೆಳೆಯನಿಗೆ ಟ್ರ್ಯಾಕ್ಟ್‌ರ ಖರೀದಿ ಮಾಡುವ ಕುರಿತು ನಮ್ಮ ಮೋಟಾರ ಸೈಕಲ ನಂ ಕೆಎ32 ಎಸ್‌ 4247 ನೇದ್ದನ್ನು ತೆಗೆದುಕೊಂಡು ಹೋಗಿದ್ದು. ಮದ್ಯಾಹ್ನ 1 ಗಂಟೆಯ ಸುಮಾರಿಗೆ ಉಪಳಾಂವ ಕ್ರಾಸ ಹತ್ತಿರ ಇರುವ ಬಿರಾದಾರ ಪೆಟ್ರೋಲ ಪಂಪ ಹತ್ತಿರ ಹೋಗುವಾಗ ಹುಮನಾಬಾದ ಕಡೆಯಿಂದ ಒಂದು ಕಾರ ನಂ ಕೆಎ 32 ಎಮ್‌‌ ಹೆಚ್‌ 2319 ನೇದ್ದರ ಕಾರ ಚಾಲಕ ತನ್ನ ಕಾರನ್ನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ನಡೆಯಿಸಿಕೊಂಡು ಬಂದು ಟಕ್ಕರ ಕೊಟ್ಟಿದ್ದು ಅದರಿಂದ ಮೋ ಸೈಕಲ ಮೇಲೆ ಹೊರಟಿದ್ದ ಮೋ ಸೈಕಲ ಸವಾರ ಧೋಳಪ್ಪ ಹಾಗೂ ಸಂತೋಷ ಇಬ್ಬರಿಗೆ ಬಾರಿಗಾಯ ವಾಗಿರುತ್ತದೆ ಕಾರ ಚಾಲಕ ತನ್ನ ಕಾರನ್ನು ಅಲ್ಲೆ ಬಿಟ್ಟು ಓಡಿಹೋಗಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇಸ್ಪೀಟ ಜೂಜಾಟದಲ್ಲಿ ನಿರತ 6 ಜನರ ಬಂಧನ :
ಗ್ರಾಮೀಣ ಠಾಣೆ :ದಿನಾಂಕ 18/9/11 ರಂದು ಸಾಯಂಕಾಲ ವಿಶ್ವರಾಧ್ಯ ಗುಡಿಯ ಹತ್ತಿರ ಅಂದಾರ ಬಾಹರ ಜೂಜಾಟ ವಾಡುತ್ತಿದ್ದಾರೆಂದು ಬಾತ್ಮಿ ಮೇರೆಗೆ ದಾಳಿ ಮಾಡಿ 1. ವೀರಣ್ಣ ತಂದೆ ಶರಣಬಸಪ್ಪ ಪಾಟೀಲ ಸಾ: ಲಾಲಗೇರಿ ಕ್ರಾಸ ಗುಲ್ಬರ್ಗಾ 2.ಅಂಬರೀಷ ತಂ/ ಶಿವಪುತ್ರ ಜಮಾದಾರ ಸಾ: ಶಹಾಬಜಾರ ಜಿಡಿಎ ಕಾಲನಿ ಗುಲಬರ್ಗಾ 3.ರಾಜು ತಂ/ ಬಸವರಾಜ ಕಣ್ಣಿ ಸಾ: ದೇವಿ ನಗರ ಗುಲಬರ್ಗಾ4.ಜಾವೀದ ತಂ/ ಮಹ್ಮದಖಾಜಾ ಸಾ: ರುಕುಂ ತೋಲಾ ದರ್ಗಾ ಹತ್ತಿರ ಗುಲಬರ್ಗಾ 5.ವಿಶ್ವನಾಥ ತಂ/ ಸಾತಪ್ಪ ದಸ್ತಾಪೂರ ಸಾ: ಸುಂಟನೂರ 6.ರವಿ ತಂ/ ಜಗನ್ನಾಥ ಪೂಜಾರ ಸಾ: ದೇವಿ ನಗರ ಗುಲಬರ್ಗಾ ರವರನ್ನು ಹಿಡಿದು ಅವರಿಂದ ನಗದು ಹಣ 3100/- ರೂ 52 ಇಸ್ಪೇಟ ಎಲೆಗಳು ಹಾಗೂ 4 ಮೋಬೈಲ ಹೀಗೆ ಎಲ್ಲಾ ಒಟ್ಟು 4300/- ರೂಪಾಯಿಗಳನ್ನು ವಶಪಡಿಸಿಕೊಂಡು ಆಪಾದಿತರ ಮೇಲೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮ ಹತ್ಯೆ ಪ್ರಕರಣ :

ಚಿಂಚೋಳಿ ಠಾಣೆ :ದಿನಾಂಕ 17.09.2011 ರಂದು ಮದ್ಯಾಹ್ನ ಶೆಂಕ್ರಪ್ಪಾ ತಂದೆ ಹಸನಪ್ಪಾ ಎನಕೆಪಳ್ಲಿ ಸಾ: ದೇಗಮಡಿ ಇವರು ಮನೆಯಲ್ಲಿ ಯಾರು ಇಲ್ಲದಾಗ ತಾನು ಮಾಡಿದ ಬ್ಯಾಂಕಿನ ಸಾಲ ಹಾಗೂ ಖಾಸಗಿ ಸಾಲ ತಿರಿಸಲು ಆಗಲಿಲ್ಲಾ ಮತ್ತು ಈ ವರ್ಷದ ಹೆಸರು ಮತ್ತು ಉದ್ದಿನ ಬೆಳೆ ಕೂಡಾ ಆಗಲಿಲ್ಲಾ ಎಂಬುದನ್ನು ಮನಸ್ಸಿನ ಮೇಲೆ ಪರಿಣಾಮ ಮಾಡಿಕೊಂಡು ಜೀವನದಲ್ಲಿ ಜಿಗುಪ್ಸೆ ಹೊಂದಿ ಕ್ರಿಮಿನಾಷಕ ಎಣ್ಣೆ ಸೆವನೆ ಮಾಡಿ ಆತ್ಮ ಹತ್ಯ ಮಾಡಿಕೊಂಡಿರುತ್ತಾನೆ ಅಂತಾ ಶ್ರೀಮತಿ ರಂಗಮ್ಮ ಗಂಡ ಶೆಂಕ್ರಪ್ಪಾ ಎನಕೆಪಳ್ಳೀ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚಿಂಚೋಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: