POLICE BHAVAN KALABURAGI

POLICE BHAVAN KALABURAGI

18 September 2011

GULBARGA DIST REPORTED CRIMES

ಮಳಖೇಡ ಠಾಣೆ :ಶ್ರೀ ಸಂಜೀತ ತಂದೆ ಚಂದ್ರ ಕಿಶೋರ ಸಾ|| ಆದಿತ್ಯ ನಗರ ಮಳಖೇಡ ರವರು, ದಿನಾಂಕ 15-9-11 ರಂದು ರಾತ್ರಿ 7-00 ಪಿ,ಎಮ್,ಕ್ಕೆ ರಾಜಶ್ರೀ ಸಿಮೆಂಟ ಕಂಪನಿ ಆದಿತ್ಯ ನಗರ ಮಳಖೇಡ ಕ್ವಾಟರ್ಸ ನಂ ಎವಿ 8 ನೇದ್ದರ ಎದರುಗಡೆ ಜಾನ್ ಢೀರ್ ಕಂಪನಿಯ ಟ್ರ್ಯಾಕ್ಟರ ನಂಬರ ಕೆಎ-32 ಬಿ-0366-0367 ನೇದ್ದನ್ನು ನಿಲ್ಲಿಸಿದ್ದು ರಾತ್ರಿ 10-00 ಪಿ,ಎಮ್,ಕ್ಕೆ ಬಂದು ನೋಡಲಾಗಿ ಇರಲಿಲ್ಲಾ. ಇಲ್ಲಿಯವರೆಗೆ ಹುಡುಕಾಡಿದರು ಪತ್ತೆಯಾಗಲಿಲ್ಲ. ಕಾರಣ ಸದರಿ ಟ್ರ್ಯಾಕ್ಟರ ಅನ್ನು ಯಾರೋ ಅಪರಿಚಿತ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿದ್ದು, ಟ್ರ್ಯಾಕ್ಟರ ಹಾಗೂ ಆರೋಪಿಯನ್ನು ಪತ್ತೆ ಮಾಡಿ ಕಾನೂನು ರೀತಿ ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೇವರ್ಗಿ ಠಾಣೆ :ಶ್ರೀ ಮನೋಜ ತಂದೆ ಶ್ರೀಪಾದರಾವ ಕುಲಕರ್ಣ ಸಾ|| ದತ್ತನಗರ ಜೇವರ್ಗಿ ರವರು, ದಿನಾಂಕ 17-09-11 ರಂದು ನಮ್ಮ ಧನಲಕ್ಷ್ಮಿ ಮೆಡಿಕಲ್ ಅಂಗಡಿ ಬಂದ್ ಮಾಡಿಕೊಂಡು ದಿನವಿಡಿ ಮಾಡಿದ ವ್ಯಾಪಾರದ ನಗದು ಹಣ 30,000/- ರೂ ಗಳನ್ನು  ಒಂದು ಬ್ಯಾಗಿನಲ್ಲಿ ಹಾಕಿಕೊಂಡು ರಾತ್ರಿ 9-30 ಪಿ.ಎಮ ಕ್ಕೆ ಮನೆಯ ಮುಂದೆ ಮೋಟಾರ ಸೈಕಲ ನಿಲ್ಲಿಸಿ ಒಳಗೆ  ಹೋಗುವಷ್ಟರಲ್ಲಿ ಹಿಂದಿನಿಂದ ಬಂದ ಇಬ್ಬರು ಅಪರಿಚಿತ ಮನುಷ್ಯರು ನನ್ನನ್ನು ನೂಕಿಸಿಕೊಟ್ಟು, ನನ್ನ ಕೊರಳಲ್ಲಿ ಹಾಕಿಕೊಂಡ ಹಣವಿದ್ದ ಬ್ಯಾಗನ್ನು ಜಬರದಸ್ತಿಯಿಂದ ಕಸಿದುಕೊಂಡು ಹೋಗಿರುತ್ತಾರೆ. ಅವರ ಜೊತೆ ಸ್ವಲ್ಪ ದೂರದಲ್ಲಿದ್ದ ಇನ್ನೋಬ್ಬನು ಹೀಗೆ ಮೂರು ಜನರು ಕೂಡಿ ಗೋಗಿ ಇವರ ತೊಗರಿ ಇದ್ದ ಹೊಲದಲ್ಲಿ ಓಡಿ ಹೋಗಿರುತ್ತಾರೆ. ಕಾರಣ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ದ ಸೂಕ್ತ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ  ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗ್ರಾಮೀಣ ಠಾಣೆ :ಶ್ರೀ ರಾಕೇಶ ತಂದೆ ಶಾಂತಪ್ಪ ಶೀಲವಂತ ಸಾ|| ಬಿದ್ದಾಪೂರ ಕಾಲೋನಿ ಗುಲಬರ್ಗಾ ರವರು, ನನ್ನ ತಾಯಿಯು ಹೈಕೋರ್ಟ ಕಡೆಗೆ ವಾಕಿಂಗ ಹೋಗುತ್ತೇನೆ ಅಂತಾ ಹೇಳಿ ಹೋಗಿದ್ದು, ನಂತರ ಕಾಲನಿಯಲ್ಲಿಯ ಜನರು ಹೈಕೋರ್ಟ ಹತ್ತಿರ ರಸ್ತೆ ಮೇಲೆ ಅಪಘಾತವಾಗಿ ಒಬ್ಬ ಹೆಣ್ಣುಮಗಳೂ ಸತ್ತಿರುತ್ತಾಳೆ. ಅಂತಾ ಅಂದಾಡುತ್ತಿದ್ದಾಗ ನಾನು ಹೋಗಿ ನೋಡಲು ಅಲ್ಲಿ ಅಫಘಾತವಾಗಿದ್ದು, ನನ್ನ ತಾಯಿಗೆ ಯಾವುದೇ ಒಂದು ಲಾರಿಯ ಚಾಲಕ ತನ್ನ ಲಾರಿಯನ್ನು ಅತಿವೇಗದಿಂದ ನಡೆಯಿಸಿಕೊಂಡು ಅಪಘಾತಪಡಿಸಿದ್ದು ತನ್ನ ತಾಯಿ ಸುಭದ್ರಬಾಯಿ ಇವಳಿಗೆ ತಲೆಗೆ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾಳೆ. ಕಾರಣ ತನ್ನ ತಾಯಿ ಸಾವಿಗೆ ಕಾರಣವಾದ ಲಾರಿ ಮತ್ತು ಅದರ ಚಾಲಕನನ್ನು ಪತ್ತೆ ಮಾಡಿ ಅವನ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಠಾಣೆ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವಿಶ್ವವಿದ್ಯಾಲಯ ಠಾಣೆ :ಶ್ರೀಮತಿ ಶಬನಾ ಬೇಗಂ ಗಂಡ ನಬಿಸಾಬ ಮುಲ್ಲಾಗೊಳ ಸಾ|| ವೆಂಕಟಬೆನೂರ ಗ್ರಾಮ ತಾ:ಜಿ:ಗುಲಬರ್ಗಾ ರವರು, ಸುಮಾರು 11 ವರ್ಷಗಳ ಹಿಂದೆ ವೆಂಕಟ ಬೇನೂರ ಗ್ರಾಮದ ನಬೀಸಾಬ ತಂಧೆ ರುಕ್ಕುಂಸಾಬ ಮುಲ್ಲಾಗೋಳ ಇತನೊಂದಿಗೆ ಲಗ್ನವಾಗಿದ್ದು ನನ್ನ ಗಂಡ ಲಗ್ನವಾದಾಗಿನಿಂದ ಕುಡಿಯುವ ಚಟಕ್ಕೆ ಬಿದ್ದು ಆಗಾಗ ಮನೆಗೆ ಕುಡಿದು ಬಂದು ನನಗೆ ಅಡಿಗೆ ಸರಿಯಾಗಿ ಮಾಡಿಲ್ಲಾ ಅಂತಾ ಚಿತ್ರಹಿಂಸೆ ಕೊಟ್ಟು ಮಾನಸಿಕ ತೊಂದರೆ ಮಾಡಿ ಹೊಡೆಬಡೆ ಮಾಡುತ್ತಾ ಬಂದಿರುತ್ತಾನೆ, ಹೀಗಿದ್ದು ನನ್ನ ನನ್ನ ತಾಯಿ ನನ್ನ ಗಂಡನಿಗೆ ಹೊಡೆಯ ಬೇಡಾ ಅಂತಾ ಸಮಜಾಯಿಸಿ ಹೋಗಿರುತ್ತಾರೆ.ಹೀಗಿದ್ದು ದಿನಾಂಕ 16-09-11 ರಂದು ರಾತ್ರಿ ನನ್ನ ಗಂಡ ಕುಡಿದ ಅಮಲಿನಲ್ಲಿ ಅವಾಚ್ಯ ಶಬ್ದಗಳಿಂದ ಬೈಯ್ದು ನಿನಗೆ ಇವತ್ತು ಖಲಾಸ ಮಾಡುತ್ತೇನೆ ಅಂತಾ ಕುಡಗೋಲಿನಿಂದ ಹೊಡೆಬಡೆ ಮಾಡಿ ರಕ್ತಗಾಯ ಮಾಡಿರುತ್ತಾನೆ. ನಾನು ಚೀರಾಡುವ ಸಪ್ಪಳ ಕೇಳಿ ನಮ್ಮ ಅಣ್ಣಪ್ಪಾ ತಂದೆ ಶಿವರಾಯ ತೊಗರೆನವರ ಮತ್ತು ದೊಡ್ಡಪ್ಪಾ ಆಡಕಿ ಇವರು ಬಂದು ಜಗಳ ಬಿಡಿಸಿದ್ದು ಇರುತ್ತದೆ. ಕಾರಣ ಸದರಿ ನನ್ನ ಗಂಡನ ಮೇಲೆ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಿಶ್ವವಿದ್ಯಾಲಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: