POLICE BHAVAN KALABURAGI

POLICE BHAVAN KALABURAGI

06 August 2011

GULBARGA DISTRICT REPORTED CRIMES

ತಂದೆ ತಾಯಿಗೆ ನಿಂದನೆ ಮಾಡಿದ ಮಗ :

ಮಾದನ ಹಿಪ್ಪರಗಾ ಠಾಣೆ : ಶ್ರೀ ಸಿದ್ರಾಮ ತಂದೆ ಚಂದ್ರಾಮಪ್ಪ ಮೈಂದರಗಿ ಸಾ: ಮಾದನ ಹಿಪ್ಪರಗಾ ರವರು ನನ್ನ ಹಿರಿಯ ಮಗನಾದ ಮಲ್ಲಿನಾಥನು ನಮ್ಮ ಹೊಲದ  ಆಸ್ತಿ ವಿಷಯದಲ್ಲಿ ತಕರಾರು ಮಾಡಿ ಹೊಲದ ಮೇಲೆ ಲೋನ್ ತಗೆದುಕೋಳ್ಳುತ್ತೆನೆ ಅಂತಾ ಅಂದಾಗ ನನ್ನ ಮಗನಿಗೆ  ನಾನು ಇರುವಾಗ ಹೊಲ ಮಾರುವದಾಗಲಿ ಹೊಲದ ಮೇಲೆ ಲೋನ ತಗೆದುಕೋಳ್ಳುವದಾಗಲಿ ಮಾಡಬೇಡಿರಿ ಅಂತಾ ಬುದ್ದಿ ಹೇಳಿದಕ್ಕೆ ಮಗ ಮಲ್ಲಿನಾಥನು  ಎ ರಂಡಿಮಗನೆ ನನ್ನ ಹೆಸರಿಗೆ ಇದ್ದ ಆಸ್ತಿ ಕೊಡಿ ನಾನು ಎನು ಬೇಕಾದರು ಮಾಡುತ್ತೆನೆ ಅಂತಾ ಅವ್ಯಾಚ್ಯವಾಗಿ ಬೈದು ನನ್ನ ಎದೆಯ ಮೇಲಿನ ಅಂಗಿ ಹಿಡಿದು ನೂಕಿ ಕೊಟ್ಟು ಬಿಡಿಸಲು ಬಂದ ಅವರ ಅಮ್ಮನಿಗು ಸಹ ಅವಾಚ್ಯಾವಾಗಿ ಬೈದು ನನ್ನ ಹೆಸರಿಗೆ ಇದ್ದ ಹೊಲದ ವಿಷಯದಲ್ಲಿ ಯಾರಾದರು ಬಂದರೆ ನಿಮ್ಮನ್ನು ಸುಟ್ಟು ಬಿಡುತ್ತೆನೆ ಎಂದು ಹೇದರಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಪ್ರಕರಣ :

ಸ್ಟೇಷನ ಬಜಾರ ಠಾಣೆ: ಶ್ರೀ ಸೈಯದ ಅಜೀಜ ಸಾ|| ಮನೆ ನಂ 1-1214 ವಿ.ವಿ ಹೈಸ್ಕೂಲ ಹತ್ತಿರ ಐವಾನ-ಶಾಹಿ ಕಾಲೊನಿ ಗುಲಬರ್ಗಾ ರವರು ಒಂದುವರೆ ತಿಂಗಳ ಹಿಂದೆ ಬಸವ ಭವನ ಒನ ವೇ ಸ್ಟೇಷನ ಏರಿಯಾದ ಹತ್ತಿರ ತಮ್ಮ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ನಮ್ಮ ಕೆಲಸಕ್ಕೆ ಹೋಗಿ ಬರುವಷ್ಟರಲ್ಲಿ ಯಾರೊ ಕಳ್ಳರೂ ವಾಹನ ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾಥ ಪ್ರಕರಣ:

ವಿಶ್ವವಿದ್ಯಾಲಯ ಠಾಣೆ: ಶ್ರೀ ಗುರುನಾಥ ತಂದೆ ಮಾಣಿಕಪ್ಪ ದಸ್ತಾಪೂರ ವಿವೇಕಾನಂದ ನಗರ ಖೋಬಾ ಪ್ಲಾಟ ಗುಲಬರ್ಗಾ ರವರು ಇಂದು ಸೇಡಂನಲ್ಲಿ ಕೆಲಸವಿದ್ದರಿಂದ ನಾನು, ರಾಜು ಮತ್ತು ನನ್ನ ಮಾರುತಿ ಸುಜುಕಿ ನಂ ಕೆಎ 32 ಎಮ್ 7942 ನೇದ್ದರ ಚಾಲಕ ಉಮೇಶ ತಂದೆ ಮಲ್ಲಿಕಾರ್ಜುನ ಮೂಲಗೆ ಕೂಡಿಕೊಂಡು ಸೇಡಂಗೆ ಹೋಗಿ ಮರಳಿ ಮದ್ಯಾಹ್ನ ಗುಲಬರ್ಗಾಕ್ಕೆ ಬರುತ್ತಿರುವಾಗ ವಿಶ್ವ ವಿದ್ಯಾಲಯ ಗೇಟ ಸಮೀಪ ಕಾರ ಚಾಲಕನು ಕಾರನ್ನು ಅತೀವೇಗ ಹಾಗೂ ನಿರ್ಲಕ್ಷತನದಿಂದ ಚಲಾಯಿಸುತ್ತಾ ರೋಡಿನ ವಡ್ಡಿಗೆ ಡಿಕ್ಕಿ ಪಡಿಸಿರುತ್ತಾನೆ ಕಾರಿನ ಮುಂದಿನ ಗ್ಲಾಸ್ ಡ್ಯಾಮೇಜ್ ಆಗಿದ್ದು ಮತ್ತು ಬಂಪರ್ ಹಾಗೂ ಇಂಜೀನ್ ನ ಚೆಂಬರ್ ಡ್ಯಾಮೇಜ್ ಆಗಿದ್ದು ಇರುತ್ತದೆ. ಕಾರನ್ನು ಡ್ಯಾಮೇಜ ಮಾಡಿದ ಚಾಲಕ ಉಮೇಶ ಇತನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 


 

No comments: