POLICE BHAVAN KALABURAGI

POLICE BHAVAN KALABURAGI

06 August 2011

GULBARGA DISTRICT REPORTED CRIMES

ಯು.ಡಿ.ಅರ್. ಪ್ರಕರಣ:

ಕಮಲಾಪೂರ ಠಾಣೆ : ಶ್ರೀ ಅಜೀಜಸಾಬ ತಂದೆ ಶಮಶೋದ್ದಿನ ನದಾಫ ಸಾಃ ಕಮಲಾಪೂರ ತಾಃಜಿಃ ಗುಲಬರ್ಗಾ ರವರು ನಾನು ದಿನಾಂಕ:05/08/2011 ರಂದು ಬೆಳಿಗ್ಗೆ ನಾನು, ನನ್ನ ಹೆಂಡತಿ ಮುಮತಾಜ ಬೇಗಂ ಇಬ್ಬರೂ ಕೂಡಿಕೊಂಡು ಹುಚ್ಚನಾಗಿರುವ ಮಗ ಶಫಿ ಈತನಿಗೆ ಊಟ ಮಾಡಿಸಿ, ಕೆಲಸದ ಪ್ರಯುಕ್ತ ಗುಲಬರ್ಗಾಕ್ಕೆ ಹೋಗಿ ಕೆಲಸ ಮುಗಿಸಿಕೊಂಡು ಮಧ್ಯಾಹ್ನ ಮರಳಿ ಮನೆಗೆ ಬಂದಾಗ ನಮ್ಮ ಮನೆಯ ಮುಂದುಗಡೆ ನನ್ನ ಮಕ್ಕಳಾದ ನಿಸಾರ, ಅಬ್ಬಾಸ, ಮುಸ್ತಾಫ, ಫಿದಾ ಮತ್ತು ನಮ್ಮ ಓಣಿಯ ಕೆಲವು ಜನರು ಗುಂಪುಗೂಡಿ ಕುಳಿತಿರುವದನ್ನು ನೋಡಿ, ನಾನು ಹೋಗಿ ನನ್ನ ಮಗ ನಿಸಾರ ಇತನಿಗೆ ವಿಚಾರಿಸಲಾಗಿ, ಆತನು ತಿಳಿಸಿದ್ದೇನೆಂದರೆ, ನಮ್ಮೂರಿನ ದಶರಥ ರಾಜ ಕೇರೆಯಲ್ಲಿ ನಮ್ಮೂರಿನ ಹೆಣ್ಣು ಮಕ್ಕಳು ಬಟ್ಟೆ ಒಗೆಯುತ್ತಿರುವಾಗ ತಮ್ಮ ಮಹ್ಮದ ಶಫಿ ಈತನು ಮಧ್ಯಾಹ್ನ ಕೆರೆಗೆ ಹೋಗಿ ಕೆರೆಯ ದಂಡೆಗೆ ತನ್ನ ಚಪ್ಪಲಿಗಳನ್ನು ಬಿಟ್ಟು ಉಟ್ಟಿರುವ ಬಟ್ಟೆಯ ಮೇಲೆ ಕರೆಯಲ್ಲಿ ಈಜಾಡುತ್ತಾ ಈ ದಡದಿಂದ ಮುಂದಿನ ದಡದವರೆಗೆ ಹೋಗಿ ಬರುವುದು ಮಾಡುತ್ತಿದ್ದಾಗ ಅತನಿಗೆ ಒಮ್ಮೇಲೆ ದಮ್ಮು ಬಂದು ಚಿರಾಡುತ್ತಾ ಕೆರೆಯ ಮಧ್ಯದದ ಅತೀ ಆಳವಾದ ನೀರಿನಲ್ಲಿ ಮುಳುಗಿರುತ್ತಾನೆ ನಾನು, ನನ್ನ ಮಕ್ಕಳನ್ನು ಮತ್ತು ಗ್ರಾಮದ ಜನರಿಗೆ ಕರೆದುಕೊಂಡು ಕೆರೆಗೆ ಹೋಗಿ ಕೆರೆಯಲ್ಲಿ ಮಳುಗಿದ ಶಫಿ ಇತನಿಗೆ ಹುಡಕಾಡಿದರು ಸಿಗದೇ ಇರದಕ್ಕೆ ಅಗ್ನಿ ಶಾಮಕ ದಳ ಗುಲಬರ್ಗಾ ರವರು ಮತ್ತು ನಮ್ಮೂರಿನ ಸೈಯ್ಯದ ಬಾಬರ ತಂದೆ ಅಬ್ದುಲ ಅಜೀಜ, ಮೈನೋದ್ದಿನ್ ತಂದೆ ಇಬ್ರಾಹಿಂಸಾಬ ಮತ್ತು ಪ್ರಕಾಶ ತಂದೆ ರೇವಣಪ್ಪಾ ವಾಲಿ ಎಲ್ಲರೂ ಕೂಡಿ ಕೆರೆಯಲ್ಲಿ ಹುಡುಕಾಡಿ ಕೆರೆಯಿಂದ ಶವವನ್ನು ಹೊರಗೆ ತೆಗೆದಿರುತ್ತಾರೆ. ಮಗ ಶಫಿ ಈತನು ದಶರಥ ಕರೆಯಲ್ಲಿ ಈಜಾಡುತ್ತಿರುವಾಗ ಕೆರೆಯ ಮಧ್ಯದಲ್ಲಿ ದಮ್ಮು ಬಂದು ಆಳವಾದ ನೀರಿನಲ್ಲಿ ಮುಳಗಿ ಉಸಿರುಗಟ್ಟಿ ಮೃತಪಟ್ಟಿರುತ್ತಾನೆ. ಈತನ ಸಾವಿನಲ್ಲಿ ಯಾವುದೇ ತರಹದ ಸಂಶಯ ಇರುವುದಿಲ್ಲಾ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ.

ದರೋಡೆ ಪ್ರಕರಣ :
ಸ್ಟೇಷನ ಬಜಾರ ಠಾಣೆ
: ಕುಮಾರಿ ಶೆರಿಲ್ ಶೆಬ್ಯಾಸ್ಟಿನ ತಂದೆ ಕೆ.ವಿ ಶೆಬ್ಯಾಸ್ಟಿನ್ ಸಾ: ಕೋಜಿನೋಕ ಗುಡಿಸ್ತಾನ್ ಎ ಶಾಹಿ ರಾಜಾಪುರ ರೋಡ ಗುಬರ್ಗಾ ನಾನು ನನ್ನ ಅಂಟಿ ಮನೆಯಿಂದ ಮಾತೋಶ್ರೀ ದಿವೈನ್ ಚರ್ಚ ಮುಂದೆ ತನ್ನ ಸ್ಕೂಟಿ ನಿಲ್ಲಿಸಿ ಸ್ಟೇರ್ ಕೇಸ್ ಹತ್ತುವಾಗ 20 ರಿಂದ 25 ವಯಸ್ಸಿನ ಹುಡುಗ ಕಪ್ಪು ಶರ್ಟ ಧರಿಸಿದ್ದು ಕಪ್ಪು ಬಣ್ಣದ ಮೈಕಟ್ಟು ಸಾಧಾರಾಣ ಎತ್ತರ ಮೋಟಾರು ಸೈಕಲ್ ಮೇಲೆ ಬಂದವನೆ ಕೊರಳಲ್ಲಿಯ 10 ಗ್ರಾಂ ಚಿನ್ನದ ಲಾಕೇಟ ಅ.ಕಿ 21000/- ಸಾವಿರ ನೇದ್ದನ್ನು ಹರಿದುಕೊಂಡು ಓಡಿ ಹೋಗಿರುತ್ತನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಟಕಾ ಪ್ರಕರಣ :
ಚಿಂಚೋಳಿ ಪೊಲೀಸ ಠಾಣೆ
: ದಿನಾಂಕ 05.08.2011 ರಂದು ಸಾಯಾಂಕಾಲ ಸುಮಾರಿಗೆ ಖಚಿತವಾದ ಬಾತ್ಮಿ ಬಂದಿದ್ದೇನೆಂದರೆ ನಾಗೇಂದ್ರ ತಂದೆ ಶಿವಪ್ಪಾ ಕಾಕುರ ಸಾ: ಐನೋಳ್ಳಿ ಇತನು ಬಸವೇಶ್ವರ ಚೌಕ ಹತ್ತಿರ ತನ್ನ ಹೋಟೆಲ ಮುಂದುಗಡೆ ನಿಂತುಕೊಂಡು  ಸಾರ್ವಜನಿಕರಿಗೆ 1 ರೂಪಾಯಿಗೆ 80 ರೂ ನೀಡುತ್ತೇನೆ ನಿಮ್ಮ ಅದೃಷ್ಟದ ಮಟಕಾ ಸಂಖ್ಯೆ ಬರೆಯಿರಿ ಅಂತಾ ಸಾರ್ವಜನಿಕರಿಗೆ ಹೇಳಿ ಮಟಕಾ ನಂಬರ ಬರೆಯಿಸಿಕೊಂಡು ಅವರಿಂದ ಹಣ ಪಡೆಯುತ್ತಿದ್ದಾರೆ ಅಂತಾ ಭಾತ್ಮಿ ಬಂದಾಗ ಪಿ.ಎಸ.ಐ ಮತ್ತು ಸಿಬ್ಬಂದಿಯವರು ಕೂಡಿಕೊಂಡು ಪಂಚರ ಸಮಕ್ಷಮ ದಾಳಿ ಮಾಡಿ ನಾಗೇಂದ್ರ ಇತನನು ಹಿಡಿದುಕೊಂಡೆವು , ಮಟಕಾಕ್ಕೆ ಬಳಸುತ್ತಿದ್ದ ನಗದು ಹಣ 6180/- ರೂಪಾಯಿ, ಮೋಬೈಲ್ , ಮಟಕಾ ಚೀಟಿ, ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಂದರ ಬಾಹರ ಜೂಜಾಟ ಪ್ರಕರಣ

ಚೌಕ ಠಾಣೆ :ದಿನಾಂಕ 05.08.2011 ರಂದು ಚೌಕ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಗೋಳಾ ಚೌಕ ಹತ್ತಿರ 10-11 ಜನರು ಕೂಡಿಕೊಂಡು ಇಸ್ಪೇಟ ಎಲೆಗಳ ಸಹಾಯದಿಂದ ಅಂದರ ಬಹಾರ ಎಂಬ ಇಸ್ಪೇಟ ಜೂಜಾಟ ಆಡುತಿದ್ದಾಗ ಡಿ.ಎಸ್.ಪಿ ಸಾಹೇಬ (ಬಿ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದ ಮೇರೆಗೆ ಪಿ..ಐ ರವರು ಸಿಬ್ಬಂದಿಯವರೊಂದಿಗೆ ದಾಳಿ ಮಾಡಿ ಭೀಮಾಶಂಕರ ತಂದೆ ಬಾಬುರಾವ ಮೂಳಕೇರಿ ಸಾಃ ದುಬುಳಗುಂಡಿ ತಾಃ ಹುಮನಾಬಾದ ಅಂಬರೇಶ ತಂದೆ ವಿಜಯಕುಮಾರ ಯಕಲೂರ ಸಾಃ ಮಹಾಗಾಂವ ಹಾಃವಃ ಭವಾನಿ ನಗರ ಸುಧಾರಕ ತಂದೆ ಶಾಮರಾವ ಕಡಚರಲಾ ಸಾಃ ಮನೆ ನಂ. 7-612 ವಕ್ಕಲಗೇರಾ ಭವಾನಿ ಗುಡಿ ಹತ್ತಿರ ಗುಲಬರ್ಗಾ, ಸಂಜು @ ಸಂಜುಕುಮಾರ ತಂದೆ ಗೋವಿಂದರಾವ ಜಗತಾಪ ಸಾಃ ಮನೆ ನಂ. 7-2 ಅನ್ನಪೂರ್ಣ ದವಾಖಾನೆಯ ಹತ್ತಿರ ಗುಲಬರ್ಗಾ, ಪ್ರಭು ತಂದೆ ರೇವಣಸಿದ್ದಪ್ಪ ಗಾಣಗೇರ ಸಾಃ ಗೊಬ್ಬೂರ ತಾಃ ಅಫಜಲಪೂರ ಬಸವರಾಜ ತಂದೆ ಈರಣ್ಣ ಸುತ್ತಾರ ಸಾಃ ಮನೆ ನಂ. 6-969 ಮೊನಪ್ಪ ಚಾಳಗೋಳಾ ಚೌಕ ಹತ್ತಿರ ಗಂಜ ಗುಲಬರ್ಗಾ, ಅಬರಾರಖಾನ ತಂದೆ ಸರ್ಧಾರಖಾನ ಸಾಃ ಮಹಡಿ ಮೊಹಲ್ಲಾ ಮೋಮಿನಪುರ ಗುಲಬರ್ಗಾ, ಜಮೀಲ ಅಹ್ಮದ ತಂದೆ ನೂರೋದ್ದಿನ ಸಾಃ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ, ಬುರಾನಪಟೇಲ ತಂದೆ ಮಹಿಬೂಬ ಪಟೇಲ ಸಾಃ ಮಿಸ್ಬಾ ನಗರ ಎಂ.ಎಸ್.ಕೆ ಮಿಲ್ ಗುಲಬರ್ಗಾ, ನಾಗಶೇಟ್ಟಿ ತಂದೆ ರಾಮಯ್ಯ ಗುತ್ತೇದಾರ ಸಾಃ ಜಾನತಿ ತಾಃ ಭಾಲ್ಕಿ ಜಿಃ ಬೀದರ , ಮಹ್ಮದ ಮೂಸಾ ತಂದೆ ಮಹ್ಮದ ಬಶೀರೊದ್ದಿನ ಸಾಃ ಮನೆ ನಂ. 7-775/2 ಮಿಜಗುರಿ ಮೋಮಿನಪುರ ಗುಲಬರ್ಗಾ ರವರಿಂದ ವಿವಿಧ ಕಂಪನಿಯ 11 ಮೋಬೈಲ ಹಾಗೂ 5330/- ರೂ. ಮತ್ತು 52 ಇಸ್ಪೇಟ ಎಲೆಗಳು ಪಂಚರ ಸಮಕ್ಷಮ ಜಪ್ತಿ ಮಾಡಿಕೊಂಡು ಠಾಣೆಯಲ್ಲಿ ಪ್ರರಕಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ .

ಉಕ್ಕಿನ ತುಕ್ಕಡಿಗಳು ಸಾಗಿಸುತ್ತಿರುವ ಬಗ್ಗೆ :
ಗ್ರಾಮೀಣ ಠಾಣೆ :
ಇಂದು ದಿನಾಂಕ 5/8/2011 ರಂದು ಸಾಯಂಕಾಲ 6 ಗಂಟೆಗೆ ಅವರಾದ(ಬಿ) ಗ್ರಾಮದ ಸೀಮಾಂತರ ದಲ್ಲಿ ಬರುವ ಆಲಗೂಡ ಕ್ರಾಸ ಹತ್ತಿರ ಟಾಟಾ ಸುಮೋ ನಂಬರ ಕೆಎ 32 ಎಮ್‌ 3237 ನೇದ್ದಕ್ಕೆ ಸಂಶಯ ಬಂದು ಹಿಡಿದು ನಿಲ್ಲಿಸಲಾಗಿ ವಾಹನದಲ್ಲಿದ್ದ ಮೈನೋದ್ದೀನ ತಂದೆ ಮಹ್ಮದ ಹನೀಪ ವ: 26 ವರ್ಷ ಉ:ಮೇಕ್ಯಾನಿಕ ಸಾ:ಅಹ್ಮದನಗರ ತಾಜ ಬಿಎಡ್‌ ಕಾಲೆಜ ಎದರು ಗುಲಬರ್ಗಾ ಮತ್ತು ಮಹೇ ಬೂಬ ತಂದೆ ಶೇಖ ಫಕ್ರೋದ್ದೀನ ಬೋಗನಳ್ಳಿ ವ:25 ವರ್ಷ ಉ: ಆಟೋಚಾಲಕ ಸಾ: ಪಿರದೋಷ ಕಾಲನಿ ಗುಲಬರ್ಗಾ ಇಬ್ಬರೂ ಸೇರಿಕೊಂಡು ಅಂದಾಜ 150 ಕೆಜಿ ಯಷ್ಟು ಉಕ್ಕಿನ ತುಕ್ಕಡಿಗಳು ಅ, ಕಿ 1,50,000/- ರೂ ಹಾಗೂ 150 ಕೆಜಿ ಉಕ್ಕಿನ ತುಕ್ಕಡಿ ಅಂದಾಜು ಕಿಮ್ಮತ್ತು 3000/- ರೂಪಾಯಿದು ನೇದ್ದವುಗಳ ಬಗ್ಗೆ ವಿಚಾರಿಸಲಾಗಿ ಯಾವದೇ ಸಮರ್ಪಕ ಉತ್ತರ ಕೊಡೆದೆ ಇರುವದರಿಂದ ಅವರನ್ನು ಮತ್ತು ಮಾಲನ್ನು ಎ.ಎಸ.ಐ ಭಗತಸಿಂಗ್ ರವರು ಜಪ್ತಿ ಮಾಡಿಕೊಂಡಿದ್ದಿರಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ದೇವಿಂದ್ರಪ್ಪ   ತಂದೆ ಚಂದಪ್ಪ ಕಿರಣಗಿ   ಸಾ: ಸರಡಗಿ [ಬಿ] ಗುಲಬರ್ಗಾ ರವರು ನಾನು ಮತ್ತು ನನ್ನ ಹೆಂಡತಿ ಕಲ್ಲಮ್ಮ ಇವಳು ನಮ್ಮ ಊರಿನಿಂದ ಗುಲಬರ್ಗಾಕ್ಕೆ ಮೋಟಾರ ಸೈಕಲ್ ನಂ ಕೆಎ 39 ಈ 7223 ನೇದ್ದರ ಮೇಲೆ ಬರುತ್ತಿರುವಾಗ ಕರುಣೇಶ್ವರ ನಗರ ಪೆಟ್ರೋಲ್ ಪಂಪ್ ದಲ್ಲಿ ಪೆಟ್ರೋಲ್ ಹಾಕಿಸಿಕೊಳ್ಲಬೆಕೆಂದು ಇಂಡಿಕೇಟರ್ ಹಾಕಿ ಬಲಗಡೆ ತೆಗೆದುಕೊಳ್ಳುತ್ತಿರುವಾಗ ಮಿನಿ ಟ್ರಾಂಕರ ನಂ ಕೆಎ 25 ಎ 3735 ನೇದ್ದರ ಚಾಲಕ ತನ್ನ ವಾಹನವನ್ನು ಅತೀ ವೇಗ ಮತ್ತು ಅಲಕ್ಷತನದಿಂದ ನಡೆಯಿಸಿ ನನ್ನ ಮೋಟಾರ ಸೈಕಲಕ್ಕೆ ಡಿಕ್ಕಿ ಪಡಿಸಿದ್ದು ನನ್ನ ಹೆಂಡತಿ ತಲೆಗೆ ಭಾರಿ ಪೆಟ್ಟಾಗಿ ಸ್ತಳದಲ್ಲಿಯೇ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾನಭಂಗ ಪ್ರಕರಣ :
ಶಹಾಬಾದ ನಗರ ಪೊಲೀಸ ಠಾಣೆ:
ಶ್ರೀಮತಿ ಮರೆಮ್ಮಾ ಗಂಡ ಶರಣಪ್ಪಾ ನಾಲ್ವಾರ ಸಾ:ದೇವನತೆಗನೂರ ತಾ:ಚಿತ್ತಾಪುರ ಜಿ:ಗುಲಬರ್ಗಾ ರವರು ನಾನು ಮನೆಯ ಮುಂದೆ ಇರುವ ರೇವಣಸಿದ್ದೇಶ್ವರ ಮುಗಳಿ ಇವರ ಅಂಗಡಿ ಮುಂದೆ ಸಂಜು ಸಂಗಡ ಇನ್ನೂ ಇಬ್ಬರೂ ಕೂಡಿಕೊಂಡು ಬಂದು ಕುಡಿದ ಅಮಲಿನಲ್ಲಿ ಬಂದು ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನಾನು ಅಲ್ಲಿ ನಿಂತು ಬೈಯಬೇಡಿ ಇಲ್ಲಿ ಎಲ್ಲಾ ಹೆಣ್ಣು ಮಕ್ಕಳು ಇದ್ದಾರೆ ಅಂತಾ ಹೇಳಿದ್ದಕ್ಕೆ ಸದರಿಯವರು ನನ್ನ ಸೀರೆ ಎಳೆದು ಕೈಯಿಂದ ಬೆನ್ನಿಗೆ ಹೊಡೆದಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರರಕಣ ದಾಖಲಾಗಿದೆ .


 


 


 

No comments: