POLICE BHAVAN KALABURAGI

POLICE BHAVAN KALABURAGI

31 August 2011

GULBARGA DIST REPORTED CRIMES

ಹಲ್ಲೆ ಪ್ರಕರಣ:

ಶಹಾಬಾದ ನಗರ ಠಾಣೆ: ಶ್ರೀ ಸುರೇಶಕುಮಾರ ತಂದೆ ಸಂಗಣ್ಣಾ ಸಂಗಾವಿಕರ್ ಸಾ:ಶಾಂತನಗರ ಭಂಕೂರ ರವರು ನಾನು ಹಾಗೂ ನಮ್ಮ ಅಣ್ಣ ರಮೇಶ ಕೂಡಿ ಮನೆ ಕಡೆಗೆ ಬರುತ್ತಿರುವಾಗ ಭಾಗು ತಂದೆ ಸಿದ್ರಾಮಪ್ಪಾ ಸಂಗಡ ಇತರೆ 5 ಜನರು ಕೂಡಿಕೊಂಡು ಸಾ|| ಎಲ್ಲರೂ ಭಂಕೂರ ರವರು ಬಂದು ಭಾಗು ಇತನು ನಿನ್ನ ಗೆಳೆಯ ಮಲ್ಲು ಎಲ್ಲಿ ಇದ್ದಾನೆ ಅಂತಾ ಕೇಳಿ ಅವಾಚ್ಯವಾಗಿ ಬೈದು ನನಗೆ ಮತ್ತು ರಮೇಶ ಇತನಿಗೆ ಕಟ್ಟೆಗೆಯಿಂದ ತಲೆಗೆ ಹೊಡೆದು ರಕ್ತಗಾಯ ಪಡಿಸಿದನು. ಹಾಗೂ ಜೋತೆಯಲ್ಲಿದ್ದವರು ಸಹ ಅವ್ಯಾಚ್ಯವಾಗಿ ಬೈದು ಹೊಡೆದು ರಕ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಟಾಟ ಪ್ರಕರಣ:

ದೇವಲ ಗಾಣಗಾಪೂರ ಠಾಣೆ : ದಿನಾಂಕ:31-08-2011 ರಂದು ಮಧ್ಯಾಹ್ನ ಸಂಗಾಪುರ ಗ್ರಾಮದ ಮರಗಮ್ಮಾ ಗುಡಿಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಗೌಸ ಮಲಿಕ ತಂದೆ ಲಾಡ್ಲೆಸಾಬ ಚಿನಮಳ್ಳಿ ಸಂಗಡ ಇಬ್ಬರೂ ಸಾ|| ಸಂಗಾಪೂರ ಗ್ರಾಮ ದವರು ಜೂಜಾಟದಲ್ಲಿ ತೊಡಗಿದ್ದಾಗ ಪಿ.ಎಸ್‌.ಐ. ಮಂಜುನಾಥ ಎಸ್.ಕುಸುಗಲ್‌ ಮತ್ತು ಸಿಬ್ಬಂದಿಯವರು ದಾಳಿ ಮಾಡಿ ಹಿಡಿದು ಅವರಿಂದ ನಗದು ಹಣ 520 ರೂಪಾಯಿಗಳು ಮತ್ತು ಇಸ್ಪೀಟ ಎಲೆಗಳು ಜಪ್ತಿ ಮಾಡಿಕೊಂಡಿದ್ದರಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: