POLICE BHAVAN KALABURAGI

POLICE BHAVAN KALABURAGI

31 August 2011

GULBARGA DIST REPORTED CRIMES

ಹಲ್ಲೆ ಪ್ರಕರಣ:

ಫರಹತಾಬಾದ ಠಾಣೆ : :   ಹಣಮಂತ ತಂದೆ ಮಲ್ಲಪ್ಪಾ ನಾಟೀಕಾರ ಸಾ: ಮಿಣಜಗಿ  ರವರು ನಾನು ನನ್ನ ಮನೆಯ ಹತ್ತಿರ ನಿಂತ್ತಿದ್ದಾಗ ಅಣ್ಣನಾದ ಶಾಂತಪ್ಪಾ ತಂದೆ ಸಾಯಬಣ್ಣಾ ನಾಟೀಕಾರ, ಸಾಯಬಣ್ಣಾ ತಂದೆ ಶಾಂತಪ್ಪಾ ನಾಟೀಕಾರ, ಸರುಬಾಯಿ ಗಂಡ ಶಾಂತಪ್ಪಾ ನಾಟೀಕಾರ ಬಂದವರೇ ವಿನಾಃಕಾರಣ ನನಗೆ ಶಾಂತಪ್ಪ ಇವನು ಅವಾಚ್ಯವಾಗಿ ಬೈದು ಊರಲ್ಲಿ ನಿನ್ನದು ಬಹಳ ಸೊಕ್ಕು ಬಂದಿದೆ ಅನ್ನುತ್ತಾ ಎಲ್ಲರೂ ಕೂಡಿಕೊಂಡು ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:
ಕಮಲಾಪೂರ ಪೊಲೀಸ ಠಾಣೆ :
ಚಂದ್ರಶೇಖರ ತಂದೆ ಮಲ್ಲಪ್ಪಾ ಬೂದಿನಾಳ ವಯ: 31 ವರ್ಷ ಸಾಃಸಿದ್ದೇಶ್ವರ ಕಾಲೋನಿ ಗುಲಬರ್ಗಾ ತಾ;ಜಿ;ಗುಲಬರ್ಗಾ ಹಾ||ವ|| ಪುನಾ (ಮಹಾರಾಷ್ಟ್ರ ರಾಜ್ಯ ) ರವರು ನಾನು ಕಾರ ನಂ. ಎಂಹೆಚ್:12, ಹೆಚ್ಎಫ್:1245 ನೇದ್ದರಲ್ಲಿ ಗುಲಬರ್ಗಾಕ್ಕೆ ನನ್ನ ತಂದೆ ತಾಯಿಯವರಿಗೆ ಮಾತನಾಡಿಸಲು ಮತ್ತು ಖಾಸಗಿ ಕೆಲಸದ ಪ್ರಯುಕ್ತ ನನ್ನ ಬರುತ್ತಿದ್ದು. ನನ್ನ ಗೆಳೆಯರಿಗೆ ಫೋನ ಮಾಡಿ ನೀವು ಹುಮನಾಬಾದಕ್ಕೆ ಬನ್ನಿರಿ ಎಲ್ಲರೂ ಕೂಡಿಕೊಂಡು ನನ್ನ ಕಾರಿನಲ್ಲಿ ಗುಲಬರ್ಗಾಕ್ಕೆ ಹೋಗೋಣಾ ಅಂತಾ ತಿಳಿಸಿದ್ದರಿಂದ ಗೆಳೆಯರಾದ ವಿಜಯಕುಮಾರ ಮತ್ತು ಆನಂದ ನಾನು ಕೂಡಿಕೊಂಡು ಹುಮನಾಬಾದದಿಂದ ಗುಲಬರ್ಗಾ ಕಡೆಗೆ ಕಿಣ್ಣಿಸಡಕ ದಾಟಿ ಮಹಿಬೂಬ ಸುಬಾನಿ ದರ್ಗಾದ ಹತ್ತಿರ ಇರುವ ಹೊಡ್ಡು ಏರುತ್ತಿರುವಾಗ ರಾತ್ರಿ 7-45 ಗಂಟೆ ಸುಮಾರಿಗೆ ಎದುರಿನಿಂದ ಹೊಂಡೈ ಏಸಂಟ್ ಕಾರ ನಂ. ಕೆಎ:38,ಎಮ್:1133 ನೇದ್ದರ ಚಾಲಕನಾದ ಸುಧೀರಕುಮಾರ ಸಾಃ ಬೀದರ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನನ್ನ ಕಾರಿಗೆ ಡಿಕ್ಕಿ ಹೊಡೆದು ಮುಂದೆ ಹೋಗಿ ರೋಡಿನ ಸೇಫ್ ಗಾರ್ಡ ಬ್ಯಾರಿಕೇಡಗಳಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿದ್ದರಿಂದ ನನಗೆ ಎದೆಗೆ ಒಳಪೆಟ್ಟಾಗಿ ಗುಪ್ತಗಾಯ, ವಿಜಯಕುಮಾರ ಈತನಿಗೆ ನೋಡಲಾಗಿ, ಗದ್ದಕ್ಕೆ ರಕ್ತಗಾಯ ಮತ್ತು ಆನಂದ ಈತನಿಗೆ ನೋಡಲಾಗಿ, ಹಣೆಗೆ ತರಚಿದ ರಕ್ತಗಾಯವಾಗಿರುತ್ತದೆ. ಹೊಂಡೈ ಏಸಂಟ್ ಕಾರ ನಂ. ಕೆಎ:38,ಎಮ್:1133 ನೇದ್ದರಲ್ಲಿ ಕುಳಿತ ಡಾ|| ಮನಿಷ ಸಾಃ ಬೀದರ ಈತನಿಗೆ ಎಡ ಕೈಗೆ ಒಳಪೆಟ್ಟಾಗಿ ಗುಪ್ತಗಾಯವಾಗಿರುತ್ತದೆ. ಅಪಘಾತ ಪಡಿಸಿದ ಕಾರ ಚಾಲಕ ಸುಧೀರಕುಮಾರ ಕೋಳಿ ಈತನಿಗೆ ಹಣೆಗೆ, ತೆಲೆಗೆ, ಎಡಗೈಗೆ ತರಚಿದ ರಕ್ತಗಾಯಗಳಾಗಿರುತ್ತವೆ ಕಾರ ನಂ. ಕೆಎ:38,ಎಮ್:1133 ನೇದ್ದರ ಚಾಲಕ ಸುಧೀರಕುಮಾರ ಈತನು ತನ್ನ ಕಾರನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿ ನಮ್ಮ ಕಾರಿಗೆ ಡಿಕ್ಕಿ ಹೊಡೆದು ಅಪಘಾತ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: