POLICE BHAVAN KALABURAGI

POLICE BHAVAN KALABURAGI

03 July 2011

GULBARGA DISTRICT REPORTED CRIMES

ಅಪಘಾತ ಪ್ರಕರಣ :

ಗ್ರಾಮೀಣ ಠಾಣೆ
:
ಶ್ರೀ ರಘುನಾಥ ತಂದೆ ಗುರಣ್ಣಾ ವಠಾರ ಸಾ|| ಮೇಳಕುಂದಾ ತಾ|| ಜಿ|| ಗುಲಬರ್ಗಾ ರವರು ಠಾಣೆಗೆ ಹಾಜರಾಗಿ ಹೇಳಿಕೆ ಕೊಟ್ಟಿದ್ದು ಸಾರಾಂಶ ಏನೆಂದರೆ ತಾನು ಮತ್ತು ತನ್ನ ಸಂಬಂಧಿ ಮಹೇಶ ಇಬ್ಬರು ಕೂಡಿ , ಮಹೇಶ ಇವರ ಮೋಟಾರ ಸೈಕಲದ ಮೇಲೆ ಗುಲಬರ್ಗಾ ದಿಂದ ಮೇಳಕುಂದಾಕ್ಕೆ ಹೋಗುವ ಕುರಿತು ಹೋಗುವಾಗ ಅಫಜಲಪೂರ ರೋಡಿನ ಶರಣ ಸಿರಸಗಿ ಮಡ್ಡಿಯ ಹತ್ತಿರ ಪಾರ್ವತಿ ಲೇಔಟದ ಬದಿಯಲ್ಲಿ ಒಬ್ಬ ಗಂಡು ಮನುಷ್ಯ ಅಂದಾಜು 25 – 30 ವರ್ಷ ದವನಿದ್ದು ರೋಡಿನ ಬದಿಗೆ ಅಲ್ಲಲ್ಲಿ ಭಾರಿ ಗಾಯಗೊಂಡು ಮೃತ್ತ ಪಟ್ಟಿದ್ದು ನೋಡಲಾಗಿ ಆತನ ಹಣಗೆ ತಲೆಗೆ ಮತ್ತು ಅಲ್ಲಲ್ಲಿ ರಕ್ತ ಗಾಯಗಳಾಗಿದ್ದು ಯಾವುದೊ ಒಂದು ವಾಹನದ ಚಾಲಕನು ತನ್ನ ವಾಹನವನ್ನು ಡಿಕ್ಕಿ ಹೊಡೆದು ಭಾರಿ ಗಾಯಗೊಳಿಸಿ ವಾಹನದೊಂದಿಗೆ ಹೋಗಿರಬಹುದು ಈ ಘಟನೆಯು ಇಂದು ನಸುಕಿನಲ್ಲಿ ಸಂಭವಿಸಿರಬಹುದು ಮೃತ್ತನ ಬಗ್ಗೆ ಯಾರು ಪಿರ್ಯಾದಿ ಸಲ್ಲಿಸದಕ್ಕೆ ನಾನೆ ಪಿರ್ಯಾದಿ ಕೊಟ್ಟಿರುತ್ತೆನೆ ಅಂತಾ ದೂರು ಸಲ್ಲಿಸಿದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಹಿಳೆಯ ಆಕಸ್ಮಿಕ ಸಾವು :
ಗ್ರಾಮೀಣ ಠಾಣೆ :
ಶ್ರೀ ಮಲ್ಲಿಕಾರ್ಜುನ ತಂದೆ ಬಸಣ್ಣ ಔರಾದಿ ಸಾ|| ಕೊರಳ್ಲೀ ತಾ|| ಆಳಂದ ರವರು ನ್ನ ಮಗಳಾದ ಶ್ರೀಮತಿ ಮೀನಾಕ್ಷಿ ಗಂಡ ಶರಣಬಸಪ್ಪ ಬಾಬನಗೌಡ ಸಾ: ಜಂಬಗಾ (ಬಿ) ಇವರು ತನ್ನ ಮನೆಯಲ್ಲಿ ನಿನ್ನೆ ಸಾಯಂಕಾಲ ಚಹಾ ಮಾಡುತ್ತಿರುವಾಗ ಸ್ಟೋದ ಹವಾ ಹಾಕಿ ಬೆಂಕಿ ಹಚ್ಚಲು ಹೋದಾಗ ಒಮ್ಮೇಲೆ ಮೈಗೆ ಬೆಂಕಿ ಹತ್ತಿದ್ದರಿಂದ ಉಪಚಾರದ ಸಲುವಗಿ ಆಸ್ಪತ್ರೆಗೆ ಸೇರಿಕೆ ಮಾಡಿದ್ದು ಇರುತ್ತದೆ . ಉಪಚಾರ ಫಲಕಾರಿಯಾಗದೇ ಮೃತಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: