POLICE BHAVAN KALABURAGI

POLICE BHAVAN KALABURAGI

04 July 2011

GULBARGA DISTRICT REPORTED CRIME

ಕೊಲೆ ಪ್ರಕರಣ :

ಎಂ.ಬಿ.ನಗರ ಠಾಣೆ :

ಶ್ರೀ ಮಲ್ಲಿಕಾರ್ಜುನ ತಂದೆ ಮರೆಪ್ಪ ಸಾ:ಬಾಪು ನಗರ ಗುಲಬರ್ಗಾ ರವರು ತನ್ನ ಅಣ್ಣನಾದ ಶಿವಶರಣಪ್ಪ @ ಅಪ್ಪಿ ಇತನು ಸಮಾಜ ಸೇವಕ ಕೆಲಸ ಮಾಡಿಕೊಂಡು ಭೂಪಾಲ ತೆಗನೂರದಲ್ಲಿ ಗ್ರಂಥಾಲಯ ಕಟ್ಟಡದ ಟೆಂಡರ ಪಡೆದಿದ್ದರಿಂದ ಅದೆ ಗ್ರಾಮದ ಮೈಲಾರಿ ಶೇಳಗಿ ಇತನು ನಮ್ಮ ಅಣ್ಣನ ಜನಪ್ರಿಯತನ ಸಹಿಸಲಾಗದೆ ವೈಮನಸಿನಿಂದ ದಿನಾಂಕ:03-07-2011 ರಂದು 06-30 ಪಿಎಂದ 07-30ಪಿಎಂದ ಅವಧಿಯಲ್ಲಿ ಮೈಲಾರಿ ಓಂ ನಗರ, ಸಂತೋಷ ತಂದೆ ಮೈಲಾರಿ, ವಿಶಾಲ ತಂದೆ ಸುಭಾಸ (ನೌರಂಗ ಚಾಳ ), ನಾಗರಾಜ ತಂದೆ ಮಲ್ಲೆಶಪ್ಪ ತೆಗನೂರ ಗುಬ್ಬಿಕಾಲೋನಿ, ಭೀಮಾ ತಂದೆ ಸಕಲದ್ ಮಾಂಗರವಾಡಿ, ಬುಡ್ಡ ಶೀನ್ಯಾ ಬಸವೇಶ್ವರ ಕಾಲೋನಿ, ದಿನೇಶ ತಂದೆ ಬಾಬುರಾವ ರೋಜಾ, ಹಣಮಂತ ಸುಲ್ತಾನಪೂರ ಇವರೆಲ್ಲರು ಲಲಿತ ಗಾರ್ಡನ ಬಾರ್ & ರೆ ಸ್ಟೋರೆಂಟ ಹಿಂದುಗಡೆ ಗೇಟ ಹತ್ತಿರ ಹರಿತವಾದ ಆಯುಧ ದಿಂದ ಹೊಡೆದು ಭಾರಿ ರಕ್ತ ಗಾಯ ಪಡಿಸಿ ಕರುಳು ಹೊರಗಡೆ ಹಾಕಿ ಕೊಲೆ ಮಾಡಿ ಒಡಿ ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


No comments: