POLICE BHAVAN KALABURAGI

POLICE BHAVAN KALABURAGI

30 July 2011

GULBARGA DISTRICT REPORTED CRIMES

ಜಾನುವಾರು ಕಳ್ಳತನ ಪ್ರಕರಣ:

ನರೋಣಾ ಪೊಲೀಸ ಠಾಣೆ: ಶಿವಾಜಿ ತಂದೆ ಕಾಶೀಬಾ ಗಾಯಕವಾಡ ಸಾ: ಬೆಟ್ಟಜೇವರ್ಗಿ ರವರು ನಾನು ದಿನಾಂಕ :27,28-07-2011 ರ ಮಧ್ಯರಾತ್ರಿಯ ಅವಧಿಯಲ್ಲಿ ಕೊಠಗಿಯಲ್ಲಿ ಕಟ್ಟಿದ್ದ ಆಕಳು ಕರುಗಳನ್ನು ಯಾರೋ ಕಳ್ಳರು ಬಿಚ್ಚಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ:

ಮಾಡಬೂಳ ಠಾಣೆ: ಶ್ರೀ ಯಲ್ಲಾಲಿಂಗ ತಂದೆ ಚಂದ್ರಶಾ ನಿಪ್ಪಾಣಿ ಸಾ|| ಮುಗಟಾ ತಾ:ಚಿತ್ತಾಪೂರ ರವರು ನಾನು ದಿನಾಂಕ:-29/07/2011 ರಂದು ಗುಲ್ಬರ್ಗಾದಿಂದ ಕೂಲಿ ಕೆಲಸ ಮುಗಿಸಿಕೊಂಡು ನನ್ನ ಊರಿಗೆ ಬರುತ್ತಿರುವಾಗ ಮುಗಟಾ ಗ್ರಾಮದ ಬ್ರೀಡ್ಜ್
ಹತ್ತಿರ ರಾತ್ರಿ ಟಿಪ್ಪರ ನಂ. ಕೆ.. 32 ಬಿ 3568 ನೇದ್ದರ ಚಾಲಕ ಶಿವರಾಮ ತಂದೆ ಬಾಬು ದಂಡಗೂಲಕರ್ ಸಾ:ಚಂದರ ನಗರ ಇತನು ಅತೀವೇಗ ಹಾಗು ನಿಷ್ಕಾಳಜಿತನದಿಂದ ನಡೆಸಿಕೊಂಡು ಬಂದು ತನ್ನ ಟಿಪ್ಪರ ಪಲ್ಟಿ ಮಾಡಿಕೊಂಡನು. ನಾನು ಮತ್ತು ಹಿಂದೆ ಬರುತ್ತಿದ್ದ ಟಿಪ್ಪರ ನಂ. ಕೆ.. 32 ಬಿ 2022 ನೇದ್ದರ ಚಾಲಕ ಹಾಗೂ ಅದರಲ್ಲಿದ್ದ ಇನ್ನೊಬ್ಬ ಕೂಡಿ ಶಿವರಾಮನಿಗೆ ನೋಡಲಾಗಿ ಬಲಗೈ ಹತ್ತಿರ ಬಲ ತಲೆಗೆ ಭಾರಿ ರಕ್ತಗಾಯ, ಬಾಯಿ ಮೂಗಿನಿಂದ ರಕ್ತ ಸೊರುತ್ತಿದ್ದು, ಎಡ ಮುಂಡಿಗೆ ರಕ್ತಗಾಯವಾಗಿ ನರಳಾಡುತ್ತಿದ್ದು ನೋಡಿ ಉಪಚಾರ ಕುರಿತು ಆಸ್ಪತ್ರೆಗೆ ಸೇರಿಸುವ ಸಲುವಾಗಿ ನಾನು ರಾಜಕುಮಾರ ಹಾಗು ಟಿಪ್ಪರ ಚಾಲಕ ಫಾರುಕ ಹರಸೂರ ಕೂಡಿಕೊಂಡು ಸರಕಾರಿ ಆಸ್ಪತ್ರೆ ಗುಂಡಗುರ್ತಿಗೆ ಕರೆದುಕೊಂಡು ಬರುತ್ತಿರುವಾಗ ಟಿಪ್ಪರ ಚಾಲಕ ಶಿವರಾಮ ತಂದೆ ಬಾಬು ದಂಡಗೂಲಕರ್ ಸಾ:ಚಂದರ ನಗರ ಮಾರ್ಗ ಮಧ್ಯದಲ್ಲಿಯೆ ಮೃತ ಪಟ್ಟಿರುತ್ತಾನೆ ಅಂತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಚೌಕ ಠಾಣೆ :.
ಶ್ರೀ ಪ್ರದೀಪ ತಂದೆ ವೈಜಿನಾಥ ಭಾವೆ ಸಾ|| ಬೋರಾಬಾಯಿ ನಗರ ಬ್ರಹ್ಮಪೂರ ಗುಲಬರ್ಗಾ ರವರು ನಾನು ದಿನಾಂಕ 29.07.2011 ರಂದು ಸಾಯಂಕಾಲ ನನ್ನ ಮೋಟಾರ ಸೈಕಲ ತೊಳೆಯಲು ಮೈಕಾನ ಬಾರ ಹತ್ತಿರ ಇರುವ ಸಾಯಿ ವಾಟರ ವಾಸಿಂಗ ಹತ್ತಿರ ಬಂದು ನನ್ನ ಮೋಟಾರ ಸೈಕಲ ತೊಳೆದುಕೊಳ್ಳುತ್ತಿದ್ದಾಗ ಶ್ರೀಕಾಂತ, ಶಿವ ಸಂಗಡ 7-8 ಜನರು ಕೂಡಿಕೊಂಡು ಬಂದು ಹಳೆಯ ವೈಷಮ್ಯದಿಂದ ಜಾತಿ ಎತ್ತಿ ಬೈದು ಮೊಟಾರ ಸೈಕಲ ಮೇಲೆ ಕೂಡಿಸಿಕೊಂಡು ಶ್ರೀಕಾಂತನ ಜಿಮ್ಮಿನಲ್ಲಿ ಕರೆದುಕೊಂಡು ಹೋಗಿ ರಾಡು, ಹಾಕಿಸ್ಟೀಕ ಹಾಗೂ ಬಡಿಗೆಯಿಂದ ಎಡಗೈ, ಮೊಳಕೈ, ಹೊಟ್ಟೆಗೆ ಹೊಡೆದು ಗುಪ್ತಗಾಯ ಪಡಿಸಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: