POLICE BHAVAN KALABURAGI

POLICE BHAVAN KALABURAGI

31 July 2011

GULBARGA DIST REPORTED CRIMES

ಗಂಡನ ಕಿರಕುಳ ತಾಳಲಾರದೆ ಹೆಂಡತಿ ವಿಷ ಸೇವಿಸಿ ಆತ್ಮಹತ್ಯೆ :

ಸೇಡಂ ಠಾಣೆ : ಶ್ರೀಮತಿ ನಾಗಮ್ಮಾ ಗಂಡ ಈರಣ್ಣ ಬಡಿಗೇರ ಸಾ|| ಸಣ್ಣ ಅಗಸಿ ಸೇಡಂ ರವರು ನನ್ನ ಮಗಳಾದ ರೇಣುಕಾ ಇವಳಿಗೆ ಅಳಿಯ ಪೀರಪ್ಪ ಇತನು ಸುಮಾರು 4 ತಿಂಗಳಿಂದ ಮಾನಸಿಕ ಹಾಗೂ ದೈಹಿಕ ಹಿಂಸೆ ಕೊಡುತ್ತಿದ್ದರಿಂದ ನನ್ನ ಮಗಳು ದಿನಾಂಕ: 18-7-11 ರಂದು ಮೇವು ( ಹುಲ್ಲು) ಗೆ ಹೊಡೆಯುವ ಎಣ್ಣೆ ಕುಡಿದು ಉಪಚಾರ ಹೊಂದುತ್ತಾ ದಿನಾಂಕ: 29-7-11 ರಂದು ಸಾಯಾಂಕಾಲ ಮೃತ ಪಟ್ಟಿರುತ್ತಾಳೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :

ಸಂಚಾರಿ ಠಾಣೆ : ಶ್ರೀ ಮಹಮದ್ ಹಾವೇಜ್ ತಂದೆ ಅನ್ವರ್ ಹುಸೇನ್ ವಾಲಿಬ ಸಾ: ರೆಹಮತ್ ನಗರ ಗುಲಬರ್ಗಾ ರವರು ನಾನು ಮತ್ತು ಮಹಮದ ಫಯಜ್ ಇಬ್ಬರು ಕುಡಿಕೊಂಡು ಮೋಟಾರ ಸೈಕಲ್ ನಂ: ಕೆಎ.32 ವಾಯ್ 5794 ನೇದ್ದರ ಮೇಲೆ ಖಾಜಾ ಬಂದೇ ನವಾಜ್ ದರ್ಗಾಕ್ಕೆ ದಿಂದ ಮನೆಗೆ ಮರಳಿ ಪಾಯನ್ ಗಲ್ಲಿ ರಸ್ತೆ ಮಾರ್ಗವಾಗಿ ಹೊಗುತ್ತಿರುವಾಗ ಮಹಮದ್ ಫಯಾಜ್ ಈತನು ತನ್ನ ಮೋಟಾರ ಸೈಕಲ ಅತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿ  ಒಮ್ಮೇಲೆ ಬ್ರೇಕ್ ಹಾಕಿದ ಪರಿಣಾಮ ಮೋಟಾರ ಸೈಕಲ ಸ್ಕೀಡ್ ಆಗಿ ಬಿದ್ದು ನನಗೆ ಹಾಗೂ ಫಯಾಜ್ ಇಬ್ಬರಿಗೆ ಗಾಯಗಳಾಗಿರುತ್ತೆವೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: