POLICE BHAVAN KALABURAGI

POLICE BHAVAN KALABURAGI

05 July 2011

GULBARGA DISTRICT REPORTED CRIMES

ಹಲ್ಲೆ ಪ್ರಕರಣ:

ಕುರಕುಂಟಾ ಠಾಣೆ : ಶ್ಯಾಮರಯ ತಂದೆ ರೇವಣಪ್ಪಾ ಹೈದ್ರಬಾದಿ ಸಾ|| ಯಡ್ಡಳ್ಳಿ ರವರು ನಮ್ಮ ದೊಡ್ಡಮ್ಮ ಹಾಘು ಅವರ ಮಗಳಾದ ಇಷ್ಟಮಳಿಗೆ ಹಾಗು ಸಂಬಂಧಿಕರಲ್ಲಿ ಬಾಯಿ ಮಾತಿನ ತಕರಾರು ಆಗಿತ್ತು , ನಮ್ಮ ನಮ್ಮಲ್ಲಿ ಜಗಳ ಮಾಡಿಕೊಳ್ಳುವದು ಸರಿಯಲ್ಲ ಅಂತಾ ಹೇಳಿದಕ್ಕೆ ರಾಜು ಇತನು ಅವಾಚ್ಯ ಶಬ್ದಗಳಿಂದ ಬೈದು ಹೊಡೆಬಡೆ ಮಾಡಿ ಬ್ಲೇಡ್ ನಿಂದ ರಕ್ತಗಾಯಗೊಳಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಕುರಕುಂಟಾ ಠಾಣೆ :
ಇಷ್ಟಮ್ಮ ಗಂಡ ರುಜು ಸಂದಿಮನಿ ಸಾ|| ಯಡ್ಡಳ್ಳಿ ಗ್ರಾಂ ರವರು ನಾನು ಮತ್ತು ನನ್ನ ತಾಯಿ ಹಾಗು ಚಿಕ್ಕಮ್ಮ ಭಾರತಿ ಇವರೊಂದಿಗೆ ಶ್ಯಾಮರಾಯ ಇತನು ತಕರಾರು ಮಾಡಿದ್ದು ನನ್ನ ಅವಾಚ್ಯವಾಗಿ ಬೈದು ಹೊಡೆದು ನನ್ನ ಗಂಡನಿಗೆ ಹಲ್ಲಿನಿಂದ ಹೊಡೆದು ರಕ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಅಪಘಾತ ಪ್ರಕರಣ :
ವಿಶ್ವ ವಿದ್ಯಾಲಯ ಠಾಣೆ :
ಶ್ರಿ ಸೈಯದ್ ಖಾಜಾ ನಾಸಿರೋದ್ದಿನ ತಂದೆ ನಾಸಿರೋದ್ದಿನ ತಂದೆ ಸೈಯದ್ ಖಾಜಾ ಮೈನೊದ್ದಿನ ಸಾ|| ಟಿಪ್ಪು ಸುಲ್ತಾನ ಚೌಕ ಗುಲಬರ್ಗಾ ರವರು ನನ್ನ ಅಣ್ಣನ ಮಗನಾದ ಸೈಯ್ಯದ ಖಾಜಾ ಪರಿದೊದ್ದಿನ ಇತನು ಟ್ಯೂಷನ ಮುಗಿಸಿಕೊಂಡು ಮೊಘಲ್ ಪಂಕ್ಷನ್ ಹಾಲ್ ಎದುರಿನ ರಿಂಗ ರೋಡ ಮೇಲೆ ಎಡಬದಿಯಿಂದ ಹೋರಟಾಗ ಮೋಟಾರ ರ ಸೈಕಲ ನಂಬರ ಕೆಎ 32 ಎನಟಿ ಟಿಆರ ನಂ 8289-11 ನೇದ್ದರ ಚಾಲಕ ಮಹಮದ ಹಬೀಬ ಸಾ|| ಟಿಪ್ಪು ಸುಲ್ತಾನ ಇತನು ತನ್ನ ವಾಹನವನ್ನು ಅಲಕ್ಷತನದಿಂದ ನಡೆಯಿಸಿಕೊಂಡು ಬಂದು ಡಿಕ್ಕಿ ಪಡಿಸಿರುತ್ತಾನೆ, ಡಿಕ್ಕಿ ಪಡಿಸಿದ ಪರಿಣಾಮ ಹುಡಗನಿಗೆ ರಕ್ತಗಾಐ ಮತ್ತು ಗುಪ್ತಗಾಯವಾಗಿರುತ್ತದೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ :
ಶ್ರೀ ಬಸಣ್ಣಾ ತಂದೆ ಪಾಂಡಪ್ಪಾ ಕಾಳೆ ಉ|| ಜೆ.ಟಿ.ಓ. ಬಿ.ಎಸ್.ಎನ್.ಎಲ್. ಗುಲಬರ್ಗಾ ರವರು ದಿನಾಂಕ 2/7/2011 ರಂದು 6 ಪಿ.ಎಮ್ ದಿಂದ 3/11/2011 9 ಎ.ಎಮ್ ದ ಮಧ್ಯದ ಅವಧಿಯಲ್ಲಿ ಸಾವಳಗಿ ಟೇಲಿ ಫೋನ್ ಎಕ್ಸ್ ಜೇಂಜ್ ಟವರದ 180 ಮೀಟರ್ ಕೇಬಲ್ ವೈರನ್ನು ಕಟ್ ಮಾಡಿ ಯಾರೊ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


 

No comments: