POLICE BHAVAN KALABURAGI

POLICE BHAVAN KALABURAGI

28 July 2011

GULBARGA DIST REPORTED CRIMES

ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಆರೋಪ :

ಸ್ಟೇಷನ ಬಜಾರ ಠಾಣೆ: ಶ್ರೀ. ಎಮ್.ಬಿ.ಶಾಸ್ತ್ರಿ. ಅಪರ ಜಿಲ್ಲಾಧಿಕಾರಿಗಳು ಮಿನಿ ವಿಧಾನ ಸೌಧ, ಗುಲಬರ್ಗಾ ರವರು ಆಧಾರ ಗುರುತಿನ ಚೀಟಿ ಯೋಜನೆ ಕೇಂದ್ರ ಜೋನಲ್ ನಂ 1 ನೇದ್ದಕ್ಕೆ ಬೇಟಿ ನೀಡಿದಾಗ ಶ್ರೀ. ಶರಣಯ್ಯಾ ಹಿರೇಮಠ ಎಂಬುವರು ತಮಗೆ ಸಂಬಂಧ ಇರಲಾರದ ಜನರ ಅರ್ಜಿಗಳನ್ನು ತಂದು ಆಧಾರ ನೊಂದಣಿ ಮಾಡಲು ಅಲ್ಲಿದ್ದ ಸಿಬ್ಬಂದಿಯವರಿಗೆ ಒತ್ತಾಯಿಸುತಿದ್ದು ಹಾಗೂ ಅವರನ್ನು ಅವಾಚ್ಯ ಶಬ್ದಗಳಿಂದ ಬೈದು ನಿಂದಿಸುತ್ತಿರುವದು ನನ್ನ ಗಮನಕ್ಕೆ ಬಂತು, ಸದರಿಯವನಿಗೆ ವಿಚಾರಿಸಲಾಗಿ ತಾನು ನೀರಾವರಿ ಇಲಾಖೆಯ ಸಿಬ್ಬಂದಿ ಇರುವದಾಗಿ ಹೇಳಿಕೊಂಡಿದ್ದು, ನಾನು ಆಧಾರ ನೊಂದಣಿ ಮಾಡಿಸಿಕೊಳ್ಳಲು ಬಂದಿರುವದಾಗಿ ಹೇಳಿಕೆ ನೀಡಿರುತ್ತಾರೆ, ಆದರೆ ಆಧಾರ ಕೇಂದ್ರದಲ್ಲಿ ಇವರ ಹೆಸರಿನ ಯಾವುದೆ ಅರ್ಜಿಯು ನೊಂದಣಿ ಆಗಿರುವದಿಲ್ಲಾ , ಇವರು ಜನರಿಂದ ಹಣ ಪಡೆದು ದಿನಾಲು ಇದೆ ರೀತಿ ಕೇಂದ್ರಕ್ಕೆ ಬಂದು ತೊಂದರೆ ಕೊಡುತ್ತಾರೆ ಅಂತ ಅಲ್ಲಿನ ಸಿಬ್ಬಂದಿ ತಿಳಿಸಿರುತ್ತಾರೆ, ಈ ವ್ಯಕ್ತಿಯು ಸರಕಾರಿ ಕೆಲಸದಲ್ಲಿ ಅಡಚಣೆ ಉಂಟು ಮಾಡಿ, ಸಿಬ್ಬಂದಿ ಜನರಿಗೆ ಹೆದರಿಸುವದು ಮಾಡುತ್ತಿದ್ದಾನೆ ಅಂತಾ ಅಪರ ಜಿಲ್ಲಾಧಿಕಾರಿಗಳು ಲಿಖಿತ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆಂದಿ ಜಪ್ತಿ ಪ್ರಕರಣ :
ಸೇಡಂ ಠಾಣೆ
: ದಿನಾಂಕ: 28-7-11 ರಂದು  ಮುಂಜಾನೆ ಬಸವ ನಗರ ತಾಂಡಾದಲ್ಲಿ ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದ ಮಾಹಿತಿ ಬಂದ ಮೇರೆಗೆ ಪಿ.ಎಸ.ಐ ಹಾಗು ಸಿಬ್ಬಂದಿ ಹಾಗೂ ಪಂಚರೊಂದಿಗೆ ಆ ಸ್ಥಳಕ್ಕೆ ಹೋಗಿ ನೋಡಲಾಗಿ ಪ್ರಕಾಶ ತಂದೆ ಬಾಬುಸಿಂಗ ಚವ್ಹಾಣ ಸಾ|| ಬಸವನಗರ ಸೇಡಂ ರವರು ಅಕ್ರಮ ಸೆಂದಿ ಮಾರಾಟ ಮಾಡುತ್ತಿದ್ದು ಅವನನ್ನು ವಶಕ್ಕೆ ತೆಗೆದುಕೊಂಡು ಅವನಿಂದ 150 ಲೀಟರ ಸೆಂದಿ ಜಪ್ತಿ ಮಾಡಿಕೊಂಡಿದ್ದರಿಂದ ಸೇಡಂ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ :
ಗ್ರಾಮೀಣ ಠಾಣೆ
:
ಶ್ರೀ ರಾಮಚಂದ್ರ ತಂದೆ ಮಾಹಾದೇವಪ್ಪ ಹರಸೂರ ಸಾ: ಆಲಗೂಡ ಗ್ರಾಮ ರವರು ನಾವು 4 ಜನ ಅಣ್ಣ ತಮ್ಮಂದಿರರಿದ್ದು, ನಾವು ಬೇರೆಯಾಗಿ 4 ವರ್ಷವಾಗಿದ್ದು, ಬೇರೆಯಾಗುವ ಸಮಯದಲ್ಲಿ 25,000/-ರೂಯಪಾಯಿಗಳು ಇತ್ತು ಆ ಹಣ ಎಲ್ಲಾ ಅಣ್ಣ ತಮ್ಮಂದಿರಿಗೆ ಸಮನಾಗಿ ಕೊಡುತ್ತೇನೆ ಅಂತಾ ಹೇಳಿದ್ದು, ನನಗೆ ಕೊಡಬೇಕಾದ ಹಣ ಕೊಡು ಅಂತಾ ಕೇಳಲು ಹೋದಾಗ ನನ್ನ ತಮ್ಮ & ಅವನ ಹೆಂಡತಿ ಇಬ್ಬರೂ ಅವ್ಯಾಚ್ಛವಾಗಿ ಬೈದು ಕೈಯಿಂದ ಹೊಡೆ ಬಡೆ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: