POLICE BHAVAN KALABURAGI

POLICE BHAVAN KALABURAGI

29 July 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಮಳಖೇಡ ಠಾಣೆ:
ದೇವಿಂದ್ರಪ್ಪ ತಂದೆ ಕರೆಪ್ಪ ಸಿಂಗೆನವರ ಸಾ|| ಹಂಗನಳ್ಳಿ ತಾ|| ಸೇಡಂ ರವರು ನಾನು ಹೊಲ ಕಡತ ಹಾಕಿಕೊಂಡ ಗುರುಲಿಂಗಪ್ಪ ಗೌಡರ ಹೊಲದಲ್ಲಿ ಕೆಲಸ ಮಾಡುತ್ತ ಇದ್ದಾಗ ಸಾಯಂಕಾಲ ಸುಮಾರಿಗೆ ಮರೆಪ್ಪ ತಂದೆ ಪೀರಪ್ಪ ಕಲಕಂಬದವರ ಸಾ|| ಹಂಗನಳ್ಳಿ ಇತನು ತನ್ನ ದನಗಳನ್ನು ಮೇಯಿಸುತ್ತಾ ಹೋಲದಲ್ಲಿ ಬಂದಾಗ ನಮ್ಮ ಹೊಲದಲ್ಲಿ ಯಾಕೆ ದನಗಳನ್ನು ಹೊಡೆದುಕೊಂಡು ಹೊರಟಿದ್ದಿ ಅಂತ ಕೆಳಿದ್ದಕ್ಕೆ ಮರೆಪ್ಪಾ ಇತನು ಅವಾಚ್ಯವಾಗಿ ಬೈದು ತನ್ನ ಹತ್ತಿರ ಇದ್ದ ಕೊಡಲಿಯಿಂದ ಎಡಗೈ ಮೊಳಕೈ ಹತ್ತಿರ ಕೊಡೆದು ರಕ್ತ ಗಾಯಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  

ಹಲ್ಲೆ ಪ್ರಕರಣ:

ಅಶೋಕ ನಗರ ಠಾಣೆ : ಶ್ರೀ ಮಾಣಿಕರೆಡ್ಡಿ ತಂದೆ ಗುಂಡಾರೆಡ್ಡಿ ಅನಂತರೆಡ್ಡಿ ಸಾ: ಕರುಣೇಶ್ವರ ನಗರ ಗುಲಬರ್ಗಾ ರವರು ನಾನು ದಿನಾಂಕ: 28-7-2011 ರಂದು ಬೆಳಿಗ್ಗೆ ಕೇಂದ್ರ ಬಸ್ಸ ನಿಲ್ದಾಣದ ಎದುರುಗಡೆ ಇರುವ ಕಮಲ ಹೋಟಲ ಎದುರಿನ ರೋಡಿನ ಮೇಲೆ ನಿಂತಾಗ ರಾಜೇಶ ಮತ್ತು ಇನ್ನು ಇಬ್ಬರು ಬಂದು ಪ್ಲಾಟ ಮಾರಾಟದ ಹಣದ ವಿಷಯದಲ್ಲಿ ನನ್ನ ಎದೆಯ ಮೇಲಿನ ಅಂಗಿ ಹಿಡಿದು ಕೈಯಿಂದ ತಲೆಗೆ ಮತ್ತು ನನ್ನ ಬಲಗಡೆ ಕಾಲಿನ ಟೊಂಕಿನ ಮೇಲೆ ಒದ್ದು ಗುಪ್ತ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಠಾಣೆ : ಶ್ರೀ ರಾಜಶೇಖರ ತಂದೆ ಸಂಗಣ್ಣಪ್ಪ ಉಪ್ಪಿನ ಗುಲಬರ್ಗಾ   ರವರು ನಾನು ದಿನಾಂಕ: 27-07-2011 ರಂದು ಬೆಳಗ್ಗೆ  ಐವಾನ ಈ ಶಾಹಿ ರೋಡಿನಲ್ಲಿರುವ ಕುವೇಂಪು ನಗರ ಕ್ರಾಸ್ ಹತ್ತಿರ ಅಟೋರೀಕ್ಷಾ ನಂ:ಕೆಎ 32 ಎ 8295 ನೇದ್ದರ ಚಾಲಕ ತನ್ನ ಅಟೋವನ್ನು ಅತಿವೇಗವಾಗಿ & ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಟಿ.ವಿ.ಎಸ್.ಮೇಲೆ ನಂ: ಕೆಎ 32 ವಿ 2146 ನೆದ್ದರ ಮೇಲೆ ಬರುತ್ತಿದ್ದ ಸಿದ್ದಣ್ಣ ಮೇಳಕುಂದಿ ಇವರಿಗೆ ಎದುರಿನಿಂದ ಡಿಕ್ಕಿ ಪಡಿಸಿ ತನ್ನ ಅಟೊರೀಕ್ಷಾ ಸ್ಥಳದಲ್ಲಿಯೇ ಬಿಟ್ಟು ಓಡಿಹೋಗಿರುತ್ತಾನೆ. ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

ಅಪಹರಣ ಪ್ರಕರಣ:
ಗ್ರಾಮೀಣ ಠಾಣೆ.
ಶ್ರೀ ಶಿವಶರಣಪ್ಪಾ ತಂದೆ ಸಾಯಿಬಣ್ಣಾ ಬೆಳಕೋಟಾ ಸಾ; ಭೀಮನಗರ ರಾಮನಗರ ಕಾಲೂನಿ ರಿಂಗರೋಡ ಗುಲಬರ್ಗಾ ರವರು ನನ್ನ ಇಬ್ಬರು ಮಕ್ಕಳಾದ ಪುಷ್ಪಾ 15 ವರ್ಷ ಮತ್ತು ಅಂಬಿಕಾ 11 ವರ್ಷ ಇಬ್ಬರು ರಾಮ ನಗರದಲ್ಲಿರುವ ಶಿವಲಿಂಗೇಶ್ವರ ಹಿರಿಯ ಪ್ರಾರ್ಥಮಿಕ ಶಾಲೆಯ ಹತ್ತಿರ ಗೋಗುತ್ತಿರುವಾಗ ಶಿವಕುಮಾರ ತಂದೆ ಸಿದ್ದಪ್ಪಾ ಶಿಲ್ಡ ಇತನು ಬಂದು ನನ್ನ ಮಗಳು ಅಪ್ರಾಪ್ತ ಬಾಲಕಿ ಪುಷ್ಪಾ ಇವಳಿಗೆ ದಿನಾಂಕ. 27-07-2011 ರಂದು ಮುಂಜಾನೆ ಜಬರ ದಸ್ತಿಯಿಂದ ಕಾರಿನಲ್ಲಿ ಅಪಹರಿಸಿಕೊಂಡು ಹೋಗಿರುತ್ತಾನೆ. ಅಪಹರಿಸಿಕೊಂಡು ಹೋಗಲು ಆತನ ಹೆಂಡತಿ ರಮಾಬಾಯಿ , ತಂದೆಯಾದ ಸಿದ್ದಪ್ಪಾ ಶಿಲ್ಡ ತಾಯಿ ಮಹಾದೇವಿ ಹಾಗು ಕಾರ ಚಾಲಕ ಇವರು ಅಪಹರಿಸುವದಕ್ಕೆ ಸಹಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ: ದಾಖಲಾಗಿದೆ.

ಅಫಘಾತ ಪ್ರಕರಣ:

ಗ್ರಾಮೀಣ ಠಾಣೆ  :   ಶ್ರೀ ಮಲ್ಲೇಶಿ ತಂದೆ ಸಾಬಣ್ಣ ಬುಡಗ ಜಂಗಮ ಸಾ: ದಂಡೋತಿ ತಾ: ಚಿತ್ತಾಪೂರ ರವರು ನಾನು ನನ್ನ ಹೆಂಡತಿ ಶಾಂತಮ್ಮ ಹಾಗು ಮಗ ಆಕಾಶ ಕೂಡಿಕೊಂಡು ದಿನಾಂಕ 28-7-11 ರಂದು ಮಧ್ಯಾಹ್ನ ಚಿಂಚೋಳಿ ಕ್ರಾಸ ಹತ್ತಿವಿರುವ ವೀರಭದ್ರಶ್ವೇರ ಗುಡಿಯ ಎದುರಿನ ರಸ್ತೆಯಲ್ಲಿ ಹೊರಟಿದ್ದು, ಆಳಂದ ಚೆಕ್ಕ ಪೋಸ್ಟ ಕಡೆಯಿಂದ ಆಟೋ ಕೆಎ 32 ಎ 8502 ನೇದ್ದರ ಚಾಲಕ ಅತಿವೇಗ ಮತ್ತು ನಿರ್ಲಕ್ಷತನದಿಂದ ಹಾಗೂ ಅಡ್ಡಾ ತಿಡ್ಡಿ ನಡೆಸುತ್ತಾ ಬಂದವನೇ ರೋಡ ಬದಿ ಹೊರಟ ನನ್ನ ಮಗ ಆಕಾಶನಿಗೆ ಡಿಕ್ಕಿ ಹೊಡೆದು ಗುಪ್ತಗಾಯ ಪಡಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಮೇರೆಗೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: