POLICE BHAVAN KALABURAGI

POLICE BHAVAN KALABURAGI

14 July 2011

GULBARGA DIST REPORTED CRIMES

ಕಳ್ಳತನ ಪ್ರಕರಣ:

ರಾಘವೇಂದ್ರ ನಗರ ಠಾಣೆ : ಶ್ರೀ ಮುಸದ್ದಿಕ ಪಟೇಲ್ ತಂದೆ ಇಬ್ರಾಹಿಂ ಪಟೇಲ್ ರವರು ನಾನು ದಿನಾಂಕ 01-07-2011 ರಿಂದ ದಿನಾಂಕ 04-07-2011 ರ ಅವಧಿಯಲ್ಲಿ ಮನೆಯ ಅಲಮಾರಲ್ಲಿಟ್ಟಿದ್ದ ಬಂಗಾರದ ಆಭರಣಗಳು ಹಾಗು ನಗದು ಹಣ 15,000/-ರೂಪಾಯಿ ಒಟ್ಟು 1,71,800/-ರೂಪಾಯಿಗಳದ್ದು ಕಳ್ಳತನವಾಗಿರುತ್ತದೆ. ಸದರಿ ಆಭರಣಗಳು ಹಾಗು ನಗದು ಹಣ ಮನೆಯಲ್ಲಿ ಕೆಲಸ ಮಾಡುವಾಕೆ ರಾಬಿಯಾ ತಂದೆ ಖಾಸಿಂಸಾಬ ಮೇಲೆ ಸಂಶಯವಿರುತ್ತದೆ. ಅಂತ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಲ್ಲೆ ಪ್ರಕರಣ:
ವಿಶ್ವ ವಿದ್ಯಾಲಯ ಠಾಣೆ
: ಶ್ರೀ ಅಜ್ಮೀರ ಪಟೇಲ ತಂದೆ ಅಬ್ದುಲ ಖಾದೀರ ಪಟೇಲ ಸಾ|| ಗುಲಷನ ಅರಾಫತ ಕಾಲೋನಿ ಗುಲಬರ್ಗಾ ಇತನು ದಿನಾಂಕ: 13-07-2011 ರಂದು ಮದ್ಯಾಹ್ನ ಮನೆಯ ಮುಂದೆ ನಿಂತು ಬಾಜು ಮನೆಯವರಾದ ಅಲ್ಲಾ ಪಟೇಲ ತಂದೆ ಖಾದೀರ ಪಟೇಲ ಮತ್ತು ಆತನ ಮಗನಾದ ಶಬ್ಬೀರ ಇವರಿಗೆ ನಿಮ್ಮ ಮನೆಯ ಬಚ್ಚಲು ನೀರು ನಮ್ಮ ಮನೆಯ ಬಾಗಲಿಗೆ ಬಂದು ಬಹಳ ತೊಂದರೆಯಾಗುತ್ತಿದೆ ತಗ್ಗು ತೊಡಿಕೊಳ್ಳಿ ಅಂದಿದ್ದಕ್ಕೆ ಅವರಿಬ್ಬರೂ ಈ ಭೋಸಡಿ ಮಗನದು ಬಹಳ ಸೊಕ್ಕು ಬಂದಿದೆ ಅಂತಾ ಅವಾಚ್ಯವಾಗಿ ಬೈದು ಶಬ್ಬಿರ ಕಟ್ಟೆಗೆಯಿಂದ ನನಗೆ ಎಡಗಾಲಕ್ಕೆ ಹೊಡೆದು ಗುಪ್ತ ಗೊಳಿಸಿದನು ಮತ್ತು ಅಲ್ಲಾ ಪಟೇಲ ಕೈಯಿಂದ ಹೊಡೆದಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಡಿತರ ಚೀಟಿಯವರಿಗೆ ವಿತರಣೆ ಮಾಡಬೇಕಾದ ಸೀಮೆ ಎಣ್ಣೆ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸರ ದಾಳಿ :

ಚೌಕ ಠಾಣೆ : ಸರ್ಕಾರಿ ತರ್ಪೆಯಾಗಿ ಶ್ರೀ ವೀರೇಶ ಪಿಐ ಚೌಕ ಠಾಣೆ ರವರು ನಿನ್ನೆ ಮಧ್ಯಾಹ್ನ ನೆಹರು ಗಂಜ ಭವಾನಿ ನಗರದಲ್ಲಿ ಫಲಾನುಭವಿಗಳಿಗೆ ಪಡಿತರ ಚೀಟಿಯ ಮೇಲೆ ವಿತರಿಸಬೇಕಾದ ಸೀಮೆ ಎಣ್ಣೆಯನ್ನು ಸಂತೋಷ ಖೋಬಾ ಸಾಃ ಗುಲಬರ್ಗಾ, ವೀರಪಾಕ್ಷಯ್ಯ ಮಠಪತಿ ಸಾಃ ಗುಲಬರ್ಗಾ ಶ್ರೀನಿವಾಸ ತಂದೆ ಶರಣಪ್ಪ ಪೂಜಾರಿ ಸಾಃ ಚೆನ್ನವೀರ ನಗರ ಗುಲಬರ್ಗಾ,, ಸಂತೊಷ ಮೋಹನರಾವ ಕುಲಕರ್ಣಿ ಸಾಃ ಭವಾನಿ ನಗರ ಗುಲಬರ್ಗಾ ರಾಜು ತಂದೆ ಮಲ್ಲಿಕಾರ್ಜುನ ಪೂಜಾರಿ ಸಾಃ ಭವಾನಿ ನಗರ ಗುಲಬರ್ಗಾ, ಅನಿಲ ತಂದೆ ಅಶೋಕ ಪೂಜಾರಿ ಸಾಃ ಭವಾನಿ ನಗರ ರವರು ಕಾಳೆ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದಾಗ ಅವರ ಮೇಲೆ ದಾಳಿ ಮಾಡಿ ಅವರಿಂದ 8.5 ಬ್ಯಾರಲ ಸೀಮೆ ಎಣ್ಣೆ ಅಃಕಿಃ 24450/- , ನಗದು ಹಣ 24640/-, ಹಾಗು ಸೀಮೆ ಎಣ್ಣೇ ಮಾರಾಟ ಮಾಡುವ ಮಾಪನಗಳು ಜಪ್ತಿ ಮಾಡಿ ಆರೋಪಿತರ ವಿರುದ್ದ ಕಾನೂನು ಕ್ರಮ ಜರೂಗಿಸಿಲಾಗಿದೆ .

ಪಡಿತರ ಚೀಟಿಯವರಿಗೆ ವಿತರಣೆ ಮಾಡಬೇಕಾದ ಸೀಮೆ ಎಣ್ಣೆ, ಕಾಳ ಸಂತೆಯಲ್ಲಿ ಮಾರಾಟ ಮಾಡುತ್ತಿರುವವರ ಮೇಲೆ ಪೊಲೀಸರ ದಾಳಿ :

ಗ್ರಾಮೀಣ ಪೊಲೀಸ ಠಾಣೆ : ಮಾನ್ಯ ಎಸ್.ಪಿ. ಗುಲಬರ್ಗಾ, ಅಪರ ಎಸ್.ಪಿ. ಗುಲಬರ್ಗಾ ಮತ್ತು ಮಾನ್ಯ ಡಿ.ಎಸ್.ಪಿ. (ಗ್ರಾ) ಉಪವಿಭಾಗ, ಮಾನ್ಯ ಸಿಪಿಐ ಗ್ರಾಮೀಣ ವ್ರತ್ತ ರವರ ಮತ್ತು ಶ್ರೀ ರವಿ ಡಿ.ಸಿ. ಐ.ಪಿ.ಎಸ್. (ಪ್ರೊ) ರವರ ಮಾರ್ಗದರ್ಶನದಲ್ಲಿ ಇಬ್ಬರು ಪಂಚರನ್ನು ಮತ್ತು ಸಿಬ್ಬಂದಿಯವರಾದ ರವರನ್ನು ಜೊತೆಯಲ್ಲಿ ಕರೆದುಕೊಂಡು ಹುಮನಾಬಾದ ರಿಂಗ ರೋಡ ಕ್ರಾಸಿನ ರಾಜು ರೆಡ್ಡಿ ಕಾಂಪ್ಲೆಕ್ಸ ಎದುರುಗಡೆ ಒಬ್ಬನು ಸೀಮೆ ಎಣ್ಣೆಯ ಎರಡು ಬಾರಲ ಇಟ್ಟುಕೊಂಡು, ಪೈಪು ಮುಖಾಂತರವಾಗಿ ಬ್ಯಾರೆಲದಿಂದ ಸೀಮೆ ಎಣ್ಣೆ ಹೊರ ತೆಗೆದು ಒಂದು ಲೀಟರ ಮಾಪ ಮತ್ತು ನಳಿಕೆ ಇಟ್ಟುಕೊಂಡು ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದನ್ನು ನೋಡಿ ಖಚಿತಪಡಿಸಿಕೊಂಡು, ದಾಳಿ ಮಾಡಲು ಸೀಮೆ ಎಣ್ಣೆ ಮಾರಾಟದಲ್ಲಿ ತೊಡಗಿದ ವ್ಯಕ್ತಿಯ ಹೆಸರು ವಿಳಾಸ ವಿಚಾರಿಸಲೂ ಅವನು ತನ್ನ ರಾಜು ತಂದೆ ಶಾಮರಾವ ರೋಣದ ವ:46 ವರ್ಷ ಉ:ವ್ಯಾಪರ ಸಾ: ಕೆ.ಐ.ಜಿ.ಡಿ. ಆಫೀಸ ಹತ್ತಿರ ಬಂಬು ಬಜಾರ ಗುಲಬರ್ಗಾ ಅಂತಾ ತಿಳಿಸಿದೆನು. ಅವನಿಗೆ ಲೈಸನ್ಸ ಕೇಳಲಾಗಿ ಅವನು ತನ್ನ ಹತ್ತಿರ ಯಾವುದೇ ಲೈಸನ್ಸ ಇರುವುದಿಲ್ಲಾ ಎಂದು ತಿಳಿಸಿದನು. ಶೆಟರ ಅಂಗಡಿಯ ಮುಂದೆ ಇಟ್ಟ ಒಂದು ಕೆಂಪು ಬಣ್ಣದ 200 ಲೀಟರ ಒಂದು ಕಬ್ಬಿಣದ ಬ್ಯಾರಲ ಅಂದಾಜ 30 ಸೀಮೆ ಎಣ್ಣೆ ಇರುತ್ತದೆ. ಅ:ಕಿ: 660 ರೂ. ಇನ್ನೊಂದು ನೀಲಿ ಬಣ್ಣದ 200 ಲೀಟರ ಒಂದು ಕಬ್ಬಿಣದ ಬ್ಯಾರಲ ಇದ್ದು ಅಂದಾಜ 150 ಸೀಮೆ ಎಣ್ಣೆ ಇರುತ್ತದೆ. ಅ:ಕಿ: 3300 ರೂ. ಅಗುತ್ತಿದ್ದು, ಒಂದು ಉದ್ದನೆಯ ಪ್ಲಾಸ್ಟಿಕ ಒಂದು ಮಾಪನ (ಸೀಮೆ ಎಣ್ಣೆ ಅಳೆಯವುದು) ಮತ್ತು ಸೀಮೆ ಎಣ್ಣೆ ಮಾರಾಟದಿಂದ ಬಂದ ನಗದು ಹಣ 605 ರೂ. ಆರೋಪಿತನ ಕಡೆಯಿಂದ ಜಪ್ತಿ ಮಾಡಿಕೊಂಡಿದ್ದರ ಮೇರೆಗೆ ಆರೋಪಿತನ ವಿರುದ್ದ ಕಾನೂನು ಕ್ರಮ ಜರೂಗಿಸಲಾಗಿದೆ.

ಅಪಘಾತ ಪ್ರಕರಣ ಒಂದು ಸಾವು ಇತರರಿಗೆ ಗಾಯ :

ಕಮಲಾಪೂರ ಪೊಲೀಸ ಠಾಣೆ :ಶ್ರೀ ರವಿ ತಂದೆ ಬಸಪ್ಪಾ ತಳಕೇರಿ ಸಾಃ ಹೂವಿನ ಹಳ್ಳಿ ತಾಃ ಅಫಜಲಪೂರ ರವರು ನಾವು ಚಿದಾನಂದ ಕೂಡಿಕೊಂಡು ದಿನಾಂಕ: 13/07/2011 ರಂದು ಸಾಯಂಕಾಲ ನಂದೂರ ಇಂಡಿಯನ್ ಆಯಿಲ್ ಡೀಪೂದಿಂದ ಡಿಸೇಲ್ ಟ್ಯಾಂಕರ ನಂ.ಕೆಎ:39-450 ನೇದ್ದರಲ್ಲಿ ಡಿಸೇಲ್ ಲೋಡ ಮಾಡಿಕೊಂಡು ಗುಲಬರ್ಗಾದಿಂದ ಬಿಟ್ಟು ಹುಮನಾಬಾದ ಮಾರ್ಗವಾಗಿ ಬಸವ ಕಲ್ಯಾಣಕ್ಕೆ ರಾಷ್ಟ್ರೀಯ ಹೆದ್ದಾರಿ ನಂ. 218 ನೇದ್ದರ ರೋಡ ಮುಖಾಂತರ ಹೊರಟಿದ್ದು. ಮರಗುತ್ತಿ ಕ್ರಾಸ ದಾಟಿ ಚಾಂದ ಪಾಶಾ ಇತನ ಚಹಾ ಹೋಟೆಲ ಹತ್ತಿರ ರೋಡಿನ ಮೇಲೆ ಹೋಗುತ್ತಿರುವಾಗ ಸಾಯಂಕಾಲ 6-00 ಗಂಟೆಯ ಸುಮಾರಿಗೆ ಎದುರುಗಡೆಯಿಂದ ಲಾರಿ ನಂ. ಕೆಎ:32-9798 ನೇದ್ದರ ಚಾಲಕನಾದ ಅಬ್ದುಲ ಮುಜೀಬ @ ಮಜೀದ ತಂದೆ ಖಾಜಿ ಅಬ್ದುಲ್ ರಹೀಮ್ ಇತನು ತನ್ನ ಲಾರಿಯನ್ನು ಅತೀವೇಗ ಮತ್ತು ಅಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ನಮ್ಮ ಟ್ಯಾಂಕರದ ಮುಂದಿನ ಭಾಗಕ್ಕೆ ಡಿಕ್ಕಿ ಹೊಡೆದು ರೋಡಿನ ಎಡಗಡೆ ಇರುವ ಹೊಲದ ಕಡೆಗೆ ಹೋಗಿ ರೋಡಿನ ಬದಿಯಲ್ಲಿರುವ ಮರಕ್ಕೆ ತಗುಲಿ ಒಂದಕ್ಕೊಂದು ಅಂಟಿಕೊಂಡು ನಿಂತಿರುತ್ತವೆ. ಅಪಘಾತದಲ್ಲಿ ನನಗೆ, ಚಿದಾನಂದ ಮತ್ತು ಲಾರಿ ಚಾಲಕ ಅಬ್ದುಲ ಮುಜೀಬ ಎಲ್ಲರಿಗೂ ರಕ್ತಗಾಯ ಮತ್ತು ಗುಪ್ತಗಾಯವಾಗಿದ್ದು ಇರುತ್ತದೆ. ಲಾರಿಯಲ್ಲಿ ಕುಳಿತ ಲಾರಿ ಮಾಲಿಕನಾದ ದಸ್ತಗಿರಿ ತಂದೆ ಮಹಿಬೂಬಸಾಬ ಸಾಃ ಎಂ.ಎಸ್.ಕೆ.ಮಿಲ್ ಗುಲಬರ್ಗಾ ಇವರು ಲಾರಿ ಮತ್ತು ಟ್ಯಾಂಕರ ನಡುವೆ ಸಿಕ್ಕಿ ಬಿದ್ದು ಭಾರಿ ರಕ್ತಗಾಯ ಹೊಂದಿ ಸ್ಥಳದಲ್ಲಿಯೇ ಮೃತಪಟ್ಟಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: