POLICE BHAVAN KALABURAGI

POLICE BHAVAN KALABURAGI

09 July 2011

GULBARGA DIST REPORTED CRIMES


ಆಳಂದ ಪೊಲೀಸ್ ರ ಕಾರ್ಯಚರಣೆ ಘಟೆನ ನಡೆದ 6 ಗಂಟೆಗಳಲ್ಲಿ ದರೋಡೆ ಯತ್ನ ಮತ್ತು ಅಕ್ರಮ ಪಿಸ್ತೂಲ್‌ ಸಾಗಾಣಿಕೆದಾರರ ಬಂಧನ - 5 ಪಿಸ್ತೂಲ್‌ ವಶ

ಆಳಂದ ಮತ್ತು ಅಫಜಲಪೂರ ತಾಲ್ಲೂಕಗಳಲ್ಲಿ ಹಲವು ಕೊಲೆ, ಅಪಹರಣ, ಮತ್ತು ಅನಧೀಕೃತ ಪಿಸ್ತೂಲ್‌ಗಳ ಮಾರಾಟದಲ್ಲಿ ಭಾಗಿಯಾಗಿ, ತಾಲ್ಲೂಕಿನಲ್ಲಿ ಭಯಗ್ರಸ್ಥ ವಾತಾವರಣಕ್ಕೆ ಕಾರಣಕೃತನಾದ ಹಂತಕ ಚಂದಪ್ಪ ಹರಿಜನ ಈತನ ಸಹಚರ ಖಜೂರಿ ಕರೀಮ್‌ನನ್ನು ದರೋಡೆ ಯತ್ನ ನಡೆದ 6 ಗಂಟೆಗಳಲ್ಲಿ ಮಿಂಚಿನ ಕಾರ್ಯಾಚರಣೆ ನಡೆಸಿ ಬಂಧಿಸುವಲ್ಲಿ ಆಳಂದ ಪೊಲೀಸ್‌‌ರು ಯಶಸ್ವಿಯಾಗಿದ್ದಾರೆ,

ಇಂದು ಬೆಳಗಿನ ಜಾವಾ ಆಳಂದ - ಉಮರ್ಗಾ ರಸ್ತೆಯಲ್ಲಿ ಖಜೂರಿ ಕರೀಮ ಈತನು ತನ್ನ ಸಹಚರರೊಂದಿಗೆ ಶಸ್ತ್ರ ಸಜ್ಜಿತನಾಗಿ ರಸ್ತೆ ದರೋಡೆಗೆ ಪ್ರಯತ್ನಿಸುತ್ತಿರುವ ಬಗ್ಗೆ ಖಚಿತ ಬಾತ್ಮಿ ಬಂದ ಮೇರೆಗೆ ಆಳಂದ ಪೊಲೀಸ್‌ರು ಮಿಂಚಿನ ಕಾರ್ಯಾಚರಣೆ ನಡೆಸಿ ಸ್ಥಳ್ಕಕ್ಕೆ ಧಾಮಿಸಿ 3 ಜನ ಆರೋಪಿತರಾದ 1) ಅಬು ಉಮಮ್ ತಂದೆ ಅಬ್ದುಲ ಸಮದ್‌ ತುರ್ಕಿ, ಸಾ:ಬಿಜಾಪೂರ, 2) ಶಂಕರ ತಂದೆ ಶಿವಶರಣಪ್ಪ ಹಡಪದ, ಸಾ:ಆಳಂದ, 3) ಲಕ್ಷ್ಮಣ @ ಪಪ್ಪು ಜಮಾದಾರ ಸಾ:ಮುಸ್ತಿ, ಜಿ:ಸೋಲ್ಲಾಪೂರ ಇವರನ್ನು ದಸ್ತಗಿರಿ ಮಾಡಿ 2 ಪಿಸ್ತೂಲ್‌, 4 ಜೀವಂತ ಗುಂಡುಗಳು, ಒಂದು ಕಬ್ಬಿಣದ ರಾಡು ಮತ್ತು ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ ಕಾರನ್ನು ವಶಪಡಿಸಿಕೊಂಡಿರುತ್ತಾರೆ.

ಈ ವೇಳೆಯಲ್ಲಿ ಇನ್ನೂಳಿದ 2 ಆರೋಪಿತರು 1) ಅಬ್ದುಲ ಕರೀಂ ತಂದೆ ಹಮೀದಸಾಬ ಮುರೋಳ್ಳಿ @ ಖಜೂರಿ ಕರೀಂ, 2) ಮೂಸಾ ತಂದೆ ಅಬ್ದುಲ ಶಕೂರ ಶಾಣೂರಕರ, ಸಾ:ಸೊಲ್ಲಾಪೂರ, ಇವರು ಪರಾರಿಯಾಗಿ ಓಡಿ ಹೋಗಿದ್ದು, ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸ್‌ರು ಚಾಣಾಕ್ಷತನದಿಂದ ಕೇವಲ 6 ಗಂಟೆ ಅವಧಿಯಲ್ಲಿ ಆಳಂದ-ಉಮರ್ಗಾ ಬಾರ್ಡರ ಸಮೀಪ ಅವರನ್ನು ಹಿಡಿದು ಇನ್ನೂ 3 ಅಕ್ರಮ ಪಿಸ್ತೂಲು ಮತ್ತು ಗುಂಡುಗಳನ್ನು ವಶಪಡಿಸಿಕೊಂಡಿರುತ್ತಾರೆ.

ಈ ಪ್ರಕರಣದಲ್ಲಿ ಭಾಗಿಯಾದ ಮುಖ್ಯ ಆರೋಪಿ ಅಬ್ದುಲ ಕರೀಂ @ ಖಜೂರಿ ಕರೀಂ ಈತನು ಹಲವು ಕೊಲೆ, ಅಪಹರಣ, ಮತ್ತು ಅ್ರಕಮ ಶಸ್ತ್ರಾಸ್ತಗಳನ್ನು ಕೊಲೆ ಮತ್ತು ದರೋಡೆ ಮಾಡುವುದಕ್ಕೆ ಸರಬರಾಜು ಮಾಡುವ ಕುಖ್ಯಾತಿ ಹೊಂದಿದ್ದಾನೆ. ಈತನು ಈ ಹಿಂದೆ ಭೀಮಾ ತೀರದ ಹಂತಕ ಚಂದಪ್ಪ ಹರಿಜನನ ಸಹಚರನೂ ಆಗಿದ್ದನು. ಹಾಗು ಗುಲಬರ್ಗಾ ಜಿಲ್ಲೆಯ ಆಳಂದ, ಅಫಜಲಪೂರ ಮತ್ತು ಬಿಜಾಪೂರ ಜಿಲ್ಲೆಯ ಇಂಡಿ ತಾಲ್ಲೂಕಾ ಹಾಗು ಸೊಲ್ಲಾಪೂರ ಜಿಲ್ಲೆಯ ಉಮರ್ಗಾ, ಅಕ್ಕಲಕೋಟ, ತಾಲ್ಲೂಕುಗಳಲ್ಲಿ ಅಕ್ರಮವಾಗಿ ಮದ್ದು ಗಂಡು ಮತ್ತು ಆಯುಧ ಸರಬರಾಜು ಮಾಡುವವನಾಗಿದ್ದು, ಈತನ ಮೇಲೆ ಈ ಕೆಳಗಿನಂತೆ ಪ್ರಕರಣಗಳು ಇರುತ್ತವೆ.

1) ನರೋಣಾ ಪೊಲೀಸ್‌ ಠಾಣೆ ಗುನ್ನೆ ನಂ. 25/11 ರಲ್ಲಿ ಕಡಗಂಚಿ ಆರೋಪಿತರಿಗೆ 3 ಅಕ್ರಮ ಪಿಸ್ತೂಲ್‌ ಮತ್ತು ಮದ್ದು ಗುಂಡುಗಳನ್ನು ಒದಗಿಸಿರುವುದು.

2) ನರೋಣಾ ಪೊಲೀಸ್‌ ಠಾಣೆ ಗುನ್ನೆ ನಂ.64/11 ರಲ್ಲಿ ಆರೋಪಿ ಶ್ರೀಶೈಲ್‌ ಅಲ್ದಿ ಈತನಿಗೆ 1 ಪಿಸ್ತೂಲ್‌, ಮತ್ತು ಗುಂಡುಗಳನ್ನು ಒದಗಸಿರುವುದು.

3) ಆಳಂದ ಪೊಲೀಸ್‌ ಠಾಣೆ ಗುನ್ನೆ ನಂ.61/2003 ರಲ್ಲಿ ಶ್ರೀ ಬಾಬುಲಾಲ ಸಾ:ಮಡಕಿ ಈತನನ್ನು ವೈಯಕ್ತಿಕ ದ್ವೇಷದಲ್ಲಿ ಅಪಹರಣ.

4) ಆಳಂದ ಪೊಲೀಸ್‌ ಠಾಣೆ ಗುನ್ನೆ ನಂ. 39/2006 ರಲ್ಲಿ ಆಳಂದ ತಾಲ್ಲೂಕಾ ಪಂಚಾಯತ ಆವರಣದಲ್ಲಿ ಅಂದಿನ ಅಧ್ಯಕ್ಷ ಅಶೋಕ ಸಾವಳೇಶ್ವರ ಈತನ ಮೇಲೆ ಗುಂಡು ಹಾರಿಸಿ ಕೊಲೆಗೆ ಪ್ರಯತ್ನ.

5) ಮಹಾರಾಷ್ಟ್ರದ ಉಮರ್ಗಾ ಪೊಲೀಸ್‌ ಠಾಣೆ ಗುನ್ನೆ ನಂ. 194/2005 ರಲ್ಲಿ ಖಸಗಿ ಗ್ರಾಮದಲ್ಲಿ ಜೊಡಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುತ್ತಾನೆ.

6) ಬಿಜಾಪೂರ ಜಿಲ್ಲೆಯ ಹೊರ್ತಿ ಪೊಲೀಸ್‌ ಠಾಣೆಯ ಗುನ್ನೆ ನಂ.72/2007 ರಲ್ಲಿ ಭಾಗಪ್ಪ ಹರಿಜನ ನೊಂದಿಗೆ ಕೊಲೆಯಲ್ಲಿ ಭಾಗಿಯಾಗಿರುತ್ತಾನೆ.

ಖಜೂರಿ ಕರೀಂ ಈತನು ಸಮಾಜದಲ್ಲಿ ಅಶಾಂತಿ ಉಂಟು ಮಾಡುವ ಅನಧೀಕೃತ ಪಿಸ್ತೂಲ್‌ಗಳ ಸಾಗಾಣಿಕೆಯಲ್ಲೂ ಭಾಗಿಯಾಗಿರುತ್ತಾನೆ. ಈತನ ಇನ್ನೊಬ್ಬ ಸಹಚರ ಮೂಸಾ ತಂದೆ ಅಬ್ದುಲ ಶೂಕುರ ಈತನು ಸೋಲ್ಲಾಪೂರ ಹಾಗು ಸಾತಾರ ಜಿಲ್ಲೆಗಳಲ್ಲಿ ಕೊಲೆ ಮತ್ತು ಆಯುಧ ಕಾಯ್ದೆ ಪ್ರಕರಣಗಳಲ್ಲಿ ಭಾಗಿಯಾಗಿರುತ್ತಾನೆ.

ಗುಲಬರ್ಗಾ ಜಿಲ್ಲೆಯ ಎಸ್‌.ಪಿ. ಶ್ರೀ ಪ್ರವೀಣ ಪವಾರ ಇವರ ಆದೇಶದಂತೆ ನಾಪತ್ತೆ ಇರುವ ಕೊಲೆ ಮತ್ತು ದರೋಡೆ ಕೇಸುಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದು, ಆಳಂದ ಡಿವೈಎಸ್‌ಪಿ ಶ್ರೀ ಎಸ್‌.ಬಿ. ಸಾಂಭಾ, ಸಿಪಿಐ ಶ್ರೀ ಶರಣಬಸವೇಶ್ವರ, ಪಿಎಸ್‌ಐಗಳಾದ ಶ್ರೀ ಅಸ್ಲಂಬಾಷಾ, ಶ್ರೀ ಜಗದೀಶ ಹಂಚನಾಳ, ಶ್ರೀ ವಿಜಯಕುಮಾರ, ಶ್ರೀ ಎಸ್‌.ಎಸ್‌.ದೊಡ್ಡಮನಿ, ಹಾಗು ಎಎಸ್‌ಐಗಳಾದ ಶ್ರೀ ವಿಶ್ವನಾಥ, ಶ್ರೀ ರಾಮಯ್ಯ ಮತ್ತು ಸಿಬ್ಬಂದಿ ಜನರಾದ ಮೈನೋದ್ದಿನ, ಶಾಂತಪ್ಪ, ರಾಜಕುಮಾರ, ಶಿವರಾಯ, ಮಶಾಕ, ಸುನೀಲ ಇವರುಗಳು ಆರೋಪಿತರನ್ನು ಚಾಣಾಕ್ಷತನದಿಂದ ಬೇಗನೆ ಬಂಧಿಸಿದ್ದಕ್ಕೆ ಮತ್ತು ಮುಂದೆ ಆಗಬಹುದಾದ ದರೋಡೆ, ಕೊಲೆ ತಡೆಗಟ್ಟುವಲ್ಲಿ ಯಶಸ್ವಿಯಾಗಿದ್ದಕ್ಕೆ ಶ್ರೀ ಪ್ರವೀಣ ಪವಾರ ಎಸ್‌.ಪಿ. ಗುಲಬರ್ಗಾ ರವರು ಕಾರ್ಯವನ್ನು ಪ್ರಶಂಶಿಸಿ ರೂ. 10,000/- ನಗದು ಬಹುಮಾನ ಘೋಷಿಸಿರುತ್ತಾರೆ. ಇನ್ನೂ ಹೆಚ್ಚಿನ ತನಿಖೆ ಕುರಿತು ಅಪರ್‌ ಎಸ್‌.ಪಿ. ಶ್ರೀ ಕಾಶಿನಾಥ ತಳಕೇರಿ ರವರ ಮಾರ್ಗದರ್ಶನದಲ್ಲಿ ವ್ಯಾಪಕ ತನಿಖೆ ಮುಂದುವರೆದಿರುತ್ತದೆ.

No comments: