POLICE BHAVAN KALABURAGI

POLICE BHAVAN KALABURAGI

13 September 2019

KALABURAGI DISTRICT REPORTED CRIMES

ಕೊಲೆ ಪ್ರಕರಣ :
ನೆಲೋಗಿ ಠಾಣೆ : ಶ್ರೀ ಮಲ್ಲಿಕಾರ್ಜುನ ತಂದೆ ಬಸವಂತ್ರಾಯ ಜಗಶೆಟ್ಟಿ ಸಾ:ನೆಲೋಗಿ ತಾ:ಜೇವರಗಿ ಜಿ:ಕಲಬುರಗಿ ರವರ ಅಣ್ಣನಾದ ಸಿದ್ದಾರಾಮನು ಕೂಡಾ ಒಕ್ಕಲುತನ ಕೆಲಸ ಮಾಡುತ್ತಿದ್ದು, ಅವನು ನಿನ್ನೆ ದಿನಾಂಕ: 11/09/2019 ರಂದು ರಾತ್ರಿ 8.15 ಗಂಟೆಯ ಸುಮಾರಿಗೆ ಸೊನ್ನ ರೋಡಿನ ಕಡೆಗೆ ಇರುವ ನಮ್ಮ ಮಡ್ಡಿ ಹೊಲಕ್ಕೆ ಹೋಗುವದಾಗಿ ಹೇಳಿ ನಮ್ಮ ಮೋಟಾರ ಸೈಕಲ ತಗೆದುಕೊಂಡು ಹೋಗಿದ್ದನು.  ನಂತರ ರಾತ್ರಿ 8.30 ಗಂಟೆಯ ಸುಮಾರಿಗೆ ನಾನು ನನ್ನ ಮೊಬೈಲ ಸಿಮ್ ನಂ.9901787815 ನೇದ್ದರಿಂದ ನನ್ನ ಅಣ್ಣನ ಮೊಬೈಲ ಸಿಮ್ ನಂ.9901925033 ನೇದ್ದಕ್ಕೆ ಪೋನ ಮಾಡಲು ಅವನು ಪೋನ ಎತ್ತಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ನನ್ನ ಅಣ್ಣನು ವಾಪಸ್ ನನ್ನ ಮೊಬೈಲಗೆ ಪೋನಮಾಡಿ ನಾನು ಊಟಮಾಡಲು ಮನೆಗೆ ಬರುವದಿಲ್ಲ. ಹೊಲದಲ್ಲಿಯೇ ಮಲಗಿಕೊಳ್ಳುತ್ತೇನೆ. ನೀವು ಊಟಮಾಡಿ ಮಲಗಿರಿ ಅಂತಾ ಅಂದಿದ್ದನು. ದಿನಂಪ್ರತಿ ಬೆಳಿಗ್ಗೆ 07-08 ಗಂಟೆಯ ತನಕ ಮನೆಗೆ ಬರುತ್ತಿದ್ದ ನನ್ನ ಅಣ್ಣನು ಬೆಳಿಗ್ಗೆ 08-45 ಗಂಟಯಾದರೂ ಮನೆಗೆ ಬರದ ಕಾರಣ ಇಂದು ದಿನಾಂಕ: 12/09/2019 ರಂದು ಮುಂಜಾನೆ 08.45 ಗಂಟೆಯ ಸುಮಾರಿಗೆ ನಾವು ಅವನ ಮೊಬೈಲಗೆ ಪೋನ ಮಾಡಲು ಮೊಬೈಲ ಸ್ವಿಚ್ಚ-ಆಪ ಇತ್ತು. ಅನುಮಾನಗೊಂಡು ನಾನು ಮತ್ತು ನಮ್ಮೂರಿನ ರಾಜಶೇಖರ ಕೀರಣಗಿ, ವಿದ್ಯಾದರ ಚೌಡಾಪೂರ ಕೂಡಿಕೊಂಡು ನಮ್ಮ ಹೊಲಕ್ಕೆ ಹೋಗಿ ನೋಡಲು ಹೊಲದಲ್ಲಿನ ಮನೆಯ ಹತ್ತೀರ ಮೋಟಾರ ಸೈಕಲ ಇತ್ತು. ನಮ್ಮ ಅಣ್ಣ ಕಾಣಿಸಲಿಲ್ಲ. ನಂತರ ನಮ್ಮ ಹೊಲಕ್ಕೆ ಊರಿನಿಂದ ಜನರು ಬಂದಾಗ ನಾವೆಲ್ಲರೂ ಕೂಡಿ ನಮ್ಮ ತೊಗರಿ ಹೊಲದಲ್ಲಿ ಮತ್ತು ಕಬ್ಬಿನ ಹೊಲದಲ್ಲಿ ಹುಡುಕಾಡಲಾಗಿ ನಮ್ಮ ತೊಗರಿ ಹೊಲದಲ್ಲಿ ನಮ್ಮ ಅಣ್ಣನು ಸತ್ತು ಬಿದ್ದಿದ್ದನು. ಅವನ ಹತ್ತೀರ ಅವನ ಚಪ್ಪಲಿಗಳು ಇದ್ದವು. ಆದರೇ ಅವನ 2 ಮೊಬೈಲಗಳು ಹಾಗೂ ಆತನ ಕೈಯಲ್ಲಿದ್ದ ಒಂದು ಸುತ್ತುಂಗುರ ಹಾಗೂ ಇನ್ನೊಂದು ಹರಳಿನ ಉಂಗುರ ಇರಲಿಲ್ಲ. ಅವನ ತಲೆಯ ಹಿಂಬಾಗ ಕುತ್ತಿಗೆಯ ಹತ್ತೀರ ಮತ್ತು ಗಲ್ಲದ ಹತ್ತೀರ ಸಣ್ಣ-ಪುಟ್ಟ ಗಾಯಗಳು ಕಾಣುತ್ತಿದ್ದವು. ನಮ್ಮ ಅಳಿಯನಾದ ಬಸವರಾಜ ತೊನಸಳ್ಳಿ ಸಾ:ಬೂಟನಾಳ ಇತನು ಊರಲ್ಲಿ ಅಲ್ಲಿ-ಇಲ್ಲಿ ಕೈಸಾಲ ಮಾಡಿದ್ದು, ತಾನು ಮಾಡಿದ ಸಾಲದ ಹಣ ಕೊಡುವಂತೆ ಅವನು ನಮ್ಮ ಅಣ್ಣನ ಸಂಗಡ ಆಗಾಗ ಜಗಳ ಮಾಡುತ್ತಿದ್ದನು ಅದಕ್ಕೆ ನಮ್ಮ ಅಣ್ಣನು ಅವನಿಗೆ 2 ಲಕ್ಷ ರೂಗಳು ಕೊಟ್ಟಿದ್ದು, ಅವನು ಇನ್ನೂ 3ಲಕ್ಷ ರೂಪಾಯಿ ಕೊಡುವಂತೆ ಕಿರಿ-ಕಿರಿ ಮಾಡುತಿದ್ದು, ಇದೇ ಕಾರಣಕ್ಕಾಗಿ ನಮ್ಮ ಅಳಿಯ ಬಸವರಾಜನೇ ಅಥವಾ ಅವನ ಸಂಗಡಿಗರು ಅಲ್ಲದೇ ಇನ್ಯಾರೋ ಯಾವುದೋ ಒಂದು ಬಲವಾದ ಕಾರಣಕ್ಕಾಗಿ ನನ್ನ ಅಣ್ಣ ಸಿದ್ದಾರಾಮನಿಗೆ ಹೊಡೆಬಡೆ ಮಾಡಿ, ಕುತ್ತಿಗೆ ಒತ್ತಿ ಅಥವಾ ಉಸಿರು ಗಟ್ಟಿಸಿ ಅಥವಾ ತಲೆಯ ಒಳಭಾಗಕ್ಕೆ ಬಲವಾದ ಪೆಟ್ಟುಗೊಳಿಸಿ ಕೊಲೆಮಾಡಿ ಸಾಕ್ಷಿ ನಾಶಮಾಡುವ ಉದ್ದೇಶದಿಂದ ಹೆಣವನ್ನು ನಮ್ಮ ತೊಗರಿ ಹೊಲದಲ್ಲಿ ಹಾಕಿ ಹೋಗಿರುತ್ತಾರೆ. ಈ ಕೊಲೆ ದಿನಾಂಕ: 11/09/2019 ರಂದು ರಾತ್ರಿ 8-45 ಗಂಟೆಯಿಂದ ದಿನಾಂಕ: 12/09/2019 ರಂದು ಮುಂಜಾನೆ 08-45 ಗಂಟೆಯ ಮಧ್ಯದ ಅವದಿಯಲ್ಲಿ ಆಗಿರಬಹುದು. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಅಪಘಾತ ಪ್ರಕರಣಗಳು :
ಯಡ್ರಾಮಿ ಠಾಣೆ : ಶ್ರೀ ಶರಣಮ್ಮ ಗಂಡ ತಿಪ್ಪಣಗೌಡ ಪೊಲೀಸ ಪಾಟೀಲ ಸಾ|| ಬಾಪುಗೌಡನಗರ ಶಹಾಪೂರ ರವರ ಮಗಳಾದ, ಚೈತ್ರ ಇವಳಿಗೆ ಸುಮಾರು 10 ವರ್ಷಗಳ ಹಿಂದೆ ಹುಣಚ್ಯಾಳ ಗ್ರಾಮದ ಶಾಂತಪ್ಪ ತಂದೆ ಕಲ್ಲಪ್ಪ ಹಿಪ್ಪರಗಿ ಎಂಬುವರೊಂದಿಗೆ ಮದುವೆ ಮಾಡಿಕೊಟ್ಟಿರುತ್ತೆವೆ ಸದ್ಯ ನನ್ನ ಮಗಳು ಚೈತ್ರಾ ಮತ್ತು ಅಳಯ ಶಾಂತಪ್ಪ ಇವರು ಶಹಾಪುರದಲ್ಲಿ ಕೂಲಿ ಕೆಲಸ ಮಾಡಿಕೊಂಡು ವಾಸವಾಗಿರುತ್ತಾರೆ,  ದಿನಾಂಕ:11-09-2019 ರಂದು 10-00 .ಎಮ್.ಕ್ಕೆ ನಮ್ಮ ಅಳಿಯ ಮತ್ತು ಮಗಳು ಚೈತ್ರಾ ಇವಳು ನನಗೆ ಪೋನ ಮಾಡಿ ಕೆಲಸದ ನಿಮಿತ್ಯ ನಾವು ನಮ್ಮ ಮೋಟರ ಸೈಕಲ್ ಮೇಲೆ ಹುಣಚ್ಯಾಳ ಗ್ರಾಮಕ್ಕೆ ಹೋಗುತ್ತಿದ್ದೆವೆ  ಅಂತ ಹೇಳಿ ಶಹಾಪುರದಿಂದ ಹೋಗುತ್ತಾರೆ, ನಂತರ 11-30 .ಎಮ್.ಕ್ಕೆ ನಮ್ಮ ಅಳಿಯನ ಅಣ್ಣ ನಿಂಗಣ್ಣ ತಂದೆ ಕಲ್ಲಪ್ಪ ಹಿಪ್ಪರಗಿ ಇವರು ನನಗೆ ಪೋನ ಮಾಡಿ ಹೇಳಿದ್ದೇನೆಂದರೆ ಇದಿಗ ಮಳ್ಳಿ ಗ್ರಾಮದ ಯಾರೋ ನನಗೆ ನಮ್ಮ ತಮ್ಮ ಶಾಂತಪ್ಪನ ಪೋನಿನಿಂದ ಕರೆ ಮಾಡಿ ಮಳ್ಳಿ ಗ್ರಾಮದ ಹತ್ತಿರ ಶಿವಶರಣಪ್ಪ ಸಾಸಬಾಳ ಇವರ ಹೊಲದ ಹತ್ತಿರ ಮೋಟರ ಸೈಕಲ್ ಸ್ಕಿಡ್ಡಾಗಿ ಬಿದ್ದಿರುತ್ತಾರೆ, ಮೋಟರ ಸೈಕಲ್ ಹಿಂದೆ ಒಬ್ಬ ಹೆಣ್ಣು ಮಗಳು ಕುಳಿತ್ತಿದ್ದು. ಅವರಿಗೆ ಭಾರಿ ಗಾಯವಾಗಿರುತ್ತದೆ. ಅಂತ ಹೇಳಿದು ಕೂಡಲೇ ನಾನು ಮತ್ತು ನನ್ನ ತಮ್ಮನಾದ ಶಿವಾನಂದ ಮತ್ತು ಅಳಿಯ ಪ್ರವೀಣ ಮುರಗೇಪ್ಪ ತೆಲಕೂರ ರವರು ಕೂಡಿ ಸ್ಥಳಕ್ಕೆ ಹೋಗಿ ನೋಡಿದಾಗ ನಮ್ಮ ತಮ್ಮ ಮತ್ತು ಅವನ ಹೆಂಡತಿ ಚೈತ್ರಾ ಇವರು ರೋಡಿನ ಕೆಳಗಡೆ ಬಿದ್ದಿದರು. ಚೈತ್ರಾಳನ್ನು ನೋಡಲಾಗಿ ಅವಳ ತಲೆಯ ಹಿಂದೆ ಭಾರಿ ಒಳಪೆಟ್ಟಾಗಿ ಕಿವಿಯಿಂದ ರಕ್ತ ಸೋರುತ್ತಿತ್ತು. ಅವಳು ಮಾತನಾಡುವ ಸ್ಥಿತಿಯಲ್ಲಿ ಇರಲ್ಲಿಲ್ಲಾ, ನಮ್ಮ ತಮ್ಮ ಶಾಂತಪ್ಪ ಇವನಿಗೆ ನೋಡಲಾಗಿ ಎಡತಲೆಗೆ ರಕ್ತಗಾಯವಾಗಿ ಎಡಭುಜಕ್ಕೆ ಭಾರಿ ಒಳಪೆಟ್ಟಾಗಿದ್ದು ಕೈಕಾಲಿಗೆ ತರಚಿದ ಗಾಯವಾಗಿರುತ್ತದೆ. ಸದ್ಯ ಅವರನ್ನು ಉಪಚಾರ ಕುರಿತು 108 ವಾಹನದಲ್ಲಿ ಸಿಂದಗಿಯ ಮನಗೂಳಿಯ ಆಸ್ಪತ್ರೆಗೆ ತೋರಿಸಿ ಅಲ್ಲಿಯಿಂದ ಹೆಚ್ಚಿನ ಉಪಚಾರ ಕುರಿತು ಬಿ.ಎಲ್.ಡಿ..ಆಸ್ಪತ್ರೆಗೆ ಹೋಗುತ್ತಿದ್ದೆವೆ ಬೇಗ ಬನ್ನಿ ಅಂತ ಹೇಳಿದರು ನಂತರ ನಾನು ಮತ್ತು ನಮ್ಮ ತಮ್ಮ ಶರಣಪ್ಪ ಬಾವಿಕಟ್ಟಿ ರವರು ಕೂಡಿ ಬಿ.ಎಲ್.ಡಿ..ಆಸ್ಪತ್ರೆಗೆ ಬಂದು ನನ್ನ ಮಗಳು ಮತ್ತು ಅಳಯನಿಗೆ ನೋಡಿದ್ದು ಇರುತ್ತದೆ ಆಗ ನನ್ನ ಮಗಳು ಮತ್ತು ಅಳಿಯ ಪ್ರಜ್ಞಾಹೀನರಾಗಿದ್ದರು. ಇಂದು ದಿನಾಂಕ: 12-09-2019 ರಂದು ಬೆಳಗಿನ ಜಾವ 3-10 ಸುಮಾರಿಗೆ ನನ್ನ ಮಗಳು ಆಸ್ಪತ್ರೆಯಲ್ಲಿ ಉಪಚಾರ ಪಡೆಯುತ್ತಾ ಉಪಚಾರ ಫಲಿಸದೇ ಮೃತ ಪಟ್ಟಿರುತ್ತಾಳೆ, ದಿನಾಂಕ: 11-09-2019 ರಂದು 11-00 .ಎಮ್.ಕ್ಕೆ ನನ್ನ ಮಗಳು ಮತ್ತು ಅಳಿಯ ತಮ್ಮ ಮೋಟರ ಸೈಕಲ್ ನಂಬರ ಕೆ..28/.ಎಲ್.-6416 ನೇದ್ದರ ಮೇಲೆ ಶಹಾಪುರದಿಂದ ಹುಣಶ್ಯಾಳ ಗ್ರಾಮಕ್ಕೆ ಹೋಗುತ್ತಿದ್ದಾಗ ಮಳ್ಳೀ ಗ್ರಾಮದ ನಮ್ಮ ಅಳಿಯ ಮೋಟರ ಸೈಕಲನ್ನು ಅತೀವೇಗವಾಗಿ ನಿಷ್ಕಾಳಜಿತನದಿಂದ ಚಲಾಯಿಸಿ ಒಮ್ಮೇಲೆ ಕಟ್ ಮಾಡಲು ಹೋಗಿ ಮೋಟರ ಸೈಕಲ್ ಕೆಡವಿರುತ್ತಾನೆ. ಈ ಅಪಘಾತದಲ್ಲಿ ನನ್ನ ಮಗಳು ಮೃತ ಪಟ್ಟಿರುತ್ತಾಳೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಮಲಾಪೂರ ಠಾಣೆ : ಶ್ರೀ ಗೋಪಾಲ ತಂದೆ ಶಿವರಾಮ ರಾಠೋಡ ಸಾ:ಹರ್ಜಿ ನಾಯಕ ತಾಂಡಾ ಸ್ವಂತ ರವರ ಮಗ ಅವಿನಾಶ ಇತನು ಬೇಲೂರ ತಾಂಡಾದಲ್ಲಿ ಕೆಲಸ ಇರುತ್ತದೆ ಹೋಗಿಬರುತ್ತೇನೆ ಎಂದು ಹೇಳಿ ಮೋಟಾರ ಸೈಕಲ್ ನ್ನು ತೆಗೆದುಕೊಂಡು ತನ್ನ ಜೊತೆಯಲ್ಲಿ ನಮ್ಮ ತಾಂಡಾದ ಆತನ ಗೆಳೆಯನಾದ ಹೀರಾಮಣ ತಂದೆ ಭೀಮಸಿಂಗ್ ರಾಠೋಡ ಇತನೊಂದಿಗೆ ಮೋಟಾರ ಸೈಕಲ ಮೇಲೆ ಹೋದರು ಮುಂದೆ ರಾತ್ರಿಯಾದರೂ ಆತನು ಮನೆಗೆ ಬರಲಿಲ್ಲ ಆತನ ದಾರಿ ಕಾಯುತ್ತಾ ಇದ್ದೇವು. ಹೀರಾಮಣ ಬಂದಿರುತ್ತಾನೆ ಹೇಗೆ ಎಂದು ನೋಡಲಾಗಿ ಆತನು ಕೂಡ ರಾತ್ರಿ ಮನೆಗೆ ಬಂದಿರುವದಿಲ್ಲ ಅಂತಾ ಗೋತ್ತಾಯಿತ್ತು. ದಿನಾಂಕ: 12/09/2019 ರಂದು ಬೆಳಿಗ್ಗೆ ಮರಗುತ್ತಿ ಕ್ರಾಸಿನ ಹತ್ತಿರ ಇರುವ ಆನಂದ ಶಾಲೆಯಲ್ಲಿ ಓದುತ್ತಿರುವ ನಮ್ಮ ತಾಂಡಾದ ಪ್ರವೀಣ ತಂದೆ ಸೀತಾರಾಮ ರಾಠೋಡ ಇತನು ನನ್ನ ಮಗ ಶ್ಯಾಮರಾವನಿಗೆ ಫೋನ್ ಮಾಡಿ ಮಾಹಿತಿ ತಿಳಿಸಿದ್ದೆನೆಂದರೆ ನಾನು ಮರಗುತ್ತಿ ಕ್ರಾಸಿನ ಶಾಲೆಯ ಹತ್ತಿರ ಇರುವಾಗ ಮರಗುತ್ತಿಗೆ ಹೋಗುವ ರೋಡಿನ ಕಂಬಾರ ತೋಟದ ಹತ್ತಿರದಲ್ಲಿ ಯಾರೋ ಮೋಟಾರ ಸೈಕಲ ಮೇಲಿಂದ ಬಿದ್ದು ಮೃತಪಟ್ಟಿರುತ್ತಾರೆ ಅಂತಾ ಜನರಾಡುವ ಮಾತನ್ನು ಕೇಳಿ ನಾನು ಕಂಬಾರ ತೋಟದ ಹತ್ತಿರ ಮುಂದೆ ಅಣ್ಣಪ್ಪ ಭರಣಿ ಇವರ ಹೋಲದ ರೋಡಿನ ಪಕ್ಕದಲ್ಲಿ ಹೋಗಿ ನೋಡಲಾಗಿ ರೋಡಿನ   ಬದಿಯಿರುವ ಬಂದಾರಿಯ ಮೇಲೆ ನಿಮ್ಮ ತಮ್ಮ ಅವಿನಾಶ ಹಾಗೂ ಹೀರಾಮಣ ಇಬ್ಬರೂ ಭಾರಿಗಾಯಗೊಂಡು ಸ್ಥಳದಲ್ಲಿಯೇ ಇಬ್ಬರೂ ಮೃತಪಟ್ಟಿರುತ್ತಾರೆ ಮತ್ತು ಮೋಟಾರ ಸೈಕಲ್ ಜಖಂ ಆಗಿರುತ್ತದೆ ಬೇಗನೇ ಬರುವಂತೆ ಹೇಳಿದಕ್ಕೆ ಮಗ ಶ್ಯಾಮರಾವನು ಈ ವಿಷಯವನ್ನು ನನಗೆ ತಿಳಿಸಿದಾಗ ನಾನು ಮಗ ಶ್ಯಾಮರಾವ ಹಾಗೂ ಹೀರಾಮಣನ ತಂದೆ ಭೀಮಸಿಂಗನ ಹತ್ತಿರ ಹೋಗಿ ಫೋನ್ ಮಾಡಿದ ವಿಷಯವನ್ನು ಆತನಿಗೆ ಹೇಳಿ ಆತನು ಮತ್ತು ನಾವು ಕೂಡಿಕೊಂಡು ಗಾಬರಿಗೊಂಡು ಕಂಬಾರ ತೋಟದ ಹತ್ತಿರ ಇರುವ ಅಣ್ಣಪ್ಪ ಭರಣಿ ಇವರ ಹೋಲದ ಬಂದಾರಿಯ ಹತ್ತಿರ ಬಂದಾಗ ಅಲ್ಲಿ ಪ್ರವೀಣ ರಾಠೋಡನ್ನು ಇದ್ದು ಎಲ್ಲರೂ ನೋಡಲಾಗಿ ನನ್ನ ಮಗ ಅವಿನಾಶನ ತಲೆಗೆ ರಕ್ತಗಾಯ, ಮುಖಕ್ಕೆ ಭಾರಿಗಾಯವಾಗಿ ಮುಖದ ಎಡಭಾಗ ಚಪ್ಪಟೆಯಾಗಿದ್ದು ಬಲಗಾಲಿನ ಮೊಳಕಾಲಿಗೆ ಹಾಗೂ ಹಿಂಬ್ಬಡಿ ಹತ್ತಿರ ಭಾರಿಪ್ರಮಾಣ ಗಾಯವಾಗಿ ಒಳಗಿನ ಎಲುಬುಗಳು ಕಾಣುತ್ತಿದ್ದು ಮಗನಿಗೆ ಹೊರಳಿಸಿ ನೋಡಲಾಗಿ ಆತನು ಮೃತಪಟ್ಟಿದ್ದನು. ಅಲ್ಲಿಯೇ ಪಕ್ಕದಲ್ಲಿರುವ ಹೀರಾಮಣ ಇತನಿಗೂ ಕೂಡ ನೋಡಲಾಗಿ ಇತನ ತಲೆಗೆ ಭಾರಿರಕ್ತಗಾಯ ಮತ್ತು ಬಲಗಾಲಿನ ಮೊಳಕಾಲು ಹತ್ತಿರ ಕಪ್ಪಗಂಡ ಹತ್ತಿರ ಕಾಲು ಮುರಿದು ಒಳಗಿನ ಎಲುಬು ಮುರಿದಂತೆ ಆಗಿದ್ದು ಆತನಿಗೂ ಕೂಡ ಹೊರಳಿಸಿ ನೋಡಲು ಆತನು ಮೃತಪಟ್ಟಿದ್ದನು. ನಮ್ಮ ಮೋಟಾರ ಸೈಕಲನ್ನು ನೋಡಲಾಗಿ ಮುಂದಿನ ಭಾಗ, ಟ್ಯಾಂಕ್ ಜಖಂಗೊಂಡಿದ್ದು ಇರುತ್ತದೆ. ಪ್ರವೀಣನಿಗೆ ವಿಚಾರಿಸಲಾಗಿ ತಿಳಿಸಿದ್ದೇನೆಂದರೆ ನಿನ್ನೆ ದಿನಾಂಕ: 11/09/2019 ರಂದು ರಾತ್ರಿ 7:00 ಗಂಟೆಗೆ ಅವಿನಾಶ ಅಣ್ಣ ಮತ್ತು ಹೀರಾಮಣ ಇಬ್ಬರೂ ಮೋಟಾರ ಸೈಕಲ ಮೇಲೆ ನಮ್ಮ ಶಾಲೆಗೆ ಬಂದು ತಾವು ಬೇಲೂರಕ್ಕೆ ಹೋಗಬೇಕು ಅಂತಾ ಕಮಲಾಪೂರಕ್ಕೆ ಹೋಗಿದ್ದು ಕಮಲಾಪೂರದಲ್ಲಿಯೇ ಊಟ ಮಾಡಿ ಮರಳಿ ಊರಿಗೆ ಹೋಗಬೇಕೆಂದು ಬಂದಿರುತ್ತೇವೆ ಎಂದು ಹೇಳಿ ಹಾಗೆ ಮಾತನಾಡಿ ಚನ್ನಾಗಿ ಓದು ಅಂತಾ ಹೇಳಿ ತಾವು ಊರಿಗೆ ಹೋಗುತ್ತೇವೆ ಅಂತಾ ಅವಿನಾಶ ಅಣ್ಣನೇ ಮೋಟಾರ ಸೈಕಲ ನಡೆಸುತ್ತಿದ್ದನು ಹೀರಾಮಣನು ಹಿಂದೆ ಕುಳಿತುಕೊಂಡು ಊರು ಕಡೆಗೆ ಹೋದರು. ಅಂತಾ ತಿಳಿಸಿದನು. ಮುಂದೆ ನಾವು ಹಾಗೇ ಗಾಬರಿಗೊಂಡು ನನ್ನ ಮಗ ಅವಿನಾಶನನ್ನು ಹಾಗೂ ಹೀರಾಮಣನನ್ನು ಯಾವುದೋ ಒಂದು ಟಂಟಂನಲ್ಲಿ ಹಾಕಿಕೊಂಡು ಕಮಲಾಪೂರ ಸರ್ಕಾರಿ ಆಸ್ಪತ್ರೆಗೆ ತಂದಿರುತ್ತೇವೆ ವಿಚಾರಣೆಯಲ್ಲಿ ನನ್ನ ಮಗ ಮತ್ತು ಹೀರಾಮಣ ಇಬ್ಬರೂ ಕೂಡಿ ನಮ್ಮ ತಾಂಡಾದಿಂದ ಬೇಲೂರಕ್ಕೆ ಹೋಗುತ್ತೇವೆ ಎಂದು ಹೋಗುವಾಗ ಕಮಲಾಪೂರದಿಂದಲೇ ಮರಳಿ ಊರಿಗೆ ಬರುವ ಕುರಿತು ಮೋಟಾರ ಸೈಕಲ್ ಮೇಲೆ ಮಗ ಅವಿನಾಶನೇ ಮೋಟಾರ ಸೈಕಲ್ ಹಿಂದೆ ಹೀರಾಮಣನಿಗೆ ಕೂಡಿಸಿಕೊಂಡು ಹೋಗುವಾಗ ರಾತ್ರಿ ಮರಗುತ್ತಿ ರೋಡಿನ ಕಂಬಾರ ತೋಟದ ಬದಿಯಲ್ಲಿರುವ ಅಣ್ಣಪ್ಪ ಭರಣೀ ಇವರ ಹೋಲದ ಹತ್ತಿರ ಯಾವುದೋ ಒಂದು ವಾಹನ ಚಾಲಕನು ಅತಿವೇಗ ಮತ್ತು ಅಲಕ್ಷತನದಿಂದ ನಡೆಸಿಕೊಂಡು ಬಂದು ನಮ್ಮ ಮಕ್ಕಳು ಬರುವ ಮೋಟಾರ ಸೈಕಲಗೆ ಅಪಘಾತ ಪಡಿಸಿದ ಪರಿಣಾಮ ಅವರು ರೋಡಿನಿಂದ ಬದಿಗೆ ಇರುವ ಹೋಲದ ಬಂದಾರಿಯ ಮೇಲಿರುವ ಗಿಡಕ್ಕೆ ತಾಗಿ ಮತ್ತು ಬಂದಾರಿಯ ಕಲ್ಲುಗಳ ಮೇಲೆ ಬಿದ್ದು ಭಾರಿಪ್ರಮಾಣದ ಗಾಯಗೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು ಕಂಡುಬಂದಿರುತ್ತದೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಕಮಲಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

11 September 2019

KALABURAGI DISTRICT PRESS NOTE


ಜಿಲ್ಲಾ ಪೊಲೀಸ ಅಧೀಕ್ಷಕರವರ ಕಾರ್ಯಾಲಯ, ಕಲಬುರಗಿ
ದೂರವಾಣಿ ಸಂಖ್ಯೆ 08472-263602 , 08472-263606
___________________________________________________________________________________                                                                                                                 ದಿನಾಂಕ:11-09-2019
:ಪತ್ರಿಕಾ ಪ್ರಕಟಣೆ:
                                                                                                                                                              ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಮೋಟಾರು ವಾಹನ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಿದ್ದು ಇರುತ್ತದೆಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮೀತಿಯು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಗಾಗಿ ಹಲವು ಆದೇಶಗಳನ್ನು ಹೊರಡಿಸಿದ್ದು ಇರುತ್ತದೆ.

  ವಿಷಯಕ್ಕೆ ಅನುಗುಣವಾಗಿ  ಹಾಗೂ ವಾಹನ ಚಾಲಕರ ಹಾಗೂ ಸವಾರರ ಹಿತದೃಷ್ಟಿಯಿಂದ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿ ಕೋರಲಾಗಿದೆ.

1.  ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸುವುದು.
2. ಮಧ್ಯಪಾನ ಮಾಡಿ ವಾಹನ ಚಲಾಯಿಸದೇ ಇರುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸಿದಲ್ಲಿ  
     10 ಸಾವಿರ ದಂಡದ ಜೊತೆ ಜೈಲು ಶಿಕ್ಷೆಯೂ ವಿಧಿಸಬಹುದು.
3. ಕಾರ್ ಮತ್ತು ಜೀಪ್ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು.
4. ವಾಹನಚಾಲಕರು ಕಡ್ಡಾಯವಾಗಿ ಮೂಲ ವಾಹನದ ನೊಂದಣಿ, ವಿಮೆ, ಎಮಿಷನ್ ಪ್ರಮಾಣ
    ಪತ್ರಗಳನ್ನು ಹಾಗೂ ವಾಹನ ಚಾಲನಾ ಪರವಾನಗಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
5.  ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಬಾರದು.
6.  ವಾಹನ ಚಾಲನೆ ಮಾಡುವಾಗ ಮೊಬೈಲ್ ಫೊನ್ ಬಳಸಬಾರದು.
7.  ವಾಹನ ಚಾಲನಾ ಪರವಾನಗಿ ಇಲ್ಲದೇ ಇರುವ ವ್ಯಕ್ತಿಗಳಿಗೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ
       ವಾಹನ ಚಾಲನೆ  ಮಾಡಲು ನೀಡಿದರೆ ಅಂತಹ ವಾಹನದ ಮಾಲಿಕರಿಗೆ ರೂ.25 ಸಾವಿರ ದಂಡದ
       ಜೊತೆಗೆ ಮೂರು ವರ್ಷ  ಜೈಲು ಶಿಕ್ಷೆಗೆ ಗುರಿಯಾಗುವರು.
8. ಆಯಾ ಸ್ಥಳಗಳಲ್ಲಿ ನಗದಿಪಡಿಸಿದ ವೇಗದ ಅನುಗುಣವಾಗಿ ವಾಹನ ಚಲಾಯಿಸುವುದು, ಅತಿವೇಗ ಮತ್ತು
     ಅಲಕ್ಷತನದಿಂದ ವಾಹನ ಚಲಾಯಿಸುವವರ ವಿರುದ್ಧ ನಿಗದಿತ ದಂಡ ವಿಧಿಸಲಾಗುವುದು.
9.  ಸರಕು ಸಾಗಣೆ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವಂತಿಲ್ಲಾ.
10.  ನಿಗದಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡತಕ್ಕದ್ದು.
11. ಶಾಲಾ ಮಕ್ಕಳನ್ನು ಆಟೋರಿಕ್ಷಾ, ಶಾಲಾ ವಾಹನ ಮತ್ತು ಇತರೆ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ
       ಸಂಖ್ಯೆಯಲ್ಲಿ ಸಾಗಿಸುವಂತಿಲ್ಲಾ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೆ 2016 ನೇ ಸಾಲಿನಲ್ಲಿ ಒಟ್ಟು 325 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 354 ಜನರು ಮೃತಪಟ್ಪಿದ್ದು, 2017 ನೇ ಸಾಲಿನಲ್ಲಿ 327 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 364 ಜನರು ಮೃತಪಟ್ಪಿದ್ದು, 2018 ನೇ ಸಾಲಿನಲ್ಲಿ 374 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 414 ಜನರು ಮೃತಪಟ್ಪಿದ್ದು ಹಾಗೂ ಪ್ರಸ್ತುತ ಸಾಲಿನ ಜೂಲೈ ಮಾಹೆಯ ವರೆಗೆ 224 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 227 ಜನರು ಮೃತಪಟ್ಪಿರುವುದನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು ತುಂಬಾ ಕಳವಳಕಾರಿಯಾದ ವಿಷಯವಾಗಿದೆ.  

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಮತ್ತು ಸಾವು-ನೋವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಂಕಣಬದ್ಧವಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಮೂಲ ಉದ್ದೇಶ ಸಂಚಾರ ನಿಯಮಗಳ ಪಾಲನೆಯಾಗುವಂತೆ ನೋಡಿಕೊಂಡು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಕಡಿಮೆಮಾಡುವುದಾಗಿದೆ. ವಿಷಯದಲ್ಲಿ ಕಲಬುರಗಿ ಜನತೆ ಹಾಗೂ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯವಿದ್ದು, ತಾವೆಲ್ಲರೂ ಮಹತ್ ಕಾರ್ಯದಲ್ಲಿ ಇಲಾಖೆಯೊಂದಿಗೆ ಭಾಗಿಯಾಗಲು ಮೂಲಕ ಕೋರಲಾಗಿದೆ.

                                                                                                             ಸಹಿ/-
                                                                                          ಸಾರ್ವಜನಿಕ ಮಾಹಿತಿ ಅಧಿಕಾರಿ  
                                                                                                              ಜಿಲ್ಲಾ ಪೊಲೀಸ ಕಛೇರಿ
                                                                                                                         ಕಲಬುರಗಿ

06 September 2019

KALABURAGI DISTRICT REPORTED CRIMES

ಅಪಘಾತ ಪ್ರಕರಣ :
ನರೋಣಾ ಠಾಣೆ : ಶ್ರೀ ಪ್ರಕಾಶ ತಂದೆ ಕಾಶಿನಾಥ ಮೋರೆ ಸಾ:ದಹಿವಡ ಗ್ರಾಮ, ತಾ:ದೇವಲಾ, ಜಿಲ್ಲಾ:ನಾಶಿಕ, ರಾಜ್ಯ ಮಹಾರಾಷ್ಟ್ರ ರವರು ದಿನಾಂಕ:02/09/2019 ರಂದು ನಾನು ಹಾಗೂ ನಮ್ಮೂರಿನ ಶ್ರೀ.ಸಂತೋಷ ವಾಗ, ಬಾಪು ತಂದೆ ನಥು ಐರೆ, ಅರುಣ ತಂದೆ ಭಗವಾನೆ ದೆವಡೆ, ಎಲ್ಲರೂ ಕೂಡಿಕೊಂಡು ಸಂತೋಷ ಇವರ ಖಾಸಗಿ ಕೆಲಸದ ನಿಮತ್ಯ ಮಹೇಂದ್ರ ಕ್ವಾಂಟೋ ಜೀಪ್ ನಂ ಎಂಹೆಚ್04-ಜಿಎಂ1059 ನೇದ್ದರಲ್ಲಿ ಬೆಂಗಳೂರಿಗೆ ಹೋಗಿರುತ್ತೇವೆ. ದಿನಾಂಕ:03/09/2019 ರಿಂದ ದಿನಾಂಕ:05/09/2019 ವರೆಗೆ ನಾವೆಲ್ಲರೂ ಅಲ್ಲಿಯೇ ಇದ್ದು, ಸಂತೋಷ ಇವರನ್ನು ಹೊರತು ಪಡಿಸಿ ಉಳಿದವರೆಲ್ಲರೂ ಅದೇ ಜೀಪನಲ್ಲಿ ಮರಳಿ ದಿನಾಂಕ:05/09/2019 ರಂದು ಸಾಯಂಕಾಲ 5-00 ಗಂಟೆಗೆ ಬೆಂಗಳೂರಿನಿಂದ ನಮ್ಮೂರಿಗೆ ಹೊರಟು ಕಲಬುರಗಿ ಮಾರ್ಗವಾಗಿ ಆಳಂದ ಕಡೆಗೆ ಹೊರಟಾಗ ವಾಹನವನ್ನು ಅರುಣ ಈತನು ಚಲಾಯಿಸುತ್ತಿದ್ದನು, ಆತನ ಪಕ್ಕದ ಸೀಟಿನಲ್ಲಿ ಬಾಪು ಈತನು ಕುಳಿತ್ತಿದ್ದು ಅವರ ಹಿಂದಿನ ಸೀಟಿನಲ್ಲಿ ನಾನು ಕುಳಿತ್ತಿದ್ದೇನು, ಲಾಡಚಿಂಚೋಳಿ ಕ್ರಾಸ್ ದಾಟಿ ಆಳಂದ ಕಡೆಗೆ ರಾಜ್ಯ ಹೆದ್ದಾರಿ ಸಂಖ್ಯೆ 10 ಮೇಲೆ ನಮ್ಮ ವಾಹನದ ಮುಂದೆ ಒಬ್ಬ ಲಾರಿ ಚಾಲಕನು ತನ್ನ ಲಾರಿಯನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸುತ್ತಾ ಆಳಂದ ಕಡೆ ಹೊರಟಿದ್ದು ನಮ್ಮ ವಾಹನದ ಚಾಲಕನಾದ ಅರುಣನು ಕೂಡ ತನ್ನ ವಶದಲ್ಲಿದ್ದ ವಾಹನವನ್ನು ಅತೀವೇಗ ಮತ್ತು ನಿಷ್ಕಾಳಜಿತನಿಂದ ಚಲಾಯಿಸಿಕೊಂಡು ಲಾರಿಯ ಹಿಂಭಾಗದಲ್ಲಿ ಹೊರಟಾಗ ದಿನಾಂಕ:06/09/2019 ರಂದು ಬೆಳಿಗ್ಗೆ 05-00 ಗಂಟೆ ಸುಮಾರಿಗೆ ಲಾಡಚಿಂಚೋಳಿ ತಾಂಡಾ ಕ್ರಾಸ್ ಇನ್ನು ಸ್ವಲ್ಪ ಮುಂದೆ ಇರುವಾಗ ರೋಡಿನ ಮೇಲೆ ಇರುವ ರೋಡ್ ಬ್ರೆಕ್ ಹತ್ತಿರ ಬಂದಾಗ ನಮ್ಮ ವಾಹನದ ಮುಂದೆ ಇದ್ದ ಲಾರಿಚಾಲಕನು ತನ್ನ ವಾಹನವನ್ನು ಅತೀವೇಗವಾಗಿ ಚಲಾಯಿಸಿ ಒಮ್ಮಿಂದ್ದೊಮ್ಮಲೆ  ನಿಷ್ಕಾಳಜಿತನಿಂದ ಬ್ರೆಕ್ ಹಾಕಿದ್ದರಿಂದ ಲಾರಿಯ ಹಿಂದೆ ಅತೀವೇಗ ಮತ್ತು ನಿಷ್ಕಾಳಜಿತನದಿಂದ ಚಲಾಯಿಸುತ್ತಿದ್ದ ಅರುಣನು ತನ್ನ ವಶದಲ್ಲಿದ್ದ ಮಹೇಂದ್ರ ಕ್ವಾಂಟೋ ಜೀಪ್ ನಂಬರ್ ಎಂ.ಹೆಚ್04-ಜಿಎಂ1059 ನೇದ್ದನ್ನು ಲಾರಿಯ ಹಿಂಭಾಗಕ್ಕೆ ಜೋರಾಗಿ ಡಿಕ್ಕಿ ಹೊಡೆಸಿ ಅಪಘಾತ ಪಡಿಸಿದನು. ಲಾರಿ ಚಾಲಕನು ತನ್ನ ಲಾರಿಯನ್ನು ನಿಲ್ಲಿಸದೆ ಆಳಂದ ಕಡೆಗೆ ಹೋದನು ಅಪಘಾತ ಕಾಲಕ್ಕೆ ಲಾರಿಯ ಹಿಂಭಾಗದ ಬಿಡಿಭಾಗ ಮತ್ತು ನಂಬರ್ ಪ್ಲೇಟ್ ಮುರಿದು ಬಿದ್ದಿರುತ್ತವೆ. ಅಪಘಾತದಲ್ಲಿ ನನಗೆ ಎಡಗೈ ಮದ್ಯ ಭಾಗದಲ್ಲಿ ಹಾಗೂ ಮುಷ್ಠಿಮೇಲೆ ತರಚಿದ ರಕ್ತಗಾಯವಾಗಿದ್ದು ಮುಂದೆ ಕುಳಿತಂತಹ ಅರುಣ ಮತ್ತು ಬಾಪು ಇಬ್ಬರು ವಾಹನದ ಮುಂಭಾಗ ನುಜ್ಜುಗುಜ್ಜಾಗಿದ್ದರಿಂದ ಜೀಪಿನೋಳಗೆ ಸಿಕ್ಕಿಕೊಂಡಿದ್ದರು. ನಾನು ಜೀಪನಿಂದ ಹೊರಗೆ ಬಂದು ಹೋಗಿಬರುವ ವಾಹನಗಳಿಗೆ ಕೈಮಾಡಿ ನಿಲ್ಲಿಸಿದಾಗ ಒಂದೆರಡು ವಾಹನಗಳ ಚಾಲಕರು ತಮ್ಮ ವಾಹನ ನಿಲ್ಲಿಸಿ ಕೆಳಗಿಳಿದು ಬಂದಿದ್ದು, ನಾವೆಲ್ಲರೂ ಸೇರಿ ಜೀಪಿನಲ್ಲಿ ಸಿಕ್ಕಿಹಾಕೊಂಡಿದ್ದ ಅರುಣ ಮತ್ತು ಬಾಪು ಇಬ್ಬರಿಗೆ ಜೀಪಿನಿಂದ ಹೊರಗೆ ತಗೆದು ನೋಡಿದಾಗ ಅರುಣನಿಗೆ ತಲೆಯ ಎಡಭಾಗಕ್ಕೆ ಗಂಭೀರ ರಕ್ತಗಾಯ ಹಾಗೂ ಎಡಗೈ ಮುಷ್ಠಿಮೇಲೆ ತರಚಿದ ರಕ್ತಗಾಯ, ಬಾಪು ಈತನಿಗೆ ಎಡಗಣ್ಣಿನ ಮೇಲ್ಭಾಗ, ಹಣೆಗೆ ಗಂಭೀರ ರಕ್ತಗಾಯ, ಎಡಕಣ್ಣಿನ ಪಕ್ಕ ಭಾರಿ ರಕ್ತಗಾಯ, ತಲೆಯ ಹಿಂಭಾಗಕ್ಕೆ ಭಾರಿ ಗುಪ್ತಗಾಯ ಕುತ್ತಿಗೆ ಭಾಗದಲ್ಲಿ ಸಾದಾ ತರಚಿದ ಗಾಯಗಳಾಗಿದ್ದು, ಇಬ್ಬರು ಭೇಹೊಷ ಸ್ಥಿತಿಯಲ್ಲಿದ್ದರು ನಾನು ನನ್ನ ಮೊಬೈಲದಿಂದ  ಪಟ್ಣಣ ಟೋಲ್ನಾಕಾ ಅಂಬ್ಯೂಲೆನ್ಸ್ ವಾಹನಕ್ಕೆ ಕರೆಮಾಡಿ ತಿಳಿಸಿರುತ್ತೇನೆ, ಅಂಬ್ಯೂಲೆನ್ಸ್ ಬರುವತನಕ ನಾವೆಲ್ಲರೂ ಸೇರಿ ರೋಡಿನ ಮೇಲೆ ಬಿದ್ದಿದ್ದ ಲಾರಿ ಹಿಂಭಾಗದ ಲಾರಿಯ ಬಿಡಿಭಾಗ, ನಂಬರ್ ಪ್ಲೇಟ್, ಪರಿಶೀಲಿಸಿ ನೋಡಿದಾಗ ಲಾರಿ ನಂಬರ್ ಎಂ.ಹೆಚ್25ಬಿ9630 ಅಂತಾ ಇರುತ್ತದೆ. ಸ್ವಲ್ಪ ಹೊತ್ತಿನಲ್ಲಿ ಅಂಬ್ಯೂಲೆನ್ಸ್ ಸಿಬ್ಬಂದಿಯವರು ಸ್ಥಳಕ್ಕೆ ಬಂದಿದ್ದು. ನಾನು ಸದರಿ ಅಂಬ್ಯೂಲೆನ್ಸ್ ವಾಹನದಲ್ಲಿ ಅರುಣ ಮತ್ತು ಬಾಪು ಇವರಿಗೆ ಹಾಕಿಕೊಂಡು ಉಪಚಾರಕ್ಕಾಗಿ ಯುನೈಟೇಡ್ ಆಸ್ಪತ್ರೆ ಕಲಬುರಗಿಗೆ ತರುವಾಗ ಬೆಳಿಗ್ಗೆ 06-30 ಸುಮಾರಿಗೆ ಕಲಬುರಗಿ ನಗರ ಹತ್ತಿರ ಮಾರ್ಗ ಮದ್ಯದಲ್ಲಿ ಬಾಪು ಈತನು ಮೃತ ಪಟ್ಟಿರುತ್ತಾನೆ. ನಾನು ಮತ್ತು ಅರುಣ ಇಬ್ಬರು ಉಪಚಾರಕ್ಕಾಗಿ ಯುನೈಟೇಡ್ ಆಸ್ಪತ್ರೆ ಕಲಬುರಗಿಯಲ್ಲಿ ಸೇರಿಕೆಯಾಗಿ ಉಪಚಾರ ಪಡೆಯುತ್ತಿದ್ದೇವೆ.ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನರೋಣಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.        
ಅಸ್ವಾಭಾವಿಕ ಸಾವು ಪ್ರಕರಣ :
ದೇವಲಗಾಣಗಾಪೂರ ಠಾಣೆ : ಶ್ರೀಮತಿ ವಿಜಯಲಕ್ಷ್ಮೀ ಗಂಡ ರಾಜು ಬಿರಾದಾರ, ಮುಕ್ಕಾಂ-ಹಸರಗುಂಡಗಿ, ತಾ|| ಅಫಜಲಪೂರ ರವರು ಮತ್ತು ಗಂಡ ವ್ಯವಸಾಯ ಮಾಡಿಕೊಂಡು ಉಪಜೀವಿಸುತ್ತಿದ್ದೇವೆ. ಹೀಗಿದ್ದು ನನ್ನ ಗಂಡನ ಹೆಸರಿಗೆ ಹಸರಗುಂಡಗಿ ಗ್ರಾಮ ಸೀಮಾತಂರದಲ್ಲಿ ಹೊಲ ಸರ್ವೇ ನಂ-8/1 ರಲ್ಲಿ 04 ಎಕರೆ ಜಮೀನಿದ್ದು, ಜಮೀನಿಗೆ ನೀರಾವರಿ ಸಲುವಾಗಿ ಮತ್ತು ಕೃಷಿಗಾಗಿ ನನ್ನ ಗಂಡ ಎಸ್.ಬಿ. ಸಾಗನೂರ ಶಾಖೆಯಲ್ಲಿ 7,00,000 (ಏಳು ಲಕ್ಷ) ರೂ ಸಾಲ ಮಾಡಿದ್ದು, ಹೊಲದಲ್ಲಿ ಬೆಳೆ ಬೆಳೆದು ಸಾಲ ತೀರಿಸುವದಾಗಿ ಅಂದು ಕೊಂಡಿದ್ದು ಇರುತ್ತದೆ. ಹೀಗಿದ್ದು ಹೋದ ವರ್ಷ ಮಳೆ ಸರಿಯಾಗಿ ಬಾರದ ಕಾರಣ ನಮ್ಮ ಹೊಲದಲ್ಲಿ ಯಾವುದೇ ಬೇಳೆ ಬೆಳೆದಿರುವದಿಲ್ಲ. ವರ್ಷವೂ ಸಹ ನಾವು ಅಲ್ಲಲ್ಲಿ ನನ್ನ ಗಂಡ ಕೈಗಡ ರೂಪದಲ್ಲಿ ಹಣ ತೆಗೆದುಕೊಂಡು ಬೀಜ ಗೊಬ್ಬರ ಬಿತ್ತನೆ ಮಾಡಿದ್ದು, ಮಳೆ ಸರಿಯಾಗಿ ಬಾರದಕ್ಕೆ ಬೆಳೆ ಸರಿಯಾಗಿ ನಾಟಿಗೆಯಾಗಿಲ್ಲದದ್ದರಿಂದ ನನ್ನ ಗಂಡ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಎದೆ ಗುಂದಿ ನಾನು ಸಾಲ ಹೇಗೆ ಮುಟ್ಟಿಸಲಿ..? ನಾನು ಸತ್ತರೆ ಸರಿಯಾಗಿ ಆಗುತ್ತದೆ ಅಂತಾ ನನ್ನ ಮುಂದೆ ನೊಂದು ಹೇಳಿದ್ದರಿಂದ ನಾವು ಅವರಿಗೆ ದೈರ್ಯ ಹೇಳಿರುತ್ತೇವೆ. ಹೀಗಿದ್ದು ಇಂದು ದಿನಾಂಕ 06-09-2019 ರಂದು ಬೆಳಗ್ಗೆ 06-00 ಗಂಟೆಗೆ ನನ್ನ ಗಂಡ ಹೊಲಕ್ಕೆ ಹೋಗಿ ಬರುತ್ತೇನೆ ಅಂತಾ ನಮಗೆ ಹೇಳಿ ಹೋಗಿದ್ದು ಇರುತ್ತದೆ. ನಂತರ 07-00 ಗಂಟೆ ಸುಮಾರಿಗೆ ನನ್ನ ಭಾವನಾದ ಸಿದ್ದರಾಮ ಇವರು ವಾಪಸ್ ಮನೆಗೆ ಬಂದು ರಾಜು ಈತನು ನಮ್ಮ ಹೊಲದಲ್ಲಿರುವ ಬೇವಿನ ಗಿಡಕ್ಕೆ ಹಗ್ಗದಿಂದ ನೇಣು ಹಾಕಿಕೊಂಡು ತೀರಿಕೊಂಡಿರುತ್ತಾನೆ ಅಂತಾ ತಿಳಿಸಿದ್ದರಿಂದ ಹೊಲಕ್ಕೆ ಹೋಗಿ ನೋಡಲಾಗಿ,  ನನ್ನ ಗಂಡ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ತಿರಿಕೊಂಡಿದ್ದು ನಿಜವಿರುತ್ತದೆ. ಕಾರಣ ನನ್ನ ಗಂಡ ಕೃಷಿಗಾಗಿ ಎಸ್.ಬಿ. ಬ್ಯಾಂಕ್ ಸಾಗನೂರದಲ್ಲಿ ಹಾಗೂ ವಿಎಸ್.ಎಸ್.ಎನ್ ಹಸರಗುಂಡಗಿಯಲ್ಲಿ ಸಾಲ ತೆಗೆದು ಮಳೆ ಸರಿಯಾಗಿ ಆಗದ್ದಕ್ಕೆ  ಬೆಳೆ ಬೆಳೆಯದ ಕಾರಣ ಸಾಲ ಹೇಗೆ ಮುಟ್ಟಿಸಬೇಕು ಅಂತಾ ಮನನೊಂದು ಜೀವನದಲ್ಲಿ ಜಿಗುಪ್ಸೆ ಹೊಂದಿ ಇಂದು ದಿನಾಂಕ 06-09-2019 ರಂದು ಬೆಳಗ್ಗೆ 06-30 ಗಂಟೆ ಸುಮಾರಿಗೆ ನಮ್ಮ ಹೊಲದಲ್ಲಿನ ಬೇವಿನ ಗಿಡಕ್ಕೆ ನೇಣು ಹಾಕಿಕೊಂಡು ತೀರಿಕೊಂಡಿರುತ್ತಾರೆ.  ಅಂಥಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ದೇವಲಗಾಣಗಾಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ವಾಡಿ ಠಾಣೆ : ಕುಮಾರಿ ಸುಭದ್ರಮ್ಮ ತಂದೆ ಭೀಮಣ್ಣಾ ಬಡಿಗೇರ ಮು:ಹುಳಂಡಗೇರಾ ರವರು ಹುಟ್ಟಿದಾಗಿನಿಂದ ಬಲಗೈ ಅಂಗವಿಕಲವಾಗಿರುತ್ತದೆ. ನಾನು ಬಿ. ವರೆಗೆ ವಿದ್ಯಾಬ್ಯಾಸ ಮಾಡಿಕೊಂಡಿದ್ದು ಈಗ ಸುಮಾರು 2-3 ವರ್ಷಗಳಿಂದ ಧರ್ಮಸ್ಥಳದ ಗ್ರಾಮ ಅಭಿವೃದ್ದಿ ಯೋಜನೆ ಎಂಬ ಸಂಸ್ಥೆಯಲ್ಲಿ ಸೇವಾ ಪ್ರತಿನಿಧಿ ಅಂತಾ ನೌಕರಿ ಮಾಡಿಕೊಂಡಿದ್ದು ತಿಂಗಳಿಗೆ 03 ಸಾವಿರ ರೂಪಾಯಿ ಸಂಬಳ ಕೊಡುತ್ತಾರೆ. ನನಗೆ ಇನ್ನೂ ಮದುವೆಯಾಗಿರುವದಿಲ್ಲ. ನಾನು ನನಗೆ ಬಂದ ಸಂಬಳವನ್ನು ಮನೆಗೆ ಖರ್ಚಿಗೆ ಕೊಡುತ್ತೆನೆ. ಅಲ್ಲದೇ ಸದರಿ ಸಂಘದಿಂದ ಹಣವನ್ನು ಸಾಲದ ರೂಪದಲ್ಲಿ ಪಡೆದು ನಮ್ಮ ತಂದೆಗೆ ಕೊಟ್ಟಿರುತ್ತೆನೆ. ಹಣವನ್ನು ಮರಳಿ ನಮ್ಮ ತಂದೆ ಕೊಟ್ಟಿರುವದಿಲ್ಲ. ವಿಷಯದಲ್ಲಿ ನಮ್ಮ ತಂದೆ ತಾಯಿಯೊಂದಿಗೆ ತಕರಾರು ಮಾಡಿ ನನಗೆ ಬೈದು ಮನೆಯ ಹೊರಗಡೆ ಹಾಕಿದ್ದರಿಂದ ಸುಮಾರು 03 ತಿಂಗಳಿನಿಂದ ಬೇರೆ ಮನೆ ಮಾಡಿಕೊಂಡು ಒಬ್ಬಳೆ ವಾಸವಾಗಿರುತ್ತೆನೆ. ಅಂದಿನಿಂದ ನಮ್ಮ ತಂದೆ ತಾಯಿಯವರು ನನ್ನೊಂದಿಗೆ ಜಗಳ ಮಾಡುತ್ತ  ಬಂದಿರುತ್ತಾರೆ. ಅಲ್ಲದೇ 04 ತಿಂಗಳ ಹಿಂದೆ ನಮ್ಮ ಅಕ್ಕ ಅಯ್ಯಮ್ಮಳು ನಮ್ಮೂರಿಗೆ ಬಂದಿದ್ದರಿಂದ ಅವಳಿಗೆ ಹೊಸ ಬಟ್ಟೆಯನ್ನು ನಮ್ಮ ತಾಯಿ ಹಾಗೂ ನಾನು ಕೂಡಿಕೊಂಡು ಸನ್ನತಿ ಗ್ರಾಮದ ಬಟ್ಟೆ ಅಂಗಡಿಯಿಂದ 800 ರೂಪಾಯಿಗೆ ಖರೀದಿ ಮಾಡಿಕೊಂಡು ಬಂದಿದ್ದು ಹಣವನ್ನು ನಮ್ಮ ತಾಯಿ ಕೊಡುತ್ತೆನೆ ಅಂತಾ ಹೇಳಿ ತಂದಿರುತ್ತಾಳೆ. ಹೀಗಿರುವಾಗ ನಿನ್ನೆ ದಿನಾಂಕ 05/09/2019 ರಂದು ಬೆಳಗ್ಗೆ 07-00 ಗಂಟೆ ಸುಮಾರು ಸನ್ನತಿ ಗ್ರಾಮದ ಬಟ್ಟೆ ಅಂಗಡಿಯ ಲಕ್ಷ್ಮೀ ಎನ್ನುವಳು ನನ್ನ  ಮನೆಗೆ ಬಂದು ನಿಮ್ಮ ತಾಯಿ ಖರೀದಿ  ಮಾಡಿದ ಬಟ್ಟೆಗಳ ಹಣವನ್ನು ಇನ್ನು ಕೊಟ್ಟಿರುವದಿಲ್ಲ ಅಂತಾ ನನ್ನ ಸಂಗಡ ತಕರಾರು ಮಾಡುತ್ತಿದ್ದಾಗ ನಮ್ಮ ತಾಯಿ ಹಣ ಕೊಡುತ್ತಾಳೆ ನಡಿ ಅಂತಾ ಅವಳನ್ನು ಕರೆದುಕೊಂಡು ನಮ್ಮ ತಾಯಿ  ಮನೆಯ ಹತ್ತಿರ ಹೋಗಿ ನಮ್ಮ ತಾಯಿಗೆ ಕರೆದು ಲಕ್ಷ್ಮೀ ಇವರಿಗೆ ಹಣ ಕೊಡಲು ಹೇಳಿದಾಗ ‘’ ರಂಡಿ ಬೋಸಡಿ ಹಣ ನಿನ್ನ ಕೈಯಲ್ಲಿ ಕೊಟ್ಟಿದ್ದೆನೆ ನೀನು ಅವಳಿಗೆ ಏಕೆ ಹಣ ಕೊಟ್ಟಿರುವದಿಲ್ಲ ಅಂತಾನನ್ನೊಂದಿಗೆ ಜಗಳಕ್ಕೆ ಬಿದ್ದು ಮನೆಯಲ್ಲಿದ್ದ ನಮ್ಮ ತಂಗಿಯರಾದ ಸುರ್ವಣ ಗಂಡ ತಿಮಪ್ಪ, ಶೋಭಾ ತಂದೆ ಭೀಮಣ್ಣಾ ಮತ್ತು ನಮ್ಮ ತಂದೆ ಭೀಮಣ್ಣಾ ರವರು ಕೂಡಿಕೊಂಡು ಬಂದು ನನ್ನೊಂದಿಗೆ ಜಗಳ ತೆಗೆದು ‘’ರಂಡಿ ನಿನ್ನ ಸೊಕ್ಕು ಹೆಚ್ಚಾಗಿದೆ ಅಂತಾ ಬೈದು ಶೋಭಾ ಇವಳು ಅಲ್ಲೇ ಬಿದ್ದ ಬಡಿಗೆಯನ್ನು ತೆಗೆದುಕೊಂಡು ನನ್ನ ಕಾಲುಗಳಿಗೆ ಮತ್ತು ತಲೆಯ ಹಿಂದೆ ಹೊಡೆದು ಗುಪ್ತಗಾಯಪಡಿಸಿದಳು.ನಮ್ಮ ತಾಯಿ ಅಕ್ಕ ನಾಗಮ್ಮ ಇವಳು ಕೈ ಮುಷ್ಠಿ ಮಾಡಿ ಮುಖಕ್ಕೆ ಹಾಗೂ ಬಾಯಿ ಮೇಲೆ ಹೊಡೆದು ಗುಪ್ತಗಾಯಪಡಿಸಿರುತ್ತಾಳೆ. ನಮ್ಮ ತಂದೆ ಹೊಡೆಯರಿ ಬೋಸಡಿಗೆ ನಮಗೆ ವಿನಾಕಾರಣ ತ್ರಾಸ ಕೊಡುತ್ತಿದ್ದಾಳೆ ಅಂತಾ ಬೈದು ಊರಲ್ಲಿ ಕಾಣಿಸಿದರೆ ನಿನಗೆ ಖಲಾಸ ಮಾಡುತ್ತೆವೆ ಅಂತಾ ಜೀವದ ಬೆದರಿಕೆ ಹಾಕಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ವಾಡಿ ಠಾಣೆಯಲ್ಲಿ ಪ್ರಕರಣ ಧಾಖಲಾಗಿದೆ.