POLICE BHAVAN KALABURAGI

POLICE BHAVAN KALABURAGI

11 September 2019

KALABURAGI DISTRICT PRESS NOTE


ಜಿಲ್ಲಾ ಪೊಲೀಸ ಅಧೀಕ್ಷಕರವರ ಕಾರ್ಯಾಲಯ, ಕಲಬುರಗಿ
ದೂರವಾಣಿ ಸಂಖ್ಯೆ 08472-263602 , 08472-263606
___________________________________________________________________________________                                                                                                                 ದಿನಾಂಕ:11-09-2019
:ಪತ್ರಿಕಾ ಪ್ರಕಟಣೆ:
                                                                                                                                                              ದೇಶದಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ಹಾಗೂ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮ ಪಾಲನೆಗಾಗಿ ಕೇಂದ್ರ ಸರ್ಕಾರ ಈಗಾಗಲೇ ಮೋಟಾರು ವಾಹನ ಕಾಯ್ದೆಯಡಿ ದಾಖಲಿಸುವ ಪ್ರಕರಣಗಳಲ್ಲಿ ದಂಡದ ಮೊತ್ತವನ್ನು ಹೆಚ್ಚಿಸಿದ್ದು ಇರುತ್ತದೆಮಾನ್ಯ ಸರ್ವೋಚ್ಛ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮೀತಿಯು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಗಂಭೀರವಾಗಿ ಪರಿಗಣಿಸಿ ರಸ್ತೆ ಸುರಕ್ಷತೆ ಮತ್ತು ಸಂಚಾರ ನಿಯಮಗಳ ಪಾಲನೆಗಾಗಿ ಹಲವು ಆದೇಶಗಳನ್ನು ಹೊರಡಿಸಿದ್ದು ಇರುತ್ತದೆ.

  ವಿಷಯಕ್ಕೆ ಅನುಗುಣವಾಗಿ  ಹಾಗೂ ವಾಹನ ಚಾಲಕರ ಹಾಗೂ ಸವಾರರ ಹಿತದೃಷ್ಟಿಯಿಂದ ಕೆಳಕಂಡ ನಿಯಮಗಳನ್ನು ಕಡ್ಡಾಯವಾಗಿ ಪಾಲನೆ ಮಾಡಬೇಕಾಗಿ ಕೋರಲಾಗಿದೆ.

1.  ದ್ವಿಚಕ್ರ ವಾಹನ ಸವಾರರು ಹಾಗೂ ಹಿಂಬದಿಯ ಸವಾರರು ಕಡ್ಡಾಯವಾಗಿ ಹೆಲ್ಮೇಟ್ ಧರಿಸುವುದು.
2. ಮಧ್ಯಪಾನ ಮಾಡಿ ವಾಹನ ಚಲಾಯಿಸದೇ ಇರುವುದು, ಮಧ್ಯಪಾನ ಮಾಡಿ ವಾಹನ ಚಲಾಯಿಸಿದಲ್ಲಿ  
     10 ಸಾವಿರ ದಂಡದ ಜೊತೆ ಜೈಲು ಶಿಕ್ಷೆಯೂ ವಿಧಿಸಬಹುದು.
3. ಕಾರ್ ಮತ್ತು ಜೀಪ್ ಚಾಲಕರು ಹಾಗೂ ಪ್ರಯಾಣಿಕರು ಕಡ್ಡಾಯವಾಗಿ ಸೀಟ್ ಬೆಲ್ಟ್ ಧರಿಸುವುದು.
4. ವಾಹನಚಾಲಕರು ಕಡ್ಡಾಯವಾಗಿ ಮೂಲ ವಾಹನದ ನೊಂದಣಿ, ವಿಮೆ, ಎಮಿಷನ್ ಪ್ರಮಾಣ
    ಪತ್ರಗಳನ್ನು ಹಾಗೂ ವಾಹನ ಚಾಲನಾ ಪರವಾನಗಿ ಪ್ರಮಾಣ ಪತ್ರಗಳನ್ನು ಹೊಂದಿರಬೇಕು.
5.  ವಾಹನಗಳಲ್ಲಿ ನಿಗದಿಗಿಂತ ಹೆಚ್ಚಿನ ಜನರನ್ನು ಸಾಗಿಸಬಾರದು.
6.  ವಾಹನ ಚಾಲನೆ ಮಾಡುವಾಗ ಮೊಬೈಲ್ ಫೊನ್ ಬಳಸಬಾರದು.
7.  ವಾಹನ ಚಾಲನಾ ಪರವಾನಗಿ ಇಲ್ಲದೇ ಇರುವ ವ್ಯಕ್ತಿಗಳಿಗೆ ಹಾಗೂ 18 ವರ್ಷದೊಳಗಿನ ಮಕ್ಕಳಿಗೆ
       ವಾಹನ ಚಾಲನೆ  ಮಾಡಲು ನೀಡಿದರೆ ಅಂತಹ ವಾಹನದ ಮಾಲಿಕರಿಗೆ ರೂ.25 ಸಾವಿರ ದಂಡದ
       ಜೊತೆಗೆ ಮೂರು ವರ್ಷ  ಜೈಲು ಶಿಕ್ಷೆಗೆ ಗುರಿಯಾಗುವರು.
8. ಆಯಾ ಸ್ಥಳಗಳಲ್ಲಿ ನಗದಿಪಡಿಸಿದ ವೇಗದ ಅನುಗುಣವಾಗಿ ವಾಹನ ಚಲಾಯಿಸುವುದು, ಅತಿವೇಗ ಮತ್ತು
     ಅಲಕ್ಷತನದಿಂದ ವಾಹನ ಚಲಾಯಿಸುವವರ ವಿರುದ್ಧ ನಿಗದಿತ ದಂಡ ವಿಧಿಸಲಾಗುವುದು.
9.  ಸರಕು ಸಾಗಣೆ ವಾಹನಗಳಲ್ಲಿ ಸಾರ್ವಜನಿಕರನ್ನು ಸಾಗಿಸುವಂತಿಲ್ಲಾ.
10.  ನಿಗದಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್ ಮಾಡತಕ್ಕದ್ದು.
11. ಶಾಲಾ ಮಕ್ಕಳನ್ನು ಆಟೋರಿಕ್ಷಾ, ಶಾಲಾ ವಾಹನ ಮತ್ತು ಇತರೆ ವಾಹನಗಳಲ್ಲಿ ಮಿತಿಗಿಂತ ಹೆಚ್ಚಿನ
       ಸಂಖ್ಯೆಯಲ್ಲಿ ಸಾಗಿಸುವಂತಿಲ್ಲಾ.

ಕಲಬುರಗಿ ಜಿಲ್ಲೆಯಲ್ಲಿ ಕಳೆದ ಮೂರು ವರ್ಷಗಳಲ್ಲಿ ಅಂದರೆ 2016 ನೇ ಸಾಲಿನಲ್ಲಿ ಒಟ್ಟು 325 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 354 ಜನರು ಮೃತಪಟ್ಪಿದ್ದು, 2017 ನೇ ಸಾಲಿನಲ್ಲಿ 327 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 364 ಜನರು ಮೃತಪಟ್ಪಿದ್ದು, 2018 ನೇ ಸಾಲಿನಲ್ಲಿ 374 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 414 ಜನರು ಮೃತಪಟ್ಪಿದ್ದು ಹಾಗೂ ಪ್ರಸ್ತುತ ಸಾಲಿನ ಜೂಲೈ ಮಾಹೆಯ ವರೆಗೆ 224 ಮಾರಣಾಂತಿಕ ರಸ್ತೆ ಅಪಘಾತಗಳು ವರದಿಯಾಗಿದ್ದು ಅವುಗಳಲ್ಲಿ 227 ಜನರು ಮೃತಪಟ್ಪಿರುವುದನ್ನು ಗಮನಿಸಿದಾಗ ಜಿಲ್ಲೆಯಲ್ಲಿ ಪ್ರತಿ ವರ್ಷ ರಸ್ತೆ ಅಪಘಾತಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದ್ದು ತುಂಬಾ ಕಳವಳಕಾರಿಯಾದ ವಿಷಯವಾಗಿದೆ.  

ಕಲಬುರಗಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ಮತ್ತು ಸಾವು-ನೋವುಗಳನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಂಕಣಬದ್ಧವಾಗಿದೆ. ಜಿಲ್ಲೆಯಲ್ಲಿ ಹೆಚ್ಚುತ್ತಿರುವ ರಸ್ತೆ ಅಪಘಾತಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡುವವರ ವಿರುದ್ಧ ಮೋಟಾರು ವಾಹನ ಕಾಯ್ದೆಯಡಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಲಾಖೆಯ ಮೂಲ ಉದ್ದೇಶ ಸಂಚಾರ ನಿಯಮಗಳ ಪಾಲನೆಯಾಗುವಂತೆ ನೋಡಿಕೊಂಡು ರಸ್ತೆ ಅಪಘಾತಗಳಲ್ಲಿ ಹೆಚ್ಚುತ್ತಿರುವ ಸಾವು-ನೋವುಗಳನ್ನು ಕಡಿಮೆಮಾಡುವುದಾಗಿದೆ. ವಿಷಯದಲ್ಲಿ ಕಲಬುರಗಿ ಜನತೆ ಹಾಗೂ ಜಿಲ್ಲೆಯ ಎಲ್ಲಾ ಸಂಘ ಸಂಸ್ಥೆಗಳ ಸಹಕಾರ ಮತ್ತು ಪ್ರೋತ್ಸಾಹದ ಅಗತ್ಯವಿದ್ದು, ತಾವೆಲ್ಲರೂ ಮಹತ್ ಕಾರ್ಯದಲ್ಲಿ ಇಲಾಖೆಯೊಂದಿಗೆ ಭಾಗಿಯಾಗಲು ಮೂಲಕ ಕೋರಲಾಗಿದೆ.

                                                                                                             ಸಹಿ/-
                                                                                          ಸಾರ್ವಜನಿಕ ಮಾಹಿತಿ ಅಧಿಕಾರಿ  
                                                                                                              ಜಿಲ್ಲಾ ಪೊಲೀಸ ಕಛೇರಿ
                                                                                                                         ಕಲಬುರಗಿ

No comments: