POLICE BHAVAN KALABURAGI

POLICE BHAVAN KALABURAGI

09 August 2015

Kalaburagi District Reported Crimes

ಹಲ್ಲೆ ಮಾಡಿ ಜಾತಿ ನಿಂದನೆ ಮಾಡಿದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 06-08-2015 ರಂದು ರಾತ್ರಿ 8.00 ಗಂಟೆಯ ಸುಮಾರಿಗೆ ಶ್ರೀ ಮಲ್ಲಪ್ಪ ತಂದೆ ಹಾವಪ್ಪ ಹೊಸಮನಿ ಸಾ : ವರ್ಚನಳ್ಳಿ ಮತ್ತು ನನ್ನ ಹೆಂಡತಿ ಕಮಲಾಬಾಯಿ ಮಗನಾದ ಅಂಬರೇಶ ಮೂರು ಜನರು ನಮ್ಮ ಮನೆಯ ಎದುರು ಕುಳಿತುಕೊಂಡಿದ್ದೆವು. ಅದೇ ವೇಳೆಗೆ ನಮ್ಮೂರ ಅಬ್ದುಲ್ ಬಾಷಾ ಜಮಾದಾರ ಇತನು ತನ್ನ ಕೈಯಲ್ಲಿ ಕೊಡಲಿ ಹಿಡಿದುಕೊಂಡು ನನ್ನ ಮನೆಯ ಎದುರುಗಡೆ ಬಂದು ಏ ಮಲ್ಯಾ ಮಾದಿಗ ಸೂಳೆ ಮಗನೆ ನಮ್ಮ ಸಂಭಂಧಿಕರೊಂದಿಗೆ ಹೊಲದ ದಾರಿ ವಿಷಯದಲ್ಲಿ ತಕರಾರು ಮಾಡುತ್ತಿ ರಂಡಿ ಮಗನೆ ಅಂತಾ ಅವಾಚ್ಯವಾಗಿ ಬೈಯ ತೊಡಗಿದನು. ನಾನು ಅವನಿಗೆ ನಮಗೆ ಯಾಕೆ? ಬೈಯುತ್ತಿದ್ದಿ ಅಂತಾ ಕೇಳಿದಾಗ ಏ ಸೂಳಿಮಗನೆ ನನಗೆ ಎದುರು ಮಾತಾಡುತಿ ಅಂತಾ ಅಂದವನೆ ತನ್ನ ಕೈಯಲ್ಲಿನ ಕೊಡಲಿಯಿಂದ ಹೊಡೆಯುತ್ತೇನೆ ಅಂತಾ ಕೊಡಲಿ ತೋರಿಸ ಹತ್ತಿದ್ದನು ಆಗ ನನ್ನ ಹೆಂಡತಿ ಅವನಿಗೆ ಯಾಕೆ ನಮ್ಮ ಸಂಗಡ ಜಗಳ ಮಾಡುತ್ತಿ ಅಂತಾ ಕೇಳಲು ಬಂದಾಗ ಅವಳಿಗೂ ಅವನು ಏ ರಂಡಿ ಬೊಸಡಿ ಅಂತಾ ಬೈದಿರುತ್ತಾನೆ, ಹಾಗೂ ನನಗೆ ಮುಂದಕ್ಕೆ ಹೊಗದಂತೆ ತಡೆದು ನಿಲ್ಲಿಸಿ ಹೊಲದ ದಾರಿಯ ವಿಷಯದಲ್ಲಿ ಇನ್ನೊಮ್ಮೆ ನಮ್ಮ ತಂಟೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲಾ ಅಂತಾ ಜೀವದ ಬೇದರಿಕೆ ಹಾಕಿರುತ್ತಾನೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮೊಸ ಮಾಡಿ ಆಕ್ರಮವಾಗಿ ಮರಳು ಸಾಗಿಸುತ್ತಿದ್ದ ಟಿಪ್ಪರ ವಶ :
ಜೇವರ್ಗಿ ಠಾಣೆ : ದಿನಾಂಕ 08.08.2015 ರಂದು ಮಧ್ಯಾಹ್ನ ನರಿಬೋಳ ಗ್ರಾಮದ ಹತ್ತಿರ ರಾಜವಾಳ ನರಿಬೋಳ ರಸ್ತೆಯ ಮೇಲೆ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಸಂಭಂದಪಟ್ಟ ಇಲಾಖೆಗೆ ಮತ್ತು ಸರಕಾರಕ್ಕೆ ಮೊಸ ಮಾಡಿ ಕಳ್ಳತನದಿಂದ ಮರಳು ಸಾಗಾಣಿಗೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ಪಂಡಿತ ವಿ ಸಗರ ಪಿ.ಎಸ್.ಐ  ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಹೋಗಿ ದಾಳಿ ಮಾಡಿ ಟಿಪ್ಪರ್ ನಂ ಜಿ.ಎ05ಟಿ1739 ನೇದ್ಧನ್ನು ಮತ್ತು 3 ಬ್ರಾಸ್ ಮರಳು ಅಂ.ಕಿ 1.500/- ರೂ ನೇದ್ದನ್ನು ಪಂಚರ ಸಮಕ್ಷಮದಲ್ಲಿ ಜಪ್ತ ಮಾಡಿಕೊಂಡಿದ್ದು ದಾಳಿಯ ಕಾಲಕ್ಕೆ ಸದರಿ ಟಿಪ್ಪರ್ ಚಾಲಕನು ಓಡಿ ಹೋಗಿದ್ದು  ಸದರಿ ಟಿಪ್ಪರನೊಂದಿಗೆ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.
ಹೆಣ್ಣು ಮಗಳು ಕಾಣೆಯಾದ ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ ೦2.08.2015 ರಂದು ಮುಂಜಾನೆ ನನ್ನ ಹೆಂಡತಿಯಾದ ಮಹಾನಂದ ಗಂಡ ಮರೆಪ್ಪ ಭಜಂತ್ರಿ ವಯಾ : 22 ಇವಳು ಜೇವರಗಿಯ ಶಾಸ್ತ್ರಿ ಚೌಕ್‌ ನಗರದಲ್ಲಿನ ನನ್ನ ಮನೆಯಿಂದ ಕಲಬುರಗಿಯ ನ್ಯಾಷನಲ್ ಬಿ.ಎಡ್ ಕಾಲೇಜಿಗೆ ಹೋಗಿ ಬರುವದಾಗಿ ಹೇಳಿ ಹೋಗಿದ್ದು ಮರಳಿ ಮನೆಗೆ ಬಂದಿರುವದಿಲ್ಲ, ಕಾಣೆಯಾಗಿರುತ್ತಾಳೆ ಅಂತ ನಮ್ಮ ಸಂಭಂದಿಕರಲ್ಲಿ ಅವಳ ಗೆಳತಿಯರಲ್ಲಿ ಮತ್ತು ಎಲ್ಲಾ ಕಡೆ  ಹುಡುಕಾಡಿದರು ಸಿಕ್ಕಿರುವದಿಲ್ಲ ಅಂತಾ ಶ್ರೀ ಮರೆಪ್ಪ ತಂದೆ ಭಾಗಪ್ಪ ಭಜಂತ್ರಿ ಸಾ : ಶಾಸ್ತ್ರಿ ಚೌಕ್ ಜೇವರಗಿ. ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

08 August 2015

Kalaburagi District Reported Crimes

ಮಟಕಾ ಜೂಜಾಟದಲ್ಲಿ ನಿರತ ವ್ಯಕ್ತಿಯ ಬಂಧನ :
ಅಫಜಲಪೂರ ಠಾಣೆ : ದಿನಾಂಕ 08-08-2015 ರಂದು ಮಾಶಾಳ ಗ್ರಾಮದ ಬಸ್ ನಿಲ್ದಾಣದ ಹತ್ತಿರ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೊಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಗೆಲ್ಲರಿ ಅಂತಾ ಅನ್ನುತ್ತಾ ಸಾರ್ವಜನಿಕರ ಮನವೂಲಿಸಿ, ಜನರನ್ನು ವಂಚಿಸಿ ಅವರಿಂದ ಹಣ ಪಡೆದು, ಅವರಿಗೆ ಅಂಕಿ ಸಂಖ್ಯೆ ಬರೆದ ಮಟಕಾ ಚೀಟಿಗಳನ್ನು ಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದಾನೆ ಅಂತಾ ಬಾತ್ಮಿ ಬಂದ ಮೇರೆಗೆ, ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸಿ.ಪಿ.ಐ ಸಾಹೇಬರು ಅಫಜಲಪೂರ ರವರ ಮಾರ್ಗದರ್ಶನದಲ್ಲಿ ಸ್ಥಳಕ್ಕೆ ಹೋಗಿ, ಮಾಶಾಳ ಗ್ರಾಮದ ಬಸ್ ನಿಲ್ದಾಣದಿಂದ ಸ್ವಲ್ಪ ದೂರು ನಮ್ಮ ವಾಹನವನ್ನು ನಿಲ್ಲಿಸಿ ಮರೆಯಾಗಿ ನಿಂತು ನೋಡಲು, ಬಸ್ ನಿಲ್ದಾಣದ ಸಾರ್ವಜನಿಕ ಸ್ಥಳದಲ್ಲಿ ಒಬ್ಬ ವ್ಯಕ್ತಿ ನಿಂತುಕೊಂಡು ಹೋಗಿ ಬರುವ ಜನರಿಗೆ 1 ರೂಪಾಯಿಗೆ 80 ರೂಪಾಯಿ ಕೊಡುತ್ತೆನೆ ಅಂತಾ ಕರೆದು, ಜನರಿಗೆ ವಂಚಿಸಿ ಅವರಿಂದ ಹಣ ಪಡೆದು ಅವರಿಗೆ ಅಂಕಿ ಸಂಖ್ಯ ಬರೆದುಕೊಟ್ಟು, ಮೋಸದಿಂದ ಮಟಕಾ ಬರೆದುಕೊಳ್ಳುತ್ತಿದ್ದುದನ್ನು ಖಚಿತಪಡಿಸಿಕೊಂಡು ದಾಳಿ ಮಾಡಿ ಹಿಡಿದು ಸದರಿಯವನ ಹೆಸರು ವಿಳಾಸ ವಿಚಾರಿಸಲಾಗಿ ಮಡೆಪ್ಪ ತಂದೆ ಕಲ್ಲಪ್ಪ ಕುಂಬಾರ ಸಾ: ಮಾಶಾಳ ತಾ: ಅಫಜಲಪೂರ ಅಂತಾ ತಿಳಿಸಿದ್ದು, ಸದರಿಯವನನ್ನು ಮಟಕಾ ಬರೆದುಕೊಂಡು ಎಲ್ಲಿ ಕೊಡುತ್ತಿ, ಯಾರಿಗೆ ಕೊಡುತ್ತಿ ಎಂಬುದರ ಬಗ್ಗೆ ವಿಚಾರಿಸಿದ್ದು, ಸದರಿ ವ್ಯಕ್ತಿ ಇಲ್ಲಿ ಜನರಿಂದ ಹಣ ಪಡೆದು ಮಟಕಾ ಬರೆದುಕೊಂಡು ಮಹಾರಾಷ್ಟ್ರದ ದುಧನಿ, ಅಕ್ಕಲಕೋಟ ಪಟ್ಟಣಗಳಿಗೆ ಹೋಗಿ, ಬಸ್ ನಿಲ್ದಾಣಗಳಲ್ಲಿ ತಿರುಗಾಡಿ ಮಟಕಾ ತಗೆದುಕೊಳ್ಳುವ ಬಗ್ಗೆ ಕೇಳಿ ಅವರಿಗೆ ಮಟಕಾ ಬರೆದುಕೊಂಡ ನಂಬರಗಳನ್ನು ಹಾಗೂ ಹಣವನ್ನು ಕೊಟ್ಟು ಬರುತ್ತೆನೆ. ಸದರಿಯವರ ಹೆಸರು ವಿಳಾಸದ ಬಗ್ಗೆ ನನಗೆ ಗೊತ್ತಿರುವುದಿಲ್ಲ ಅಂತಾ ತಿಳಿಸಿರುತ್ತಾನೆ. ನಂತರ ಸದರಿಯವನ ವಶದಿಂದ ಮಟಕಾ ಜೂಜಾಟಕ್ಕೆ ಸಂಬಂಧ ಪಟ್ಟ 1180/- ರೂಪಾಯಿ ನಗದು ಹಣ ಹಾಗೂ ಅಂಕಿ ಸಂಖ್ಯೆ ಬರೆದ ಒಂದು ಮಟಕಾ ಚೀಟಿ ಮತ್ತು ಒಂದು ಬಾಲ ಪೆನ್ನ ವಶಪಡಿಸಿಕೊಂಡು ಸದರಿಯವನೊಂದಿಗೆ ಅಫಜಲಪೂರ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.   
ಆಕ್ರಮ ಮರಳು ಸಾಗಿಸುತ್ತಿದ್ದ ಟ್ರ್ಯಾಕ್ಟರಗಳ ಜಪ್ತಿ : 
ಜೇವರ್ಗಿ ಠಾಣೆ : ದಿನಾಂಕ 07.08.2015 ರಂದು ಮುಂಜಾನೆ ನರಿಬೊಳ ಗ್ರಾಮದ ಸಿಮಾಂತರದ ಭೀಮಾ ನದಿಯ ದಂಡೆಯಲ್ಲಿ ಸಂಬಂದಪಟ್ಟ ಇಲಾಖೆಯಿಂದ ಯಾವುದೆ ಪರವಾನಿಗೆಯನ್ನು ಪಡೆದುಕೊಳ್ಳದೆ ಸಂಭಂದಪಟ್ಟ ಇಲಾಖೆಗೆ  ಮತ್ತು ಸರಕಾರಕ್ಕೆ ಮೊಸ ಮಾಡಿ ಕಳ್ಳತನದಿಂದ ಮರಳು ಸಾಗಾಣಿಗೆ ಮಾಡುತ್ತಿದ್ದ ಬಗ್ಗೆ ಬಾತ್ಮಿ ಬಂದ ಮೇರೆಗೆ ಶ್ರೀ. ಪಂಡಿತ ವಿ ಸಗರ ಪಿ.ಎಸ್.ಐ ಜೇವರ್ಗಿ ಠಾಣೆ ಹಾಗು ಸಿಬ್ಬಂದಿ ಮತ್ತು ಪಂಚರೊಂದಿಗೆ ಸ್ಥಳಕ್ಕೆ ಹೋಗಿ ದಾಳಿ ಮಾಡಿ ಟ್ರ್ಯಾಕ್ಟರ್ ನಂ 1) KA32TK1183 Chassis No- QUTH31619004886 Engine No- 391347/SMH06804  2) KA32TA5287 3) KA32-4935 4) KA32T5789 5) KA32TA7096 6) Engine No 431020YSHA0208, Chassis No- QYCB406007786  ಮತ್ತು 2 ಬ್ರಾಸ್ ಮರಳು ಅಂ.ಕಿ 1000/- ರೂ ನೇದ್ದವುಗಳು  ಪಂಚರ ಸಮಕ್ಷಮದಲ್ಲಿ  ಜಪ್ತ ಮಾಡಿಕೊಂಡಿದ್ದು ದಾಳಿಯ ಕಾಲಕ್ಕೆ ಸದರಿ ಟ್ರ್ಯಾಕ್ಟರ್ ಗಳ ಚಾಲಕರು ಮತ್ತು ಮಾಲೀಕರು ಓಡಿ ಹೋಗಿದ್ದು ಮರಳಿ ಜೇವರ್ಗಿ ಠಾಣೆಗೆ ಬಂದು ಪ್ರಕರಣ ದಾಖಲಿಸಲಾಗಿದೆ.

07 August 2015

Kalaburagi District Reported Crimes

ಅಂತರಾಜ್ಯ ಮೊಬೈಲ್ ಕಳ್ಳರ ಬಂಧನ :
ಯಡ್ರಾಮಿ ಠಾಣೆ : ಶ್ರೀ ಮಡಿವಾಳಪ್ಪಾ ತಂದೆ ಈರಣ್ಣಾ ಗುರುಶೇಟ್ಟಿ ಸಾ : ಯಡ್ರಾಮಿ ರವರು ದಿನಾಂಕ: 03-08-2015 ರಂದು ನಾನು ಬೆಳ್ಳಗ್ಗೆ 9:00 ಗಂಟೆ ಸುಮಾರಿಗೆ ನಾನು ಪ್ರತಿ ವಾರದಂತೆ ಮನೆಯಿಂದ ಕಾಯಿಪಲ್ಲೆ ಕರಿದಿ ಮಾಡಲು ಸಂತೆಗೆ ಬಂದೆನು. ನನ್ನ ಹತ್ತಿರ ಇದ್ದ ಸಮ್ ಸಾಂಗ ಗೆಲಕ್ಸಿ ಕೋರ್ 2 ಕಪ್ಪು ಬಣ್ಣದ ಮೊಬೈಲ ಶರ್ಟಿನ ಜೇಬಿನಲ್ಲಿ ಇಟ್ಟುಕೊಂಡು ಸಿಂಡಿಕೇಟ ಬ್ಯಾಂಕ ಎದುರುಗಡೆ ಕಾಯಿಪಲ್ಲೆ  ಮಾಡಿಕೊಂಡು ಹಣ ಕೊಡಲು ಶರ್ಟಿನ ಮೇಲಿನ ಜೇಬಿನಲ್ಲಿ ಕೈ ಹಾಕಿದಾಗ ನನ್ನ ಮೊಬೈಲ ಜೇಬಿನಲ್ಲಿ ಇರಲಿಲ್ಲ. ಆಗ ನಾನು ಗಾಬರಿಯಾಗಿ ಯಾರೋ ಕಳ್ಳರು ನನ್ನ ಜೇಬಿನಿಂದ ಮೊಬೈಲ ಕಳುವು ಮಾಡಿಕೊಂಡಿರುತ್ತಾರೆ ಅಂತಾ ಅಕ್ಕ ಪಕ್ಕ ಜನರಿಗೆ ಹೇಳುತ್ತಿದ್ದಾಗ ಅಲ್ಲೆ ಸ್ವಲ್ಪ ದೂರದಲ್ಲಿ 5 ಜನರು ನಿಂತು ತೆಲಗು ಭಾಷೆ ಮಾತನಾಡುತ್ತಿದ್ದರು, ನನಗೆ ನೋಡಿ ಆ 5 ಜನರು ಅವಸರದಿಂದ ತಮ್ಮ ಸೈಕಲ್ ಮೊಟಾರ ತೆಗೆದುಕೊಂಡು ಎರಡು ಸೈಕಲ್ ಮೊಟಾರ ಮೆಲೆ ಇಬ್ಬಿಬ್ಬರಂತೆ ಒಂದು ಮೊಟಾರ ಸೈಕಲ್ ಮೇ ಒಬ್ಬನು ಹೀಗೆ 3 ಮೊಟಾರ ಸೈಕಲ್ ಮೇಲೆ  ಒಂದು ಕುಳಿತುಕೊಂಡು ವೇಗವಾಗಿ ಬಸ್ಸ ಸ್ಟ್ಯಾಂಡ ಕಡೆಗೆ ಹೋದರು. ಆಗ ನಾನು ಸೈಕಲ್ ಮೊಟಾರಗಳ ನಂಬರ ನೋಡಿರುವದಿಲ್ಲ. ನಾನು ಮತ್ತು ಗೆಳೆಯನಾದ ಮಹೇಶ ತಂದೆ ಸುಭಾಷ ಅಂಕಲಕೋಟಿ ಇವನೊಂದಿಗೆ ನಾನು ಮೊಟಾರ ಸೈಇಕಲ್ ತೆಗೆದುಕೊಂಡು ಬೆನ್ನ ಹತ್ತಿದೆವು. ಆದರೆ ಅವರು ಯಾವ ರಸ್ತೆಯಿಂದ ಹೋದರು ಅಂತಾ ನಮಗೆ ಗೊತ್ತಾಗಲಿಲ್ಲ. ಕಾರಣ ನನ್ನ ಮೊಬೈಲ್ ಸಮ್ ಸಂಗ ಕೋರ 2 ಕಪ್ಪು ಬಣ್ಣದ್ದು ಇದರ ಕಿಮ್ಮತ್ತು 8200=00 ಇದ್ದು, ನನ್ನ ಮೊಬೈಲ ಕಳುವು ಮಾಡಿದವರಿಗೆ ಪತ್ತೆ ಹಚ್ಚಬೇಕು ಮತ್ತು ಅವರಿಗೆ ನಾನು ನೋಡಿದರೆ ಗುರುತಿಸುತ್ತೇನೆ. ನನ್ನ ಮೊಬೈಲ ಕಳುವಾದಾಗ ಬೆಳ್ಳಗ್ಗೆ 10 ಗಂಟೆಯಾಗಿರಬೇಕು ನನ್ನ ಮೊಬೈಲ ನಂಬರ 9632716288 ಮತ್ತು ಐ.ಎಂ.ಇ.ಐ ನಂಬರ 1] 357926/06/574524/7 2]357927/06/574524/5 ಇದ್ದು ನನ್ನ ಮೊಬೈಲ್ ಕಳ್ಳತನ ಮಾಡಿಕೊಂಡು ಹೋದವರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಯಡ್ರಾಮಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣದ ತನಿಖೆ ಹಾಗು ಆರೋಪಿತರ ಪತ್ತೆಗಾಗಿ ಹೋಗಿ ದಿನಾಂಕ 06-08-2015 ರಂದು ಬೇಳಗಿನ ಜಾವ 4 ಗಂಟೆಯ ಸುಮಾರಿಗೆ ಜೇವರ್ಗಿಯ ಬಸ್ ಸ್ಟ್ಯಾಂಡ್ ಹತ್ತಿರ ಸಂಶಯಾಸ್ಪದ ರೀತಿಯಲ್ಲಿ ತಿರುಗಾಡುವ 5 ಜನರನ್ನು ಹಿಡಿಯಲು ಹೋದಾಗ ಇಬ್ಬರು ಓಡಿ ಹೋಗಿದ್ದು ಮೂವರನ್ನು ಹಿಡಿದು ಹೆಸರು ವಿಳಾಸ ವಿಚಾರಿಸಲಾಗಿ 1) ಚಿನ್ನ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) 2) ಗೋಪಿ @ ಪಾಸು ಪ್ಲೆಟ್ ತಂದೆ ವೆಂಕಟೇಶ ಸಾ|| ಶ್ರೀರಾಮ ನಗರ ತಾಂಡೂರು (ತೆಲಾಂಗಣ )  3) ಸಾಯಿರಾಮ ತಂದೆ ವೆಂಕಟೆಶ ಪಾಸು ಪ್ಲೆಟ್ ಸಾ|| ರಾಮನಗರ ನಿಜಾಮಾಬಾದ (ತೆಲಾಂಗಣ ) ಇವರನ್ನು ಹಿಡಿಕೊಂಡು ವಿಚಾರಣೆ ಮಾಡಿದಾಗ ಯಡ್ರಾಮಿ ಠಾಣೆಯ ಗುನ್ನೆ ನಂ 113/15, 114/15, 115/15, 25/15128/14 ಅಲ್ಲದೆ ಜೆವರ್ಗಿ ಠಾಣೆಯ ಗುನ್ನೆ ನಂ 74/15, ನೆದ್ದರಲ್ಲಿ ಒಟ್ಟು 2 ಮೋಬೈಲ್ ಹಾಗು 45 ಸಾವಿರ ರೂಗಳು ಜಪ್ತ ಪಡಿಸಿಕೊಂಡಿದ್ದಲ್ಲದೆ ಇನ್ನು 60 ಮೊಬೈಲಗಳು ಹಾಗು 3 ಮೋಟರ್ ಸೈಕಲ್ಗಳು ಹಿಗೆ ಒಟ್ಟು 10,45,000/- ರೂಪಯಿಗಳು ಬೆಲೆ ಬಾಳುವ ವಸ್ತುಗಳನ್ನು ಜಪ್ತ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಮೊಹ್ಮದ್ ಮುಬೀನ ತಂದೆ ಅಬ್ದುಲ್ ಕರೀಮ್ ಸಿಗ್ನಿಫರೋಶ್ ಸಾ: ಸಿಟಿ ಸ್ಕೂಲ್ ಹಿಂಬಾಗ ಜಮ್ ಜಮ್ ಕಾಲನಿ ಕಲಬುರಗಿ ಇವರು ದಿನಾಂಕ; 06/08/2015 ರಂದು ಎ.ಎಮ್.ಬೆಂಕಾಟ ಫಂಕ್ಷನಹಾಲನಲ್ಲಿ ನಮ್ಮ ಸಂಬಂಧಿಕರ ಮದುವೆ ಕಾರ್ಯಕ್ರಮ ಇರುವ ಪ್ರಯುಕ್ತ ನಾವು ಕುಟುಂಬ ಸಮೇತರಾಗಿ ದಿನಾಂಕ: 06/08/2015 ರಂದು ರಾತ್ರಿ 9-30 ಪಿಎಮ್ ಗಂಟೆ ಸುಮಾರಿಗೆ ನಮ್ಮ ಮನೆಯ ಬಾಗಿಲ ಕೀಲಿ ಹಾಕಿಕೊಂಡು ಮದುವೆ ಕಾರ್ಯ ಕ್ರಮಕ್ಕೆ ಹಾಜರಾಗಿ ಕಾರ್ಯಕ್ರಮ ಮುಗಿಸಿಕೊಂಡು ದಿನಾಂಕ: 07/08/2015 ರಂದು ರಾತ್ರಿ 2-30 ಎಎಮ್ ಗಂಟೆ ಸುಮಾರಿಗೆ ನಾನು ಮತ್ತು ನಮ್ಮ ತಂದೆ ವಾಪಸ್ ಮನೆಗೆ ಬಂದು ನೋಡಲು ಮನೆಯ ಬಾಗಿಲ ಕೊಂಡಿ ಮುರಿದಿದ್ದು ಬಾಗಿಲು ಸ್ವಲ್ಪ ತೆರೆದಿದ್ದು ಆಗ ನಾನು ಗಾಬರಿಯಿಂದ ಮನೆಯ ಒಳಗಡೆ ಹೋಗಿ ನೋಡಲು ಮನೆಯ ಬೆಡರೂಮನಲ್ಲಿನ ಅಲಮಾರದ ಬಾಗಿಲು ತೆರೆದಿದ್ದು ಅಲಮಾರದಲ್ಲಿದ್ದ ಬಟ್ಟೆ ಬರೆಯೆಲ್ಲಾ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದು ನಾನು ಗಾಬರಿಯಿಂದ ಒಳಗೆ ನೋಡಲು ಅಲಮಾರಾದಲ್ಲಿಟ್ಟಿದ್ದ  ಬಂಗಾರದ ಆಭರಣಗಳು, ಬೆಳ್ಳಿಯ ಆಭರಣಗಳು ಮತ್ತು ನಗದು ಹಣ ಒಟ್ಟು 1,68,100/- ಕಿಮ್ಮತ್ತಿನವುಗಳನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪರಿಚಿತ ಹೆಣ್ಣುಮಗಳು ಅ ಸ್ವಾಭಾವಿಕ ಸಾವು ಪ್ರಕರಣ :
ಚೌಕ ಠಾಣೆ : ಶ್ರೀ ಗೋವಿಂದರೆಡ್ಡಿ ತಂದೆ ಹಣಮಂತರೆಡ್ಡಿ  ಸಾ: ದಣ್ಣೂರ ತಾ:ಆಳಂದ  ಹಾಲಿ ವಸತಿ, ಗಣೇಶ ಮಂದಿರದ ಹತ್ತಿರ ಮುಕ್ತಂಪೂರ ಕಲಬುರಗಿ ಇವರು ದಿನಾಂಕ 06.08.2015  ರಂದು ಬೆಳ್ಳಿಗ್ಗೆ 10 ಗಂಟೆಗೆ ನಮ್ಮ ವೆಲ್ಡಿಂಗ ಅಂಗಡಿಗೆ ಬಂದು ಕೆಲಸ ಮಾಡುತ್ತಿರುವಾಗ ಒಬ್ಬ ವಯಸ್ಸಾದ ಹೆಣ್ಣು ಮಗಳು ಅಂದಾಜು 35-45 ವಯಸ್ಸು ಅವಳು ದಿನಾಲು ನವಜೀವನ ಕಲ್ಯಾಣ ಮಂಟಪದ ಹತ್ತಿರ ರಸ್ತೆಯಲ್ಲಿ ಹೋಗಿ ಬರುವ ಸಾರ್ವಜನಿಕರಿಂದ  ಭಿಕ್ಷೆ ಬೇಡಿ ಉಟ ಮಾಡುವುದು ಅಲ್ಲದೆ ನಮ್ಮ ಅಂಗಡಿಯ ಎದುರುಗಡೆಯಿಂದ  ಹೋಗಿ ಬರುವ ಜನರಿಗೆ ಭಿಕ್ಷೆ ಬೇಡುತ್ತಾ ಇರುತ್ತಿದ್ದಳು. ಬಿಸಿಲಿನ ತಾಪಕ್ಕೆ ತಾಳಲಾರದೇ ಅಲ್ಲಿಯೇ ರಸ್ತೆಯ ಪಕ್ಕದ ಬೇವಿನ ಗಿಡದ ನೆರಳಿಗೆ ಮಲಗುತ್ತಿದ್ದಳು. ಇಂದು ದಿನಾಂಕ: 07.08.2015 ರಂದು ಬೆಳೆಗ್ಗೆ 10.00 ಗಂಟೆಗೆ ನಾನು ಎಂದಿನಂತೆ ನನ್ನ ವೆಲ್ಡಿಂಗ್ ಅಂಗಡಿಗೆ ಬಂದು ಅಂಗಡಿ ತೆಗೆದು ನಂತರ ಮೂರ್ತ ವಿಸರ್ಜನೆಗಾಗಿ ನವಜೀವನ ಕಲ್ಯಾಣ ಮಂಟಪದ ಪಕ್ಕದಲ್ಲಿ ಹೋದಾಗ ಅಲ್ಲಿಯೇ ಮುಳ್ಳು ಕಂಟೆಯ ಮರೆಯಲ್ಲಿ ಮೇಲೆ ತಿಳಿಸಿದ ಅಪರಿಚಿತ ಭಿಕ್ಷುಕಿ ಹೆಣ್ಣು ಮಗಳು ಅಂಗಾತಾಗಿ ಬಿದ್ದಿದ್ದು,  ಹತ್ತಿರ ಹೋಗಿ ನೋಡಲಾಗಿ ಅವಳ ಮುಖದ ಮೇಲೆ ದೇಹದ ಮೇಲೆ ನೋಣಗಳು, ಹುಳುಗಳು ಮೆತ್ತಿಕೊಂಡಿದ್ದವು. ಆಗ ನಾನು ನಮ್ಮ ಸ್ನೇಹಿತರಾದ ಏಜಾಜ ತಂದೆ ಇಮಾಮ ಪಟೇಲ ಮತ್ತು ರಮೇಶ ತಂದೆ ಅಂಬೋಜಿರಾವ ನಾಗೂರಕರ ಇವರಿಗೆ ಕರೆಯಿಸಿ ನಂತರ ಎಲ್ಲರೂ ಕೂಡಿಕೊಂಡು   ನಾವು ಸದರಿಯವಳಿಗೆ ಹೊರಳಾಡಿಸಿ ನೋಡಲು ಸದರಿಯವಳು ಮೃತ ಪಟ್ಟಿದ್ದು ಕಂಡು ಬರುತ್ತದೆ. ಸದರಿಯವಳು ತನಗೆ ಇದ್ದ ಯಾವುದೂ ಒಂದು ಕಾಯಿಲೆಯಿಂದ  ನರಳುತ್ತಾ  ಮತ್ತು ಬಿಸಿಲಿನ ತಾಪತಾಳದೇ ಮೃತ ಪಟ್ಟಿರಬಹುದು. ಸದರಿಯವಳ ಹತ್ತಿರ ಯಾವುದೆ ಕುರಹುಗಳು ಪತ್ತೆಯಾಗಿರುವದಿಲ್ಲ. ಸದರಿಯವಳ ವಯಸ್ಸು 35-45 ವರ್ಷಗಳಿರಬಹುದು. ಸದರಿಯವಳ ಮೈ ಮೇಲೆ ಒಂದು ಕೆಂಪು ಬಣ್ಣದ ನೈಟಿ ಇದ್ದು ಅದರಲ್ಲಿ ಹಸಿರು ಬಣ್ಣದ ಹೂವಿನ ಚಿತ್ರಗಳಿರುತ್ತವೆ. ಉದ್ದನೇಯ ಮುಖ, ನೇರ ಮೂಗು, ತೆಲೆಯಲ್ಲಿ  ಕಪ್ಪನೆಯ ಕೂದಲು, ಸಾದಾಕಪ್ಪು ಬಣ್ಣ, ಗದ್ದದ ಮೇಲೆ ಸ್ವಲ್ಪ ದಾಡಿ ಬಂದಂತೆ ಕಂಡುಬರುತ್ತಿದ್ದು, ಅಂದಾಜು 5 ಫೂಟ 5 ಇಂಚ ಎತ್ತರ ಇರಬಹುದು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.