POLICE BHAVAN KALABURAGI

POLICE BHAVAN KALABURAGI

24 February 2015

Kalaburagi District Reported Crimes

ಗುಂಡು ಹಾರಿಸಿ ಕೊಲೆ ಮಾಡಲು ಪ್ರಯತ್ನ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ 24/02/2015 ರಂದು ಶ್ರೀ ದಿಲೀಪ ತಂದೆ ಶಂಕರ ಪವಾರ  ಸಾ|| ಪ್ರತಾಪ ನಗರ ತಾ|| ಉತ್ತರ ಸೋಲ್ಲಾಪೂರ ಜಿ|| ಸೋಲ್ಲಾಪೂರ (ಎಮ್.ಹೆಚ್) ರವರ ಮತ್ತು ನಮ್ಮ ಪಕ್ಕದ ತೀರೆ ತಾಂಡಾದವನಾದ ದತ್ತಾತ್ರೇಯ ತಂದೆ ಸುಭಾಷ ರಾಠೋಡ ಇಬ್ಬರು ಕೂಡಿ ಮನೆಗಳ ಲೈಟ ಪೀಟಿಂಗ ಮಾಡುವ ಕೆಲಸ ಮಾಡುತ್ತಿದ್ದು  ಈಗ 4 ದಿನಗಳ ಹಿಂದೆ ನನ್ನ ಜೊತೆಗೆ ಕೆಲಸ ಮಾಡುವ ದತ್ತು ರಾಠೋಡ ಈತನ ಮಾವ ನಾಗೇಶ ಇವನು ನಮ್ಮ ಹತ್ತಿರ ಬಂದು ನಾನು ಹೊಸ ಮನೆ ಕಟ್ಟುತ್ತಿದ್ದೆನೆ, ಆ ಮನೆಗೆ ನೀವುಗಳು ಲೈಟ ಪೀಟಿಂಗ ಮಾಡಲು ಬರಬೇಕು ಎಂದು ವ್ಯವಹಾರ ಮಾತಾಡಿದ್ದರಿಂದ ನಾವಿಬ್ಬರು ಒಪ್ಪಿ ಲೈಟ ಪೀಟಿಂಗ ಮಾಡಲು ಅಫಜಲಪೂರ ತಾಲೂಕಿನ ಬಳೂರ್ಗಿ ತಾಂಡಾಕ್ಕೆ ಈಗ 4 ದಿನಗಳ ಹಿಂದೆ ಬಂದು ನಾಗೇಶ ಚವ್ಹಾಣ  ಈತನ ಮನೆಯಲ್ಲಿ ಲೈಟ ಪೀಟಿಂಗ ಮಾಡುತ್ತಾ ಇದ್ದಿರುತ್ತೆವೆ.ಹೀಗಿದ್ದು ನಿನ್ನೆ ದಿನಾಂಕ 23-02-2015 ರಂದು ಸಂಜೆ 9:30 ಗಂಟೆ ಸುಮಾರಿಗೆ ನಾಗೇಶ ಚವ್ಹಾಣ ಇವರ ಹಳೆ ಮನೆಯಲ್ಲಿ ಊಟ ಮಾಡಿಕೊಂಡು ನಾನು ಮತ್ತು ದತ್ತಾತ್ರೇಯ ತಂದೆ ಸುಬಾಷ  ರಾಠೋಡ, ದತ್ತು ತಂದೆ ಹರಿಶ್ಚಂದ್ರ ರಾಠೊಡ ಹಾಗೂ ಮನೆಯ ಮಾಲಿಕನಾದ ನಾಗೇಶ ತಂದೆ ನಾಮದೇವ ಚವ್ಹಾಣ ನಾಲ್ಕು ಜನರು ನಾವು ಲೈಟ ಪೀಟಿಂಗ ಮಾಡುತ್ತಿದ್ದ ಹೊಸಮನೆಯಲ್ಲಿ ಬಂದು ಮಲಗಿಕೊಂಡಿರುತ್ತೆವೆ. ಅಂದಾಜು  ಇಂದು ದಿನಾಂಕ 24-02-2015 ರಂದು ಮದ್ಯ ರಾತ್ರಿ 01:00 ಗಂಟೆ ಸುಮಾರಿಗೆ ನಾವು ಮಲಗಿಕೊಂಡಿದ್ದ ರೂಮಿನ ಬಾಗಿಲನ್ನು ಯಾರೊ ಬಡೆಯುತ್ತಿದ್ದ ಸಪ್ಪಳ ಕೇಳಿ ನಮ್ಮ ಜೋತೆಗೆ ಮಲಗಿದ್ದ ನಾಗೇಶ ಚವ್ಹಾಣ ಇವನು ಎದ್ದು ಕಿಡಕಿಯಲ್ಲಿ ಯಾರು ಎಂದು ಕೇಳಿದನು. ಹೊರಗಡೆ ಇದ್ದವರು ನೀರು ಕೊಡಿ ಎಂದು ಕೇಳಿದರು, ಆಗ ನಾಗೇಶನು ನೀರು ಇಲ್ಲ ಅಂತಾ ಹೇಳಿದನು, ಆಗ ಹೊರಗೆ ಇದ್ದವರು ಏರು ದ್ವನಿಯಲ್ಲಿ ಬೈಯುತ್ತಿದ್ದರು ಆಗ ನಾಗೇಶನು ಬಾಗಿಲು ತಗೆದು ಹೊರಗೆ ಹೋದನು. ನಾವು ಉಳಿದ ಮೂರು ಜನರು ಅಲ್ಲೆ ಮಲಗಿಕೊಂಡಿದ್ದೆವು. ನಾಗೇಶ ಚವ್ಹಾಣ ಈತನು ಹೊರಗೆ ಹೋದ ನಂತರ ಯಾರೊ ಅವನ ಜೋತೆಗೆ ಕನ್ನಡದಲ್ಲಿ ಏರು ದ್ವನಿಯಲ್ಲಿತಾಡುತ್ತಾ ಮಾತಾಡುತ್ತಾ ಒಮ್ಮೆಲೆ ಗುಂಡು ಹಾರಿಸಿದಂತೆ ಡಮ್ಮ ಡಮ್ಮ ಎನ್ನುವ ಬಾರಿ ಶಬ್ದ ಕೆಳಿಸಿತು ಆಗ ನಾವುಗಳು ಎದ್ದು ಹೊರಗೆ ಬಂದು ನೊಡಲಾಗಿ ಯಾರೊ ಎರಡು ಜನ ವ್ಯಕ್ತಿಗಳು ಕತ್ತಲಲ್ಲಿ ಓಡಿ ಹೊದರು, ಹಾಗೂ ಅಲ್ಲೆ ಸದರಿ ಮನೆಯ ಬಾಗಿಲದ ಮುಂದೆ ನಾಗೇಶನು ಬಿದ್ದು ಒದ್ದಾಡುತ್ತಿದ್ದನು, ಅವನನ್ನು ನಾವು ನೋಡಲಾಗಿ ಅವನ ಬಲಗಣ್ಣಿನ ಕೇಳಗೆ ಬಾರಿ ಗಾಯವಾಗಿ ರಕ್ತ ಸೊರುತ್ತಿತ್ತು, ಸದರಿ ಸಮಯದಲ್ಲಾದ ಗುಂಡಿನ ಶಬ್ದಕ್ಕೆ ಸುತ್ತ ಮುತ್ತಲಿನ ಜನರು ಹಾಗೂ ಅವನ ತಂದೆ ನಾಮದೇವ ತಾಯಿ ಗೋದಾವರಿ ಹಾಗೂ ಲಕ್ಷ್ಮಣ ಚವ್ಹಾಣ ಹಾಗೂ ಇತರರು ಅಲ್ಲಿಗೆ ಬಂದರು. ನಂತರ ಸದರಿಯವರು ಮತ್ತು ನಾವು ಎಲ್ಲರೂ ಕೂಡಿ ನಾಗೇಶನನ್ನು ಖಾಸಗಿ ಜೀಪಿನಲ್ಲಿ ಹಾಕಿಕೊಂಡು ಅಫಜಲಪೂರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ವೈದ್ಯಾದಿಕಾರಿಗಳ ಸಲಹೆ ಮೇರೆಗೆ ನಾಗೇಶನನ್ನು ಹೆಚ್ಚಿನ ಉಪಚಾರಕ್ಕಾಗಿ ಸೊಲ್ಲಾಪೂರದ ಅಶ್ವೀನಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿರುತ್ತೆವೆ.ಸದರಿ ನಾಗೇಶ ತಂದೆ ನಾಮದೇವ ಚವ್ಹಾಣ ವ|| 25 ವರ್ಷ ಈತನನ್ನು ಕೊಲೆ ಮಾಡಬೇಕೆಂಬ ಉದ್ದೇಶದಿಂದ ಯಾರೊ ಇಬ್ಬರು ದುಸ್ಕರ್ಮಿಗಳು ಯಾವುದೊ ದ್ವೇಷದಿಂದ ಯಾವುದೊ ಒಂದು ಆಯುದದಿಂದ ನಾಗೇಶನ ಮೇಲೆ ಗುಂಡು ಹಾರಿಸಿ ಬಾರಿ ರಕ್ತಗಾಯ ಪಡಿಸಿ ಕೊಲೆ ಮಾಡಲು ಪ್ರಯತ್ನ ಮಾಡಿರುತ್ತಾರೆ ಅಂತಾ ಸಲ್ಲಿಸಿದ ದೂರು ಸಾರಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸರಕಾರಿ ಕರ್ತವ್ಯಕ್ಕೆ ಅಡೆ ತಡೆ ಮಾಡಿದ ಪ್ರಕರಣ :
ಅಫಜಲಪೂರ ಠಾಣೆ : ಶ್ರೀ ಹೊನ್ನೇಶ ಅಳ್ಳಗಿ ಸಹಾಯಕ ಇಂಜಿನಿಯರ್ ಪಂಚಾಯತ ರಾಜ ಇಂಜನಿಯರ್ ಉಪ ವಿಭಾಗ ಅಫಜಲಪೂರ ಇವರು ದಿನಾಂಕ 30-01-2015 ರಂದು 12:15 ಪಿ ಎಮ್ ಕ್ಕೆ ಅಫಜಲಪೂರದ ತಮ್ಮ ಕಾರ್ಯಾಲಯದಲ್ಲಿದ್ದಾಗ ಗೌರ (ಬಿ) ಗ್ರಾಮ ಪಂಚಯಾತಿಯ ಮಾಜಿ ಅದ್ಯಕ್ಷರಾದ ರುದ್ರಗೌಡ ಪಾಟಿಲ ರವರು ಕಾರ್ಯಾಲಯಕ್ಕೆ ಬಂದು ಪಿರ್ಯಾದಿದಾರರಿಗೆ ಗೌರ (ಬಿ) ಗ್ರಾಮ ಪಂಚಯಾತಿಯ ವ್ಯಾಪ್ತಿಯಲ್ಲಿ ಮಾಡಿದ ನರೇಗಾ ಯೋಜನೆಯ ಕಾಮಾಗಾರಿಗಳ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್ ಖಾಲಿ ನಮೂನೆಗಳ ಮೇಲೆ ಸಹಿ ಮಾಡಿಕೊಡುವಂತೆ ಹೇಳಿದ್ದು, ಅದಕ್ಕೆ ಪಿರ್ಯಾದಿದಾರರು ಗೌರ (ಬಿ) ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಯಾವುದೆ ಸರಿಯಾದ ಕಾಮಗಾರಿಗಳು ಆಗಿಲ್ಲ ಆದ್ದರಿಂದ ನಾನು ನಿಲ್ ರಿಪೊರ್ಟ ಕೊಡುತ್ತೆನೆ ಅಂತಾ ಹೇಳಿದಕ್ಕೆ ಸದರಿ ರುದ್ರಗೌಡ ಪಾಟಿಲ ಈತನು ಪಿರ್ಯಾದಿದಾರರಿಗೆ ಜೀವ ಬೇದರಿಕೆ ಹಾಕಿ ಖಾಲಿ ಎಸ್.ಕ್ಯೂ ಎಮ್ / ಡಿ.ಕ್ಯೂ.ಎಮ್  ನಮೂನೆಗಳ ಮೇಲೆ ಸಹಿ ಪಡೆದುಕೊಂಡು ಸರ್ಕಾರಿ ಕೆಲಸದಲ್ಲಿ ಅಡೆ ತಡೆ ಮಾಡಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಸದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ಸಂಚಾರಿ ಠಾಣೆ : ದಿನಾಂಕ  23-02-2015 ರಂದು ಶ್ರೀ ಸಿದ್ದರಾಮ ತಂದೆ ಪಂಡಿತರಾಯ ಕಲಶೆಟ್ಟಿ, ಸಾಃ ಕಾವೇರಿ ನಗರ ರವರು ಮತ್ತು ತನ್ನ ಮಗನಾದ ಗುರುಬಸವ ವಃ 09 ವರ್ಷ ಇಬ್ಬರು ಕೂಡಿ ಶಹಾಬಜಾರ ಮರಗಮ್ಮಾ ಗುಡಿಯ ಹತ್ತಿರ ಪಾನಿಪುರಿ ತಿನ್ನಲು ಹೋಗುತ್ತಿದ್ದಾಗ ಶಹಾಬಜಾರ ನಾಕಾ ಕಡೆಯಿಂದ ಮೋಟಾರ ಸೈಕಲ ನಂ  ಕೆ.ಎ 36 ಆರ್ 3388 ನೇದ್ದನ್ನು ಶಹಾಬಜಾರ ನಾಕಾ ಕಡೆಯಿಂದ ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಫಿರ್ಯಾದಿ ಮಗನಾದ ಗುರುಬಸವ ಈತನಿಗೆ ಡಿಕ್ಕಿ ಹೊಡೆದು ಸ್ವಲ್ಪ ಮುಂದೆ ಹೋಗಿ ನಿಂತಂತೆ ಮಾಡಿ ತನ್ನ ಮೋಟಾರ ಸೈಕಲ ಸಮೇತ ಓಡಿ ಹೋಗಿದ್ದು ಅಪಘಾತದಲ್ಲಿ ಗುರುಬಸವ ಈತನಿಗೆ ಬಲಗಾಲು ಮೊಳಕಾಲಿಗೆ ತರಚಿದ ಮತ್ತು ರಕ್ತಗಾಯವಾಗಿರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ಶ್ರೀಮತಿ ಜಗದೇವಿ ಗಂಡ ಅಶೋಕ ಅಜಾತಪೂರ  ಸಾ: ಮನೆ ನಂ 129 ಅಂಬೇಡ್ಕರ್ ಆಶ್ರಯ ಯೋಜನೆ ಕಾಲೋನಿ ರಾಣೆಸ ಫೀರ ದರ್ಗಾ ಎದುರುಗಡೆ   ಕಲಬುರಗಿ  ರವರು  ದಿನಾಂಕ 23-02-2015 ರಂದು ಮದ್ಯಾಹ್ನ ನ್ಯೂ ವಾದಿರಾಜ ಲಾಡ್ಜ್ ಎದುರಿಗೆ ಇರುವ ಹೋಟೇಲನಲ್ಲಿ ಊಟ ಮಾಡಿ ವಾಪಸ್ಸ ಜಿಲ್ಲಾ ಪಂಚಾಯತ ಕಾರ್ಯಾಲಯಕ್ಕೆ ಹೋಗಬೆಕೆಂದು  ರೋಡಿನ ಎಡಬದಿಯಿಂದ ನಡೆದುಕೊಂಡು ಹೋಗುವಾಗ  ಜಿಲ್ಲಾ ಪಂಚಾಯತ ಕಾರ್ಯಾಲಯ ಎದುರಿನ ರೋಡ ಮೇಲೆ ಕಾರ ನಂ ಕೆಎ-32-ಎಮ್-7283 ನೇದರ ಚಾಲಕನು ಸುಪರ ಮಾರ್ಕೇಟ  ಕಡೆಯಿಂದ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಹಿಂದಿನಿಂದ ನನಗೆ ಡಿಕ್ಕಿಪಡಿಸಿ ಅಪಘಾತ ಮಾಡಿ ಫಿರ್ಯಾದಿಯ  ಟೋಂಕಕ್ಕೆ ಗುಪ್ತ ಪೆಟ್ಟು ಏಡಗೈ ಮುಂಗೈಗೆ ತರಚಿದ ಗಾಯಗೊಳಿಸಿ ಕಾರ ಚಾಲಕ ಕಾರ ಸಮೇತ ಓಡಿ ಹೊಗಿದ್ದು ಇರುತ್ತದೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅ ಸ್ವಾಭಾವಿಕ ಸಾವು ಪ್ರಕರಣ :
ಜೇವರ್ಗಿ ಠಾಣೆ : ಶ್ರೀ ಈರಣ್ಣ ತಂದೆ ಬಸಣ್ಣಾ ಉಕ್ಕನಾಳ ಸಾ|| ಮುದಬಾಳ (ಬಿ) ತಾ|| ಜೇವರ್ಗಿ ರವರು ದಿನಾಂಕ  23.02.2015 ರಂದು ಮಧ್ಯಾಹ್ನ 12:30 ಗಂಟೆಗೆ ಮೃತ ಭೀಮಣ್ಣ ತಂದೆ ಬಸಣ್ಣ ಉಕನಾಳ ಸಾ|| ಮುದಬಾಳ ಬಿ ಈತನು ಮುದಬಾಳ ಬಿ ಸಿಮಾಂತರದ ಮಾನು ರಾಠೋಡ ಈತನ ಹೊಲದ ಪಕ್ಕದ ಮುಖ್ಯ ಕೇನಾಲ್‌ ನಲ್ಲಿ ನೀರು ಕುಡಿಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೇನಾಲ್ ನೀರಿನಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದು ಸದರಿಯವನ ಮೃತ ದೇಹವು ಇಂದು ಸಾಯಂಕಾಲ 16:30 ಗಂಟೆಗೆ ನೀರಿನಿಂದ ಹೋರಗೆ ತೆಗೆದಿದ್ದು ಇರುತ್ತದೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ.

23 February 2015

Kalaburagi District Reported Crimes

ಅತ್ಯಾಚಾರ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ನಮ್ಮ ತಾಯಿ ಹೊಲಕ್ಕೆ  ಹೋಗಿದ್ದಳು ನಮ್ಮ ಅಕ್ಕ ತಂಗಿ ಇವರು ಬೇರೆಯವರ ಮನೆಗೆ ಹೋಗಿದ್ದರು ಸಾಯಂಕಾಲ 7-00 ಗಂಟೆಯ ಸುಮಾರಿಗೆ ನಾನು ನಮ್ಮ ಮನೆಯ ಹತ್ತಿರದ ಬೈಲು ಜಾಗದಲ್ಲಿ ಸಂಡಾಸಕ್ಕೆ ಹೋಗಿದ್ದೆ ಅಲ್ಲಿ ಇನ್ನೂ ಸಂಡಾಸಕ್ಕೆ ಕೂಡಬೇಕು ಎನ್ನುವಸ್ಟರಲ್ಲಿ ನಮ್ಮೂರಿನ ಶಂಭು ತಂದೆ ಬಸವರಾಜ ಇತನು ಬಂದು ನನ್ನ ಬಾಯಿಯನ್ನು ಒತ್ತಿ ಹಿಡಿದು ನನ್ನನ್ನು ಜಬರದಸ್ತಿಯಿಂದ ಎತ್ತಿಕೊಂಡು ಹೋಗಿ ತಗ್ಗಿನಲ್ಲಿ ಕೇಳಗೆ ಕೇಡವಿ ನನ್ನ ಬಟ್ಟೆ ಬಿಚ್ಚಿ ಜಬರದಸ್ತಿಯಿಂದ ನನ್ನ ಸಂಗಡ ಸಂಭೋಗ ಮಾಡಿದ್ದು ನಂತರ ಅವನು ಈ ವಿಷಯ ಯಾರಿಗಾದರೂ ಹೇಳಿದ್ದರೆ ನಿನಗೆ ಖಲಾಸ್ ಮಾಡುತ್ತೇನೆ. ಅಂತ ಜೀವದ ಬೇದರಿಕೆ ಹಾಕಿ ಹೋದನು ನಂತರ ನಾನು ಆಳುತ್ತ ಮನೆಗೆ ಬಂದು ಮನೆಯಲ್ಲಿ ಕುಳಿತಿದ್ದು ನಮ್ಮ ತಾಯಿ ಅಕ್ಕ ,ತಂಗಿ ಬಂದ ನಂತರ ಅವರಿಗೆ ಈ ವಿಷಯ ಹೇಳಿದೆ ನಾನು ಸಂಡಾಸಕ್ಕೆ ಹೋದಾಗ ಜಬರದಸ್ತಿಯಿಂದ ಎತ್ತು ಕೊಂಡು ಹೋಗಿ ನನ್ನ ಸಂಗಡ ಸಂಬೋಗ ಮಾಡಿದ್ದು ಶಂಭು ತಂದೆ ಬಸವರಾಜ ಈತನ ಮೇಲೆ ಕಾನೂನಿನ ಕ್ರಮ ಜರುಗಿಸಬೇಕು ಅಂತಾ ಕುಮಾರಿ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ  ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಪಘಾತ ಪ್ರಕರಣಗಳು :
ನೆಲೋಗಿ ಠಾಣೆ : ದಿನಾಂಕ:22/02/2015 ರಂದು ಸಾಯಂಕಾಲ ಶ್ರೀ ಗುಣಕಾರ ತಂದೆ ಶೇಖಪ್ಪ ನಡಗಟ್ಟಿ ಸಾ-ನೆಲೋಗಿ  ತಾ-ಜೇವರ್ಗಿ  ಜಿ-ಕಲಬುರಗಿ  ರವರು ಸೊನ್ನ ಕ್ರಾಸಸದಿಂದ ತಮ್ಮ ಊರ ಸೋಮರಾಯ ಅಂಕಲಗಿ ಇವರು ಕೂಡಿಕೊಂಡು  ನಮ್ಮ ಓಣಿಯ ಬೂತಾಳಿ ತಂದೆ ಓಗೆಪ್ಪ ನಡಗಟ್ಟಿ ಇತನ ಟಂ ಟಂ ನಂ:ಕೆಎ-32-ಬಿ-1297 ಬಂದಿತ್ತು ಆಗವನು ನೆಲೋಗಿ ಹೋಗುತ್ತದೆ ಅಂತ ಹೇಳಿದಾಗ ನಾನು ಮತ್ತು ಸೋಮರಾಯ ಅಂಕಲಗಿ ಕುಳಿತೆವು ಟಂ ಟಂ ಅಲ್ಲಿಂದ ಹೊರಟು ನೆಲೋಗಿ ಕಡೆ , ನೆಲೋಗಿ ಕ್ರಾಸ  ಸ್ವಲ್ಪ ದೂರದಲ್ಲಿ ಇದ್ದಾಗ ಎದುರಿನಿಂದ ಅಂದರೆ ಹಿಪ್ಪರಗಿ ಕಡೆಯಿಂದ ಒಂದು ಲಾರಿ ಬಂದಿತ್ತು ಅದರ ಚಾಲಕನು ತನ್ನ ಲಾರಿಯನ್ನು ಅತೀವೇಗ ಹಾಗೂ ನಿಸ್ಕಾಳಜಿಯಿಂದ ನಡೆಸಿಕೊಂಡು ಬಂದು ನಮ್ಮ ಟಂ ಟಂಗೆ ಡಿಕ್ಕಿ ಹೊಡೆದಾಗ ನಮ್ಮ ಟಂ ಟಂ ರೋಡಿನ ಮಗ್ಗಲಿಗೆ ಬಿದ್ದಿತ್ತು ಆಗ ಲಾರಿ ಚಾಲಕನು ಲಾರಿಯ ರೋಡಿನ ಮಗ್ಗಲಿಗೆ ನಿಲ್ಲಿಸಿ ಓಡಿ ಹೊದನು ಸೋಮರಾಯನಿಗೆ ನೋಡಲಾಗಿ ತಲೆಗೆ ಮತ್ತು ಕಪ್ಪಾಳಕೆ ಭಾರಿಪೆಟ್ಟಾಗಿ ರಕ್ತಗಾಯವಾಗಿದ್ದು  ಮೊನೇಶ ಜಳಕಿ ,ಅಶೋಕ ನಡಗಟ್ಟಿ,ಮಾದೇವಪ್ಪ ಅಡವಿ ಇವರು ಬಂದರು ಲೈಟನ ಬೆಳಕಿನಲ್ಲಿ ಲಾರಿ ನಂಬರ ಕೆಎ-32-ಬಿ-1616 ಅಂತ ಇತ್ತು ನಂತರ ಸೋಮರಾಯಯನ್ನು 108 ಅಂಬುಲೇನ್ಸದಲ್ಲಿ ಹಾಕಿಕೊಂಡು ಕಲಬುರರ್ಗಿ ಆಸ್ಪತ್ರೆಯ ಹೊರಟಾಗ ಮಾರ್ಗ ಮಧ್ಯದಲ್ಲಿ ರಾಮ ಮಂದಿರ ಹತ್ತಿರ ಮೃತಪಟ್ಟಿರುತ್ತಾನೆ ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಹೆಚ್ಚುವರಿ ಸಂಚಾರಿ ಠಾಣೆ : ದಿನಾಂಕ 22-02-2015 ರಂದು ನನ್ನ ಮಗ ಪ್ರಶಾಂತ ಇತನು ರಾತ್ರಿ ತನ್ನ ಮೋಟಾರ ಸೈಕಲ ನಂ ಕೆಎ-32-ಇಹೆಚ್-0737 ನೇದ್ದನ್ನು ಎಸ.ವಿ.ಪಿ. ಸರ್ಕಲ್ ಕಡೆಯಿಂದ ಚಲಾಯಿಸಿಕೊಂಡು ಜಗತ ಸರ್ಕಲ್ ಕಡೆಗೆ ಹೋಗುವಾಗ ಪಂಜಾಬ ಪುಟವೇರ್  ಶೋ ರೋಮ ಎದುರುಗಡೆ ರೋಡ ಮೇಲೆ ಜಗತ ಸರ್ಕಲ ಕಡೆಯಿಂದ ಮೋಟಾರ ಸೈಕಲ ನಂ ಕೆಎ-32-ಇ.ಎಫ್-4268 ನೆದ್ದರ ಚಾಲಕನಾದ ಅಬ್ದುಲ ಅಲಿಮ ಇತನು ತನ್ನ ಮೋಟಾರ ಸೈಕಲ ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ಯಾವುದೆ ಸನ್ನೆ ಮಾಢದೆ ಇಂಡಿಕೇಟರ ಹಾಕದೆ  ಒಮ್ಮಲೇ ಕೋರ್ಟ ರೋಡ ಕಡೆಗೆ ತಿರುಗಿಸಿ ಅಡ್ಡಾವಾಗಿ ಬಂದು ಪ್ರಶಾಂತ ಇತನ ಮೋಟಾರ ಸೈಕಲಕ್ಕೆ ಡಿಕ್ಕಿಪಡಿಸಿ ಅಪಘಾತ ಮಾಢಿ ಪ್ರಶಾಂತ ಇತನ ಬಲಗಡೆ  ತೆಲೆಗೆ  ಮುಖಕ್ಕೆ ಭಾರಿ ಪೆಟ್ಟುಗೊಳಿಸಿದ್ದು ಮತ್ತು ತಾನು ಗಾಯ ಹೊಂದಿದ್ದು ಇರುತ್ತದೆ ಅಂತಾ ಶ್ರೀಮತಿ ನಿರ್ಮಲಾ ಗಂಡ ವೀರಣ್ಣಾ ಸಾ: ಬಂಬು ಬಜಾರ ಲಕ್ಷ್ಮಿ ನಗರ ಗಂಜ ಕಾಲೋನಿ  ಕಲಬುರಗಿ  ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಹೆಚ್ಚುವರಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 20-02-2015 ರಂದು ನನ್ನ ಮಗ ಈರಣ್ಣಾ ಈತನು ಹೊಲದಲ್ಲಿ ಜೋಳದ ರಾಶಿ ಮಾಡುವ ಸಲುವಾಗಿ ಮನೆಯಲ್ಲಿ ಊಟ ಮಾಡಿ ಸಂಜೆ 4-30 ಗಂಟೆ ಸುಮಾರಿಗೆ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋದನು. ನಂತರ ಸಾಯಂಕಾಲ 5;00 ಗಂಟೆ ಸುಮಾರಿಗೆ ನನಗೆ ಫೋನಿನಲ್ಲಿ ನಿನ್ನ ಮಗ ಈರಣ್ಣನಿಗೆ ರಸ್ತೆ ಅಪಘಾತವಾಗಿದೆ. ಪೆಟ್ಟಾಗಿ ನೆಲಕ್ಕೆ ಬಿದ್ದಿರುತ್ತಾನೆ. ವಿಷಯ ತಿಳಿದು ನಾನು ಮತ್ತು ನನ್ನ ಜೊತೆ ನಮ್ಮ ತಮ್ಮನ ಮಗನಾದ ಮಲ್ಲಿನಾಥ ತಂದೆ ನಾನಾಗೌಡ ಹಾಗು ಇನ್ನೊಬ್ಬ ತಮ್ಮನ ಮಗನಾದ ಚಂದ್ರಶೇಖರ ತಂದೆ ಶರಣಗೌಡ ಜೋತೆಯಾಗಿ ಗಾಬರಿಯಿಂದ ಹೋಗಿ ನೋಡಲು ಆನೂರ ದಿಂದ ಅಫಜಲಪೂರ ಕಡೆ ಬರುವ ಮುಖ್ಯೆ ರಸ್ತೆಯ ಹೈಸ್ಕೂಲ ಹಿಂದುಗಡೆ ಜಿರೋಳ್ಳಿ ರವರ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ನನ್ನ ಮಗ ಬೆಹೋಷ ಸ್ಥಿತಿಯಲ್ಲಿದ್ದನ್ನು ನೋಡಿ, ಆತನ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗು ಮೊಳಕಾಲದ ಕೆಳಗೆ ರಕ್ತ ಬರುತ್ತಿತ್ತು. ಬಲ ಭುಜಕ್ಕೆ ಬಲಗೈ ಬೆರಳಿಗೆ ತರಚಿದಗಾಯವಾಗಿತ್ತು. ಈ ಘಟನೆಯು ನಂತರ ವಿಚಾರಿಸಿದಾಗ ನಮ್ಮೂರ ಪೀರಪ್ಪ ತಂದೆ ಅಂಬಣ್ಣಾ ಈತನು ಮೋಟರ ಸೈಕಲ್ ನಂ ಕೆ.ಎ-32 ಇ.ಎ-6568 ನೇದ್ದನ್ನು ಅತೀವೇಗ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ನನ್ನ ಮಗನಿಗೆ ಡಿಕ್ಕಿ ಪಡಿಸಿ ನನ್ನ ಮಗನ ಗಾಯವನ್ನು ನೋಡಿ ತನ್ನ ಮೋಟರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ²æÃ ಚನ್ನಣಗೌಡ ತಂದೆ ಮಲ್ಲೇಶಪ್ಪಾ ಪಾಟೀಲ ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 18-02-2015  ರ ಬೆಳಗಿನ 6  ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನನ್ನ ಅಟೊಮೊಬೈಲ್ ಅಂಗಡಿಯ ಹಿಂದಿನ ಕಿಟಕಿ ಮುರಿದು ಓಳಗೆ ಪ್ರವೇಶ ಮಾಡಿ ಅಂಗಡಿಯ ಗಲ್ಲಾದಲ್ಲಿ ಇಟ್ಟ ನಗದು ಹಣ 65,500/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀ ಫರವೇಜ್ ತಂದೆ ಇಸ್ಮಾಯಿಲ್ ಸಾಬ ಪಠಾಣಕರ್ ಸಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.