POLICE BHAVAN KALABURAGI

POLICE BHAVAN KALABURAGI

23 February 2015

Kalaburagi District Reported Crimes

ಅಪಘಾತ ಪ್ರಕರಣ :
ಅಫಜಲಪೂರ ಠಾಣೆ : ದಿನಾಂಕ; 20-02-2015 ರಂದು ನನ್ನ ಮಗ ಈರಣ್ಣಾ ಈತನು ಹೊಲದಲ್ಲಿ ಜೋಳದ ರಾಶಿ ಮಾಡುವ ಸಲುವಾಗಿ ಮನೆಯಲ್ಲಿ ಊಟ ಮಾಡಿ ಸಂಜೆ 4-30 ಗಂಟೆ ಸುಮಾರಿಗೆ ಹೊಲಕ್ಕೆ ಬುತ್ತಿ ತೆಗೆದುಕೊಂಡು ಹೋದನು. ನಂತರ ಸಾಯಂಕಾಲ 5;00 ಗಂಟೆ ಸುಮಾರಿಗೆ ನನಗೆ ಫೋನಿನಲ್ಲಿ ನಿನ್ನ ಮಗ ಈರಣ್ಣನಿಗೆ ರಸ್ತೆ ಅಪಘಾತವಾಗಿದೆ. ಪೆಟ್ಟಾಗಿ ನೆಲಕ್ಕೆ ಬಿದ್ದಿರುತ್ತಾನೆ. ವಿಷಯ ತಿಳಿದು ನಾನು ಮತ್ತು ನನ್ನ ಜೊತೆ ನಮ್ಮ ತಮ್ಮನ ಮಗನಾದ ಮಲ್ಲಿನಾಥ ತಂದೆ ನಾನಾಗೌಡ ಹಾಗು ಇನ್ನೊಬ್ಬ ತಮ್ಮನ ಮಗನಾದ ಚಂದ್ರಶೇಖರ ತಂದೆ ಶರಣಗೌಡ ಜೋತೆಯಾಗಿ ಗಾಬರಿಯಿಂದ ಹೋಗಿ ನೋಡಲು ಆನೂರ ದಿಂದ ಅಫಜಲಪೂರ ಕಡೆ ಬರುವ ಮುಖ್ಯೆ ರಸ್ತೆಯ ಹೈಸ್ಕೂಲ ಹಿಂದುಗಡೆ ಜಿರೋಳ್ಳಿ ರವರ ಹೊಲದ ಹತ್ತಿರ ರಸ್ತೆಯ ಎಡಭಾಗದಲ್ಲಿ ನನ್ನ ಮಗ ಬೆಹೋಷ ಸ್ಥಿತಿಯಲ್ಲಿದ್ದನ್ನು ನೋಡಿ, ಆತನ ಬಲಗಾಲಿಗೆ ಭಾರಿ ಗುಪ್ತಗಾಯ ಹಾಗು ಮೊಳಕಾಲದ ಕೆಳಗೆ ರಕ್ತ ಬರುತ್ತಿತ್ತು. ಬಲ ಭುಜಕ್ಕೆ ಬಲಗೈ ಬೆರಳಿಗೆ ತರಚಿದಗಾಯವಾಗಿತ್ತು. ಈ ಘಟನೆಯು ನಂತರ ವಿಚಾರಿಸಿದಾಗ ನಮ್ಮೂರ ಪೀರಪ್ಪ ತಂದೆ ಅಂಬಣ್ಣಾ ಈತನು ಮೋಟರ ಸೈಕಲ್ ನಂ ಕೆ.ಎ-32 ಇ.ಎ-6568 ನೇದ್ದನ್ನು ಅತೀವೇಗ ನಿಸ್ಕಾಳಜಿತನದಿಂದ ನಡೆಸಿಕೊಂಡು ಬಂದವನೆ ನನ್ನ ಮಗನಿಗೆ ಡಿಕ್ಕಿ ಪಡಿಸಿ ನನ್ನ ಮಗನ ಗಾಯವನ್ನು ನೋಡಿ ತನ್ನ ಮೋಟರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ²æà ಚನ್ನಣಗೌಡ ತಂದೆ ಮಲ್ಲೇಶಪ್ಪಾ ಪಾಟೀಲ ಸಾ|| ಆನೂರ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಅಫಜಲಪೂರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ಕಳವು ಪ್ರಕರಣ :
ಜೇವರ್ಗಿ ಠಾಣೆ : ದಿನಾಂಕ 18-02-2015  ರ ಬೆಳಗಿನ 6  ಗಂಟೆಯ ಮದ್ಯದ ಅವಧಿಯಲ್ಲಿ ಯಾರೊ ಕಳ್ಳರು ನನ್ನ ಅಟೊಮೊಬೈಲ್ ಅಂಗಡಿಯ ಹಿಂದಿನ ಕಿಟಕಿ ಮುರಿದು ಓಳಗೆ ಪ್ರವೇಶ ಮಾಡಿ ಅಂಗಡಿಯ ಗಲ್ಲಾದಲ್ಲಿ ಇಟ್ಟ ನಗದು ಹಣ 65,500/- ರೂಪಾಯಿಯನ್ನು ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ಶ್ರೀ ಫರವೇಜ್ ತಂದೆ ಇಸ್ಮಾಯಿಲ್ ಸಾಬ ಪಠಾಣಕರ್ ಸಾಃ ಜೇವರಗಿ ರವರು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments: