POLICE BHAVAN KALABURAGI

POLICE BHAVAN KALABURAGI

25 August 2013

ಕಳವು ಪ್ರಕರಣ :

ನೆಲೋಗಿ ಠಾಣೆ : ಶ್ರೀಮತಿ ವೀಣಾ. ಶರಣಗೌಡ ಬಾಚವಾರ  ಸಿಂಗನಳ್ಳಿ ತಾ: ಶಹಾಪೂರ ಹಾ:ವ: ಸಾ/21/75 ಖಾಜಾ ಕಾಲೋನಿ ಜೇವರರ್ಗಿ  ರವರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯಾಳವಾರದಲ್ಲಿ ಸಹಶಿಕ್ಷಕಿಯಾಗಿ   ಕೆಲಸ ಮಾಡಿಕೊಂಡು ಇದ್ದು. ದಿನಾಂಕ: 18/08/2013 ರಂದು ಬಿಜಾಪೂರದಲ್ಲಿ ವಾಸವಾಗಿರುವ ನನ್ನ ಅಣ್ಣನಾದ ವಿಜಯ ಮಾಹಾಂತೇಶ ತಂ/ ಬಸವರಾಜ ಐನಾಪೂರ ಇವರ ವಿವಾಹ ನಿಶ್ಚಿತಾರ್ತ ಇದ್ದ ಕಾರಣ ದಿನಾಂಕ: 16/08/2013 ರಂದು ಬೆಳಿಗ್ಗೆ 10 ಗಂಟೆಗೆ ಕೆ ಎಸ್ ಆರ್ ಟಿ ಸಿ ಬಸನಲ್ಲಿ ಜೇವರ್ಗಿ ಯಿಂದ ಹೊರೆಟೆನು. ಸದರಿ ಬಸ್ಸ್ ಬಿಜಾಪೂರಕ್ಕೆ ಮದ್ಯಾಹ್ನ 01;00 ಗಂಟೆಗೆ ತಲುಪಿತು. ನಂತರ ನಾನು ಅಟೋ ರಿಕ್ಷಾದಲ್ಲಿ ಬಿಜಾಪೂರದಲ್ಲಿರುವ ನಮ್ಮ ಮನೆಗೆ ಹೋದೆನು. ಹೋದ ತಕ್ಷಣ ಮುಖ ತೊಳೆದು ಬಟ್ಟೆ ಬದಲಾಯಿಸಲು ಬ್ಯಾಗನ್ನು ನೋಡಲಾಗಿ, ಸದರಿ ಬ್ಯಾಗಿನಲ್ಲಿ ಇಟ್ಟಿದ್ದ ನನ್ನ 150 ಗ್ರಾಂ ಬಂಗಾರದ ಆಭರಣಗಳು ಹಿಗೆ ಒಟ್ಟು 3,61,150/- ರೂ ಆಭರಣಗಳು ಇರಲಿಲ್ಲಾ. ಕೂಡಲೆ ಬ್ಯಾಗನ್ನು ಪೂರ್ತಿ ಹೂಡಕಾಡಿದ್ದು ಆಬರಣಗಳಿಟ್ಟ ಟಿಪಿನ್ ಬಾಕ್ಸ ಇರಲ್ಲಿಲ್ಲಾ. ಇವುಗಳನ್ನು ಬಸ್ಸನಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿದ್ದು ನಮ್ಮ ವಸ್ತುಗಳನ್ನು ಪತ್ತೆ ಮಾಡಿಕೊಡ ಬೇಕೆಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

23 August 2013

ಅಪಘಾತ ಪ್ರಕರಣ :
ನೆಲೋಗಿ ಠಾಣೆ : ದಿನಾಂಕ: 22-08-2013 ರಂದು ಬೆಳಿಗ್ಗೆ ಶ್ರೀ ಕೇರನಾಥ ತಂದೆ ಬಾಗವಾನ ಜೊಗೇರ   ಸಾ: ಜೇವರ್ಗಿ  ರವರು ತಮಗೆ ಪರಿಚಯ ಇದ್ದ ಮಾರುತಿ ಸುಜುಕಿ ಕಾರ ನಂ ಕೆಎ-36 ಎಮ್-7765 ನೇದ್ದರಲ್ಲಿ ತಮ್ಮ ಸಂಬಂಧಿಕರ ಬದಾಮಿ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ತೀರಿಕೊಂಡಿದ್ದರಿಂದ 5 ಜನರು ಕೂಡಿಕೊಂಡು ಸದರ ಕಾರಿನಲ್ಲಿ ಹೋಗುವಾಗ ಎಸ್ ಎನ್ ಹಿಪ್ಪರಗಾ ಕ್ರಾಸ ಹತ್ತೀರ 09.45 ಎ ಎಮ್ ಕ್ಕೆ ಬಂದಾಗ ಎದುರಿನಿಂದ ಒಂದು ಕೆ ಎಸ್ ಆರ್ ಟಿ ಸಿ ಬಸ್ ನಂ ಕೆಎ-32 ಎಫ್- 1770 ನೇದ್ದರ ಚಾಲಕನು ಅತೀ ವೇಗ ಮತ್ತು ನೀರ್ಲಕ್ಷತನದಿಂದ ನಡೆಯಿಸಿಕೊಂಡು ಬಂದು ಕಾರಿಗೆ ಢಿಕ್ಕಿ ಹೊಡೆದಾಗ ಕಾರಿನಲ್ಲಿದ್ದ 1. ನಬಿ ತಂದೆ ಕೋನಮೀಯಾರ   ವ;30  ಉ: ಕಾರ ಡ್ರಾವರ್   ಸಾ; ಜೇವರ್ಗಿ 2.ಮಚೇಂದ್ರನಾಥ ತಂದೆ ಪವನಾಥ ಜೊಗೇರ ವ: 45 ಉ: ಹಿಟ್ಟಿನ ಗಿರಣಿ ಮೇಕ್ಯಾನಿಕ್ ಇಬ್ಬರು ಸ್ಥಳದಲ್ಲಿಯೇ ಮೃತ ಪಟ್ಟಿದ್ದು, ಇನ್ನೂ 3 ಜನರಿಗೆ ಭಾರೀ ಗಾಯಗಳಾಗಿದ್ದು, ಸದರಿ ಚಾಲಕನ ವಿರುದ್ದ ಕ್ರಮ ಜರುಗಿಸಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನೆಲೋಗಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣ :

ನಿಂಬರ್ಗಾ ಠಾಣೆ : ಶ್ರೀಮತಿ ಯಲ್ಲವ್ವ ಗಂಡ ಸಿದ್ದಪ್ಪಾ ಕಾಳೆ ಸಾ|| ಆಲಮೇಲತಾ|| ಸಿಂದಗಿ ಇವರು ಗಂಡನನ್ನು ದಿನಾಂಕ 19/08/2013 ರಂದು ಸಾಯಂಕಾಲ 0400 ಪಿ.ಎಮ ಕ್ಕೆ ರೇಲಪೂತ @ ಬಾಬು ಕಾಳೆಮುಕೇಶ ತಂದೆ ರೇಲಪೂತ ಕಾಳೆಶಮ್ಯಾ ತಂದೆ ರೇಲಪೂತ ಕಾಳೆರವ್ಯಾ ತಂದೆ ಗೊವಿಂದ ಸಿಂಧೆಬಪ್ಯಾ ತಂದೆ ಶ್ರೀಮಂತಕುನ್ಯಾಬಾಯಿ ಗಂಡ ರೇಲಪೂತ @ ಬಾಬು ಕೂಡಿ ಗುಲಬರ್ಗಾದಿಂದ ಒಂದು ಕ್ರೂಸನ ವಾಹನ ಅದರ ಚಾಲಕ ಮತ್ತು ಅದರ ನಂಬರ ಗೊತ್ತಿಲ್ಲ ಅದನ್ನು ತೆಗೆದುಕೊಂಡು ಆಲಮೇಲಕ್ಕೆ ಬಂದು ಫಿರ್ಯಾದಿಗೆ ಮತ್ತು ಮೃತ ಸಿದ್ದಪ್ಪನಿಗೆ ಜಬರದಸ್ತಿಯಿಂದ ದೇವರ ಮಾಡೋದಿದೆ ನಡೆಯಿರಿ ಅಂತ ಕ್ರೂಸರ ವಾಹನದಲ್ಲಿ ಫಿರ್ಯಾದಿಗೂ,ಸಿದ್ದಪ್ಪ ಹಾಗೂ ಅವರ ಮಕ್ಕಳಿಗೂ ಹಾಕಿಕೊಂಡು ವೈಜಾಪೂರ ಗ್ರಾಮದ ಸೀಮಾಂತರದಲ್ಲಿರುವ ವಾರಿ ಹಳ್ಳದ ಹತ್ತಿರ ರಾತ್ರಿ ಕರೆದುಕೊಂಡು ಹೋಗಿ ಅಲ್ಲಿ ಅವರು ಠಿಕಾಣಿ ಹೂಡಿದ ಜಾಗೆಯಲ್ಲಿ ಇದ್ದುದಿನಾಂಕ 20/08/2013 ರಂದು ರಾತ್ರಿ 1000 ಗಂಟೆ ಸುಮಾರಿಗೆ ಮೃತ ಸಿದ್ದಪ್ಪನು ನನಗೆ ಊರಿಗೆ ಬಿಡಿ ಅಂತಾ ಅಂದಾಗ ಆರೋಪಿತರೆಲ್ಲರೂ ಅಕ್ರಮ ಕೂಟ ರಚನೆ ಮಾಡಿಕೊಂಡು ಅವರು ಫಿರ್ಯಾದಿಯ ಗಂಡನಿಗೆ ಎಲ್ಲಿಗೂ ಹೋಗದಂತೆ ತಡೆದು ಕೈಯಲ್ಲಿ ಚಾಕು ಮತ್ತು ಬಡಿಗೆ ಹಿಡಿದುಕೊಂಡು ಭೋಸಡಿ ಮಗನೆ ನಮಗೆ ಹಣ ಕೇಳುತ್ತಿಯಾ ಅಂತಾ ಅಂದು ಮುಕೇಶ ಇತನು ಚಾಕುವಿನಿಂದ ಬಲಗಡೆ ಹೊಟ್ಟೆಗೆ ಮತ್ತು ಬಲಗಡೆ ಬೆನ್ನಿಗೆ ತಿವಿದಿದ್ದು ಇದರಿಂದ ಆತನಿಗೆ ತೀವೃ ಸ್ವರೂಪದಗಾಯವಾಗಿದ್ದು ಉಪಚಾರ ಕುರಿತು ದಿನಾಂಕ 21/08/2013 ರಂದು ಜಿಲ್ಲಾ ಸರ್ಕಾರಿ ಆಸ್ಪತ್ರೆ ಗುಲಬರ್ಗಾಕ್ಕೆ ಸೇರಿಕೆಯಾಗಿದ್ದು ಗಾಯದ ಬಾಧೇಯಿಂದ ದಿನಾಂಕ 22/08/2013 ರಂದು ಮಧ್ಯಾಹ್ನ 0140 ಪಿ.ಎಮ ಕ್ಕೆ ಮೃತಪಟ್ಟಿರುತ್ತಾನೆ ಅವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ನಿಂಬರರ್ಗಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

22 August 2013

Gulbarga District reported crimes

ಮದುವೆ ಮಾಡಿಕೊಳ್ಳತ್ತೆನೆ ಅಂತಾ ನಂಬಿಸಿ ಜಬರಿ ಸಂಬೋಗ ಮಾಡಿದ ಪ್ರಕರಣ :-
ಮಳಖೇಡ ಠಾಣೆ : ಕುಮಾರಿ (ಹೆಸರು ಬದಲಾಯಿಸಲಾಗಿದೆ) ಇವಳಿಗೆ  ಮಾದೇಶಾ ತಂದೆ ಹಣಮಂತ ಮರಪಳ್ಳಿ ಈತನು ತನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ನಂಬಿಸಿ ನನಗೆ ಆಗಾಗ ಸಂಭೋಗ ಮಾಡುತ್ತಿದ್ದು , ಮತ್ತು ದಿನಾಂಕ 10-7-2013 ರಂದು ಮಧ್ಯಾನ 2 ಗಂಟೆಗೆ ತಮ್ಮ ಯಂಕಾರೆಡ್ಡಿ ಹೊಲಕ್ಕೆ ಹೋದಾಗ ಸದ್ರಿ ಮಾದೇಶ ಈತನು ಹೊಲದಲ್ಲಿ ಬಂದು ತನಗೆ ಸಂಭೋಗ ಮಾಡಿದ್ದು ಇರುತ್ತದೆ. ಇಂದು ದಿನಾಂಕ 21-8-2013 ರಂದು ತಾನು ಸದ್ರಿ ಮಾದೇಶಾ ಈತನಿಗೆ ನೀನು ನನಗೆ ಮದುವೆ ಮಾಡಿಕೊಳ್ಳುತ್ತೇನೆ ಅಂತಾ ಹೇಳಿದ್ದು ನನಗೆ ಮದುವೆ ಮಾಡಿಕೊ ಅಂತಾ ಹೇಳಿದಾಗ ಅವನು ನಿನಗೆ ಯಾರು ಮದುವೆ ಮಾಡಿಕೊಳ್ಳುತ್ತಾರೆ ಹೋಗೆ ಅಂತಾ ಹೇಳಿದ್ದು ಈ ವಿಷಯವನ್ನು ನನ್ನ ತಂದೆ ತಾಯಿಗೆ ತಿಳಿಸಿದ್ದು , ಸದ್ರಿ ಮಾದೇಶಾ ಈತನ ಮೇಲೆ ಕಾನೂನು ಪ್ರಕಾರ ಕ್ರಮ ಕೈಕೊಳ್ಳಬೇಕು ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಮಳಖೇಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಪ್ರಕರಣ :
ಗ್ರಮೀಣ ಠಾಣೆ : ದಿನಾಂಕ 20-08-2013 ರಂದು ರಾತ್ರಿ ಶ್ರೀ ಅಂಬಾರಾಯ ತಂದೆ ಶರಣಪ್ಪ ಸಿತಾಳಗೇರಿ ಸಾ: ಕುಮಸಿ ವಾಡಿ ತಾ.ಜಿ. ಗುಲಬರ್ಗಾ ರವರು  ಉಟ ಮಾಡಿ ಮನೆಯ ಅಂಗಳದಲ್ಲಿ ಕುಳಿತುಕೊಂಡಾಗ  ಗುಂಡಪ್ಪ ತಂದೆ ಶರಣಪ್ಪ ಸಿತಾಳಗೇರಿ ಇತನು ತನ್ನ ಅಣ್ಣ ತಮ್ಮಂದಿರಾದ ಬಸಣ್ಣಾ, ಮೇಘಣ್ಣಾ ಹಾಗು ಬೀರಣ್ಣ ಎಲ್ಲರು ಸೇರಿಕೊಂಡು ಮನೆಯ ಮುಂದೆ ನೊಡಾಡುವ ರೋಡಿನ ವಿಷಯದಲ್ಲಿ ಜಗಳ ತೆಗೆದು ಅವಾಚ್ಯ ಶಬ್ದಗಳಿಂದ ಬೈದು  ನಮ್ಮ ಪಾಲಿಗೆ ಬರುವ  ರಸ್ತೆ ಬಿಟ್ಟು ಓಡಾಡಿರಿ   ಅಂತಾ ಎಷ್ಟು ಸಾರಿ ಹೇಳಿದರೂ ಕೇಳದೇ ಅದೇ ರಸ್ತೆಯಿಂದ ಓಡಾಡುತ್ತೀ ಮಗನೇ ಎಂದು ಬೈಯ್ಯುತ್ತಾ ಗುಂಡಪ್ಪ ಈತನು ಕೈಯಲ್ಲಿದ್ದ ಕೊಡಲಿಯಿಂದ ನನ್ನ ತಲೆಗೆ ಕೊಲೆ ಮಾಡುವ ಉದ್ದೇಶದಿಂದ ಹೊಡೆದು ಭಾರಿ ರಕ್ತಗಾಯಗೊಳಿಸಿ ಕೊಲೆ ಮಾಡಲು ಪ್ರಯತ್ನಿಸಿದ್ದು ಅದೆ. ಜಗಳಾ ಬಿಡಿಸಲು ಬಂದ ನನ್ನ  ಮಗ ಮತ್ತು ಮಗಳಿಗೂ ಕೂಡಾ ಬಡಿಗೆಯಿಂದ ಹೊಡೆ ಬಡೆ ಮಾಡಿರುತ್ತಾರೆ ಎಂದು ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.