POLICE BHAVAN KALABURAGI

POLICE BHAVAN KALABURAGI

29 January 2013

GULBARGA DISTRICT


ಗುಲಬರ್ಗಾ ಜಿಲ್ಲಾ ಪೊಲೀಸ್ ರ ಕಾರ್ಯಚರಣೆ
7 ಜನ ದರೋಡೆಕೋರರ ಬಂಧನ, ಬಂಧಿತರಿಂದ 1 ನಾಡ ಪಿಸ್ತೂಲ್,       9 ಮಾರಕ ಆಯುಧಗಳು, ಇಂಡಿಕಾ ಕಾರ, ನಗದು ಹಣ, ಮೋಟಾರ ಸೈಕಲಗಳು ವಶ.
ದಿನಾಂಕ:29-01-2013 ರಂದು 00-30 ಗಂಟೆಗೆ ಗುಲಬರ್ಗಾ-ಸೇಡಂ ರಸ್ತೆಯಲ್ಲಿರುವ ಜಿ.ವ್ಹಿ.ಆರ್. ಶೈನ್ ಬೋರ್ಡ ಹತ್ತಿರ ರೋಡಿನ ಮೇಲೆ 7 ಜನರು ಹೋಗಿ ಬರುವ ಸಾರ್ವಜನಿಕರಿಗೆ ತಡೆದು ದರೋಡೆ ಮಾಡಲು ಹೊಂಚು ಹಾಕಿ ಕುಳಿತಿರುವ ಬಗ್ಗೆ ಖಚಿತ ಬಾತ್ಮೀ ಬಂದ ಮೇರೆಗೆ ಮಾನ್ಯ ಶ್ರೀ, ಎನ್. ಸತೀಶಕುಮಾರ ಐ.ಪಿ.ಎಸ್,. ಜಿಲ್ಲಾ ಪೊಲೀಸ ಅಧೀಕ್ಷಕರು ಗುಲಬರ್ಗಾರವರ ಮಾರ್ಗದರ್ಶನದಲ್ಲಿ, ಶ್ರೀ ಎಸ್. ಅಸ್ಲಾಂ ಭಾಷಾ ಸಿ.ಪಿ.ಐ ಎಂ.ಬಿ ನಗರ ವೃತ್ತ, ಶ್ರೀ,ಎಸ್.ಎಸ್. ಹುಲ್ಲೂರ ಪಿ.ಐ ಡಿ.ಸಿ.ಐ.ಬಿ ಘಟಕ ಗುಲಬರ್ಗಾ, ಶ್ರೀ ಶರಣಬಸವೇಶ್ವರ ಭಜಂತ್ರಿ ಪಿ.ಐ. ಬ್ರಹ್ಮಪೂರ ಠಾಣೆ, ಶ್ರೀ ಶ್ರೀಮಂತ ಇಲ್ಹಾಳ ಪಿ.ಎಸ್.ಐ ಎಂ.ಬಿ ನಗರ ಠಾಣೆ, ಶ್ರೀ, ಗೋಪಾಲ ರಾಠೋಡ ಪಿ.ಎಸ್.ಐ ವಿಶ್ವಿದ್ಯಾಲಯ ಠಾಣೆ, ಪ್ರದೀಪಕುಮಾರ ಭಿಸೆ ಪಿ.ಎಸ್.ಐ (ಅ.ವಿ) ವಿವಿ ಠಾಣೆ ಮತ್ತು ವಿ.ವಿ.ಠಾಣೆ, ಎಂ.ಬಿ ನಗರ ಠಾಣೆ ಸಿಬ್ಬಂದಿಯವರಾದ ರಾಜಶೇಖರ, ಸುರೇಶ, ಮಶಾಕ, ಯಲ್ಲಪ್ಪ, ಸುರೇಶ, ಅಜರುದ್ದೀನ್, ಅಣ್ಣಪ್ಪಾ, ಮಲ್ಲಿನಾಥ, ವೇದರತ್ನಂ, ವೀರಶೇಟ್ಟಿ, ಬಲರಾಮ, ಪ್ರಭಾಕರ, ಶಂಕರ, ಶ್ರೀನಿವಾಸ ರೆಡ್ಡಿ, ಸಿದ್ರಾಮಯ್ಯ, ಗಂಗಾಧರ, ನದಾಫ, ತಾರಾಸಿಂಗ, ಸಂಜೀವಕುಮಾರ, ಪಂಡಿತ ಮತ್ತು ಶಿವಪ್ಪ ಮುಖ್ಯ ಪೇದೆಗಳು ಡಿ.ಎಸ್.ಬಿ ಘಟಕ, ರವರು ಎಲ್ಲರೂ ಕೂಡಿಕೊಂಡು 7 ಜನ ದರೋಡೆಕೋರರ ಮೇಲೆ ದಾಳಿ ಮಾಡಿ,  1) ಗಜಾನಂದ ತಂದೆ ಅರುಣಕುಮಾರ ದೇಶಪಾಂಡೆ ವ:25ವರ್ಷ ಉ:ವಿದ್ಯಾರ್ಥಿ, ಸಾ|| ರಾಮನಗರ ಹತ್ತಿರ ಗುಲಬರ್ಗಾ,  2) ಪ್ರಶಾಂತ @ ಸೋನು  ಡಾಬರ ತಂದೆ ಮಹೇಶ ಹಳ್ಳಿ ವ:19 ವರ್ಷ ಜ್ಯಾತಿ:ಲಿಂಗಾಯತ ಉ: ವಿದ್ಯಾರ್ಥಿ, ಸಾ:ಕೆ.ಎಚ್.ಬಿ ಕಾಲೋನಿ ಗುಲಬರ್ಗಾ, 3) ಮಹ್ಮದ ಇಸಾಮುದ್ದೀನ್ ತಂದೆ ಮಹ್ಮದ ದಸ್ತಗೀರ ಶೇಖ್ ವ:19 ವರ್ಷ ಜ್ಯಾತಿ:ಮುಸ್ಲಿಂ ಉ:ವಿಧ್ಯಾರ್ಥಿ, ಸಾ:ವಿದ್ಯಾ ನಗರ ಗುಲಬರ್ಗಾ, 4) ಅಭಿಶೇಕ @ ಅಭಿ ತಂದೆ ಪ್ರಭುರಾವ ಹೊಸಮನಿ ವ:18 ವರ್ಷ ಜ್ಯಾತಿ: ಎಸ್.ಸಿ ಉ:ವಿಧ್ಯಾರ್ಥಿ, ಸಾ:ಕೋಟನೂರ (ಡಿ) ಗುಲಬರ್ಗಾ, 5) ರಾಜಶೇಖರ @ ರಾಜು ತಂದೆ ಧಾನಪ್ಪ ಮಾಳಗಿ ವ:25 ವರ್ಷ ಜ್ಯಾತಿ: ಲಿಂಗಾಯತ ಉ:ವಿಧ್ಯಾರ್ಥಿ, ಸಾ:ಎನ್.ಜಿ.ಓ ಕಾಲೋನಿ ಗುಲಬರ್ಗಾ, 6) ನಾಗರಾಜ ತಂದೆ ವೆಂಕಟೇಶ ಯಾಧವ ವ:19 ವರ್ಷ ಜ್ಯಾತಿ:ಯಾಧವ ಸಾ:ಜಿ.ಡಿ.ಎ ಕಾಲೋನಿ ಗುಲಬರ್ಗಾ, 7) ಜಗತಸಿಂಗ ತಂದೆ ಸುರೇಂದ್ರಸಿಂಗ  ವ:30 ವರ್ಷ ಸಾ:ಪಂಚಶೀಲ ನಗರ ಗುಲಬರ್ಗಾ ಇವರನ್ನು ವಶಕ್ಕೆ ತೆಗೆದುಕೊಂಡು, ಅವರ ವಶದಿಂದ 1 ನಾಡ ಪಿಸ್ತುಲು, 9 ತಲವಾರಗಳು, 1 ಟಾಟಾ ಇಂಡಿಕಾ ವಿಸ್ತಾ ಕಾರ ನಂ.ಕೆಎ:33 ಎಮ್-1759, 3 ಮೋಟಾರ ಸೈಕಲಗಳು, 3 ಬಡಿಗೆಗಳು ಹಾಗೂ 39,000/-ರೂ ನಗದು ಹಣ ಹೀಗೆ ಒಟ್ಟು 4,00,000/- ರೂಪಾಯಿಗಳ  ಮೌಲ್ಯದ ವಸ್ತುಗಳನ್ನು ಜಪ್ತಿ ಮಾಡಿಕೊಂಡಿರುತ್ತಾರೆ.  ಈ ಆರೋಪಿತರು ಗುಲಬರ್ಗಾ ನಗರದ ನಿರ್ಜನ ಪ್ರದೇಶದಲ್ಲಿ ಮತ್ತು ಹೊರ ವಲಯದಲ್ಲಿ ತಿರುಗಾಡುತ್ತಿದ್ದ ಸಾರ್ವಜನಿಕರನ್ನು ಲಾಂಗ, ಮಚ್ಚುಗಳಿಂದ ಹೆದರಿಸಿ ಹಣ ಲೂಟಿ ಮಾಡುವುದು ಮತ್ತು ಹೊಲ ಮತ್ತು ಪ್ಲಾಟಗಳಿಗೆ ಸಂಬಂಧಪಟ್ಟಂತೆ ವ್ಯಾಜ್ಯಗಳನ್ನು ನಾವೇ ಬಗೆಹರಿಸುತ್ತೇವೆ ಅಂತಾ ಹೆದರಿಸಿ ಹಣ ವಸೂಲು ಮಾಡುವುದು, ಮತ್ತು ವಾಯು ವಿಹಾರಕ್ಕೆ ದಂಪತಿಗಳು ಹೋದಾಗ ಅವರನ್ನು ಹೆದರಿಸಿ ಹಣ ವಸೂಲು ಮಾಡುತ್ತಿದ್ದ ಬಗ್ಗೆ ವಿಚಾರಣೆಯಲ್ಲಿ ತಿಳಿದು ಬಂದಿರುತ್ತದೆ. ಮಾನ್ಯ ಶ್ರೀ ಎನ್.ಸತೀಶಕುಮಾರ ಐ.ಪಿ.ಎಸ್ ಪೊಲೀಸ್ ಅಧೀಕ್ಷಕರು ಗುಲಬರ್ಗಾರವರು, ಈ ತನಿಖಾ ತಂಡಗಳ ಕಾರ್ಯವನ್ನು ಶ್ಲಾಘಿಸಿರುತ್ತಾರೆ.

GULBARGA DISTRICT REPORTED CRIME


ಜಬರದಸ್ತಿಯಿಂದ ಕಾಗದ ಪತ್ರಗಳಿಗೆ ಸಹಿ ಹಾಕಿಸಿಕೊಂಡ ಬಗ್ಗೆ:
ಗ್ರಾಮೀಣ ಪೊಲೀಸ್ ಠಾಣೆ ಗುಲಬರ್ಗಾ: ಶ್ರೀ ಮಹಮ್ಮದ ಇಲಿಯಾಸ ತಂದೆ ತಂದೆ ಮಹಮ್ಮದ ಅಬ್ದುಲ ಕರೀಮ ಶೇಖ ವಯಾ:47 ವರ್ಷ ಉ:ಒಕ್ಕಲುತನ ಸಾ:ಖಾದ್ರಿ ಚೌಕ ಆಳಂದ ರೋಡ ಗುಲಬರ್ಗಾರವರು ನನ್ನದು ಸುಲ್ತಾನಪುರ ಗ್ರಾಮದ ಸೀಮಾಂತರದಲ್ಲಿ ಸರ್ವೆ ನಂ: 186/4 ನೇದ್ದರ ಹೋಲವಿದ್ದು, ಅದರಲ್ಲಿ 2 ಎಕರೆ ಜಮೀನು ನನ್ನ ಒಡತಕ್ಕೆ ಸೇರಿರುತ್ತದೆ. ದಿನಾಂಕ-01/09/2012 ರಂದು ಮದ್ಯಾಹ್ನ 3:00 ಗಂಟೆಯ ಸುಮಾರಿಗೆ ನಾನು ಹೋಲದಲ್ಲಿದ್ದಾಗ ಅಸ್ಲಾಂ ತಂದೆ ಮಹಮ್ಮದ ಬಾಸೀರ ಸಾಬ ಸಾ:ಮಿಜಗುರಿ ಮೋಮಿನಪುರ ಗುಲಬರ್ಗಾಶೇಖ ಜಾಫರ ಹುಸೇನ ತಂದೆ ಮಹಮ್ಮದ ಹುಸೇನ ಸಾ:ಬಿಲಾಲಾಬಾದ ಕಾಲೋನಿ ಗುಲಬರ್ಗಾಸೈಯ್ಯದ ಸರ್ವರ ಅಲಿ ತಂದೆ ಸೈಯ್ಯದ ಮೌಲಾ ಅಲಿ ಸಾ:ಬಸವೇಶ್ವರ ಕಾಲೋನಿ ಗುಲಬರ್ಗಾ ಇವರು ನಮ್ಮ ಹೋಲದಲ್ಲಿ ಬಂದು ಜಬರದಸ್ತಿಯಿಂದ ನನಗೆ ಟವೇರಾ ಕಾರ ನಂ ಕೆಎ-32/ಎಂ-7888 ನೇದ್ದರಲ್ಲಿ ಹಾಕಿಕೊಂಡು, ಗುಲಬರ್ಗಾ ಸಬ್ ರಿಜಿಸ್ಟರ ಆಫೀಸಗೆ ಸಾಯಾಂಕಾಲ 4:00 ಗಂಟೆ ಸುಮಾರಿಗೆ ಸ್ಟಾಂಪ ಪೇಪರ ಮೇಲೆ ಸಹಿ ಮತ್ತು ರುಜು ಮಾಡಿಸಿಕೊಂಡಿರುತ್ತಾರೆ. ಅಲ್ಲದೇ ಈ ವಿಷಯ ಯಾರಿಗಾದರು ಹೇಳಿದರೆ ಮತ್ತು ಕೇಸು ಮಾಡಿದರೇ ನಿನಗೇ ಮತ್ತು ನಿನ್ನ ಮಗ, ಮತ್ತು ಮಗಳಿಗೆ ಜೀವ ಸಹಿತ ಬೀಡುವುದಿಲ್ಲಾ ಅಂತಾ ಮಾರಕ ಅಸ್ತ್ರಗಳು ತೋರಿಸಿ ಹೇದರಿಸಿರುತ್ತಾರೆ. ಕಾರಣ 3 ಜನರ ಮೇಲೆ ಕಾನೂನು ಕ್ರಮ ಜರುಗಿಸಬೇಕು ಆಂತಾ ಮಹಮ್ಮದ ಇಲಿಯಾಸ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:60/2013 ಕಲಂ 447 364 (ಎ), 420, 504 506 (2) ಸಂಗಡ 34 ಐ.ಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

27 January 2013

GULBARGA DISTRICT REPORTED CRIMES


ಕೊಲೆ ಪ್ರಕರಣ:
ಚಿಂಚೋಳಿ ಪೊಲೀಸ್ ಠಾಣೆ:ನನ್ನ ತಮ್ಮನಾದ ದೇವಿದಾಸ ಮತ್ತು ಅವನ ಮಗನಾದ ಕಮಲ ಇಬ್ಬರೂ ಕೂಡಿಕೊಂಡು ಹೋಲದಲ್ಲಿಯ ಜೋಳ ಕಾಯಲು ಹೋದಾಗ ಶಂಕರ ತಂದೆ ರಾಮಚಂದ್ರ ಚವ್ಹಾಣ, ಗೋವಿಂದ ತಂದೆ ಲಚ್ಚು ರಾಠೋಡ, ಈಶ್ವರ ತಂದೆ ಬದ್ದು ರಾಠೋಡ, ರವರು ನಮ್ಮ ಹೋಲದಲ್ಲಿದ್ದ ನನ್ನ ತಮ್ಮನಾದ ದೇವಿದಾಸನಿಗೆ, ಗೋವಿಂದ ತಂದೆ ಲಚ್ಚು ರಾಠೋಡ ಇತನು ತಮ್ಮ ಹೋಲಕ್ಕೆ ಕರೆದುಕೊಂಡು ಹೋಗಿ,ಈಶ್ವರ ತಂದೆ ಬದ್ದು ರಾಠೋಡ ಎನ್ನುವವನ ಹೆಂಡತಿಯಾದ ಮೈನಾಬಾಯಿ ಎಂಬುವವಳೊಂದಿಗೆ ಅನೈತಿಕ ಸಂಬಂಧ ಹೊಂದಿರುವುದಾಗಿ ಸಂಶಯ ಮಾಡಿಕೊಂಡು ಗೋವಿಂದನ ಹೋಲದ ಬದಿಗಿರುವ ಕರೆಂಟ್ ವೈರಿನ ಮೇಲೆ ನೂಕಿಸಿಕೊಟ್ಟು ಕೊಲೆ ಮಾಡಿರುತ್ತಾರೆ, ಶವದ ಸಾಕ್ಷಿ ನಾಶ ಮಾಡುವ ಕುರಿತು ಮೃತ ದೇಹವನ್ನು ಮಾಣಿಕೂರ ಸೀಮಾಂತರದ ಗುಡ್ಡದ ಮೇಲಿಂದ ಸುಮಾರು 150 ಪೀಟ್ ಆಳವಾದ ಕಂದಕದಲ್ಲಿ ಬಿಸಾಡಿ ಬಂದಿರುತ್ತಾರೆ. ಕಾರಣ ಸದರಿಯವರ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ಸೀತಾರಾಮ ತಂದೆ ತುಳಿಸಿರಾಮ ರಾಠೋಡ ವ:50 ವರ್ಷ, ಜಾ:ಲಂಬಾಣಿ ಉ:ಒಕ್ಕಲುತನ ಸಾ:ಕುಸರಂಪಳ್ಳಿತಾಂಡಾ  ತಾ:ಚಿಂಚೋಳಿ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ:12/2013 ಕಲಂ.302, 201, ಸಂ.34 ಐಪಿಸಿ ಪ್ರಕಾರ ಪ್ರಕರಣ ದಾಖಲ ತನಿಖೆ ಕೈಕೊಂಡಿರುತ್ತಾರೆ.
ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ:ಶ್ರೀಮತಿ ತಾಯವ್ವ ಗಂಡ ಮರೇಪ್ಪಾ ಹುರಸಗುಂಡಗಿ ವಯಾ:35 ವರ್ಷ, ಉ:ಕೂಲಿ ಕೆಲಸ  ಸಾ:ಸುಣ್ಣದ ಭಟ್ಟಿ ಶಾಹಾಬಾದ ರವರು ನಾನು ಮತ್ತು ನಮ್ಮೂರಿನ ಪಾರ್ವತಿ, ನಾದಿನಿಯಾದ ಹೇಮಾವತಿ ಎಲ್ಲರೂ ಕೂಡಿಕೊಂಡು ದಿನಾಂಕ:25-01-2013 ರಂದು  ಮಧ್ಯಾಹ್ನ 3=30 ಗಂಟೆಗೆ  ಶಾಹಾಬಾದಕ್ಕೆ ಹೋಗುವ ಕುರಿತು ಹೀರಾಪೂರ ಕ್ರಾಸ್ ದಿಂದ ಕಣ್ಣಿ ಮಾರ್ಕೆಟ ಕ್ರಾಸ್ ಕಡೆಗೆ ನಡೆದುಕೊಂಡು ಬರುತ್ತಿದ್ದಾಗ  ಹಿಂದಿನಿಂದ ಒಬ್ಬ ಮೋಟಾರ ಸೈಕಲ್  ನಂ:ಕೆಎ-32 ಇಎ-2926 ನೇದ್ದರ ಚಾಲಕನು ತನ್ನ ಮೋಟಾರ ಸೈಕಲ್ ನ್ನು ಅತಿವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನಗೆ ಡಿಕ್ಕಿ ಪಡಿಸಿ ಅಪಘಾತಮಾಡಿ  ಭಾರಿ ಗಾಯಗೊಳಿಸಿರುತ್ತಾನೆ. ಸದರಿಯವನ ಮೇಲೆ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ  ಸಾರಾಂಶದ ಮೇಲಿಂದ  ಠಾಣೆ ಗುನ್ನೆ ನಂ:06/2013 ಕಲಂ: 279, 338  ಐ.ಪಿ.ಸಿ. ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.  
ಎರಡು ಮೋಟಾರ ಸೈಕಲಗಳು ಜಪ್ತಿ:
ಮಹಾತ್ಮ ಬಸವೇಶ್ವರ ನಗರ ಪೊಲೀಸ್ ಠಾಣೆ:ದಿನಾಂಕ:26/01/2013 ರಂದು ಸಾಯಂಕಾಲ 5.00 ಗಂಟೆಗೆ ಎಂ.ಬಿ.ನಗರ ಪೊಲೀಸ್ ಠಾಣೆಯ ಪಿಎಸ.ಐ ರವರಾದ ಶ್ರೀಮಂತ ಇಲ್ಲಾಳ ತಮ್ಮ ಸಿಬ್ಬಂದಿಯೊಂದಿಗೆ, ಗುಲಬರ್ಗಾ ನಗರದ ಸ್ವಸ್ತಿಕ ನಗರದಲ್ಲಿರುವ ಲಕ್ಷ್ಮಿ ಗುಡಿ ಹತ್ತಿರ ಮೋಟಾರ ಸೈಕಲಗಳ್ನು ಚೆಕ್ ಮಾಡುತ್ತಿರುವಾಗ ಇಬ್ಬರು ಮೋಟಾರ ಸೈಕಲ ಸವಾರರು ತಮ್ಮ ಮೋಟಾರ ಸೈಕಲಗಳನ್ನು ತೆಗೆದುಕೊಂಡು ಹೋಗುತ್ತಿರುವಾಗ, ಸದರಿಯವರನ್ನು ವಿಚಾರಣೆ ಮಾಡುತ್ತಿದ್ದಾಗ ಸದರಿ ಮೋಟಾರ ಸೈಕಲಗಳ ಬಗ್ಗೆ ಸರಿಯಾದ ಮಾಹಿತಿ ನೀಡದೇ ಇರುವದರಿಂದ ಅವರ ಬಗ್ಗೆ ಕೂಲಕೂಂಶವಾಗಿ ವಿಚಾರಿಸಲು ತಮ್ಮ ಹೆಸರು ಮಜರ ಅಲಿ ತಂದೆ ಮಹ್ಮದ ಅಬ್ದುಲ ಹಫೀಜ್ ಶೇಕ್ ವಯಃ 32 ವರ್ಷ ಜಾತಿಃ ಮುಸ್ಲಿಂ ಉಃ ಖಾಸಗಿ ಕೆಲಸ ಸಾಃ ಮನೆ ನಂ. 5-261, ರೋಜಾ (ಬಿ) ಗುಲಬರ್ಗಾ, ಮತ್ತು  ರಮೇಶ ತಂದೆ ಮಲ್ಲಪ್ಪ ಪೂಜಾರಿ ವಯಃ 22 ವರ್ಷ ಉಃ ಕ್ರೂಸರ್ ಡ್ರೈವರ ಜಾತಿಃ ಕುರುಬ ಸಾಃಸೂಗೂರ ಗ್ರಾಮ ತಾಃ ಚಿತ್ತಾಪೂರ ಜಿಃಗುಲಬರ್ಗಾ, ತಿಳಿದುಕೊಂಡು ಸದರಿಯವರ ಹತ್ತಿರವಿದ್ದ ಮೋಟಾರ ಸೈಕಲಗಳ ಕಾಗದ ಪತ್ರಗಳ ಬಗ್ಗೆ ವಿಚಾರಿಸಲು ಯಾವುದೇ ಕಾಗದ ಪತ್ರಗಳು ಹೊಂದಿರುವದಿಲ್ಲ. ನೀವು ಇವುಗಳನ್ನು ಎಲ್ಲಿಂದ ತಂದಿರುತ್ತಿರಿ, ಎಲ್ಲಿಗೆ  ತೆಗೆದುಕೊಂಡು ಹೋಗುತ್ತಿದ್ದೀರಿ ಅಂತಾ ವಿಚಾರಿಸಲು ರಮೇಶ ಇತನು ತನ್ನ ವಶದಲ್ಲಿದ್ದ ಮೋಟಾರ ಸೈಕಲ ನಂ:ಕೆಎ-33 ಕೆ-8075 ನೇದ್ದನ್ನು ಬೀದರದಿಂದ ಕಳುವು ಮಾಡಿಕೊಂಡು ತಂದಿರುವುದಾಗಿ ತಿಳಿಸಿದನು. ಮಜರಅಲಿ ಇತನು ತನ್ನ ಹತ್ತಿರವಿರುವ ಮೋಟಾರ ಸೈಕಲ ನಂ:ಕೆಎ-32 ವಿ-8971 ನೇದ್ದನ್ನು ಸುಪರ ಮಾರ್ಕೆಟ ಗುಲಬರ್ಗಾದಿಂದ ಕಳುವು ಮಾಡಿರುವದಾಗಿ ತಿಳಿಸಿದನು. ಆ ಎರಡು ಜನರನ್ನು ವಶಕ್ಕೆ ತೆಗೆದುಕೊಂಡು ಹಾಗೂ ಅವರಲ್ಲಿದ್ದ Hero Honda Splender Silver Colour M/c No. KA 33 K 8075, Chassis No. 01B20107521, Engine No. 01B18M07256 ಅಃಕಿಃ 25,000/- ರೂ. ಹಾಗು 2) Hero Honda Splender M/c No. KA 32 V 8971, Chassis No. MBLHA10EJ9HJ08596, Engine No. HA10EA9HJ57640 ಅಃಕಿಃ 20,000/- ರೂ ನೇದ್ದವುಗಳನ್ನು ಜಪ್ತಿ ಮಾಡಿಕೊಂಡಿದ್ದರಿಂದ ಸರ್ಕಾರಿ ತರ್ಪೆಯಾಗಿ ಶ್ರೀ ಶ್ರೀಮಂತ ಇಲ್ಲಾಳ ರವರು ಠಾಣೆ ಗುನ್ನೆ ನಂ: 13/2013 ಕಲಂ. 41(ಡಿ), 102 ಸಿ.ಆರ್.ಪಿ.ಸಿ ಹಾಗು 379 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕೊಲೆ ಪ್ರಕರಣ:
ಅಫಜಲಪೂರ ಪೊಲೀಸ್ ಠಾಣೆ:ಸುಮಾರು 35-40 ವರ್ಷ ವಯಸ್ಸಿನನಿಗೆ ಗಂಡು ಮನುಷ್ಯನಿಗೆ 3-4 ದಿವಸಗಳ ಹಿಂದೆ  ಯಾರೋ ಕೊಲೆ ಮಾಡಿ ಮಾಡಿ ಗೋಣಿ ಚೀಲದಲ್ಲಿ ಹಾಕಿ, ಕಲ್ಲು ಕಟ್ಟಿ ಶವ ಗೊತ್ತಾಗದಂತೆ ಸಾಕ್ಷಿ ನಾಶ ಪಡಿಸಿ ಮಣೂರ-ಅಗರಖೇಡ ಗ್ರಾಮದ ಭೀಮಾ ಬ್ರೀಡ್ಜ ಕೆಳಗಡೆ ನೀರಿನಲ್ಲಿ ಶವ ಬಿಸಾಕಿ ಹೋಗಿರುತ್ತಾರೆ ಮೃತನ ಹೆಸರು ವಿಳಾಸ ತಿಳಿದು ಬಂದಿರುವದಿಲ್ಲ. ಸದರಿಯವರ ಶವದ ಮುಂದಿನ ಕ್ರಮ ಕೈಕೊಳ್ಳಬೇಕು ಅಂತಾ ಶ್ರೀ ರಾಮ ತಂದೆ ಬೂತಾಳಿ ನಡವಿನಕೇರಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಸಾ|| ಮಣೂರ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ:20/2013 ಕಲಂ. 302, 201 ಐ ಪಿ ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.