POLICE BHAVAN KALABURAGI

POLICE BHAVAN KALABURAGI

21 December 2012

GULBARGA DISTRICT REPORTED CRIME


ಪಡಿತರ ಚೀಟಿದಾರರಿಗೆ ವಿತರಿಸಬೇಕಾದ ಆಹಾರ ಧ್ಯಾನ ಕಾಳಸಂತೆಯಲ್ಲಿ ಮಾರಾಟ ಮಾಡಲು ಯತ್ನ:
ಗುಲಬರ್ಗಾ ಗ್ರಾಮೀಣ ಪೊಲೀಸ್ ಠಾಣೆ: ದಿನಾಂಕ 20-12-12 ರಂದು ಮಧ್ಯಾಹ್ನ ಬಡ ಜನರಿಗೆ ಹಂಚುವ ಪಡಿತರ (ರೇಶನ) ಅಕ್ಕಿಯನ್ನು, ಪಡಿತರ ಚೀಟಿದಾರರಿಗೆ ವಿತರಿಸಬೇಕಾದ ಆಹಾರ ಧ್ಯಾನ ಅಕ್ಕಿಯನ್ನು  ಸಾರ್ವಜನಿಕರಿಗೆ ವಿತರಿಸದೇ ಮೋಸ ಮಾಡಿ  ತಮ್ಮ ಲಾಭಕ್ಕಾಗಿ  ಲಾರಿ ನಂಬರ ಕೆಎ-56/0062 ರಲ್ಲಿ ಗುರುಮಿಟಕಲ್ಲದಿಂದ ಮುಂಬೈ ಮತ್ತು ವಾಸಿಗೆ ಸಾಗಾಣಿಕೆ ಮಾಡುತ್ತಿದ್ದಾರೆ. ಲಾರಿ ಗುಲಬರ್ಗಾ ನಗರದ ಸೇಡಂ ರಿಂಗ ರೋಡ ಮುಖಾಂತರ ಬರುತ್ತಿರುವ ಬಗ್ಗೆ ಬಾತ್ಮಿ ಬಂದ ಮೇರೆಗೆ ಮಾನ್ಯ ಶ್ರೀ ಎನ್. ಸತೀಶಕುಮಾರ ಐ.ಪಿ.ಎಸ್.  ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಸ್ರೀ ಕಾಶಿನಾಥ ತಳಕೇರಿ ಹೇಚ್ಚುವರಿ ಪೊಲೀಸ್ ಅಧೀಕ್ಷಕರು ಗುಲಬರ್ಗಾ, ಮಾನ್ಯ ಡಿ.ಎಸ್.ಪಿ.(ಗ್ರಾ) ಐ/ಸಿ (ಬಿ) ಉಪವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ಮಾನ್ಯ ಪಿಐ ಡಿಸಿಐಬಿ ಮತ್ತು  ಸಿಬ್ಬಂದಿಯವರೆಲ್ಲರು. ಸಿಪಿಐ ಗ್ರಾಮೀಣ, ಪಿ.ಎಸ್.ಐ. ಗ್ರಾಮೀಣ  ಮತ್ತು ಸಿಬ್ಬಂದಿಯವರೊಂದಿಗೆ, ಮಧ್ಯಾಹ್ನ 3-00 ಗಂಟೆ ಸುಮಾರಿಗೆ ಜಬ್ಬಾರ ಫಂಕ್ಷನ ಹಾಲ ಹತ್ತಿರ  ಲಾರಿ ಕೆಎ-56/0062 ನೇದ್ದು  ಬರುತ್ತಿರುವದನ್ನು ಗಮನಿಸಿ ನಿಲ್ಲಿಸಿಲು ಸೂಚಿಸಿದರು ಲಾರಿ ಚಾಲಕನ್ನು ತನ್ನ ಲಾರಿ ನಿಲ್ಲಿಸದೇ ಹಾಗೇ  ಹುಮನಾಬಾದ ರಿಂಗ ರೋಡ ಕಡೆ ಓಡಿಸಿಕೊಂಡು ಹೋಗುತ್ತಿದ್ದನು. ಪಿ.ಐ. ಡಿಸಿಐಬಿ ಮತ್ತು ಸಿಪಿಐ ಗ್ರಾಮೀಣ, ಪಿ.ಎಸ್.ಐ.  ಸಿಬ್ಬಂದಿಯವರು ಲಾರಿಯನ್ನು ಬೆನ್ನು ಹತ್ತಲು ಲಾರಿ ಹುಮನಾಬಾದ ರಿಂಗ ರೋಡಿನಲ್ಲಿ   ಹಿಡಿದು ನಿಲ್ಲಿಸಿ ಲಾರಿ ಚಾಲಕ ಜಯತೀರ್ಥ ಮತ್ತು ಕ್ಲೀನರ ಸೂರ್ಯಕಾಂತ ಇವರಿಗೆ  ವಿಚಾರಿಸಲಾಗಿ ಸದರಿ ನರೇಂದ್ರ ರಾಠೋಡ, ಮಣಿಕಂಠ ರಾಠೋಡ, ರಾಜಕುಮಾರ ರಾಠೋಡ, ಮುನೀಮ ಚನ್ನಬಸಯ್ಯ ಸ್ವಾಮಿ ಸಾ: ಎಲ್ಲರೂ ಗುರುಮಿಟಕಲ್ಲ ಇವರು ಬಡವರಿಗೆ  ಹಂಚುವ  ನ್ಯಾಯ ಬೆಲೆಯ ಅಂಗಡಿಯ  ಪಡಿತರ ಅಕ್ಕಿಯನ್ನು  ಸರಕಾರಿ ಮುದ್ರೆಯೊಂದಿಗೆ ಗೋಣಿ ಚೀಲದಲ್ಲಿ ಬಂದಂತಹ  ಪಡಿತರ ಅಕ್ಕಿಯನ್ನು ಗುರುತು ಗೋದಾಮಿನಲ್ಲಿ  ಅಕ್ರಮವಾಗಿ ಸಂಗ್ರಹಿಸಿ ಅವುಗಳು ಪಡಿತರ ಅಕ್ಕಿ ಅಂತಾ ಗುರುತು ಸಿಗದಂತೆ ಸರಕಾರಿ ಗೋಣಿ ಚೀಲದಲ್ಲಿರುವ ಪಡಿತರ ಅಕ್ಕಿಯನ್ನು ಯೂರಿ ಬ್ರ್ಯಾಂಡ ಬೆಸ್ಟ್ ಕ್ವಾಲಿಟೀ ರೈಸ ರಡಿ ಫಾರ ಕುಕ್ಕ  ಅಂತಾ ಮುದ್ರಿಸಿದ ಪ್ಲಾಸ್ಟಿಕ ಚೀಲಗಳಲ್ಲಿ ತುಂಬಿ ಅಲ್ಲಿಯೇ ತೂಕ ಮಾಡಿ ಪ್ಯಾಕ ಮಾಡಿ ಯಾರಿಗೂ ಗುರುತು ಸಿಗದಂತೆ ಸರಕಾರಿ ಪಡಿತರ ಅಕ್ಕಿಯನ್ನು ದುರುಪಯೋಗ ಮಾಡಿಕೊಂಡು ಸಾರ್ವಜನಿಕರಿಗೆ  ಹಂಚುವ ಅಕ್ಕಿಯನ್ನು  ಮಾರಾಟ ಮಾಡಲು ಉದ್ದೇಶಿಸಿ ಖೊಟ್ಟಿ ದಾಖಲಾತಿ ಸೃಷ್ಟಿಸಿರುತ್ತಾರೆ ಲಾರಿಯಲ್ಲಿದ್ದ 25 ಕೆ.ಜಿ. ತೂಕವುಳ್ಳ  ಒಟ್ಟು 680 ಚೀಲಗಳು ಒಟ್ಟು 170 ಕ್ವಿಂಟಾಲ್ ಅ:ಕಿ: 3,35,750 ರೂ. ಹಾಗೂ ಲಾರಿ ಕೆಎ-56/0062 ಅ:ಕಿ:  12 ಲಕ್ಷ ರೂ.  ಹೀಗೆ ಒಟ್ಟು  15,35, 750/- ರೂ.  ಅಕ್ಕಿ ಚೀಲಗಳನ್ನು ಮತ್ತು ಲಾರಿಯನ್ನು ಕೇಸಿನ ಪುರಾವೆಗೋಸ್ಕರ ಜಪ್ತ ಪಡಿಸಿಕೊಂಡಿದ್ದು, ಈ ಮೇಲಿನ 6 ಜನರ  ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಶ್ರೀ ಎಸ್.ಎಸ್. ಹುಲ್ಲೂರು ಪಿ.ಐ. ಡಿಸಿಐಬಿ ಘಟಕ ಗುಲಬರ್ಗಾ ರವರು ಜಪ್ತಿ ಪಂಚನಾಮೆ ಮತ್ತು ಜಪ್ತಿ ಪಡಿಸಿಕೊಂಡ ಮುದ್ದೆಮಾಲು ಹಾಗೂ ಇಬ್ಬರು ಆಪಾದಿತರನ್ನು  ಒಪ್ಪಿಸಿ ಸದರಿ ಆರು  ಜನ ಆಪಾದಿತರ ವಿರುದ್ದ ಕಾನೂನು ಕ್ರಮ ಕೈಕೊಳ್ಳಲು ವರದಿ ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ.421/12 ಕಲಂ 406, 408, 468, 471, 420 ಐಪಿಸಿ ಮತ್ತು 3 ಮತ್ತು 7 ಈ.ಸಿ. ಕ್ಟ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ. 

20 December 2012

GULBARGA DISTRICT REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ ಶಿವಶರಣಪ್ಪಾ ತಂದೆ ಹೂವಪ್ಪಾ ಸಾಲೆಗಾಂವ ಉ|| ಪೌರ ಕಾರ್ಮಿಕ ಸಾ|| ಬೀಮನಗರ ಆಳಂದ ರವರು ನಾನು ಆಳಂದ ಪುರಸಭೆಯಲ್ಲಿ ಪೌರ ಕಾರ್ಮಿಕ ಅಂತಾ 10 ವರ್ಷದಿಂದ ಕೆಲಸ ಮಾಡುತ್ತಾ ಬರುತ್ತಿದ್ದೆನೆ, ನನ್ನಂತೆ ಗುಂಡಪ್ಪಾ ಚೂಚಕೋಟಿ , ಬಸವರಾಜ ಜಂಗಲೆ, ಮಾರುತಿ ಉಕರಂಡೆ ,ಮೋತಿರಾಮ ಸಗಾಟೆ ಹಾಗು ಇತರರು ಕೂಡಿ ಆಳಂದ ಪಟ್ಟಣದಲ್ಲಿ ಪೌರ ಸಬೆಯ ವತಿಯಿಂದ ಕಸಾ ಗೂಡಿಸುವ ಕೆಲಸ ಮಾಡುತ್ತಿದ್ದು, ದಿನಾಂಕ:19/12/2012 ರಂದು ಬೆಳಿಗ್ಗೆ 8-00  ಗಂಟೆಗೆ ಪ್ರತಿ ದಿನದಂತೆ ಕಸಾ ಗೂಡಿಸುವ ಸಲುವಾಗಿ ಸಗರಿ ಗಲ್ಲಿ ಆಳಂದದಲ್ಲಿ ಕಸ ಗುಡಿಸುವಾಗ ಮೈನೋದ್ದಿನ್ ಸಗ್ರಿ ಹಾಗು ಅವನ ಮಗ ಅಹ್ಮದ ಇವರು ಬಂದವರೆ ಅವಾಚ್ಯವಾಗಿ ಬೈಯುತ್ತಿದ್ದು, ಯ್ಯಾಕೆ ಅಂತಾ ಕೇಳಿದಕ್ಕೆ ಇಬ್ಬರೂ ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 254/2012 ಕಲಂ 323, 504 ಸಂಗಡ 34 ಐಪಿಸಿ  ಮತ್ತು 3 (1) (10) ಎಸ.ಸಿ/ ಎಸಟಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಶಾಂತಕುಮಾರ ತಂದೆ ಗುರಲಿಂಗಪ್ಪಾ ಹೆರುಂಡಿ ಸಾ: ಕೊಂಡೇದ ಗಲ್ಲಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ಟವೇರಾ ವಾಹನ ಟೆಂಪರವರಿ ರಜಿಸ್ಟ್ರೇಶನ ನಂ.ಕೆಎ-25-ಸಿ-7572 ನೇದ್ದನ್ನು ದಿನಾಂಕ_20/10/2012 ರಂದು ಬೆಲ್ಲದ ಎಂಟರಪ್ರೈಜೆಸ್‌ ಶೋ ರೂಮ ಹುಬ್ಬಳ್ಳಿಯಿಂದ  ಖರೀದಿಸಿದ್ದು, ಇನ್ನು ಆರ್‌.ಟಿ.ಒ ದಿಂದ ಪರ್ಮಿಂಟ ರಜಿಸ್ಟ್ರೇಷನ ಆಗಿರುವುದಿಲ್ಲಾ.  ಸದರಿ ವಾಹನದ ಮೆಂಟೇನೆನ್ಸ ಮತ್ತು ಡ್ರೈವರ ಸಲುವಾಗಿ ಭದ್ರಿನಾರಾಯಣ ರವರಿಗೆ ಕೊಟ್ಟಿರುತ್ತೆನೆ. ದಿನಾಂಕ:20/12/2012 ರಂದು ರಾತ್ರಿ  ವೇಳೆಯಲ್ಲಿ  ಭದ್ರಿ ನಾರಾಯಣ  ತಂದೆ ದಿ:ಜೀವನರಾವ ಮುಜುಮದಾರ ಸಾ:ಎನ್‌.ಜಿ.ಒ ಕಾಲೋನಿ ಗುಲಬರ್ಗಾ ರವರ ಮನೆಯ ಮುಂದೆ ನನ್ನ ಟವೇರಾ ವಾಹನ (ಟೆಂಪರವರಿ ರಜಿಸ್ಟ್ರೇಷನ) ನಂ. ಕೆಎ-25-ಸಿ-7572 ಚೆಸ್ಸಿ ನಂ. . MA6ABCJ5CCH007819,  ಇಂಜನ ನಂ. 3IM156671 ಅ:ಕಿ: 8,42,623/- ರೂಪಾಯಿ ನೇದ್ದನ್ನು ನಿಲ್ಲಿಸಿದ್ದು, ಮಧ್ಯರಾತ್ರಿ 1-00 ಗಂಟೆಯಿಂದ ನಸುಕಿನ ಜಾವ  4-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗ್ಲಾಸ ಒಡೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:117/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

19 December 2012

GULBARGA DISTRICT REPORTED CRIMES


ಬೇಲಿ ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಶಿವಪುತ್ರಪ್ಪ ಡಿಗ್ಗಿಕರ ಸಾ|| ಖಂಡ್ರೆಗಲ್ಲಿ ಭಾಲ್ಕಿ ಜಿ|| ಬೀದರ (ಶ್ರೀ ಗಂಗಾಧರ ಮಜ್ಜಗೆ ರವರ ಎಸ್.ಪಿ.ಎ ಹೊಲ್ಡರ) ರವರು ನನಗೆ ಶ್ರೀ ಗಂಗಾಧರ ಮಜಗೆ ರವರು ಬೆಂಗಳೂರು ವಾಸಿಯಾಗಿದ್ದರೂ ಬಾಲ್ಕಿಗೆ ಬಂದು ಹೋಗುತ್ತಿರುತ್ತಾರೆ. ನನ್ನ ಖಾಯಂ ಮನೆ ಗುಲಬರ್ಗಾಕ್ಕೆ ಇರುವುದ್ದರಿಂದ ಮೇ|| ಧನಲಕ್ಷ್ಮಿ ಪ್ರಮೋಟರ್ಸ ಮತ್ತು ಬಿಲ್ಡರ್ಸರವರ ಪಾಲುದಾರರಾಗಿದ್ದಾರೆ. ಮೇ|| ಧನಲಕ್ಷ್ಮಿ ಪ್ರಮೋಟರ್ಸ ಮತ್ತು ಬಿಲ್ಡಿರ್ಸನ ಪಾಲುದಾರನಾದ ಶ್ರೀ ದೀಪಕ ಚಂದ ಕೋಠಾರಿ ಮತ್ತು ಸದರಿ ಶ್ರೀ ಗಂಗಾಧರ ಮಜಗೆರವರು ಕೂಡಿ ದಿನಾಂಕ:12-102-2012  ರಂದು ಗುಲಬರ್ಗಾ ತಾಲೂಕು ಮತ್ತು ಜಿಲ್ಲೆಯ ಬ್ರಹ್ಮಪೂರದ ಸರ್ವೆ ನಂ:74/34 ಎ.ಡಿ.ಎಲ್.ಆರ್ ಕಚೇರಿಯನ್ವಯ ಮತ್ತು ಸರ್ವೆ ನಂ. 74/10  ಮತ್ತು  15 ಭೂ ಪರಿವರ್ತನೆ ಆದೇಶದ ಪ್ರಕಾರ ಭೂ-ಪರಿವರ್ತನೆಯಾದ 29 ಗುಂಟೆ ಜಮೀನನ್ನು (ಅದರಲ್ಲಿ ಚಂದ್ರಕಾಂತ ರವರ 15 ಗುಂಟೆ ಮತ್ತು ಕವಿತಾರವರ  14 ಗುಂಟೆ ಜಮೀನು ಇರುತ್ತದೆ, ಸದ್ರಿ ಬಿಲ್ಡರ್ಸನ ಹೆಸರಿನಲ್ಲಿ ಸದ್ರಿ ಜಮೀನಿನ ಮಾಲಿಕರಾದ ಶ್ರೀ ಚಂದ್ರಕಾಂತ ತಂದೆ ಗುರಪ್ಪಾ ಮತ್ತು ಶ್ರೀಮತಿ ಕವಿತಾ ಗಂಡ ಚಂದ್ರಕಾಂತ ರವರಿಂದ ಪತ್ರಿಕಾ ಪ್ರಕಟಣೆ ಕೊಟ್ಟುಕಾನೂನಿನ ರೀರಿ ಖರೀಧಿ ಮಾಡಿ ನೊಂದಾಯಿಸಿಕೊಂಡಿರುತ್ತಾರೆ. ಖರೀದಿ ಮಾಡಿದ ಜಮೀನಿನ ಸುತ್ತಲೂ ಕಬ್ಬಿಣದ ತಂತಿ ಬೇಲಿಯನ್ನು ಹಾಕಿಸಿರುತ್ತಾರೆ. ದಿನಾಂಕ:16-12-2012 ರಂದು ಮದ್ಯಾಹ್ನ 2-00 ಗಂಟೆಗೆ ನಾನು ಜಮೀನಿಗೆ ಹೋದಾಗ ಅದರ ಪಶ್ಚಿಮ ದಿಕ್ಕಿನ ತಂತಿ ಬೇಲಿಯನ್ನು ಕೆಡವಿ ಹಾನಿಗೊಳಿಸಿದ್ದು ಕೆಲವು ಕಬ್ಬಿಣದ ತಂತಿ ಮತ್ತು ಕಂಬಗಳನ್ನು ಕದ್ದುಗೊಂಡು ಹೋಗಿದ್ದಲ್ಲದೆ ಮತ್ತೆ ಕೆಲವು ಕಂಬ ಮತ್ತು ತಂತಿ ಬೇಲಿಯನ್ನು ಹಾನಿಗೊಳಿಸಿದ್ದು ನೋಡಲಾಗಿ ಅಂದಾಜು  25,000/- ಮೋತ್ತದ  ಹಾನಿ ಮಾಡಿರುತ್ತಾರೆ.  ಸದ್ರಿ ವಿಷಯವನ್ನು ಗಂಗಾಧರ ಮಜಗೆರವರಿಗೆ ತಿಳಿಸಿದಾಗಅವರು ಅವರ ಪರವಾಗಿ ದೂರನ್ನು ಸಲ್ಲಿಸಲು ಎಸ್.ಪಿ.ಎ ಕೊಟ್ಟಿರುತ್ತಾರೆ.ಆದಕಾರಣ ಈ ದೂರನ್ನು ಕೊಡುತ್ತಿದ್ದೇನೆ.   ಅಂತಾ ಅರ್ಜಿ ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:116/2012 ಕಲಂ, 379, 427 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಾಣೆಯಾದ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಸೈಯ್ಯದ ಮುಸ್ತಾಕ ಹುಸೇನಿ ತಂದೆ ಅಬ್ದುಲ ರಜಾಕ ಸಾ:ಮನೆ ನಂ.5-408/40/45/15 ಸೈಯ್ಯದ ಕಾಂಪ್ಲೆಕ್ಸ್ ಕೆ.ಸಿ.ಟಿ ಕಾಲೇಜ ರೋಡ ಬಾಂಬೆ ಮೆಡಿಕಲ್ಸ್ ಅಂಗಡಿಯ ಹಿಂದುಗಡೆ ಖಾಜಾ ಕಾಲೋನಿ ಗುಲಬರ್ಗಾ ರವರು ನನಗೆ ಸೈಯ್ಯದ ಇಮಾದ ಹುಸೇನ ತಂದೆ ಸೈಯ್ಯದ ಮುಸ್ತಾಕ ಹುಸೇನ ವಯ: 17 ವರ್ಷ ವಯಸ್ಸಿನ ಮಗನಿದ್ದು ಇತನು ಗುಲಬರ್ಗಾ ನಗರದ ಜಿಡಿಎ ಲೇಔಟ ಸಂತ್ರಾಸವಾಡಿ ಬಡಾವಣೆಯಲ್ಲಿ ಇರುವ ಆರ.ಎಮ.ಪಾಲಿಟೆಕ್ನಿಕ  ಕಾಲೇಜದಲ್ಲಿ ಸಿವಿಲ್ ಡಿಪ್ಲೋಮಾ ಪ್ರಥಮ ವರ್ಷದಲ್ಲಿ ವಿಧ್ಯಾಬ್ಯಾಸ ಮಾಡುತಿದ್ದು ದಿನಾಂಕ:15/11/2012 ರಂದು ಬೆಳಿಗ್ಗೆ 10:00 ಗಂಟೆಗೆ ನಾನು ಕಾಲೇಜಿಗೆ  ಹೋಗುತ್ತೆನೆ ಅಂತಾ ಮನೆಯಲ್ಲಿ ಹೇಳಿ ಹೋಗಿರುತ್ತಾನೆ. ಅಂದು ಕಾಲೇಜಿಗೆ ಹೋಗದೇ ಮನೆಗೂ ಸಹ ಬಾರದೇ ಕಾಣೆಯಾಗಿರುತ್ತಾನೆ.ನನ್ನ ಮಗನ ಬಗ್ಗೆ ಎಲ್ಲಾ ಕಡೆ ಹುಡುಕಾಡಿ ನಮ್ಮ ಸಂಬಂದಿಕ ಬಂದು ಬಳಗ ಅಲ್ಲದೇ ಅವರ ಗೆಳೆಯರ ಕಡೆಗಳಲ್ಲಿ ನನ್ನ ಮಗ ಸೈಯ್ಯದ ಇಮಾದ ಹುಸೇನ ಈತನ ಬಗ್ಗೆ ಯಾವುದೇ ಮಾಹಿತಿ ಸುಳಿವು ಸಿಕ್ಕಿರುವದಿಲ್ಲಾ. ಸೈಯ್ಯದ ಇಮಾದ ಹುಸೇನ ಇತನ ಚಹರೆ ಪಟ್ಟಿ  ಎತ್ತರ-4 5’’ , ದುಂಡು ಮುಖ, ಸದೃಡವಾದ ಮೈಕಟ್ಟು, ಗೋದಿ ಬಣ್ಣ, ಚಪ್ಪಟೆ ಮೂಗು, ಕ್ರೀಮ್ ಕಲರ್ ಟೀ-ಶರ್ಟ, ಲೈಟ ಬ್ಲೂ ಜೀನ್ಸ ಪ್ಯಾಂಟ್, ಹಿಂದಿ, ಉರ್ದು, ಇಂಗ್ಲೀಷ ಭಾಷೆ ಮಾತನಾಡುತ್ತಾನೆ  ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.88/2012 ಕಲಂ ಹುಡುಗ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.