POLICE BHAVAN KALABURAGI

POLICE BHAVAN KALABURAGI

20 December 2012

GULBARGA DISTRICT REPORTED CRIMES


ಹಲ್ಲೆ ಮತ್ತು ಜಾತಿ ನಿಂದನೆ ಪ್ರಕರಣ:
ಆಳಂದ ಪೊಲೀಸ್ ಠಾಣೆ:ಶ್ರೀ ಶಿವಶರಣಪ್ಪಾ ತಂದೆ ಹೂವಪ್ಪಾ ಸಾಲೆಗಾಂವ ಉ|| ಪೌರ ಕಾರ್ಮಿಕ ಸಾ|| ಬೀಮನಗರ ಆಳಂದ ರವರು ನಾನು ಆಳಂದ ಪುರಸಭೆಯಲ್ಲಿ ಪೌರ ಕಾರ್ಮಿಕ ಅಂತಾ 10 ವರ್ಷದಿಂದ ಕೆಲಸ ಮಾಡುತ್ತಾ ಬರುತ್ತಿದ್ದೆನೆ, ನನ್ನಂತೆ ಗುಂಡಪ್ಪಾ ಚೂಚಕೋಟಿ , ಬಸವರಾಜ ಜಂಗಲೆ, ಮಾರುತಿ ಉಕರಂಡೆ ,ಮೋತಿರಾಮ ಸಗಾಟೆ ಹಾಗು ಇತರರು ಕೂಡಿ ಆಳಂದ ಪಟ್ಟಣದಲ್ಲಿ ಪೌರ ಸಬೆಯ ವತಿಯಿಂದ ಕಸಾ ಗೂಡಿಸುವ ಕೆಲಸ ಮಾಡುತ್ತಿದ್ದು, ದಿನಾಂಕ:19/12/2012 ರಂದು ಬೆಳಿಗ್ಗೆ 8-00  ಗಂಟೆಗೆ ಪ್ರತಿ ದಿನದಂತೆ ಕಸಾ ಗೂಡಿಸುವ ಸಲುವಾಗಿ ಸಗರಿ ಗಲ್ಲಿ ಆಳಂದದಲ್ಲಿ ಕಸ ಗುಡಿಸುವಾಗ ಮೈನೋದ್ದಿನ್ ಸಗ್ರಿ ಹಾಗು ಅವನ ಮಗ ಅಹ್ಮದ ಇವರು ಬಂದವರೆ ಅವಾಚ್ಯವಾಗಿ ಬೈಯುತ್ತಿದ್ದು, ಯ್ಯಾಕೆ ಅಂತಾ ಕೇಳಿದಕ್ಕೆ ಇಬ್ಬರೂ ನನಗೆ ಕೈಯಿಂದ ಮತ್ತು ಕಾಲಿನಿಂದ ಹೊಡೆ ಬಡೆ ಮಾಡಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 254/2012 ಕಲಂ 323, 504 ಸಂಗಡ 34 ಐಪಿಸಿ  ಮತ್ತು 3 (1) (10) ಎಸ.ಸಿ/ ಎಸಟಿ ಆಕ್ಟ 1989 ನೇದ್ದರ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.
ಕಳ್ಳತನ ಪ್ರಕರಣ:
ಅಶೋಕ ನಗರ ಪೊಲೀಸ್ ಠಾಣೆ:ಶ್ರೀ ಶಾಂತಕುಮಾರ ತಂದೆ ಗುರಲಿಂಗಪ್ಪಾ ಹೆರುಂಡಿ ಸಾ: ಕೊಂಡೇದ ಗಲ್ಲಿ ಬ್ರಹ್ಮಪೂರ ಗುಲಬರ್ಗಾ ರವರು ನಾನು ಟವೇರಾ ವಾಹನ ಟೆಂಪರವರಿ ರಜಿಸ್ಟ್ರೇಶನ ನಂ.ಕೆಎ-25-ಸಿ-7572 ನೇದ್ದನ್ನು ದಿನಾಂಕ_20/10/2012 ರಂದು ಬೆಲ್ಲದ ಎಂಟರಪ್ರೈಜೆಸ್‌ ಶೋ ರೂಮ ಹುಬ್ಬಳ್ಳಿಯಿಂದ  ಖರೀದಿಸಿದ್ದು, ಇನ್ನು ಆರ್‌.ಟಿ.ಒ ದಿಂದ ಪರ್ಮಿಂಟ ರಜಿಸ್ಟ್ರೇಷನ ಆಗಿರುವುದಿಲ್ಲಾ.  ಸದರಿ ವಾಹನದ ಮೆಂಟೇನೆನ್ಸ ಮತ್ತು ಡ್ರೈವರ ಸಲುವಾಗಿ ಭದ್ರಿನಾರಾಯಣ ರವರಿಗೆ ಕೊಟ್ಟಿರುತ್ತೆನೆ. ದಿನಾಂಕ:20/12/2012 ರಂದು ರಾತ್ರಿ  ವೇಳೆಯಲ್ಲಿ  ಭದ್ರಿ ನಾರಾಯಣ  ತಂದೆ ದಿ:ಜೀವನರಾವ ಮುಜುಮದಾರ ಸಾ:ಎನ್‌.ಜಿ.ಒ ಕಾಲೋನಿ ಗುಲಬರ್ಗಾ ರವರ ಮನೆಯ ಮುಂದೆ ನನ್ನ ಟವೇರಾ ವಾಹನ (ಟೆಂಪರವರಿ ರಜಿಸ್ಟ್ರೇಷನ) ನಂ. ಕೆಎ-25-ಸಿ-7572 ಚೆಸ್ಸಿ ನಂ. . MA6ABCJ5CCH007819,  ಇಂಜನ ನಂ. 3IM156671 ಅ:ಕಿ: 8,42,623/- ರೂಪಾಯಿ ನೇದ್ದನ್ನು ನಿಲ್ಲಿಸಿದ್ದು, ಮಧ್ಯರಾತ್ರಿ 1-00 ಗಂಟೆಯಿಂದ ನಸುಕಿನ ಜಾವ  4-00 ಗಂಟೆಯ ಅವಧಿಯಲ್ಲಿ ಯಾರೋ ಕಳ್ಳರು ಗ್ಲಾಸ ಒಡೆದು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ:117/2012 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

No comments: