POLICE BHAVAN KALABURAGI

POLICE BHAVAN KALABURAGI

29 October 2011

GULBARGA DIST REPORTED CRIMES

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ಮರೆಮ್ಮ ಗಂಡ ಸಣ್ಣಮರೆಪ್ಪ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ್ ಗುಲಬರ್ಗಾರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮ ದೇವಸ್ಥಾನದ ಹತ್ತಿರದಿಂದ ನಡೆದುಕೊಂಡು ಹೋಗುತ್ತಿದ್ದಾಗ ಪೋಚಪ್ಪ ತಂದೆ ಮರೆಯಪ್ಪ, ಮರೆಪ್ಪ ತಂದೆ ಪೋಷಪ್ಪ, ಮುತ್ತಮ್ಮ ಗಂಡ ಪೋಚಪ್ಪ, ನಾಗಮ್ಮ ಗಂಡ ಸಾಮಿ ಅಮಲಪ್ಪ ತಂದೆ ಮರೆಯಪ್ಪ ಯಲ್ಲಮ್ಮ ತಂದೆ ಅಮಲಪ್ಪ, ದೊಡ್ಡ ನಾಗಮ್ಮ ಗಂಡ ಅಮಲಪ್ಪ, ಹಾಗೂ ಸೌರಮ್ಮ ಗಂಡ ಬಿಚ್ಚಪ್ಪ ಇವರೆಲ್ಲರೂ ಕೂಡಿ ಅವಾಚ್ಯ ಶಬ್ದಗಳಿಂದ ಬೈಯುತ್ತಿರುವಾಗ ನನ್ನ ಗಂಡ ಮತ್ತು ನನ್ನ ಮಗ ಯಾಕೇ ಬೈಯುತ್ತಿರಿ ಅಂತಾ ಕೇಳಿದ್ದಕ್ಕೆ ಪೋಚಪ್ಪ ತಂದೆ ಮರೆಪ್ಪ ಹಾಗೂ ಮತ್ತಮ್ಮ ಇವರು ನನಗೆ ತಲೆಗೆ ಬೆನ್ನಿಗೆ, ಬಡಿಗೆಯಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿದರು. ಬಿಡಿಸಲು ಬಂದ ನನ್ನ ಗಂಡನಿಗೆ ಮತ್ತು ಮಗನಿಗೂ ಸಹ ಬೆನ್ನಿನ ಮೇಲೆ, ತಲೆಯ ಮೇಲೆ ಬಡಿಗೆಯಿಂದ ಹೊಡೆದು ಅಲ್ಲದೇ ಕೈಯಿಂದ ಕಲ್ಲಿನಿಂದ ಹೊಡೆದು ಗುಪ್ತಗಾಯ ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 191/2011 ಕಲಂ :143, 147, 354, 323, 324, 506, ಸಂ 149 ಐಪಿಸಿ ಪ್ರಕಾರ ಗುನ್ನೆ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಹಲ್ಲೆ ಪ್ರಕರಣ:
ಸ್ಟೇಷನ ಬಜಾರ ಪೊಲೀಸ ಠಾಣೆ
: ಶ್ರೀಮತಿ ನಾಗಮ್ಮ ಗಂಡ ಸಾಮಿ ಪೋತರಾಜ ಸಾ: 8 ನೇ ಕ್ರಾಸ ತಾರಫೈಲ ಗುಲಬರ್ಗಾ ರವರು ನಾನು ನಮ್ಮ ಮನೆಯ ಮುಂದಿನ ಮರಗಮ್ಮನ ಗುಡಿ ಮುಂದಿನ ಜಾಗೆಯಲ್ಲಿ ನಿಂತಾಗ ದುರ್ಗಪ್ಪ ತಂದೆ ಯರ್ರಪ್ಪ ಪೊತರಾಜ ಸಂಗಡ ಇನ್ನೂ 4 ಜನರು ಕೂಡಿ ಬಂದವರೇ ಅವಾಚ್ಯವಾಗಿ ಬೈದು ಕೂದಲು ಹಿಡಿದು ಜಗ್ಗಾಡಿದ್ದು ಆಗ ಅಮಲಪ್ಪ ತಂದೆ ಮರೆಪ್ಪ ನನಗೆ ಮತ್ತು ನನ್ನ ಗಂಡನಿಗೆ ಮತ್ತು ಪೋಚಪ್ಪ ತಂದೆ ಮರೆಪ್ಪ ಇವರು ಬಿಡಿಸಲು ಬಂದಾಗ ಇವರಿಗೂ ಸಹ ಕೈಯಿಂದ, ಬಡಿಗೆಯಿಂದ, ಮತ್ತು ಕಲ್ಲಿನಿಂದ ಹೊಡೆದು ಗುಪ್ತಗಾಯ ಮತ್ತು ರಕ್ತಗಾಯ ಮಾಡಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 192/2011 ಕಲಂ :143, 147, 504, 354, 323, 506, ಸಂ 149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮನುಷ್ಯ ಕಾಣೆಯಾದ ಪ್ರಕರಣ:
ಶಹಾಬಾದ ನಗರ ಪೊಲೀಸ ಠಾಣೆ:
ದಿನಾಂಕ 22/10/11 ರಂದು ಮದ್ಯಾನ್ನ ಸುಮಾರಿಗೆ ಶ್ರೀ ಭೀಮರಾವ ತಂದೆ ಸಿದ್ರಾಮ ಹಿಟಕರ್ ವ:40 ಜಾ: ವಡ್ಡರ ಉ:ಖಣಿ ಕೆಲಸ ಸಾ: ಮದಕಲ್ ತಾ:ಸೇಡಂ ಮನೆಯಿಂದ ಮದಗಲ್ ಗ್ರಾಮಕ್ಕೆ ಹೊಗುತ್ತೇನೆ ಅಂತಾ ಶಹಾಬಾದದ ಮನೆಯಿಂದ ಹೊದವನು ಮದಗಲ್ ಗ್ರಾಮಕ್ಕೆ ಹೋಗದೇ ಮನೆಗೆ ಬಾರದೇ ಎಲ್ಲಿಯೋ ಕಾಣೆಯಾಗಿರುತ್ತಾನೆ ಅಂತಾ ಶ್ರೀ ಬಾಬು ತಂದೆ ಸಿದ್ರಾಮ ಹಿಟಕರ್ ಸಾ:ಶಿಬರಕಟ್ಟಾ ರವರು ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ 160/11 ಕಲಂ ಮನುಷ್ಯ ಕಾಣೆಯಾದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.

ಸಾರ್ವಜನಿಕ ಶಾಂತತೆ ಭಂಗ ಉಂಟು ಮಾಡಿದ ಬಗ್ಗೆ :

ಚೌಕ ಪೊಲೀಸ್ ಠಾಣೆ : ಪಾಪುಲರ ಪ್ರಂಟ ಆಫ ಇಂಡಿಯಾ ಸಂಘಟನೆಯ ಗುಲಬರ್ಗಾ ಜಿಲ್ಲಾ ಅಧ್ಯಕ್ಷರಾದ ನಾಸೀರ ಹುಸೇನ ರವರ ನೇತೃತ್ವದಲ್ಲಿ 100-150 ಜನರು ಕೂಡಿಕೊಂಡು ಇಲಾಖೆಯ ಯಾವುದೇ ಪೂರ್ವಾನುಮತಿ ಇಲ್ಲದೆ ಬಸ್ ಮತ್ತು ಕ್ರೂಷರ ಜೀಪ ತೆಗೆದುಕೊಂಡು ಬಹುಮನಿ ಕೋಟೆಯ ಮುಖ್ಯ ಆವರಣದಲ್ಲಿ ಅಕ್ರಮ ಕೂಟ ರಚಿಸಿಕೊಂಡು ಅತಿಕ್ರಮಣ ಪ್ರವೇಶ ಮಾಡಿ ಜಮಾಯಿಸಿ, ರಸ್ತೆಯಿಂದ ಹೋಗಿ ಬರುವ ಸಾರ್ವಜನಿಕರಿಗೆ ಮತ್ತು ವಾಹನಗಳಿಗೆ ತಡೆದು ಅಡ್ಡಿ ಪಡಿಸಿರುತ್ತಾರೆ ಅಂತಾ ಶ್ರೀ ಸಂಗಣ್ಣ ತಂದೆ ಭಿಮಾಶಂಕರ ಕಣ್ಣಿ ಸಾಃ ಭಾರತ ಪುರಾತತ್ವ ಇಲಾಖೆ ಗುಲಬರ್ಗಾ ರವರು ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 224/2011 ಕಲಂ 143,147,447,283,341,149 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

GULBARGA DIST REPORTED CRIMES

ಕಳವು ಪ್ರಕರಣ :
ಬ್ರಹ್ಮಪೂರ ಠಾಣೆ :
ಶ್ರೀ.ಓಂಪ್ರಕಾಶ ತಂದೆ ನೂರಂದಪ್ಪNN ಮಲಕೊಡ ಸಾ|| ನೇರು ಚೌಕ ಆರ್,ಬಿ.ರೋಡ ಶಾಹಾಬಾದ ತಾ|| ಚಿತ್ತಾಪೂರ ರವರು ನಾನು ದಿನಾಂಕ: 20/08/2011 ರಂದು 1900 ಗಂಟೆಯ ಸುಮಾರಿಗೆ ಸುಪರ ಮಾರ್ಕೆಟದಲ್ಲಿರುವ ಕಾಮತ ಹೊಟೇಲ ಎದುರುಗಡೆ ನನ್ನ ಮೋಟರ ಸೈಕಲ ನಂ: ಕೆಎ 32 ಎಲ್ 4264 ಅ||ಕಿ|| 30,000/- ನೇದ್ದನ್ನು ನಿಲ್ಲಿಸಿ ಕಾಮತ ಹೊಟೇಲ ಒಳಗಡೆ ಹೊಗಿ ಮರಳಿ ಬಂದು ನೋಡುವಷ್ಟರಲ್ಲಿ ಯಾರೋ ಕಳ್ಳರು ನನ್ನ ಮೋಟರ ಸೈಕಲ ಕಳ್ಳತನ ಮಾಡಿಕೊಂಡು ಹೊಗಿರುತ್ತಾರೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ 204/2011 ಕಲಂ 379 ಐಪಿಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಕಳ್ಳತನ ಪ್ರಕರಣ :
ಗ್ರಾಮೀಣ ಠಾಣೆ:
ಶ್ರೀ ಪ್ರೇಮನಾಥ ತಂದೆ ಶಿವಶರಣಪ್ಪಾ ಕಾಮಶೆಟ್ಟಿ ಉದ್ಯೋಗ; ಶಿಕ್ಷಕ ಸರಕಾರಿ ನೌಕರ ವಿಳಾಸ;-ಅವರಾದ (ಬಿ) ತಾ;ಜಿ;ಗುಲಬರ್ಗಾ ಸದ್ಯ|| ವಿಠಲರಾವ ಜೈಶಟ್ಟಿ ರೇವಣಸಿದ್ದೇಶ್ವರ ಕಾಲೂನಿ ಹುಮನಾಬಾದ ರೋಡ ಗುಲಬರ್ಗಾ ರವರು ನಾನು ದಿನಾಂಕ.27-10-2011 ರಂದು ರಾತ್ರಿ 8-00 ಗಂಟೆಯ ಸುಮಾರಿಗೆ ಮನೆಯ ಕೀಲಿ ಹಾಕಿಕೊಂಡು ಅವರಾದ (ಬಿ) ಗ್ರಾಮಕ್ಕೆ ಹೋಗಿರುತ್ತೆನೆ. ದಿನಾಂಕ. 28-10-2011 ರಂದು ನಮ್ಮ ಪಕ್ಕದ ಮನೆಯವರಾದ ಸಿದ್ರಾಮಪ್ಪಾ ತಂದೆ ಗುರುಬಸ್ಸಪ್ಪಾ ಪಾಟೀಲ್ ಇವರು ನನಗೆ ಫೋನ ಮಾಡಿ ವಿಷಯ ತಿಳಿಸಿದ್ದು ಏನೆಂದರೆ ನಿಮ್ಮ ಮನೆಯ ಬಾಗಿಲ ಕೊಂಡಿ ಮುರಿದಿದ್ದು, ಬಾಗಿಲು ತೆರೆದಿರುತ್ತದೆ. ಮನೆ ಕಳ್ಳತನವಾಗಿರಬಹುದು ಅಂತಾ ತಿಳಿಸಿದ ಮೇರೆಗೆ ನಾಣು ಬಂದು ನೋಡಲಾಗಿ ಮನೆಯ ಬಾಗಿಲ ಕೊಂಡಿ ಮುರಿದು ಮನೆಯಲ್ಲಿದ್ದ ಬಂಗಾರದ ಮತ್ತು ಬೆಳ್ಳಿಯ ಆಭರಣಗಳು ನಗದು ಹಣ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಆಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 320/2011 ಕಲಂ 457,380 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಳಾಗಿದೆ.

ಅಪಘಾತ ಪ್ರಕರಣ:

ಆಳಂದ ಪೊಲೀಸ ಠಾಣೆ: ಶ್ರೀ ಹಣಮಂತ ತಂದೆ ಬಸವಣ್ಣಪ್ಪ ಲೆಂಡೆ ಸಾ: ಜವಳಗಾ ಗ್ರಾಮ ರವರು ನಾನು ಉಮರ್ಗಾ ತಾಲೂಕಿನ ಖಸಗಿ ಗ್ರಾಮಕ್ಕೆ ಖಾಸಗಿ ಕೆಲಸದ ನಿಮಿತ್ಯ ಹೋಗಿ ಮರಳಿ ಬಸ್ಸಿನಲ್ಲಿ ಬರುತ್ತಿರುವಾಗ ನಾವು ಕುಳಿತ ಬಸ್ಸು ಲಿಂಗಣ್ಣ ತಂದೆ ಸೈಬಣ್ನ ಡಿಗ್ಗಿ ಇವರ ಹೋಲದ ಹತ್ತಿರ ರೋಡಿನ ಮೇಲೆ ಬಸ್ಸ ಬಂದಾಗ ಎದುರಿನಿಂದ ಒಬ್ಬ ಮೋಟಾರ ಸೈಕಲ ಸವಾರನು ತನ್ನ ಹಿಂದೆ ಒಬ್ಬನಿಗೆ ಕೂಡಿಸಿಕೊಂಡು ಅತೀ ವೇಗದಿಂದ ಹಾಗು ಅಲಕ್ಷತನದಿಂದ ಬಂದು ಬಜಾಜ ಎಂ80 ಸವಾರನಿಗೆ ಡಿಕ್ಕಿ ಪಡಿಸಿ ಅಪಗಾತ ಮಾಡಿದನು ನಾವು ಬಸ್ಸಿನಿಂದ ಕೆಳಗೆ ಇಳಿದು ನೋಡಲಾಗಿ ಬಜಾಜ ಎಂ80 ವಾಹನ ನಂ ಎಂಹೆಚ್-12 ವಿ.ಎ-1397 ಇದ್ದು ಅದರ ಸವಾರ ಪರಮೇಶ್ವರ ತಡಕಲೆ ಇದ್ದು ಅಪಗಾತದಿಂದ ಅವನಿಗೆ ಭಾರಿ ತಕರ ಗಾಯವಾಗಿತ್ತು ಅಪಘಾತ ಪಡಿಸಿದ ಹೀರೊ ಹೊಂಡಾ ಸ್ಪ್ಲೆಂಡರ ಮೋಟರ ಸೈಕಲ ನಂ ಕೆ.ಎ-32, ಎಕ್ಸ್- 6096 ಇದ್ದು ಅದರ ಮೇಲಿದ್ದ ಸವಾರರಿಗೆ ಸಣ್ಣ ಪುಟ್ಟ ಗಾಯಗಳಾಗಿರರುತ್ತವೆ. ಉಪಚಾರ ಫಲಕಾರಿಯಾಗದೇ ಪರಮೇಶ್ವರನು ಮೃತಪಟ್ಟಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನನೆ ನಂ: 250/2011 ಕಲಂ 279, 337, 304 (ಎ) ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

28 October 2011

GULBARGA DIST REPORTED CRIMES

ಮನೆ ಕಳ್ಳತನ ಮಾಡಿದ ಸುಮಾರು 1 ಲಕ್ಷ ರೂ ಬೆಲೆಬಾಳುವ ಬಂಗಾರದ ಆಭರಣಗಳು ಹಾಗೂ ವಗೈರೆ ವಶ ಓರ್ವ ಕಳ್ಳನ ಬಂದನ.

ಖಚಿತ ಮಾಹಿತಿ ಆಧಾರ ಅನ್ವಯ ಈ ದಿವಸ ಸೇಡಂ ರೋಡಿನ ಗೋಪಾಲ ಪ್ಯಾಕ್ಟರಿ ಹತ್ತಿರ ದಾಳಿ ಮಾಡಿದ ವಿಶೇಷ ತನಿಖಾ ತಂಡದ ಅಧಿಕಾರಿ ಮತ್ತು ಸಿಬ್ಬಂದಿ ಓರ್ವ ಮನೆ ಕಳವು ಮಾಡುವ ವ್ಯಕ್ತಿಯನ್ನು ಬಂದಿಸಿರುತ್ತಾರೆ. ಆರೊಪಿತನಿಂದ ಬಂಗಾರದ ಆಭರಣಗಳು, ತಾಮ್ರದ ಸಾಮಾನುಗಳು ಕೇಬಲ್ ವಾಯರ ವಗೈರೆ ಹೀಗೆ ಸುಮಾರು 1 ಲಕ್ಷ ಮೌಲ್ಯದ ವಸ್ತುಗಳನ್ನು ವಶ ಪಡಿಸಿಕೊಂಡಿರುತ್ತಾರೆ. ಸದರಿಯವನು ಕಳೆದ ಒಂದು ವರ್ಷದಿಂದ ಗುಲಬರ್ಗಾದಲ್ಲಿ ಮನೆ ಕಳ್ಳತನ ಮಾಡುತ್ತಿದ್ದ ಬಗ್ಗೆ ತಿಳಿದು ಬಂದಿದ್ದು ವಿಶೇಷ ತನಿಖಾ ತಂಡದವರು ತನಿಖೆ ಮುಂದುವರೆಯಿಸಿರುತ್ತಾರೆ.

     ಗುಲಬರ್ಗಾ ನಗರದಲ್ಲಿ ಘಟಿಸಿದ ಸ್ವತ್ತಿನ ಪ್ರಕರಣಗಳಲ್ಲಿನ ಆರೊಪಿತರ ಪತ್ತೆ ಕುರಿತು ಮಾನ್ಯ ಶ್ರೀ ಪ್ರವೀಣ ಮದುಕರ ಪವಾರ ಐಪಿಎಸ್ ಎಸ್.ಪಿ. ಗುಲಬರ್ಗಾ, ಮಾನ್ಯ ಅಪರ ಎಸ್.ಪಿ ಶ್ರೀ ಕಾಶಿನಾಥ ತಳಕೇರಿ ಮತ್ತು ಮಾನ್ಯ ಶ್ರೀ ತಿಮ್ಮಪ್ಪ ಡಿ.ಎಸ್.ಪಿ ಗ್ರಾಮಾಂತರ ಉಪ ವಿಭಾಗ ಗುಲಬರ್ಗಾ ರವರ ಮಾರ್ಗದರ್ಶನದಲ್ಲಿ ವಿಶೇಷ ತನಿಖಾ ತಂಡದ ಶ್ರೀ ಚಂದ್ರಶೇಖರ ಬಿ.ಪಿ ಸಿಪಿಐ ಎಮ್.ಬಿ ನಗರ ವೃತ್ತ ಗುಲಬರ್ಗಾ ರವರ ನೇತೃತ್ವದಲ್ಲಿ ಶ್ರೀ ಅಸ್ಲಂ ಬಾಷಾ ಪಿಐ ಡಿ.ಎಸ್.ಬಿ ಘಟಕ ಗುಲಬರ್ಗಾ ಹಾಗೂ ಶ್ರೀ ಪಂಡಿತ ಸಗರ ಪಿ.ಎಸ್.ಐ ವಿವಿ ಠಾಣೆ, ಶ್ರೀ ಸಂಜೀವಕುಮಾರ ಪಿ.ಎಸ್.ಐ ಎಮ್.ಬಿ ನಗರ ಠಾಣೆ ಹಾಗೂ ಸಿಬ್ಬಂದಿಯವರಾದ ಗುರುಶರಣ ಹೆಚ್.ಸಿ, ಶಿವಪುತ್ರ ಸ್ವಾಮಿ, ಅಶೋಕ, ಪ್ರಭಾಕರ, ಅರ್ಜುನ, ಮಶಾಕ, ಚಂದ್ರಕಾಂತ ಮುರುಡ, ಬಲರಾಮ ರಜಪುತ ರವರು ಖಚತಿ ಭಾತ್ಮಿ ಮೇರೆಗೆ ಇಂದು ದಿನಾಂಕ 28/10/2011 ರಂದು ಬೆಳಿಗ್ಗೆ 6-30 ಗಂಟೆಗೆ ಸೇಡಂ ರೋಡಿನ ಗೊಪಾಲ ಪ್ಯಾಕ್ಟರಿ ಹತ್ತಿರ ಮಿಂಚಿನ ದಾಳಿ ಮಾಡಿ ಬಿಗ ಹಾಕಿದ ಮನೆಗಳನ್ನು ಕಳ್ಳತನ ಮಾಡುವ ಅರವಿಂದ ತಂದೆ ಶಾಹೀರ ಉಪಾಧ್ಯಯ ವಃ 18 ವರ್ಷ ಸಾ|| ಬಾಪು ನಗರ ಗುಲಬರ್ಗಾ ಇತನನ್ನು ಹಿಡಿದುಕೊಂಡು ಠಾಣೆಗೆ ತಂದು ಕೂಲಂಕೂಶವಾಗಿ ವಿಚಾರಣೆ ಮಾಡಲಾಗಿ ಆರೊಪಿತನು ಈಗ ಸುಮಾರು 3 ತಿಂಗಳಿಂದ ಗುಲಬರ್ಗಾ ನಗರದ ಬಸವೇಶ್ವರ ಕಾಲೋನಿ, ಆದರ್ಶ ನಗರ, ಪ್ರಗತಿ ಕಾಲೋನಿ, ರಾಜಾಪುರ ಜಿಡಿಎ ಪ್ರಶಾಂತ ನಗರ (ಬಿ) ಬಡಾವಣೆಗಳಲ್ಲಿಯ ಬೀಗ ಹಾಕಿದ ಮನೆಗಳನ್ನು ಹಾಗೂ ಭೂಪಾಲ ತೆಗನೂರ ಸಿಮಾಂತರದಲ್ಲಿ ಕೇಬಲ್ ಕಳ್ಳತನ ಮಾಡಿದ ಬಗ್ಗೆ ತನಿಖೆ ಕಾಲದಲ್ಲಿ ಒಪ್ಪಿಕೊಂಡಿದ್ದು. ಸದರಿ ಆರೊಪಿತನಿಂದ ಸುಮಾರು 1 ಲಕ್ಷ ಮೌಲ್ಯದ ಬಂಗಾರ\ ಆಭರಣಗಳು, ತಾಮ್ರದ ಬಾಂಡೆ ಸಾಮಾನುಗಳು, ಕೇಬಲ್ ವಾಯರ ವಗೈರೆ ವಸ್ತುಗಳನ್ನು ಜಪ್ತಿ ಮಾಡಿಕೊಂಡು ನ್ಯಾಯಾಂಗ ಬಂಧನ ಒಪ್ಪಿಸಲಾಗುತ್ತಿದ್ದು. ಮತ್ತು ಈ ಬಗ್ಗೆ ಮಾನ್ಯ ಎಸ್.ಪಿ ಸಾಹೇಬರು ಪ್ರಕರಣವನ್ನು ಭೇಧಿಸಿದ ಅಧಿಕಾರಿ ಹಾಗೂ ಸಿಬ್ಬಂದಿ ಜನರ ಕರ್ತವ್ಯವನ್ನು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.

ಕಳ್ಳತನಕ್ಕೆ ಪ್ರಯತ್ನ

ಮುಧೋಳ ಪೊಲೀಸ್ ಠಾಣೆ : ಶ್ರೀ ದೇವಿಂದ್ರಪ್ಪಾ ಶಾಖಾಧಿಕಾರಿಗಳು ಜೆಸ್ಕಂ ಮುಧೋಳ ಗ್ರಾಮ ರವರು ರಾಮಚಂದ್ರಪ್ಪಾ ತಂದೆ ಬುಗ್ಗೋಜಿ ಇತನು ದಿನಾಂಕ: 27-10-2011 ರಂದು ರಾತ್ರಿ 8-00 ಗಂಟೆಗೆ ಮುಧೋಳ ಗ್ರಾಮದಲ್ಲಿರುವ ಜೆಸ್ಕಾಂ ಆಫೀಸಿನ ಶೇಟರ ಕೀಲಿ ಮುರಿದು ಓಳಗೆ ಇದ್ದ ಆಲಮಾರಿಯ ಕೀಲಿಮುರಿದು ಕಳ್ಳತನ ಮಾಡಲು ಪ್ರಯತ್ನಿಸಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ: 110/2011 ಕಲಂ 454, 380 511 ಐಪಿಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ರಸ್ತೆಗೆ ಅಡೆ ತಡೆ ಮಾಡಿದ ಬಗ್ಗೆ

ಆಳಂದ ಪೊಲೀಸ ಠಾಣೆ: ಶ್ರೀ ವಿಜಯಕುಮಾರ ಪಿ.ಎಸ್.ಐ (ಕಾ&ಸು) ಆಳಂದ ರವರು ದಿನಾಂಕ: 28/10/2011 ರಂದು ಆಳಂದ ಪಟ್ಟಣದಲ್ಲಿ ತಾಲೂಕ ಪಂಚಾಯತಿಯ ಅಧ್ಯಕ್ಷ ಹಾಗು ಉಪಾಧ್ಯಕ್ಷರ ಚುನಾವಣೆ ಮುಗಿಸಿಕೊಂಡು ಠಾಣಾ ಜೀಪಿನಲ್ಲಿ ಸಿಬ್ಬಂದಿಯವರಾದ ಪಿ.ಸಿ 1289 ಶೇಖ ಮಹಿಬೂಬ, ಪಿ.ಸಿ 61 ಸಿದ್ದಾರಾಮ, ಪಿ.ಸಿ 1280 ಗುರುಶಾಂತ,ಪಿ.ಸಿ 731 ಶಬ್ಬೀರ ಮೀಯ್ಯ ಇವರನ್ನು ಜೊತೆಯಾಗಿಸಿಕೊಂಡು ಪಟ್ಟಣದಲ್ಲಿ ಕಾನೂನು ಸುವ್ಯವಸ್ಥೆ ಹಾಗು ರಸ್ತೆ ಸಂಚಾರಿ ಸುರಕ್ಷತಾ ನಿಮಿತ್ಯ ಪೆಟ್ರೋಲಿಂಗ ಮಾಡುತ್ತಾ ರಜವಿ ರೋಡ ಕಡೆಯಿಂದ ದರ್ಗಾ ಕ್ರಾಸ ಕಡೆ ಹೋರಟಾಗ 12.30 ಪಿ.ಎಂಕ್ಕೆ ಬಸ-ಸ್ಟ್ಯಾಂಡ ಎದರುಗಡೆ ಮುಖ್ಯ ರಸ್ತೆಯ ಮೇಲೆ ಹೋಗಿ ಬರುವ ವಾಹನಗಳು ದಟ್ಟಣೆಯಾಗಿ ಸಂಚಾರಕ್ಕೆ ಅಡ್ಡಿಯಾಗಿದ್ದನ್ನು ಕಂಡು ಸಿಬ್ಬಂದಿ ಸಹಿತ ಕೆಳಗಿಳಿದು ನೋಡಲಾಗಿ ಒಂದು ಲಾರಿ ನಂ ಕೆ.ಎ-39-1350 ನಿಂತಿದ್ದು ಸದರ ಲಾರಿಯು ರಸ್ತೆಯಿಂದ ಹೋಗಿ ಬರುವ ವಾಹನಗಳಿಗೆ ಅಡೆತಡೆ ಮಾಡುವಂತೆ ನಿಲ್ಲಿಸಿ ಅದರ ಚಾಲಕ ಎಲ್ಲಿಯೋ ಹೊರಟು ಹೋಗಿದ್ದನು ಚಾಲಕನ ಹೆಸರು ಯಶ್ವಂತ ತಂದೆ ಭೀಮಶಾ ಸಜ್ಜನ ವ:- 51 ವರ್ಷ ಉ;- ಲಾರಿ ಚಾಲಕ ಜಾ:- ಹರಿಜನ ಸಾ:- ನಾಗನಳ್ಳಿ (ಪಿ.ಟಿ.ಸಿ) ಗುಲ್ಬರ್ಗಾ ರವರ ಮೇಲೆ ಠಾಣೆ ಗುನ್ನೆ ನಂ 249/2011 ಕಲಂ 283 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಳ್ಳಲಾಗಿದೆ.

ಮುಂಜಗ್ರತೆ ಕ್ರಮ :
ಆಳಂದ ಪೊಲೀಸ ಠಾಣೆ:
ಶ್ರೀ ವಿಜಯಕುಮಾರ ಪಿ.ಎಸ್.ಐ ಆಳಂದ ರವರು ಶ್ರೀಮತಿ ಕಲ್ಲುಬಾಯಿ ಗಂಡ ರಮೇಶ ಆಡೆ ಸಾ:ತೀರ್ಥ ತಾಂಡಾ ರವರ ತನ್ನ ಮಗಳಾದ ಜ್ಯೋತಿ ಇವಳಿಗೆ ಹೊಲಕ್ಕೆ ಕೆಲಸಕ್ಕೆ ಹೊಗಿ ಮರಳಿ ಬರುವಾಗ ತಾಂಡಾದ ಪೊರಮನ್ನ ತಂದೆ ಸೋಮ್ಲು ಪವಾರ ಇತನು ಅಪಹರಿಸಿಕೊಂಡು ಹೊಗಿದನ್ನು ಕೇಳಲು ಹೊದಾಗ ಪೊರಮನ್ನ ಕಡೆಯವರಾದ ಸಂಜು ಪವಾರ, ರಾಜು ಪವಾರ, ಅನೀಲ ಪವಾರ , ಶಾಂತಾಬಾಯಿ ಪವಾರ, ಸುನಿತಾ ಪವಾರ ಜಗುಬಾಯಿ ಪವಾರ ಸುರೇಖಾ ಪವಾರ ಶಿವಬಾಯಿ ಪವಾರ ಸೋಮು ಪವಾರ ಎಲ್ಲರು ಕುಡಿಕೊಂಡು ಬಂದು ಅವಾಚ್ಯವಾಗಿ ಬೈದು ಹೋಡೆಬಡೆ ಮಾಡಿ ಗಾಯಗೋಳಿಸಿ ಜೀವದ ಭಯ ಹಾಕಿ ಸದರಿ ಪ್ರಕರಣದಲ್ಲಿ ಅಫಹರಣಕ್ಕೊಳಗಾದ ಜ್ಯೋತಿ ಇವಳ ಕೊಲೆಯಲ್ಲಿ ಅಂತ್ಯಾಗೊಂಡಿದ್ದು ಈ ಬಗ್ಗೆ ಆಳಂದ ಪೊಲೀಸ್ ಠಾಣೆ 238/11 ಕಲಂ 143,147,148,323,324,341,504, 506,363.366[ಎ]ಸಂಗಡ 149 ಐಪಿಸಿ ಮತ್ತು 302 ಐಪಿಸಿ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ನಂತರ ಸದರ ತಾಂಡಾದಲ್ಲಿ ನರ್ಸಿಂಗ ಅಲಿಯಾಸ ಪೊರಮಿನ ತಂದೆ ಸೊಮ್ಲು ಪವಾರ ಇವರು ಅದೆ ದಿನ ದಿನಾಂಕ 08/10/2011 ರಂದು ಮೊದಲಿನ ಪ್ರಕರಣದ ಫಿರ್ಯಾದಿಯವರ ಕಡೆಯಾದ ಮಾನು ಆಡೆ, ಸಂತೊಶ ಆಡೆ, ಚಂದು ಆಡೆ, ಶಂಕರ ಆಡೆ, ಇವರಲ್ಲರು ಸೇರಿ ಕೊಲೆ ಪ್ರಕರಣದ ಕೊಲೆ ವಿಷಯದ ದ್ವೇಶದಲ್ಲಿ ತನಗೆ ಮತ್ತು ತನ್ನ ತಮ್ಮ ಸಂಜು ಇತನಿಗೆ ಅವಾಚ್ಯವಾಗಿ ಬೈದು ಹೋಡೆ ಬಡೆ ಮಾಡಿರುತ್ತಾರೆ ಅಂತಾ ಕೊಟ್ಟ ದೂರಿನ ಅನ್ವಯ ಆಳಂದ ಠಾಣೆ ಗು.ನಂ 239/11 ಕಲಂ 323,324,504,ಸಂಗಡ 34 ಐ.ಪಿ.ಸಿ ನೇದ್ದರ ಪ್ರಕಾರ ಗುನ್ನೆ ಧಾಖಲಾಗಿ ತನಿಖೆ ಕೈಗೊಂಡಿದ್ದು ಇರುತ್ತದೆ. ಪ್ರಕರಣದಲ್ಲಿನ ಆರೋಪಿತರು ಒಬ್ಬರ ಮೇಲೊಬ್ಬರು ಕೊಲೆಯ ಮತ್ತು ಅಪಹರಣದ ಮತ್ತು ಅದೆ ವಿಷಯದಲ್ಲಿ ತಕರಾರದಲ್ಲಿ ಎರಡು ಪಂಗಡದವರು ದ್ವೇಶ ಭಾವನೆ ಹೊಂದಿದ್ದು ಕಂಡು ಬರುತ್ತದೆ. ಕಾರಣ ಮೇಲೆ ಧಾಖಲಾದ ಎರಡು ಪ್ರಕರಣಗಳು ಒಂದೆ ಗ್ರಾಮದ ತಾಂಡಾದಲ್ಲಿ ಘಟಿಸಿದ್ದು ಈ ಕೆಳಗೆ ನಮೂದಿಸಿದ ಎರಡು ಪಂಗಡದವರು ಒಬ್ಬರ ಮೇಲೊಬ್ಬರು ದ್ವೇಶಬಾವನೆ ಸಾದಿಸುತ್ತಾ ಒಬ್ಬರ ಮೇಲೊಬ್ಬರು ದೂರು ಧಾಖಲಿಸುವ ರೂಢಿಗತ ಮಾಡಿಕೋಂಡಂತೆ ಕಂಡುಬಂದ್ದಿದ್ದು ಗ್ರಾಮದ ತಾಂಡಾದಲ್ಲಿ ಯಾವದೆ ಸಮಯದಲ್ಲಿ ಶಾಂತತೆ ಭಂಗ ಉಂಟಾಗಿ ಎರಡು ಪಂಗಡಗಳ ಮದ್ಯದಲ್ಲಿ ಕಲಹ ಉಂಟಾಗಿ ಆಸ್ತಿ ಹಾಗು ಪ್ರಾಣ ಹಾನಿವಾಗುವ ಎಲ್ಲ ಸಾಧ್ಯತೆಗಳು ಕಂಡು ಬಂದಿದ್ದು ಕಾರಣ ಈ ಕೆಳಗೆ ನಮೂದಿಸಿದ ಎರಡು ಪಂಗಡದವರಿಗೆ ಸೂಕ್ತ ಮುಂಜಾಗ್ರತಾ ಕ್ರಮ ಕುರಿತು ಠಾಣಿ ಗು.ನಂ 248/11 ಕಲಂ 107,ಸಿ.ಆರ.ಪಿ.ಸಿ ಪ್ರಕಾರ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಕೊಳ್ಳಲಾಗಿದೆ.