POLICE BHAVAN KALABURAGI

POLICE BHAVAN KALABURAGI

22 September 2015

KALABURAGI DISTRICT REPORTED CRIMES

ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:  

ಚೌಕ ಪೊಲೀಸ್ ಠಾಣೆ : ದಿನಾಂಕ: 21.09.2015 ರಂದು ಶ್ರೀ, ಅಬ್ದುಲ್ ರಹೀಮ್. ತಂದೆ ಅಬ್ದುಲ ರಹಿಮಾನ ಮುಲ್ಲಾ  ಸಾ: ಮನೆ ನಂ. 9-616/2, ಖಾದ್ರಿ ಚೌಕ್  ಶೇಖ ರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 21.09.2015 ರಂದು ಸಾಯಂಕಾಲ 06-30 ಗಂಟೆಯ ಸುಮಾರಿಗೆ ನಾನು ಖಾದ್ರಿ ಚೌಕ್ ಹತ್ತಿರ ಇದ್ದಾಗ ವಿಜಯ ನಗರ ಕಾಲೂನಿ ಕಡೆಗೆ ಕೆಲವು ಜನರು ಓಡುತ್ತಾ ಹೋಗುತ್ತಿರುವದನ್ನು ನೋಡಿ ನಾನು ಅವರಿಗೆ ವಿಚಾರಿಸಲಾಗಿ ವಿಜಯ ನಗರ ಕಾಲೂನಿಯ ಸನ್ ರೈಜ್ ಕನ್ನಡ ಕಾನ್ವೆಂಟ್ ಶಾಲೆಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವ ಬಗ್ಗೆ ತಿಳಿಸಲು ನಾನು ಸಹ ವಿಜಯ ನಗರ ಕಾಲೂನಿಯ ಸನ್ ರೈಜ್ ಶಾಲೆಯ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಬದಿಯಲ್ಲಿ ಒಬ್ಬ ಅಂದಾಜು 20 ರಿಂದ  26 ವರ್ಷ ವಯಸ್ಸಿನ ವ್ಯಕ್ತಿಗೆ ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ತೆಲೆಯ ಮೇಲೆ ಗದ್ದದ ಮೇಲೆ , ಎಡಗಣ್ಣಿನ ಹುಬ್ಬಿನ ಮೇಲೆ, ಹಣೆಯ ಮೇಲೆ ಮಧ್ಯಭಾಗದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಿದ್ದು ಅಲ್ಲದೇ  ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಯಾವುದೋ ಭಾರವಾದ ವಸ್ತುವಿನಿಂದ ಸಹ ತೆಲೆಯ ಮೇಲೆ ಭಾರಿ ಗಾಯ ಪಡಿಸಿ ಕೊಲೆ ಮಾಡಿ ರಸ್ತೆಯ ಬದಿಯಲ್ಲಿಯೇ ಬಿಸಾಡಿ ಓಡಿ ಹೋಗಿದ್ದು. ಈ ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ . ಕೊಲೆಯಾದ ಅಪರಿಚಿತ ವ್ಯಕ್ತಿ  ಅಂದಾಜು 5 ಫೀಟ್ 4 ಇಂಚ ಎತ್ತರ , ಸಾಧಾರಣ ಸಧೃಡವಾದ ತೆಳ್ಳನೆಯ ಮೈಕಟ್ಟು, ದುಂಡು ಮುಖ, ಚಪ್ಪಟೆ ಮೂಗು, ಸಾಧಾ ಗೋಧಿ ಬಣ್ಣ ಮತ್ತು ತೆಲೆಯಲ್ಲಿ ಗುಂಗುರು ಕಪ್ಪು ಕೂದಲು ಇದ್ದು, ಆತನ  ಮೈ ಮೇಲೆ ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟು, ಹಸಿರು – ಬಿಳಿ ಮಿಶ್ರಿತ ಚೆಕ್ಸ್ ಶರ್ಟ ಮತ್ತು ಚಾಕಲೇಟ ಬಣ್ಣದ ಅಂಡರವೇರ ಹಾಕಿದ್ದು. ಆತನ ಎಡಗೈ ಮೇಲೆ ದಿಲ್ ಚಿನ್ನೆ ಇದ್ದು ಅದರಲ್ಲಿ ಹೆಚ್. ಮತ್ತು ಎಸ್. ಅಂತಾ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಈ ಘಟನೆಯು ಇಂದು ದಿನಾಂಕ: 21.09.2015 ರಂದು ಸಾಯಂಕಾಲ 05-30 ರಿಂದ 06-00 ಗಂಟೆಯ ಮಧ್ಯದ ಅವಧಿಯಲ್ಲಿ ಜರುಗಿದ ಬಗ್ಗೆ ತಿಳಿದು ಬಂದಿದ್ದು. ಈ ಕೊಲೆ ಪ್ರಕರಣದ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ದಾರರ ಬಂಧನ
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 21-09-2015 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ ಪೆಟ್ರೊಲಿಂಗ ಕರ್ತವ್ಯದಲ್ಲಿರುವಾಗ ಸೊನ್ನ ಭೀಮಾನದಿಯಿಂದ ಅಕ್ರಮವಾಗಿ ಹಿಟಾಚಿಯಿಂದ ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಠಾಣಾ ಸಿಬ್ಬಂದಿಯವರಾದ ವಿಠ್ಠಲ, ಸಿದ್ರಾಮ, ಇನಿಯುಸ ಹಾಗೂ ಪಂಚರಾದ 1) ಶಿವಪ್ಪ 2) ಚಂದಪ್ಪ ಇವರನ್ನು ಕರೆಸಿಕೊಂಡು ಸೊನ್ನ ಗ್ರಾಮದ ಭೀಮಾನದಿಯಲ್ಲಿ ಬ್ರೀಜ ಹತ್ತಿರ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ ತುಂಬುತ್ತಿರುವಾಗ ದಾಳಿ ಮಾಡಿ ಮರಳು ತುಂಬುವ ಯಂತ್ರದ ಚಾಲಕನಿಗೆ ಮರಳು ತುಂಬಲು ಮತ್ತು ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು ವಿಚಾರಿಸಲಾಗಿ ಯಾವುದೆ ದಾಖಲಾತಿಗಳು ಇರುವುದಿಲ್ಲ. ತನಗೆ ರುದ್ರಗೌಡ ಪಾಟೀಲ ಸಾ: ಸೊನ್ನ ಈತನು ಮುಂದೆ ನಿಂತು ಮರಳು ತುಂಬಿಸುತ್ತಿದ್ದರು. ಅವರು ಹೇಳಿದಂತೆ ಮರಳು ತುಂಬುತ್ತಿದ್ದೇವು ಎಂದು ತಿಳಿಸಿದ್ದು . ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಭೃಹತ ಯಂತ್ರದಿಂದ  ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಅಕ್ರಮ ಮರಳು ತುಂಬುತ್ತಿದ್ದ ಟಿಪ್ಪರ, ಮತ್ತು ಮರಳು ತುಂಬುವ ಯಂತ್ರ, ಟಿಪ್ಪರಿನಲಿದ್ದ ಅಂದಾಜ ರೂ 5000/- ಬೆಲೆಬಾಳುವ ಮರಳನ್ನು ಜಪ್ತಿ ಮಾಡಿ . ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದ 1) ದತ್ತಪ್ಪ ತಂದೆ ಭೀಮಶಾ ಹೊಸಮನಿ 2) ರುದ್ರಗೌಡ ತಂದೆ ದೇವೆಂದ್ರಪ್ಪ ಪಾಟೀಲ 3) ಹಾಗೂ ಟಿಪ್ಪರ ಚಾಲಕ ಇವರ ವಿರುದ್ದ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ : ದಿನಾಂಕಃ  21.09.2015 ರಂದು  ಭಂಕೂರ ಶಾಖೆಯ ಜೇಸ್ಕಾಂ ಲೈನಮ್ಯಾನ ಶ್ರೀ  ಶಕೀಲ  ಅಹ್ಮದ ತಂದೆ  ಇಸ್ಮಾಯಿಲ್ ಸಾಃ ಕೆಇಬಿ ಕಾಲೋನಿ ಶಹಾಬಾದರವರು ಠಾಣೆಗೆ ಹಾಜರಾಗಿ  ದಿನಾಂಕಃ  21.09.2015 ರಂದು  ಮುಂಜಾನೆಯಿಂದ ಬಂಕೂರ ಶಾಖೆಯಿಂದ  ವಿವಿಧ  ಲೈನ ಕೆಲಸ ಮಾಡಿ ರಾತ್ರಿ  8.00  ಗಂಟೆಗೆ  ಮನೆಗೆ ಊಟಕ್ಕೆ ಹೋದಾಗ  ಅಂದಾಜು  9.30  ಗಂಟೆಗೆ  ನನ್ನ  ಮೊಬಾಯಿಲ್  ನಂ  994544404 ನೇದ್ದಕ್ಕೆ 9986471633  ದಿಂದ ಫೋನ ಮಾಡಿ  ಅವಙಚ್ಯ ಶಬ್ದಗಳಿಂದ ಬಯ್ದು ಶಿಬಿರಕಟ್ಟಾದಲ್ಲಿ  ಕರೆಂಟ  ಇಲ್ಲಾ ನೀ ಏನು  ಮಾಡಕತ್ತಿ  ಎಂದು  ಬೈಯ್ದು  ಜಲ್ದಿ  ಕರೆಂಟು  ಹಾಕು  ಅಂತಾ ಹೇಳಿ  ಫೋನ ಕಟ್ ಮಾಡಿದರು. ನಂತರ ನಾನು  ಫಾಲ್ಟ ಲೈನ  ಅಟೆಂಡ ಮಾಡುವ ಕುರಿತು  ಕೆಇಬಿ  ಕಾಲೋನಿಯಿಂದ  ನನ್ನ  ಮೊಟಾರ ಸೈಕಲ ಮೇಲೆ ನಾನು  ಮತ್ತು ಅಹ್ಮದ ಹುಸೆನ  ಇಬ್ಬರೊ ಹೋಗುತ್ತಿದ್ದಾಗ  ಶಹಾಬಾದ  ಪಟ್ಟಣದ  ಬಸವೇಶ್ವರ ಸರ್ಕಲ್  ಹತ್ತಿರ ಹಳೆ ಶಹಾಬಾದ ಕಡೆಯಿಂದ ಬರುತ್ತಿದ್ದ  ಗಣೇಶ  ಮೆರವಣಿಗೆಯಲ್ಲಿದ್ದ  5-6 ಜನರು  ಕೂಡಿ  ನನ್ನ  ಮೊಟಾರ  ಸೈಕಲಗೆ  ತಡೆದು  ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಮಗನೆ  ಕರೆಂಟ ಹಾಕು ಅಂದರೆ ಹಾಕಲ್ಲಾ  ಇಗೇನು  ಹೋಗಿ  ಮಾಡುತ್ತಿ  ಎನ್ನುತ್ತಾ   ಅವರಲ್ಲಿಯ  3-4 ಜನರು  ಒಮ್ಮೆಲೆ ನನ್ನ  ಮೈ ಮೇಲೆ  ಬಿದ್ದು  ಕೈಯಿಂದ ಹೊಡೆದು  ಗುಪ್ತಗಾಯ  ಮಾಡಿದ್ದು  ಇನ್ನೊಬ್ಬನು  ಆತನ ಕೈಯಲ್ಲಿದ್ದ ಲೇಜಿಮ್ ನಿಂದ  ಹೊಡೆದು  ರಕ್ತಗಾಯ ಪಡಿಸಿದ್ದು ಇರುತ್ತದೆ.   ಎಲ್ಲರೊ ಸೇರಿ ನನಗೆ ಈ ಮಗ  ಕರೆಂಟ ಹಾಕು ಅಂದರೆ ಹಾಕದೆ ಈಗ  ಬರುತ್ತಿದ್ದಾನೆ ಅಂತಾ ಎನ್ನುತ್ತಾ  ನನ್ನ  ಕರ್ತವ್ಯಕ್ಕೆ ಹೋಗದಂತೆ  ಅಡೆ ತಡೆ ಮಾಡುತ್ತಿದ್ದಾಗ  ಅಲ್ಲಿಯೇ ಇದ್ದ ಅಹ್ಮದ  ಹುಸೆನ  ಮತ್ತು  ಅಯೂಬ  ಬಂದು ನನಗೆ  ಬಿಡಿಸಿರುತ್ತಾರೆ.   ಕಾರಣ  ನನಗೆ  ವಿನಾ ಕಾರಣ ಜಗಳ  ಮಾಡಿ ಹೊಡೆ ಬಡೆ ಮಾಡಿ  ಕರ್ತವ್ಯಕ್ಕೆ ಅಡೆ ತಡೆ ಮಾಡಿದವರ ವಿರುದ್ಧ  ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂಧ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

20 September 2015

Kalaburagi District Reported Crimes

ಆಕಸ್ಮಿಕ ಸಾವು ಪ್ರಕರಣ :
ಜೇವರ್ಗಿ ಪೊಲೀಸ ಠಾಣೆ : ದಿನಾಂಕ 18.09.2015 ರಂದು ಶ್ರೀ ಬಾಬು ತಂದೆ ಗ್ವಾಲಪ್ಪ ಕೊಂಬಿನ್ ಸಾ: ರೇವನೂರ ಠಾಣೆಗೆ ದಿ: 14-09-2015 ರಂದು ರಾತ್ರಿ 7-೦೦ ಗಂಟೆ ಸುಮಾರಿಗೆ ರೇವನೂರ ಗ್ರಾಮದ ದಾವಲಮಲ್ಲಿಕ್ ದರ್ಗಾದ ಹತ್ತಿರ ಖುಲ್ಲಾ ಜಾಗೆಯಲ್ಲಿ ನನ್ನ ಮಗಳು ಭಾಗಮ್ಮ ಕೊಂಬಿನ್ ಇವಳಿಗೆ ಆಕಸ್ಮಿಕವಾಗಿ ಒಂದು ವಿಷ ಪೂರಿತ ಹಾವು ಕಚ್ಚಿದ್ದರಿಂದ ಅವಳಿಗೆ ರೇವನೂರ ಗ್ರಾಮದಲ್ಲಿ ಗೌಂಟಿ ಔಷಧ ಹಾಕಿಸಿ ದಿನಾಂಕ 15-9-15 ರಂದು ಕಲಬುರಗಿ ಸರಕಾರಿ ಆಸ್ಪತ್ರೆಗೆ ಹೆಚ್ಚಿನ ಉಪಚಾರ ಕುರಿತು ಸೇರಿಕೆ ಮಾಡಿದ್ದು ಉಪಚಾರ ಫಲಕಾರಿಯಾಗದೆ ದಿನಾಂಕ 17.09.2015 ರಂದು ರಾತ್ರಿ 09:00 ಗಂಟೆಗೆ ನನ್ನ ಮಗಳು ಭಾಗಮ್ಮ ಮೃತಪಟ್ಟಿರುತ್ತಾಳೆ ಕಾರಣ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಜೇವರ್ಗಿ ಪೊಲೀಸ ಠಾಣೆ :  ದಿನಾಂಕ 18.09.2015 ರಂದು ಶ್ರೀ ಸಿದ್ರಾಮ ತಂದೆ ಅಜಮಾನ್ ಜೋಗೆರ್ ಸಾ:ಶಹಾಪುರ ಜಿ:ಯಾದಗೀರ ಇವರು ಠಾಣೆಗೆ ಹಾಜರಾಗಿ  ಇಂದು ಸಾಯಂಕಲಾ 04.30 ಗಂಟೆ ಸುಮಾರಿಗೆ ನನ್ನ ತಂದೆ ಅಜಮಾನ್ ತಂದೆ ಸಿದ್ರಾಮ ಜೋಗೆರ್ ವ:55 ವರ್ಷ ಸಾ: ಇಂದಿರಾ ನಗರ ಶಹಾಪುರ ಇವರು ಮುದಬಾಳ(ಕೆ) ಗ್ರಾಮದ ಸಿಮಾಂತರದ ತಿಪ್ಪಣ್ಣ ಮಾದರ್ ಇವರ ಹೊಲದ ಹತ್ತಿರದ ಕೆನಾಲ್ ನೀರಿನಲ್ಲಿ ಕೈಕಾಲು ಮುಖ ತೊಳೆಯಲು ಹೋಗಿ ಆಕಸ್ಮಿಕವಾಗಿ ಕಾಲು ಜಾರಿ ಕೆನಾಲ್ ನೀರಿನಲ್ಲಿ ಬಿದ್ದು ಮೃತಪಟ್ಟಿರುತ್ತಾರೆ ಕಾರಣ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಜೇವರ್ಗಿ ಪೊಲೀಸ ಠಾಣೆ: ದಿನಾಂಕ: 19.09.2015 ರಂದು ಶ್ರೀ ಹಣಮಂತ ತಂದೆ ಸಂಗಪ್ಪ ತಳವಾರ ಸಾ: ಖಾಜಾ ಕಾಲೋನಿ ಜೇವರಗಿ ರವರು ಠಾಣೆಗೆ ಹಾಜರಾಗಿ  ತಾನು  ಖಾಜಾ ಕಾಲೋನಿಯ ಅಂಬಾಬಾಯಿ ಗುಡಿಯ ಹತ್ತಿರ ಪ್ರತಿಸ್ಟಾಪನೆ ಮಾಡಿದ ಗಣೇಶ ಉತ್ಸವದ  ಕಾರ್ಯಕ್ರಮವನ್ನು ನೋಡಲು ಹೋಗಿ ನಾನು ನನ್ನ ಗೆಳೆಯರು ಕೂಡಿಕೊಂಡು ರಸ್ತೆಯ ಬದಿಯಲ್ಲಿ ನಿಂತಿದ್ದಾಗ ಮೋಟಾರು ಸೈಕಲ್‌ ಮೇಲೆ ಅಲ್ಲಿಗೆ ಬಂದ 1) ) ಅಫ್ರೋಜ ತಂದೆ ಅಬ್ಬಾಸಲಿ ನಾಯಕಲ್, 2) ಕೋನಮೀರ ತಂದೆ ಬಷೀರ್ ಸಾಬ್ ಶೇಖ್, 3) ರುಕುಮ್ ಪಟೇಲ್ ಸಾ: ಎಲ್ಲರು ಖಾಜಾ ಕಾಲೋನಿ ಜೇವರಗಿ ಇವರುಗಳು ತಮ್ಮ  ಮೋಟಾರು ಸೈಕಲ್‌ಅನ್ನು ಜೋರಾಗಿ ರೇಸ್ ಮಾಡುತ್ತ ಹಾರ್ನ ಹಾಕುತ್ತಿದ್ದಾಗ ನಾನು ಇಲ್ಲಿ ಗಣಪತಿ ಕಾರ್ಯಕ್ರಮ ಇರುತ್ತದೆ ಆದ್ದರಿಂದ ಸಪ್ಪಳ ಮಾಡಬೇಡಿ ಅಂದಿದ್ದಕ್ಕೆ ಎಲ್ಲರೊ ಕೂಡಿಕೊಂಡು ಬಂದು ನನಗೆ ಮತ್ತು ನನ್ನ ಗೆಳೆಯರಾದ ಶಂಕರಗೌಡ, ಸಾಯಬಣ್ಣ ಇವರಿಗೆ ಅವಾಚ್ಯವಾಗಿ ಬೈದು ಕೈಯಿಂದ ಮತ್ತು ಇಟ್ಟಿಗೆಯಿಂದ ಹೊಡೆ ಬಡೆ ಮಾಡಿ ಜೀವದ ಬೆದರಿಕೆ ಹಾಕಿದ್ದು ಸದರಿ ಆರೋಪಿತರ ವಿರುದ್ಧ ಕಾನೂನು ಕ್ರಮ ಕೈಕೊಳ್ಳುವಂತೆ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಜೇವರ್ಗಿ ಠಾಣೆಯಲ್ಲಿ ಪ್ಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.

18 September 2015

Kalaburagi District Reported Crimes

ಲಾರಿ ಕಳವು ಪ್ರಕರಣ :
ಗ್ರಾಮೀಣ ಠಾಣೆ : ಶ್ರೀ ಶ್ರೀನಾಥ ತಂದೆ ರೇವಯ್ಯ ಬೇಲೂರ ಸಾ; ಹೊಳಕುಂದಾ ಗ್ರಾಮ ತಾ:ಜಿ: ಕಲಬುರಗಿ ರವರು ದಿನಾಂಕ: 31/07/2015 ರಂದು ಸಾಯಂಕಾಲ ಬೆಳಗಾಮನಿಂದ ಲೋಡ ಖಾಲಿ ಮಾಡಿಕೊಂಡು ಬಂದು ಬಿರಾದರ ಪೆಟ್ರೋಲ ಬಂಕ ಎದರುಗಡೆ ನಿಲ್ಲಿಸಿ ರಾತ್ರಿ 9-00 ಪಿಎಮ್ ಕ್ಕೆ ನನ್ನ ಲಾರಿಯನ್ನು ಲಾಕ ಮಾಡಿಕೊಂಡು ಹೋಳಕುಂದಾ ಗ್ರಾಮಕ್ಕೆ ಊರಿಗೆ ಹೋಗಿರುತ್ತೇನೆ. ನಂತರ ದಿನಾಂಕ: 01/08/2015 ರಂದು ಬೆಳಿಗ್ಗೆ 7-30 ಎಎಮ್ ಕ್ಕೆ ಬಿರಾದರ ಪೆಟ್ರೋಲ ಬಂಕ ಹತ್ತಿರ ಬಂದು ನೋಡಲು ರಾತ್ರಿ ನಿಲ್ಲಿಸಿದ್ದ ನನ್ನ ಕೆಎ-32 ಬಿ-1699 ನಂಬರಿನ ಲಾರಿ ಕಾಣಿಸಲಿಲ್ಲ. ಆಗ ನಾನು ಗಾಬರಿಯಿಂದ ಪೆಟ್ರೋಲ ಬಂಕನಲ್ಲಿ ನಿಂತ ಚಾಲಕರನ್ನು ವಿಚಾರಿಸಿ ತಕ್ಷಣ ನನ್ನ ಸ್ನೇಹಿತ ಶ್ರೀಕಾಂತನಿಗೆ ಪೋನ ಮಾಡಿ ಸ್ಥಳಕ್ಕೆ ಕರೆಸಿಕೊಂಡು ಪೆಟ್ರೋಲಬಂಕನಲ್ಲಿದ್ದವರನ್ನು ವಿಚಾರಿಸಿ ಹುಮನಾಬಾದ, ಬಸವಕಲ್ಯಾಣ  ಜಹೀರಾಬಾದ, ಹೈದ್ರಾಬಾದ ಸೇಡಂ ಜೇವರ್ಗಿ ಮುಂತಾದ ಕಡೆ ಹೋಗಿ ಹುಡುಕಾಡಿದರೂ ಸಿಗಲಿಲ್ಲ. ನನ್ನ ಕೆಎ-32 ಬಿ-1699 ನಂಬರಿನ ನ್ಯಾಶನಲ್ ಕಲರ 10 ಟಯರನ ಚೆಸ್ಸಿ ನಂ-  MB1CMDWC2AHVA9413 ಇಂಜಿನ ನಂ- VAH618141 ಮತ್ತು 2010ರ ಮಾಡೆಲ್ ನ ಅ.ಕಿ= 9,50000/-ರೂ ಕಿಮ್ಮತ್ತಿನ ಲಾರಿಯನ್ನು ಯಾರೋ ಕಳ್ಳರು ದಿನಾಂಕ: 31/07/2015 ರಂದು ರಾತ್ರಿ 9-00 ಪಿಎಮ್ ದಿಂದ ದಿನಾಂಕ: 01/08/2015 ರಂದು ಬೆಳಿಗ್ಗೆ 7-30 ಎಎಮ್ ಮಧ್ಯದ ಅವಧಿಯಲ್ಲಿ ಯಾರೋ ಕಳ್ಳರು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.  
ದ್ವೀಚಕ್ರ ವಾಹನ ಕಳವು ಪ್ರಕರಣ :
ಸೇಡಂ ಠಾಣೆ : ಶ್ರೀ ಅಬ್ದುಲ್ ಹಮೀದ್ ತಂದೆ ಮೈನೊದ್ದಿನ್ ಶೇಖ, ಸಾ:ಓಲ್ಡ್ ಸಿನಿಮಾ ರೋಡ್, ಸೇಡಂ.ಇವರು ತಮ್ಮ  ಬ್ಲಾಕ್ ಕಲರ್ ಬಜಾಜ್ ಪಲ್ಸರ್-150 ಮೋಟಾರು ಸೈಕಲ್ ನಂ-KA32 EG-6326 ನೇದ್ದನ್ನು  ದಿನಾಂಕ:12-09-2015 ರಂದು ರಾತ್ರಿ 08-00 ಗಂಟೆಯ ಸುಮಾರಿಗೆ  ನಾನು ಮತ್ತು ಸೈಯದ್ ಮಜ್ಹರ್ ಹಸನ್ ಇವರೊಂದಿಗೆ ಕೆಲಸದ ನಿಮಿತ್ಯ ಸೇಡಂ ಬಸ್ ನಿಲ್ದಾಣಕ್ಕೆ ಹೋಗಿ, ಬಸ್ ನಿಲ್ದಾಣದ ಮುಂದುಗಡೆ ನನ್ನ ಮೊಟಾರು ಸೈಕಲ್ ನಿಲ್ಲಿಸಿ, ಬಸ್ ನಿಲ್ದಾಣದ ಹಿಂದೆ ಇದ್ದ ನನ್ನ ಸಂಭಂದಿಕರ ಮನೆಗೆ ಹೋಗಿ ಮರಳಿ ಬಂದು ನೋಡಲಾಗಿ ನಾನು ಬಸ್ ನಿಲ್ದಾಣದ ಎದುರುಗಡೆ ನಿಲ್ಲಸಿದ ನನ್ನ ಮೋಟಾರು ಸೈಕಲ್ ಇರಲಿಲ್ಲ. ನಾನು ಮತ್ತು ಮಜ್ಹರ್  ಇಬ್ಬರೂ ಕೂಡಿ ಎಲ್ಲಾ ಕಡೆ ಹುಡುಕಾಡಿದೇವು. ನನ್ನ ಮೋಟಾರು ಸೈಕಲ್ ಸಿಗಲಿಲ್ಲ. ಅಂದಿನಿಂದ ಇಲ್ಲಿಯವರೆಗೆ ನನ್ನ ಮೋಟಾರು ಸೈಕಲ್ ಹುಡುಕಾಡಲಾಗಿ ಸಿಕ್ಕಿರುವದಿಲ್ಲ ಅದರ ಅಂದಾಜು ಕಿಮ್ಮತ್ತು 40,000/- ರೂಪಾಯಿಗಳು ಆಗುತ್ತದೆ. ನನ್ನ ಮೋಟಾರು ಸೈಕಲ್ ಯಾರೋ ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಸೇಡಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಆತ್ಮ ಹತ್ಯೆ ಪ್ರಕರಣ :
ಆಳಂದ ಠಾಣೆ : ಶ್ರೀಮತಿ ಅನೀತಾ ಗಂಡ ಭೀಮರಾವ ಧಡಕೆ ಸಾ:ಕೊಡಲ ಹಂಗರಗಾ ಇವರ ಗಂಡನಿಗೆ ಸುಮಾರು ವರ್ಷಗಳಿಂದ ತಲೆ ಸರಿ ಇರದಿದ್ದರಿಂದ ತನ್ನ ತಾನಾಗಿಯೇ ಮಾತಾಡುವದು, ನಗುವದು ಮಾಡುತ್ತಿದ್ದರಿಂದ ಅವರಿಗೆ ಗುಲಬರ್ಗಾ ಸರಕಾರಿ ದವಾಖಾನೆಯಲ್ಲಿ, ಮುಂಬೈಗೆ ಒಯ್ದು ತೋರಿಸಿಕೊಂಡು ಬಂದಿದರು ಗುಣಮುಖವಾಗಿರುವುದಿಲ್ಲಾ.  ದಿನಾಂಕ:15/09/2015 ರಂದು ಬೆಳಗ್ಗೆ 10:00 ಗಂಟೆಗೆ ನಾನು ನಮ್ಮ ಮಾವ ಫೀರಾಜಿ ಅತ್ತೆ ಲಿಂಬಾಬಾಯಿ ಕೂಡಿ ಹೊಲಕ್ಕೆ ಹೋಗುವಾಗ ನನ್ನ ಗಂಡನ ತಲೆ ಸರಿ ಇರದಿದ್ದರಿಂದ ಮನೆಯಲ್ಲಿ ಬಿಟ್ಟು ಹೋಗಿದ್ದು ಸಾಯಂಕಾಲ 06:00 ಗಂಟೆಗೆ ನಾವೆಲ್ಲರೂ ಹೊಲದಿಂದ ಮನೆಗೆ ಬಂದಾಗ ನನ್ನ ಗಂಡನು ಮನೆಯಲ್ಲಿ ವಾಂತಿ ಮಾಡುತ್ತಿದ್ದಾಗ ಏನಾಗಿದೆ ಎಂದು ಕೇಳಿದರೆ ಹೇಳಿರುವುದಿಲ್ಲ ಅವನ ಬಾಯಿಯಿಂದ ಕ್ರಿಮಿನಾಶಕ ಔಷಧ ಕುಡಿದ ವಾಸನೆ ಬರುತ್ತಿದ್ದರಿಂದ ನಮ್ಮ ಮಾಂವ ಹಾಗೂ ನಮ್ಮ ಮೌಸಿ ಭಾಗವ್ವ ಕೂಡಿ ಯಾವುದೋ ಒಂದು ಜೀಪಿನಲ್ಲಿ ಹಾಕಿಕೊಂಡು ಡಾ/ಪಿ.ಎನ್.ಶಹಾ ಆಸ್ಪತ್ರೆ ಆಳಂದಕ್ಕೆ ಒಯ್ದಗ ವೈದ್ಯರು ನೋಡಿ ಕ್ರಿಮಿನಾಶಕ ಔಷಧ ಕುಡಿದಿದ್ದಾನೆ ಗುಲಬರ್ಗಾಕ್ಕೆ ತಗೆದುಕೊಂಡು ಹೋಗಲು ತಿಳಿಸಿದಾಗ  ಒಂದು ಖಾಸಗಿ ಅಬುಲೆನ್ಸ್ ದಲ್ಲಿ ನಾನು ನಮ್ಮ ಮಾವ & ಮೌಸಿ ಭಾಗವ್ವ ಕೂಡಿ ರಾತ್ರಿ 12:00 ಗಂಟೆಗೆ ಸರ್ಕಾರಿ ದವಾಖಾನೆ ಕಲಬುರಗಿಗೆ ತಂದು ಸೇರಿಕೆ ಮಾಡಿದ್ದಾಗ ಉಪಚಾರ ಹೊಂದುತ್ತಾ ಚಿಕಿತ್ಸೆ ಫಲಕಾರಿಯಾಗದೆ ದಿನಾಂಕ:16/09/2015 ರಂದು ಬೆಳಗ್ಗೆ 08:00 ಗಂಟೆಗೆ ಮೃತಪಟ್ಟಿರುತ್ತಾನೆ.  ಅಂತಾ ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಆಳಂದ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.