ಅಪರಿಚಿತ ವ್ಯಕ್ತಿಯ ಕೊಲೆ ಪ್ರಕರಣ:  
ಚೌಕ ಪೊಲೀಸ್ ಠಾಣೆ : ದಿನಾಂಕ: 21.09.2015 ರಂದು ಶ್ರೀ, ಅಬ್ದುಲ್ ರಹೀಮ್. ತಂದೆ ಅಬ್ದುಲ ರಹಿಮಾನ ಮುಲ್ಲಾ  ಸಾ: ಮನೆ ನಂ. 9-616/2, ಖಾದ್ರಿ ಚೌಕ್  ಶೇಖ
ರೋಜಾ ಕಲಬುರಗಿ ಇವರು ಠಾಣೆಗೆ ಹಾಜರಾಗಿ ಇಂದು ದಿನಾಂಕ: 21.09.2015 ರಂದು ಸಾಯಂಕಾಲ 06-30 ಗಂಟೆಯ
ಸುಮಾರಿಗೆ ನಾನು ಖಾದ್ರಿ ಚೌಕ್ ಹತ್ತಿರ ಇದ್ದಾಗ ವಿಜಯ ನಗರ ಕಾಲೂನಿ ಕಡೆಗೆ ಕೆಲವು ಜನರು
ಓಡುತ್ತಾ ಹೋಗುತ್ತಿರುವದನ್ನು ನೋಡಿ ನಾನು ಅವರಿಗೆ ವಿಚಾರಿಸಲಾಗಿ ವಿಜಯ ನಗರ ಕಾಲೂನಿಯ ಸನ್ ರೈಜ್
ಕನ್ನಡ ಕಾನ್ವೆಂಟ್ ಶಾಲೆಯ ಹತ್ತಿರ ರಸ್ತೆಯ ಮೇಲೆ ಒಬ್ಬ ವ್ಯಕ್ತಿಯನ್ನು ಕೊಲೆ ಮಾಡಿರುವ ಬಗ್ಗೆ
ತಿಳಿಸಲು ನಾನು ಸಹ ವಿಜಯ ನಗರ ಕಾಲೂನಿಯ ಸನ್ ರೈಜ್ ಶಾಲೆಯ ಹತ್ತಿರ ಹೋಗಿ ನೋಡಲಾಗಿ ರಸ್ತೆಯ ಬದಿಯಲ್ಲಿ
ಒಬ್ಬ ಅಂದಾಜು 20 ರಿಂದ  26 ವರ್ಷ ವಯಸ್ಸಿನ ವ್ಯಕ್ತಿಗೆ
ಯಾರೋ ಅಪರಿಚಿತ ದುಷ್ಕರ್ಮಿಗಳು ಯಾವುದೋ ಕಾರಣಕ್ಕಾಗಿ ತೆಲೆಯ ಮೇಲೆ ಗದ್ದದ ಮೇಲೆ , ಎಡಗಣ್ಣಿನ ಹುಬ್ಬಿನ ಮೇಲೆ, ಹಣೆಯ
ಮೇಲೆ ಮಧ್ಯಭಾಗದಲ್ಲಿ ಮಾರಕಾಸ್ತ್ರಗಳಿಂದ ಹೊಡೆದಿದ್ದು ಅಲ್ಲದೇ  ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಯಾವುದೋ ಭಾರವಾದ
ವಸ್ತುವಿನಿಂದ ಸಹ ತೆಲೆಯ ಮೇಲೆ ಭಾರಿ ಗಾಯ ಪಡಿಸಿ ಕೊಲೆ ಮಾಡಿ ರಸ್ತೆಯ ಬದಿಯಲ್ಲಿಯೇ ಬಿಸಾಡಿ ಓಡಿ
ಹೋಗಿದ್ದು. ಈ ಅಪರಿಚಿತ ವ್ಯಕ್ತಿಯ ಹೆಸರು ಮತ್ತು ವಿಳಾಸ ಗೊತ್ತಾಗಿರುವದಿಲ್ಲ . ಕೊಲೆಯಾದ ಅಪರಿಚಿತ
ವ್ಯಕ್ತಿ  ಅಂದಾಜು 5 ಫೀಟ್ 4 ಇಂಚ ಎತ್ತರ , ಸಾಧಾರಣ ಸಧೃಡವಾದ ತೆಳ್ಳನೆಯ ಮೈಕಟ್ಟು, ದುಂಡು ಮುಖ, ಚಪ್ಪಟೆ
ಮೂಗು, ಸಾಧಾ ಗೋಧಿ ಬಣ್ಣ ಮತ್ತು
ತೆಲೆಯಲ್ಲಿ ಗುಂಗುರು ಕಪ್ಪು ಕೂದಲು ಇದ್ದು, ಆತನ  ಮೈ ಮೇಲೆ ಒಂದು ನೀಲಿ ಬಣ್ಣದ ಜೀನ್ಸ್ ಪ್ಯಾಂಟು, ಹಸಿರು – ಬಿಳಿ
ಮಿಶ್ರಿತ ಚೆಕ್ಸ್ ಶರ್ಟ ಮತ್ತು ಚಾಕಲೇಟ ಬಣ್ಣದ ಅಂಡರವೇರ ಹಾಕಿದ್ದು. ಆತನ ಎಡಗೈ ಮೇಲೆ ದಿಲ್
ಚಿನ್ನೆ ಇದ್ದು ಅದರಲ್ಲಿ ಹೆಚ್. ಮತ್ತು ಎಸ್. ಅಂತಾ ಹಚ್ಚೆ ಹಾಕಿಸಿಕೊಂಡಿರುತ್ತಾನೆ. ಈ ಘಟನೆಯು
ಇಂದು ದಿನಾಂಕ: 21.09.2015 ರಂದು ಸಾಯಂಕಾಲ 05-30 ರಿಂದ 06-00 ಗಂಟೆಯ ಮಧ್ಯದ ಅವಧಿಯಲ್ಲಿ
ಜರುಗಿದ ಬಗ್ಗೆ ತಿಳಿದು ಬಂದಿದ್ದು. ಈ ಕೊಲೆ ಪ್ರಕರಣದ ಬಗ್ಗೆ ಕಾನೂನು ಕ್ರಮ ಜರುಗಿಸುವಂತೆ
ಸಲ್ಲಿಸಿದ ದೂರು ಸಾರಾಂಶದ ಮೇಲಿಂದ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ
ಕೈಕೊಳ್ಳಲಾಗಿದೆ.
ಅಕ್ರಮ ಮರಳು ಸಾಗಾಣಿಕೆ ದಾರರ ಬಂಧನ 
ಅಫಜಲಪೂರ ಪೊಲೀಸ್ ಠಾಣೆ: ದಿನಾಂಕ 21-09-2015 ರಂದು ಶ್ರೀ ಸುರೇಶ ಬೆಂಡೆಗುಂಬಳ ಪಿ.ಎಸ್.ಐ ಅಫಜಲಪೂರ ಠಾಣೆ ರವರು ಅಫಜಲಪೂರ ಪಟ್ಟಣದಲ್ಲಿ
ಪೆಟ್ರೊಲಿಂಗ ಕರ್ತವ್ಯದಲ್ಲಿರುವಾಗ ಸೊನ್ನ ಭೀಮಾನದಿಯಿಂದ ಅಕ್ರಮವಾಗಿ ಹಿಟಾಚಿಯಿಂದ ಮರಳು ತಗೆದು
ಟಿಪ್ಪರದಲ್ಲಿ ತುಂಬುತ್ತಿರುವ ಬಗ್ಗೆ ಮಾಹಿತಿ ದೊರೆತ ಮೇರೆಗೆ ಠಾಣಾ ಸಿಬ್ಬಂದಿಯವರಾದ
ವಿಠ್ಠಲ, ಸಿದ್ರಾಮ, ಇನಿಯುಸ ಹಾಗೂ ಪಂಚರಾದ 1) ಶಿವಪ್ಪ 2) ಚಂದಪ್ಪ ಇವರನ್ನು ಕರೆಸಿಕೊಂಡು
ಸೊನ್ನ ಗ್ರಾಮದ ಭೀಮಾನದಿಯಲ್ಲಿ ಬ್ರೀಜ ಹತ್ತಿರ ಬೃಹತ ಮರಳು ಎತ್ತುವ ಯಂತ್ರದಿಂದ ಮರಳು ತಗೆದು ಟಿಪ್ಪರನಲ್ಲಿ
ತುಂಬುತ್ತಿರುವಾಗ ದಾಳಿ ಮಾಡಿ ಮರಳು ತುಂಬುವ ಯಂತ್ರದ ಚಾಲಕನಿಗೆ ಮರಳು ತುಂಬಲು ಮತ್ತು
ಸಾಗಾಣಿಕೆ ಮಾಡಲು ಸಂಬಂಧಪಟ್ಟ ಅಧೀಕಾರಿಯವರಿಂದ ಪರವಾನಿಗೆ ಪಡೆದುಕೊಂಡ ಬಗ್ಗೆ ದಾಖಲಾತಿಗಳನ್ನು
ವಿಚಾರಿಸಲಾಗಿ ಯಾವುದೆ ದಾಖಲಾತಿಗಳು ಇರುವುದಿಲ್ಲ. ತನಗೆ ರುದ್ರಗೌಡ ಪಾಟೀಲ ಸಾ: ಸೊನ್ನ
ಈತನು ಮುಂದೆ ನಿಂತು ಮರಳು ತುಂಬಿಸುತ್ತಿದ್ದರು. ಅವರು ಹೇಳಿದಂತೆ ಮರಳು ತುಂಬುತ್ತಿದ್ದೇವು ಎಂದು
ತಿಳಿಸಿದ್ದು . ಸದರಿಯವರು ಅನದಿಕೃತವಾಗಿ ಕಳ್ಳತನದಿಂದ ಸೋನ್ನ ಭಿಮಾನದಿಯಿಂದ ಭೃಹತ
ಯಂತ್ರದಿಂದ  ಮರಳು ತಗೆದು ಟಿಪ್ಪರದಲ್ಲಿ ತುಂಬುತ್ತಿದ್ದರಿಂದ ಅಕ್ರಮ ಮರಳು
ತುಂಬುತ್ತಿದ್ದ ಟಿಪ್ಪರ, ಮತ್ತು ಮರಳು ತುಂಬುವ ಯಂತ್ರ, ಟಿಪ್ಪರಿನಲಿದ್ದ ಅಂದಾಜ ರೂ 5000/- ಬೆಲೆಬಾಳುವ
ಮರಳನ್ನು ಜಪ್ತಿ ಮಾಡಿ . ಅಕ್ರಮವಾಗಿ ಕಳ್ಳತನದಿಂದ ಮರಳು ತುಂಬುತ್ತಿದ್ದ 1) ದತ್ತಪ್ಪ
ತಂದೆ ಭೀಮಶಾ ಹೊಸಮನಿ 2) ರುದ್ರಗೌಡ ತಂದೆ ದೇವೆಂದ್ರಪ್ಪ ಪಾಟೀಲ 3) ಹಾಗೂ ಟಿಪ್ಪರ
ಚಾಲಕ ಇವರ ವಿರುದ್ದ ಅಫಜಲಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೇ ಕೈಕೊಳ್ಳಲಾಗಿದೆ.
ಹಲ್ಲೆ ಪ್ರಕರಣ:
ಶಹಾಬಾದ ನಗರ ಠಾಣೆ : ದಿನಾಂಕಃ  21.09.2015 ರಂದು  ಭಂಕೂರ ಶಾಖೆಯ ಜೇಸ್ಕಾಂ ಲೈನಮ್ಯಾನ
ಶ್ರೀ  ಶಕೀಲ 
ಅಹ್ಮದ ತಂದೆ  ಇಸ್ಮಾಯಿಲ್ ಸಾಃ ಕೆಇಬಿ ಕಾಲೋನಿ
ಶಹಾಬಾದರವರು ಠಾಣೆಗೆ ಹಾಜರಾಗಿ  ದಿನಾಂಕಃ  21.09.2015 ರಂದು  ಮುಂಜಾನೆಯಿಂದ ಬಂಕೂರ ಶಾಖೆಯಿಂದ  ವಿವಿಧ 
ಲೈನ ಕೆಲಸ ಮಾಡಿ ರಾತ್ರಿ  8.00  ಗಂಟೆಗೆ 
ಮನೆಗೆ ಊಟಕ್ಕೆ ಹೋದಾಗ  ಅಂದಾಜು  9.30 
ಗಂಟೆಗೆ  ನನ್ನ  ಮೊಬಾಯಿಲ್ 
ನಂ  994544404 ನೇದ್ದಕ್ಕೆ
9986471633  ದಿಂದ ಫೋನ ಮಾಡಿ  ಅವಙಚ್ಯ ಶಬ್ದಗಳಿಂದ ಬಯ್ದು ಶಿಬಿರಕಟ್ಟಾದಲ್ಲಿ  ಕರೆಂಟ 
ಇಲ್ಲಾ ನೀ ಏನು  ಮಾಡಕತ್ತಿ  ಎಂದು 
ಬೈಯ್ದು  ಜಲ್ದಿ  ಕರೆಂಟು 
ಹಾಕು  ಅಂತಾ ಹೇಳಿ  ಫೋನ ಕಟ್ ಮಾಡಿದರು. ನಂತರ ನಾನು  ಫಾಲ್ಟ ಲೈನ 
ಅಟೆಂಡ ಮಾಡುವ ಕುರಿತು  ಕೆಇಬಿ  ಕಾಲೋನಿಯಿಂದ 
ನನ್ನ  ಮೊಟಾರ ಸೈಕಲ ಮೇಲೆ ನಾನು  ಮತ್ತು ಅಹ್ಮದ ಹುಸೆನ  ಇಬ್ಬರೊ ಹೋಗುತ್ತಿದ್ದಾಗ  ಶಹಾಬಾದ 
ಪಟ್ಟಣದ  ಬಸವೇಶ್ವರ ಸರ್ಕಲ್  ಹತ್ತಿರ ಹಳೆ ಶಹಾಬಾದ ಕಡೆಯಿಂದ ಬರುತ್ತಿದ್ದ  ಗಣೇಶ 
ಮೆರವಣಿಗೆಯಲ್ಲಿದ್ದ  5-6 ಜನರು  ಕೂಡಿ 
ನನ್ನ  ಮೊಟಾರ  ಸೈಕಲಗೆ 
ತಡೆದು  ನಿಲ್ಲಿಸಿ  ಅವಾಚ್ಯ ಶಬ್ದಗಳಿಂದ ಬಯ್ಯುತ್ತಾ  ಮಗನೆ 
ಕರೆಂಟ ಹಾಕು ಅಂದರೆ ಹಾಕಲ್ಲಾ 
ಇಗೇನು  ಹೋಗಿ  ಮಾಡುತ್ತಿ 
ಎನ್ನುತ್ತಾ   ಅವರಲ್ಲಿಯ  3-4 ಜನರು 
ಒಮ್ಮೆಲೆ ನನ್ನ  ಮೈ ಮೇಲೆ  ಬಿದ್ದು 
ಕೈಯಿಂದ ಹೊಡೆದು  ಗುಪ್ತಗಾಯ  ಮಾಡಿದ್ದು 
ಇನ್ನೊಬ್ಬನು  ಆತನ ಕೈಯಲ್ಲಿದ್ದ ಲೇಜಿಮ್
ನಿಂದ  ಹೊಡೆದು  ರಕ್ತಗಾಯ ಪಡಿಸಿದ್ದು ಇರುತ್ತದೆ.   ಎಲ್ಲರೊ ಸೇರಿ ನನಗೆ ಈ ಮಗ  ಕರೆಂಟ ಹಾಕು ಅಂದರೆ ಹಾಕದೆ ಈಗ  ಬರುತ್ತಿದ್ದಾನೆ ಅಂತಾ ಎನ್ನುತ್ತಾ  ನನ್ನ 
ಕರ್ತವ್ಯಕ್ಕೆ ಹೋಗದಂತೆ  ಅಡೆ ತಡೆ
ಮಾಡುತ್ತಿದ್ದಾಗ  ಅಲ್ಲಿಯೇ ಇದ್ದ ಅಹ್ಮದ  ಹುಸೆನ 
ಮತ್ತು  ಅಯೂಬ  ಬಂದು ನನಗೆ  ಬಿಡಿಸಿರುತ್ತಾರೆ.   ಕಾರಣ 
ನನಗೆ  ವಿನಾ ಕಾರಣ ಜಗಳ  ಮಾಡಿ ಹೊಡೆ ಬಡೆ ಮಾಡಿ  ಕರ್ತವ್ಯಕ್ಕೆ ಅಡೆ ತಡೆ ಮಾಡಿದವರ ವಿರುದ್ಧ  ಸೂಕ್ತ ಕಾನೂನು ಕ್ರಮ ಜರುಗಿಸುವಂತೆ ಸಲ್ಲಿಸಿದ ದೂರು
ಸಾರಾಂಶದ ಮೇಲಿಂಧ ಶಹಾಬಾದ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ. 
 

 
 
No comments:
Post a Comment