POLICE BHAVAN KALABURAGI

POLICE BHAVAN KALABURAGI

10 July 2012

GULBARGA DIST REPORTED CRIME


ಕಳ್ಳತನ ಪ್ರಕರಣ:
ರೋಜಾ ಪೊಲೀಸ್ ಠಾಣೆ:ಶ್ರೀ ಖಾಜಾಹುಸೇನ ತಂದೆ ಗುಲಾಮನಬಿ ಸಾಬ ಅನ್ವರಿ ಉ:ಜೆ.. ಜೆಸ್ಕಾಂ ಸಾ||ಮನೆ ನ: 5-470/15/19/ಎ ಜುಬೇರ ಫಂಕ್ಷನ ಹಾಲ ಹಿಂದುಗಡೆ ಇಸ್ಲಾಮಾಬಾದ ಕಾಲೋನಿ ಗುಲಬರ್ಗಾ ರವರು ನಾನು ದಿನಾಂಕ:22/06/2012 ರಂದು ಮಧ್ಯಾನ 3:00 ಪಿಎಮ್ ಕ್ಕೆ ಖಾಜಾಬಂದೆನವಾಜ ದರ್ಗಾದ ಎದುರುಗಡೆ ಗ್ಯಾರಾ ಸಿಡಿಯ ಹತ್ತಿರ ಪಾರ್ಕಿಂಗದಲ್ಲಿ ಹಿರೋ ಹೊಂಡಾ ಸ್ಲೆಂಡರ  ಮೋಟಾರ ಸೈಕಲ ನಂ: ಕೆಎ 37 ಹೆಚ 7538 ನೇದ್ದನ್ನು ನಿಲ್ಲಿಸಿ ದೇವರ ದರ್ಶನ ಮಾಡುವ ಕುರಿತು ದರ್ಗಾ ಒಳಗಡೆ ಹೋಗಿ ದರ್ಶನ ಮುಗಿಸಿಕೊಂಡು ಹೊರಗಡೆ ಬಂದು ನೋಡಿದಾಗ ನನ್ನ ಮೋಟಾರ ಸೈಕಲ ಇರಲಿಲ್ಲ. ಎಲ್ಲಾ ಕಡೆ ಹುಡುಕಾಡಿದರೂ ನನ್ನ ವಾಹನ ಪತ್ತೆಯಾಗಿರುವದಿಲ್ಲಾ ಯಾರೋ ಕಳ್ಳರು ನನ್ನ ಮೋಟಾರ ಸೈಕಲನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಅಂತಾ ದೂರು ಸಲ್ಲಿಸಿದ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.62/2012 ಕಲಂ.379 ಐಪಿಸಿ ನೇದ್ದರ ಪ್ರಕಾರ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

09 July 2012

GULBARGA DIST REPORTED CRIME


ಕೊಲೆ ಪ್ರಕರಣ:
ರಟಕಲ ಪೊಲೀಸ ಠಾಣೆ:ಶ್ರೀ ರುದ್ರಪ್ಪಾ ತಂದೆ ಗುಂಡಪ್ಪಾ ಸೀಗಿ ಸಾ|| ರಟಕಲ್ ರವರು ನನ್ನ ಮಗನಾದ ತಿಪ್ಪಣ್ಣಾ @ ರಾಜಶೇಖರ ಇತನು ದಿನಾಂಕ:04-07-2012 ರಂದು ಮನೆಯಿಂದ ಹೋದವನು ಮರಳಿ ಮನೆ ಬಂದ್ದಿದಿಲ್ಲ. ಎಲ್ಲಾ ಕಡೆ ಹುಡಕಾಡಿದರೂ ಪತ್ತೆಯಾಗಿರಲಿಲ್ಲ. ದಿನಾಂಕ: 09-07=2012 ರಂದು ಮುಕರುಂಭಾ ಗ್ರಾಮಕ್ಕೆ ಹೋಗುವ ದಾರಿಯಲ್ಲಿ ಸುಭಾಶ್ಚಂದ್ರ ತಂದೆ ನಿಂಗನಶೇಟ್ಟಿ ಸೂಗುರ ಇವರ ಹೊಲದ ಬಾವಿಯಲ್ಲಿ ಒಂದು ಬಿಳಿ ಚೀಲದಲ್ಲಿ ಕಟ್ಟಿ ಹಾಕಿದ ಹೆಣ ತೆಲುತ್ತಿದೆ ಅಂತಾ ವಿಷಯ ತಿಳಿದುಕೊಂಡು ನಾನು ಹೋಗಿ ನೊಡಲು, ನನ್ನ ಮಗನ ಪ್ಯಾಂಟ ಗುರುತಿಸಿ ನೋಡಲು, ನನ್ನ ಮಗ ತಿಪ್ಪಣ್ಣಾ ಇತನಿಗೆ ಯಾರೋ ದೋತಿಯಿಂದ ಕುತ್ತಿಗಿಗೆ ಬಿಗಿದು ಕೋಲೆ ಮಾಡಿ ಅದೆ ದೋತಿಯಲ್ಲಿ ಮಡಚಿ ಮುಖ ಗುರುತು ಸಿಗದಂತೆ ಪ್ಲಾಸ್ಟಿಕ ಗೊಬ್ಬರ ಚೀಲವನ್ನು ಮುಖಕ್ಕೆ ಮುಚ್ಚಿ ಪ್ಲಾಸ್ಟಿಕ ವೈರದಿಂದ ಕಟ್ಟಿ ಅದಕ್ಕೆ ಒಂದು ದಪ್ಪನೆಯ ಕಲ್ಲು ಕಟ್ಟಿ ಬಾವಿಯೊಳಗೆ ಹಾಕಿದ್ದು ಕಂಡು ಬಂದಿರುತ್ತದೆ. ನನ್ನ ಮಗನನ್ನು ಯಾರೋ ಕೊಲೆ ಮಾಡಿ ಸಾಕ್ಷಿ ನಾಶ ಪಡಿಸುವ ಉದ್ದೇಶದಿಂದ ಹಗ್ಗ ಕಟ್ಟಿ ಬಾವಿಯಲ್ಲಿ ಹಾಕಿರುತ್ತಾರೆ ನನ್ನ ಮಗನನ್ನು ಕೊಲೆ ಮಾಡಿದವರನ್ನು ಪತ್ತೆ ಮಾಡಿ ಕಾನೂನು ಕ್ರಮ ಕೈಕೊಳ್ಳಬೇಕು ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ, 302, 2012 ಐಪಿಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 

GULBARGA DIST


ಗ್ರಾಮಿಣ ಉಪ-ವಿಭಾಗಧಿಕಾರಿಗಳ ಕಾರ್ಯಚರಣೆ, 24 ಗಂಟೆಯೊಳಗೆ ಮನೆ ಕಳ್ಳತನ ಮಾಡಿದ ಇಬ್ಬರ ಆರೋಪಿಗ ಬಂದನ:

ಮಾನ್ಯ ಪ್ರವೀಣ ಮಧುಕರ ಪವಾರ ಎಸ್ಪಿ ಸಾಹೇಬರು ಗುಲಬರ್ಗಾ, ಮಾನ್ಯ ಕಾಶಿನಾಥ ಹೆಚ್ಚುವರಿ ಎಸ್ಪಿ ಸಾಹೇಬರು ಗುಲಬರ್ಗಾ, ಹಾಗೂ ಹೆಚ್ ತಿಮ್ಮಪ್ಪ  ಡಿಎಸ್ಪಿ ಗ್ರಾಮೀಣ ಉಪ ವಿಭಾಗ ಗುಲಬರ್ಗಾ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಇವರುಗಳ ಮಾರ್ಗದರ್ಶದನದಲ್ಲಿ ಆನಂದರಾವ ಎಸ್ ಎನ್ ಪಿಎಸ್ಐ (ಕಾ&ಸು),  ಹಾಗೂ ಬಸವರಾಜ ಹಾಗರಗಿ ಪಿಎಸ್ಐ (ಅವಿ) ಗುಲಬರ್ಗಾ ಗ್ರಾಮೀಣ ಠಾಣೆ  ಆನಂದ ಡೋಣಿ ಪಿಎಸ್ಐ (ಪ್ರೋ) ಗುಲಬರ್ಗಾ ಗ್ರಾಮೀಣ ಠಾಣೆ ಸಿಬ್ಬಂದಿಗಳಾದ ಪ್ರಭುಲಿಂಗ, ಲಕ್ಕಪ್ಪ ಹೆಚ್ ಸಿಗಳು, ಮೋಹಿಜೋದ್ದೀನ ಪಿಸಿ, ಹುಸೇನಬಾಷ ,ನರಸಿಂಹ ಚಾರ್ಯ, ಆನಂದ, ಹಾಗೂ ರೇಣುಕಾ ಮಪಿಸಿ, ರವರುಗಳು, ಮತ್ತು ವಾಹನ ಚಾಲಕರಾದ ಬಂಡಪ್ಪ ಎಪಿಸಿ , ವಿಠಲ ಎಪಿಸಿ ಹಾಗೂ ಮಲ್ಲಿಕಾರ್ಜುನ ರವರನೊಳಗೊಂಡ ತಂಡವು ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಮ ನಗರದಲ್ಲಿಯ  ಕೇಂದ್ರ ಅಬಕಾರಿ  ಇಲಾಖೆಯ ಅಧೀಕ್ಷಕರ ಮನೆಯಲ್ಲಿ ದಿನಾಂಕ: 07-07-2012 ರಂದು ಮನೆ ಕಳ್ಳತನವಾಗಿ ಮನೆಯಲಿದ್ದ ಒಂದು ಬಂಗಾರದ ಚೈನ, ಬಂಗಾರದ ಬಳೆಗಳು, ಕಿವಿಯಲ್ಲಿನ ರಿಂಗು. ಬಂಗಾರದ ಉಂಗುರ, ಒಂದು ಟೈಟನ ಲೇಡಿಜ ಕೈ ಗಡಿಯಾರ ಒಟ್ಟು ಹೀಗೆ 1,42,000/- ರೂ ಕಿಮ್ಮತ್ತಿನದ್ದನ್ನು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪಿಗಳಾದ ಹೆಸರು ಸವಿತಾ ಗಂಡ ರುಕ್ಮಾಜಿ  ಹಾಗೂ ರುಕ್ಮಾಜಿ ತಂದೆ ಪಾಂಡುರಂಗ ಸಾ:ಇಬ್ಬರೂ ರಾಮನಗರ ಗುಲಬರ್ಗಾ ಇವರನ್ನು ಮಹಾರಾಷ್ಟ್ರ ರಾಜ್ಯದ ಉದಗೀರ ಪಟ್ಟಣ್ಣದಲ್ಲಿ ಬಂದಿಸಿ, ಕಳ್ಳತನವಾಗಿದ್ದ ಮಾಲನ್ನು ಜಪ್ತಿ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.