POLICE BHAVAN KALABURAGI

POLICE BHAVAN KALABURAGI

09 July 2012

GULBARGA DIST


ಗ್ರಾಮಿಣ ಉಪ-ವಿಭಾಗಧಿಕಾರಿಗಳ ಕಾರ್ಯಚರಣೆ, 24 ಗಂಟೆಯೊಳಗೆ ಮನೆ ಕಳ್ಳತನ ಮಾಡಿದ ಇಬ್ಬರ ಆರೋಪಿಗ ಬಂದನ:

ಮಾನ್ಯ ಪ್ರವೀಣ ಮಧುಕರ ಪವಾರ ಎಸ್ಪಿ ಸಾಹೇಬರು ಗುಲಬರ್ಗಾ, ಮಾನ್ಯ ಕಾಶಿನಾಥ ಹೆಚ್ಚುವರಿ ಎಸ್ಪಿ ಸಾಹೇಬರು ಗುಲಬರ್ಗಾ, ಹಾಗೂ ಹೆಚ್ ತಿಮ್ಮಪ್ಪ  ಡಿಎಸ್ಪಿ ಗ್ರಾಮೀಣ ಉಪ ವಿಭಾಗ ಗುಲಬರ್ಗಾ, ಹಾಗೂ ಶ್ರೀಮತಿ ವಿಜಯಲಕ್ಷ್ಮಿ ಸಿಪಿಐ ಗ್ರಾಮೀಣ ವೃತ್ತ ಗುಲಬರ್ಗಾ, ಇವರುಗಳ ಮಾರ್ಗದರ್ಶದನದಲ್ಲಿ ಆನಂದರಾವ ಎಸ್ ಎನ್ ಪಿಎಸ್ಐ (ಕಾ&ಸು),  ಹಾಗೂ ಬಸವರಾಜ ಹಾಗರಗಿ ಪಿಎಸ್ಐ (ಅವಿ) ಗುಲಬರ್ಗಾ ಗ್ರಾಮೀಣ ಠಾಣೆ  ಆನಂದ ಡೋಣಿ ಪಿಎಸ್ಐ (ಪ್ರೋ) ಗುಲಬರ್ಗಾ ಗ್ರಾಮೀಣ ಠಾಣೆ ಸಿಬ್ಬಂದಿಗಳಾದ ಪ್ರಭುಲಿಂಗ, ಲಕ್ಕಪ್ಪ ಹೆಚ್ ಸಿಗಳು, ಮೋಹಿಜೋದ್ದೀನ ಪಿಸಿ, ಹುಸೇನಬಾಷ ,ನರಸಿಂಹ ಚಾರ್ಯ, ಆನಂದ, ಹಾಗೂ ರೇಣುಕಾ ಮಪಿಸಿ, ರವರುಗಳು, ಮತ್ತು ವಾಹನ ಚಾಲಕರಾದ ಬಂಡಪ್ಪ ಎಪಿಸಿ , ವಿಠಲ ಎಪಿಸಿ ಹಾಗೂ ಮಲ್ಲಿಕಾರ್ಜುನ ರವರನೊಳಗೊಂಡ ತಂಡವು ಗುಲಬರ್ಗಾ ಗ್ರಾಮೀಣ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಬರುವ ರಾಮ ನಗರದಲ್ಲಿಯ  ಕೇಂದ್ರ ಅಬಕಾರಿ  ಇಲಾಖೆಯ ಅಧೀಕ್ಷಕರ ಮನೆಯಲ್ಲಿ ದಿನಾಂಕ: 07-07-2012 ರಂದು ಮನೆ ಕಳ್ಳತನವಾಗಿ ಮನೆಯಲಿದ್ದ ಒಂದು ಬಂಗಾರದ ಚೈನ, ಬಂಗಾರದ ಬಳೆಗಳು, ಕಿವಿಯಲ್ಲಿನ ರಿಂಗು. ಬಂಗಾರದ ಉಂಗುರ, ಒಂದು ಟೈಟನ ಲೇಡಿಜ ಕೈ ಗಡಿಯಾರ ಒಟ್ಟು ಹೀಗೆ 1,42,000/- ರೂ ಕಿಮ್ಮತ್ತಿನದ್ದನ್ನು ಬೆಲೆ ಬಾಳುವ ವಸ್ತುಗಳನ್ನು ಕಳ್ಳತನ ಮಾಡಿದ ಆರೋಪಿಗಳಾದ ಹೆಸರು ಸವಿತಾ ಗಂಡ ರುಕ್ಮಾಜಿ  ಹಾಗೂ ರುಕ್ಮಾಜಿ ತಂದೆ ಪಾಂಡುರಂಗ ಸಾ:ಇಬ್ಬರೂ ರಾಮನಗರ ಗುಲಬರ್ಗಾ ಇವರನ್ನು ಮಹಾರಾಷ್ಟ್ರ ರಾಜ್ಯದ ಉದಗೀರ ಪಟ್ಟಣ್ಣದಲ್ಲಿ ಬಂದಿಸಿ, ಕಳ್ಳತನವಾಗಿದ್ದ ಮಾಲನ್ನು ಜಪ್ತಿ ಪಡಿಸಿಕೊಂಡು ಸದರಿಯವರನ್ನು ನ್ಯಾಯಾಂಗ ಬಂದನಕ್ಕೆ ಒಪ್ಪಿಸಲಾಗಿದೆ.
 

No comments: