POLICE BHAVAN KALABURAGI

POLICE BHAVAN KALABURAGI

24 March 2012

GULBARGA DIST REPORTED CRIME

ಅಪಘಾತ ಪ್ರಕರಣ:

ಗ್ರಾಮೀಣ ಪೊಲೀಸ ಠಾಣೆ: ಶ್ರೀ ಶರಣಬಸಯ್ಯ ತಂದೆ ವೀರಯ್ಯ ಹಿರೇಮಠ ಸಾ||ಕಲ್ಲಹಂಗರಗಾ ತಾ||ಜಿ||ಗುಲಬರ್ಗಾರವರು ನನ್ನ ಮಗನಾದ ಕಾರ್ತೀಕ ವ:13 ವರ್ಷ ಇತನು ಉದನೂರ ರಿಂಗ ರೋಡ ಕ್ರಾಸಿನಲ್ಲಿ ಸೈಕಲ ಪಂಕ್ಚರ ಮಾಡಿಸಿಕೊಂಡು ಮನೆಯ ಕಡೆಗೆ ಸೈಕಲ ಮೇಲೆ ಬರುತ್ತಿರುವಾಗ ಹೈ ಕೋರ್ಟ ರಿಂಗ ರೋಡ ಕಡೆಯಿಂದ ಕೆ.ಎಸ್.ಅರ್.ಟಿ.ಸಿ. ಬಸ್ಸ ಕೆಎ 32 ಎಫ 1442 ನಾಗಪ್ಪ ಚಿಂಚೋಳಿ ಡಿಪೋ ರವರು ತೀವೇಗ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನನ್ನ ಮಗನ ಸೈಕಲಿಗೆ ಡಿಕ್ಕಿ ಹೊಡೆದಿದ್ದರಿಂದ ಭಾರಿ ರಕ್ತಗಾಯವಾಗಿ ಸ್ಥಳದಲ್ಲಿ ಮೃತಪಟ್ಟಿರುತ್ತಾನೆ. ಕಾರಣ ಕೆ.ಎಸ್.ಅರ್.ಟಿ.ಸಿ. ಬಸ್ಸ ಚಾಲಕನ ಮೇಲೆ ಕಾನೂನು ಕ್ರಮ ಜರುಗಿಸಬೇಕೆಂದು ಕೊಟ್ಟ ಹೇಳಿಕೆ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ. 90/2012 ಕಲಂ 279,304(ಎ) ಐಪಿಸಿ ಸಂಗಡ 187 ಎಂ.ವಿ.ಕ್ಟ ಪ್ರಕಾರ ಗುನ್ನೆ ದಾಖಲಿಸಿಕೊಂಡು ತನಿಖೆ ಕೈ ಕೊಂಡಿರುತ್ತಾರೆ.

23 March 2012

GULBARGA DIST REPORTED CRIME

ಹುಡಗ ಕಾಣೆಯಾದ ಬಗ್ಗೆ:
ರೋಜಾ ಪೊಲೀಸ್ ಠಾಣೆ:
ಶ್ರೀ ಅಸ್ಲಂ ಖಾನ ತಂದೆ ಮುಸ್ತಫಾ ಖಾನ ಪಠಾಣ ವಯ:27, ಉ:ಸಿರಾಮಿಕ್ ಟೈಲ್ಸ್ ವ್ಯಾಪಾರ ಜಾ:ಮುಸ್ಲಿಂ ಸಾ:ಮನೆ ನಂ.201 ನಿರಾಲಾ ಪಾರ್ಕ ಪಾಲೇಜ ತಾಜಿಬರೋಚ ಗುಜರಾತ ರಾಜ್ಯ ರವರು ನನ್ನ ಚಿಕ್ಕಪ್ಪನ ಮಗ ಅಶ್ರಾರ ತಂದೆ ಸಾಬೀರ ಖಾನ ಪಠಾಣ ಈತನು ದಿನಾಂಕ:05/03/2012 ರಂದು 5:00 ಪಿಎಮ್ ಕ್ಕೆ ವಿ.ಐ.ಪಿ ಹಾಸ್ಟೆಲ್ ದಿಂದ ಊರಿಗೆ ಹೋಗುತ್ತೇನೆ ಅಂತಾ ತನ್ನ ರೂಮಂಟ ಹುಡುಗನಿಗೆ ಹೇಳಿ ಗುಲಬರ್ಗಾದಿಂದ ಹೊರಟಿರುತ್ತಾನೆ. ಈ ವಿಷಯ ನಮಗೆ ದಿನಾಂಕ:11/03/2012 ರಂದು ಗೊತ್ತಾಗಿ ನಾನು ನನ್ನ ಚಿಕ್ಕಪ್ಪನ ಎಲ್ಲಾ ಸಂಬಂದಿಕರಲ್ಲಿ ಹುಡುಕಾಡಿದರೂ ಸಹ ಇಲ್ಲಿಯವರೆಗೆ ಪತ್ತೆಯಾಗಿರುವದಿಲ್ಲಾ, ನನ್ನ ಚಿಕ್ಕಪ್ಪನ ಮಗ ಸಿಗದೇ ಇರುವದರಿಂದ ಠಾಣೆಗೆ ಬಂದು ಇಂಗ್ಲೀಷನಲ್ಲಿ ಲಿಖಿತ ದೂರು ಸಲ್ಲಿಸಿರುತ್ತಾರೆ, ಕಾಣೆಯಾಗಿರುವ ಹುಡಗನ ಚಹರೆ ಪಟ್ಟಿ 5.5” ಇಂಚ ಎತ್ತರ,ತೆಳ್ಳನೆ ಮೈಕಟ್ಟು, ಸಾದಾ ಕೆಂಪು ಬಣ್ಣ, ಎಡಗೈ ಮುರಿದ್ದು, ಕೈಗೆ ರಾಡ ಹಾಕಿದ ಗುರುತುಗಳು ಇರುತ್ತವೆ, ಸದರಿಯವನು ಹಿಂದಿ, ಇಂಗ್ಲೀಷ, ಗುಜರಾತಿ ಭಾಷೆ ಬಲ್ಲವನಾಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಅರ್ಜಿಯ ಸಾರಾಂಶದ ಮೇಲಿಂದ ಠಾಣೆ ಗುನ್ನೆ ನಂ.24/2012 ಕಲಂ ಮನುಷ್ಯ ಕಾಣಿಯಾದ ಬಗ್ಗೆ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. ಇತನ ಬಗ್ಗೆ ಸುಳಿವು ಸಿಕ್ಕಲ್ಲಿ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು:08472-263623/263604/263608 ಅಥವಾ ಮೊಬಾಯಿಲ್ ನಂ: 9480803550 ನೇದ್ದವುಗಳಿಗೆ ಸಂಪರ್ಕಿಸಲು ಕೋರಲಾಗಿದೆ.

GULBARGA DIST REPORTED CRIMES

ಅಪಘಾತ ಪ್ರಕರಣ:

ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಜಗನ್ನಾಥ ತಂದೆ ನಿಲಕಂಠರಾವ ಮಾಲಿ ಪಾಟೀಲ ಸಾ: ಮನೆ ನಂ:2-910/66/30 ಜಯನಗರ ಗುಲಬರ್ಗಾ ರವರು ದಿನಾಂಕ 22-03-12 ರಂದು ಮಧ್ಯಾಹ್ನ ಗಂಟೆಯ ಸುಮಾರಿ ಜಿ.ಜಿ.ಹೆಚ್.ಸರ್ಕಲ್ ದಿಂದ ಆರ್.ಟಿ.ಓ.ಕ್ರಾಸ್ ರೋಡ ಮಧ್ಯ ಗುಮ್ಮಜ ಎದುರು ರೋಡಿನ ಮೇಲೆ ಆರೋಪಿ ಮೋಟಾರ ಸೈಕಲ್ ನಂ: ಕೆಎ 32 ಇಎ 4175 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲ್ ನಂ:ಕೆಎ 32 ಎಲ್ 9828 ನೇದ್ದಕ್ಕೆ ಹಿಂದಿನಿಂದ ಡಿಕ್ಕಿ ಪಡಿಸಿಗೊಳಿಸಿ ತನ್ನ ಮೋಟಾರ ಸೈಕಲ್ ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012 ಕಲಂ: 279,337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾನೆ,

ಹಲ್ಲೆ ಪ್ರಕರಣ:

ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ ಬೋರಮ್ಮಾ ಗಂಡ ಬಸವರಾಜ ಪಾಟೀಲ ಸಾ:ಔರಾದ ತಾ:ಜಿ:ಗುಲಬರ್ಗಾ ಹಾ||||ಬಿದ್ದಾಪುರ ಕಾಲೋನಿ ಗುಲಬರ್ಗಾರವರು ನಾನು ಇಮಾಮ ಪಟೇಲ @ ಸಿಕಂದರ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಆತನ ಮಗನಿಗೆ ಗೊತ್ತಾಗಿದ್ದು, ದಿನಾಂಕ 22-03-12 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದಿನ ಕಸ ಗೂಡಿಸುತ್ತಿರುವಾಗ ಎಂ.ಡಿ ಅಮೀರ ಇತನು ತನ್ನ ತಂದೆ ಜೊತೆ ಇಟ್ಟುಕೊಂಡ ಸಂಬಂಧ ಬಿಡು ಅಂತಾ ದ್ವೇಷದಿಂದ ಅವಾಚ್ಯವಾಗಿ ಬೈಯ್ದು ತನ್ನ ಹತ್ತಿರವಿದ್ದ ಚಾಕು ತೆಗೆದು ನನಗೆ ಎಡ ಕುತ್ತಿಗೆ ಮೇಲೆ, ಎದೆಯ ಮೇಲೆ ಎರಡು ಅಂಗೈಯ ಮತ್ತು ಮಣಿಕಟ್ಟಿನ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ 504 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ.