ಅಪಘಾತ ಪ್ರಕರಣ:
ಹೆಚ್ಚುವರಿ ಸಂಚಾರಿ ಪೊಲೀಸ್ ಠಾಣೆ: ಶ್ರೀ ಜಗನ್ನಾಥ ತಂದೆ ನಿಲಕಂಠರಾವ ಮಾಲಿ ಪಾಟೀಲ  ಸಾ: ಮನೆ ನಂ:2-910/66/30 ಜಯನಗರ ಗುಲಬರ್ಗಾ ರವರು ದಿನಾಂಕ 22-03-12 ರಂದು ಮಧ್ಯಾಹ್ನ ಗಂಟೆಯ ಸುಮಾರಿ ಜಿ.ಜಿ.ಹೆಚ್.ಸರ್ಕಲ್ ದಿಂದ ಆರ್.ಟಿ.ಓ.ಕ್ರಾಸ್   ರೋಡ ಮಧ್ಯ ಗುಮ್ಮಜ ಎದುರು ರೋಡಿನ ಮೇಲೆ  ಆರೋಪಿ ಮೋಟಾರ ಸೈಕಲ್  ನಂ: ಕೆಎ 32 ಇಎ 4175 ನೇದ್ದನ್ನು ಅತಿವೇಗವಾಗಿ ಮತ್ತು ಅಲಕ್ಷತನದಿಂದ ಚಲಾಯಿಸಿಕೊಂಡು ಬಂದು ನಾನು ಕುಳಿತು ಹೋಗುತ್ತಿದ್ದ ಮೋಟಾರ ಸೈಕಲ್ ನಂ:ಕೆಎ 32 ಎಲ್ 9828 ನೇದ್ದಕ್ಕೆ ಹಿಂದಿನಿಂದ   ಡಿಕ್ಕಿ ಪಡಿಸಿಗೊಳಿಸಿ ತನ್ನ ಮೋಟಾರ ಸೈಕಲ್  ಸಮೇತ ಓಡಿ ಹೋಗಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 35/2012  ಕಲಂ: 279,337 ಐ.ಪಿ.ಸಿ ಸಂ:187 ಐ.ಎಮ್.ವಿ.ಆಕ್ಟ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾನೆ, 
ಹಲ್ಲೆ ಪ್ರಕರಣ:
ಗುಲಬರ್ಗಾ ಗ್ರಾಮೀಣ ಠಾಣೆ: ಶ್ರೀಮತಿ  ಬೋರಮ್ಮಾ ಗಂಡ ಬಸವರಾಜ ಪಾಟೀಲ ಸಾ:ಔರಾದ ತಾ:ಜಿ:ಗುಲಬರ್ಗಾ ಹಾ||ವ||ಬಿದ್ದಾಪುರ ಕಾಲೋನಿ ಗುಲಬರ್ಗಾರವರು  ನಾನು  ಇಮಾಮ ಪಟೇಲ @ ಸಿಕಂದರ ಇತನೊಂದಿಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದು, ಈ ವಿಷಯ ಆತನ ಮಗನಿಗೆ  ಗೊತ್ತಾಗಿದ್ದು, ದಿನಾಂಕ 22-03-12 ರಂದು ಬೆಳಿಗ್ಗೆ 5-30 ಗಂಟೆ ಸುಮಾರಿಗೆ ನಾನು ನನ್ನ ಮನೆಯ ಮುಂದಿನ ಕಸ ಗೂಡಿಸುತ್ತಿರುವಾಗ ಎಂ.ಡಿ ಅಮೀರ ಇತನು ತನ್ನ ತಂದೆ ಜೊತೆ ಇಟ್ಟುಕೊಂಡ ಸಂಬಂಧ ಬಿಡು ಅಂತಾ ದ್ವೇಷದಿಂದ ಅವಾಚ್ಯವಾಗಿ ಬೈಯ್ದು  ತನ್ನ  ಹತ್ತಿರವಿದ್ದ  ಚಾಕು ತೆಗೆದು  ನನಗೆ ಎಡ ಕುತ್ತಿಗೆ ಮೇಲೆ, ಎದೆಯ ಮೇಲೆ ಎರಡು ಅಂಗೈಯ ಮತ್ತು ಮಣಿಕಟ್ಟಿನ ಮೇಲೆ ಹೊಡೆದು ಭಾರಿ ರಕ್ತಗಾಯಗೊಳಿಸಿ ಮರಣಾಂತಿಕ ಹಲ್ಲೆ ಮಾಡಿರುತ್ತಾನೆ ಅಂತಾ ದೂರು ಸಲ್ಲಿಸಿದ ಸಾರಂಶದ ಮೇಲಿಂದ ಠಾಣೆ ಗುನ್ನೆ ನಂ: 89/2012 ಕಲಂ 504 307 ಐ.ಪಿ.ಸಿ ಪ್ರಕಾರ ಪ್ರಕರಣ ದಾಖಲ ಮಾಡಿಕೊಂಡು ತನಿಖೆ ಕೈಕೊಂಡಿರುತ್ತಾರೆ. 
 
 
 
 
No comments:
Post a Comment