POLICE BHAVAN KALABURAGI

POLICE BHAVAN KALABURAGI

16 September 2020

KALABURAGI DISTRICT PRESS NOTE FOR POLICE CONSTABLE WRITTEN EXAM

 ಸಂ: ಸಿಬ್ಬಂದಿ-1/ನೇಮಕಾತಿ/02/2020.                                         ಪೊಲೀಸ್ ಅಧೀಕ್ಷಕರವರ ಕಛೇರಿ,                                                                                                                      ಕಲಬುರಗಿ ಜಿಲ್ಲೆ, ದಿನಾಂಕ: 16-09-2020.
                                                            ಪತ್ರಿಕಾ ಪ್ರಕಟಣೆ


                      ವಿಷಯ: 2020 ನೇ ಸಾಲಿನ ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) ಮತ್ತು ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ)  
                                 (ಕಲ್ಯಾಣ ಕರ್ನಾಟಕ ) ಹುದ್ದೆಗಳ ಲಿಖಿತ  ಪರೀಕ್ಷೆಯನ್ನು ದಿ: 20-09-2020 ರಂದು ನಡೆಸುವ ಬಗ್ಗೆ.
                                                         *****

            ಪೊಲೀಸ್ ಕಾನ್ಸ್ಟೇಬಲ್ (ನಾಗರಿಕ) ಹುದ್ದೆಗಳನ್ನು ಭರ್ತಿ ಮಾಡುವ ಸಲುವಾಗಿ ಅಧಿಸೂಚನೆ ಸಂ:13/ ನೇಮಕಾತಿ-4/2019-20, ದಿನಾಂಕ; 23-04-2020 (558) & ಸಂ: 02/ನೇಮಕಾತಿ-4/2020-21, ದಿನಾಂಕ: 07-05-2020 (2007) ರಲ್ಲಿ ಕರ್ನಾಟಕ ರಾಜ್ಯ ಪತ್ರದಲ್ಲಿ ಪ್ರಕಟಿಸಿ, ನೇಮಕಾತಿ ಪ್ರಕ್ರಿಯೆಯನ್ನು ಕೈಗೊಳ್ಳ ಲಾಗಿರುತ್ತದೆ. ಅರ್ಜಿ ಸಲ್ಲಿಸಿರುವ ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ದಿನಾಂಕ; 20-09-2020 ರಂದು (ಭಾನುವಾರ) ರಂದು ಕಲಬುರಗಿ ನಗರದ 06 ಶಾಲಾ/ಕಾಲೇಜುಗಳಲ್ಲಿ ಬೆಳಿಗ್ಗೆ 11-00 ಗಂಟೆಯಿಂದ ಮಧ್ಯಾಹ್ನ  12-30 ಗಂಟೆವರೆಗೆ ನಡೆಸಲು ತೀರ್ಮಾನಿಸಲಾಗಿರುತ್ತದೆ.

            ಪ್ರಯುಕ್ತ ಸದರಿ ದಿನಾಂಕದಂದು ಲಿಖಿತ ಪರೀಕ್ಷೆಗೆ ಹಾಜರಾಗುವ ಅಭ್ಯರ್ಥಿಗಳು ಯಾವುದೇ ರೀತಿಯ ಪುಸ್ತಕಗಳನ್ನಾಗಲೀ, ಕೈಬರಹ ಚೀಟಿಗಳನ್ನಾಗಲೀ, ಪೇಜರ್ಗಳನ್ನಾಗಲೀ, ಕ್ಯಾಲ್ಯುಕೇಟರ್ಗಳನ್ನಾಗಲೀ, ಇಯರ್ ಪೋನ್ಗಳನ್ನಾಗಲೀ, ಮೊಬೈಲ್ ಫೋನ್ಗಳನ್ನಾಗಲೀ, ಪರೀಕ್ಷೆಗೆ ತರಲು ನಿಷೇಧಿಸಲಾಗಿರತ್ತದೆ. ಅಭ್ಯರ್ಥಿಗಳು ಬೆಲೆಬಾಳುವ ವಸ್ತು/ಸಾಮಗ್ರಿಗಳನ್ನು ತರದಂತೆ ತಿಳಿಸಲಾಗಿದೆ. ತಮ್ಮ ವಸ್ತುಗಳಿಗೆ ತಾವೇ ಜವಾಬ್ದಾರರಾಗಿರುತ್ತೀರಿ. ಸದರಿ ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ವ್ಯವಸ್ಥೆ ಇರುವುದಿಲ್ಲ. ಅಭ್ಯರ್ಥಿಗಳು ಒಂದು ಗಂಟೆ ಮುಂಚಿತವಾಗಿ ತಮ್ಮ ಕರೆ ಪತ್ರದಲ್ಲಿ ನಮೂದಾಗಿರುವ ಕಾಲೇಜಿನಲ್ಲಿ ಹಾಜರಿರಲು ಹಾಗೂ ಕರೆ ಪತ್ರದಲ್ಲಿ ನಮೂದಿಸಿರುವ ಸೂಚನೆಗಳನ್ನು ಮತ್ತು ಕೋವಿಡ್-19 ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಸೂಚಿಸಲಾಗಿರುತ್ತದೆ.

                                                                                             ಪೊಲೀಸ್ ಅಧೀಕ್ಷಕರು,
                                                                                               ಕಲಬುರಗಿ ಜಿಲ್ಲೆ.

No comments: